Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಇವುಗಳನ್ನು ನಂಬಿದರೆ ತೂಕ ಕಡಿಮೆಯಾಗಲ್ಲ

ತೂಕ ಕಡಿಮೆ ಮಾಡುವಲ್ಲಿ ಹರ್ಬಲ್ ವಸ್ತುಗಳು ಮತ್ತು ಮಾತ್ರಗಳು ಒಳ್ಳೆಯದು: ಎಲ್ಲಾ ಹರ್ಬಲ್ ಸಾಧನಗಳು ಅಡ್ಡಪರಿಣಾಮ ಬೀಳುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಇಂತಹ ವಸ್ತುಗಳನ್ನು ವೈದ್ಯರು ಬಳಸಲು ಹೇಳಿದ್ದರೆ ಮಾತ್ರ ಬಳಸುವುದು ಒಳ್ಳೆಯದು.
ಕಡಿಮೆ ಕೊಬ್ಬಿನಂಶ ಅಥವಾ ಕೊಬ್ಬಿನಂಶವಿಲ್ಲದಿರುವುದು ಆಹಾರ ಅಂದರೆ ಕ್ಯಾಲೋರಿ ಇರಬಾರದು: ಆದರೆ ಬಾಯಿಗೆ ಸ್ವಲ್ಪ ರುಚಿ ಸಿಗಲು ಸಕ್ಕರೆ, ಹಿಟ್ಟಿನಿಂದ ಮಾಡಿದ ಪದಾರ್ಥಗಳನ್ನು ತಿಂದೇ ತಿನ್ನುತ್ತೇವೆ. ಆದ್ದರಿಂದ ಕ್ಯಾಲೋರಿ ಇಲ್ಲದ ಆಹಾರಕ್ಕಿಂತ ಕಡಿಮೆ ಕ್ಯಾಲೋರಿಯ ಆಹಾರ ಅನ್ನುವುದು ಒಳ್ಳೆಯದು.
ತೂಕ ಕಡಿಮೆ ಮಾಡುವಲ್ಲಿ ಉಪವಾಸ ಪರಿಣಾಮಕಾರಿಯಾಗಿದೆ: ಈ ರೀತಿ ಮಾಡಿದರೆ ನಿಶ್ಯಕ್ತಿ ಉಂಟಾಗುವುದು. ವಾರಕ್ಕೆ ಒಮ್ಮೆ ಅಥವಾ ತಿಂಗಳಿಗೆ ಒಮ್ಮೆ ಉಪವಾಸ ಮಾಡುವುದು ಒಳ್ಳೆಯದು. ಆದರೆ ದಪ್ಪ ಕಮ್ಮಿಯಾಗಲು ಪ್ರತಿದಿನಾ ಅನ್ನ ಬಿಡುವ ಅಭ್ಯಾಸ ಬೆಳೆಸಿಕೊಂಡರೆ ನಿಶ್ಯಕ್ತಿ ಉಂಟಾಗುವುದು.
8 ಗಂಟೆಯ ನಂತರ ತಿಂದರೆ ತೂಕ ಹೆಚ್ಚಾಗುವುದು: ನಿಮ್ಮ ದೈಹಿಕ ಚಟುವಟಿಕೆಗಳು ನಿಮ್ಮ ದೇಹದ ತೂಕ ಹೆಚ್ಚಾಗಲು ಕಾರಣವಾಗಿದೆ. ಟಿವಿ ನೋಡುತ್ತಾ ಊಟ ಮಾಡುವುದು, ಕಂಪ್ಯೂಟರ್ ಮುಂದೆ ತುಂಬಾ ಹೊತ್ತು ಕೂರುವುದು ಈ ಎಲ್ಲಾ ಕಾರಣಗಳಿಂದ ದೇಹದ ತೂಕ ಹೆಚ್ಚಾಗುವುದು.
ತೂಕ ಕಡಿಮೆಯಾಗಲು ತಿಂಡಿಗಳನ್ನು ತಿನ್ನಬಾರದು: ತಿಂಡಿಗಳಲ್ಲಿ ಕರಿದ ಪದಾರ್ಥಗಳನ್ನು ತಿನ್ನದಿದ್ದರೆ ಸಾಕು. ಸಾಯಾಂಕಾಲ ತಿಂಡಿಗೆ ಹಣ್ಣುಗಳನ್ನು ತಿನ್ನುವುದು ಒಳ್ಳೆಯದು.
ನೀರು ಕುಡಿಯುವುದರಿಂದ ದೇಹದ ತೂಕ ಕಡಿಮೆಯಾಗುವುದು: ನೀರು ದೇಹದ ತೂಕ ಕಡಿಮೆ ಮಾಡುವುದಿಲ್ಲ. ಇದು ದೇಹದಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳುವಲ್ಲಿ ಸಹಕಾರಿಯಾಗಿದೆ. ದೇಹದ ಆರೋಗ್ಯಕ್ಕೆ ದಿನಕ್ಕೆ 2 ಲೀಟರ್ ನೀರು ಕುಡಿಯಬೆಕು.
ಮೆಷಿನ್‌ಗಳನ್ನು ಬಳಸಿ ದೇಹದ ತೂಕ ಕಡಿಮೆ ಮಾಡಬಹುದು: ಯಾವುದೇ ದೈಹಿಕ ಶ್ರಮವಿಲ್ಲದೆ, ಕೇವಲ ಮೆಷಿನ್‌ಗಳನ್ನು ಬಳಸಿ ದೇಹದ ತೂಕ ಕಡಿಮೆಮಾಡಬಹುದು ಅನ್ನುವುದು ತಪ್ಪು ಕಲ್ಪನೆ. ತೂಕ ಕಡಿಮೆಯಾಗಲು ವ್ಯಾಯಾಮ ಅಗತ್ಯ.
ಬರೀ ಹೊಟ್ಟೆಯಲ್ಲಿ ವ್ಯಾಯಾಮ ಮಾಡಿದರೆ ತೂಕ ಕಡಿಮೆಯಾಗುವುದು: ಬರೀ ಹೊಟ್ಟೆಯಲ್ಲಿ ವ್ಯಾಯಾಮ ಮಾಡಿದರೆ ಬೇಗನೆ ಸುಸ್ತಾಗುವುದು. ಆದ್ದರಿಂದ ವ್ಯಾಯಾಮ ಮಾಡುವ ಮೊದಲು ಒಂದು ಲೋಟ ನೀರು ಅಥವಾ ಜ್ಯೂಸ್ ಕುಡಿದು ವ್ಯಾಯಾಮ ಮಾಡುವುದು ಒಳ್ಳೆಯದು.
ಆದ್ದರಿಂದ ಮಿಥ್ಯಗಳಿಗೆ ಕಿವಿಕೊಡದೆ ದೇಹದ ತೂಕ ಕಡಿಮೆ ಮಾಡಲು ಅರೋಗ್ಯಕರ ಆಹಾರಕ್ರಮ ಮತ್ತು ವ್ಯಾಯಾಮ ಮಾಡುವುದು ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
