Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ತೂಕ ಇಳಿಸುವ ಡಯಟ್ ಡ್ರಿಂಕ್ಸ್ ಇಲ್ಲಿದೆ

ಇದು ತೂಕ ಇಳಿಸಿದಂತೆ ಕಂಡರೂ ಅನೇಕ ಆರೋಗ್ಯ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ. ಆದ್ದರಿಂದ ತೂಕ ಇಳಿಸಿಕೊಳ್ಳಲು ಮನೆಯಲ್ಲೇ ಕೆಲವು ಪಾನೀಯಗಳನ್ನು ಮಾಡಿಕೊಳ್ಳಬಹದು. ಆ ಪಾನೀಯಗಳು ಯಾವುದೆಂದು ಇಲ್ಲಿ ತಿಳಿಯಿರಿ.
ತೂಕ ಇಳಿಸುವ ಡಯಟ್ ಪಾನೀಯಗಳು:
* ಹಾಗಲ ಕಾಯಿ ಜ್ಯೂಸ್: ಹಾಗಲಕಾಯಿ ರಸ ತೂಕ ಕರಗಿಸುವುದರಲ್ಲಿ ಹೆಚ್ಚು ಪರಿಣಾಮಕಾರಿ. ಹಾಗಲಕಾಯಿ ರಸದಿಂದ ದೇಹದಲ್ಲಿನ ಅಧಿಕ ಕ್ಯಾಲೊರಿಗಳನ್ನು ಕರಗಿಸಬಹುದು. ಇದು ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸುವುದಲ್ಲದೆ ದೇಹದಿಂದ ವಿಷಕಾರಿ ಅಂಶವನ್ನು ತೊಡೆದುಹಾಕುತ್ತದೆ. ಪಾಲಾಕ್, ಕ್ಯಾರೆಟ್ ಅಥವಾ ಟೊಮೆಟೊ ಜ್ಯೂಸನ್ನೂ ಸಹ ತೂಕ ಇಳಿಸಿಕೊಳ್ಳಲು ಸೇವಿಸಬಹುದು.
* ಬಿಸಿ ನೀರು ಮತ್ತು ನಿಂಬೆರಸ: ಡಯಟ್ ಮಾಡುವವರಿಗೆ ಈ ಪಾನೀಯ ಹೆಚ್ಚು ಸೂಕ್ತ. ಬಿಸಿ ನೀರು ತೂಕ ಇಳಿಸುವುದರಲ್ಲಿ ಪರಿಣಾಮಕಾರಿ. ಅದರಲ್ಲೂ ನಿಂಬೆರಸ ಜೊತೆಗಿದ್ದರೆ ದೇಹದಲ್ಲಿನ ಬೊಜ್ಜು ಬೇಗನೆ ಕರಗಿಹೋಗುತ್ತದೆ. ಊಟವಾದ ನಂತರ ಬಿಸಿ ನೀರಿನಲ್ಲಿ ನಿಂಬೆರಸ ಬೆರೆಸಿ ಕುಡಿಯಬಹುದು. ಇದರಿಂದ ಕ್ಯಾಲೊರಿಗಳನ್ನು ಬೇಗನೆ ಕರಗಿಸಿಕೊಳ್ಳಬಹುದು.
* ಬಿಸಿ ನೀರಿನೊಂದಿಗೆ ಜೇನು: ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿನೊಂದಿಗೆ ಜೇನನ್ನು ಬೆರೆಸಿ ಕುಡಿದರೆ ದೇಹಕ್ಕೆ ತುಂಬಾ ಉಪಯೋಗವಿದೆ. ಇದರಿಂದ ನಿಮ್ಮ ತೂಕವನ್ನಷ್ಟೇ ಅಲ್ಲ, ದಿನವಿಡೀ ಚೈತನ್ಯ ತುಂಬಿರುವಂತೆ ನೋಡಿಕೊಳ್ಳುತ್ತದೆ. ಜೇನಿನಲ್ಲಿನ ನೈಸರ್ಗಿಕ ಸಿಹಿ ಅಂಶ, ಅಮಿನೊ ಆಸಿಡ್, ಪ್ರೊಟೀನ್ ಮತ್ತು ಖನಿಜಾಂಶ ಹೆಚ್ಚು ಬೊಜ್ಜು ತುಂಬಿಕೊಳ್ಳುವುದನ್ನು ತಡೆಯುತ್ತದೆ.
* ಗ್ರೀನ್ ಟೀ: ಗ್ರೀನ್ ಟೀ ಅನ್ನು ಬಿಸಿ ಅಥವಾ ತಣ್ಣಗೆ ಹೇಗೆ ಕುಡಿದರೂ ಉಪಯೋಗವಿದೆ. ಗ್ರೀನ್ ಟೀ ಸೇವನೆಯಿಂದ ಬೇಗನೆ ತೂಕ ಕಳೆದುಕೊಳ್ಳಬಹುದು. ಇದು ದೇಹದಲ್ಲಿನ ವಿಷಕಾರಿ ಅಂಶವನ್ನು ತೊಡೆದುಹಾಕಲೂ ಸಹಕಾರಿ. ತ್ವಚೆಯನ್ನೂ ಶುದ್ಧವಿರಿಸಿ ಕೂದಲುದುರುವುದನ್ನು ಗ್ರೀನ್ ಟೀ ತಡೆಯುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
