Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಡ್ರೈ ಫ್ರೂಟ್ ಸೇವನೆಯಿಂದ ತೂಕ ಇಳಿಸಬಹುದಾ?

ಡ್ರೈ ಫ್ರೂಟ್ ಸೇವನೆಗೂ ಮತ್ತು ದೇಹದಲ್ಲಿ ಹೃದಯದ ಸ್ವಾಸ್ಥ್ಯ ಹೆಚ್ಚಿಸುವ ಸೆರೊಟೊನಿನ್ ಹಾರ್ಮೋನಿನ ಹೆಚ್ಚಳಕ್ಕೂ ನಡುವಿನ ಸಂಬಂಧವನ್ನು ಪತ್ತೆ ಹಚ್ಚುವಾಗ ಡ್ರೈ ಫ್ರೂಟ್ ಸೇವನೆ ದೇಹಕ್ಕೆ ಹೆಚ್ಚು ಅಗತ್ಯ ಎಂಬ ಅಂಶ ತಿಳಿದುಬಂದಿದೆ.
ಬಾದಾಮಿ, ಅಕ್ರೋಡ (ವಾಲ್ ನಟ್) ಇನ್ನಿತರ ಡ್ರೈ ಫ್ರೂಟ್ ಗಳನ್ನು ಮಿಶ್ರಣ ಮಾಡಿ ದಿನವೂ ಕೇವಲ 30 ಗ್ರಾಂ ಮಾತ್ರವಷ್ಟೇ ತಿನ್ನುತ್ತಾ ಬರುವುದರಿಂದ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಉಂಟಾಗುತ್ತದೆ ಎಂದು ಬಾರ್ಸೆಲೊನೊ ವಿಶ್ವವಿದ್ಯಾಲಯದ ಸಂಶೋಧಕರು ತಿಳಿಸಿದ್ದಾರೆ.
ಹೊಟ್ಟೆಯಲ್ಲಿ ಅತಿ ಬೊಜ್ಜನ್ನುಂಟುಮಾಡುವ, ಮಧುಮೇಹ, ರಕ್ತದೊತ್ತಡ ಮುಂತಾದ ಸಮಸ್ಯೆಗೆ ಕಾರಣವಾಗಿರುವ ಮೆಟಬಾಲಿಕ್ ಸಿಂಡ್ರೋಮ್ ಕ್ರಿಯೆಯನ್ನು ಈ ಒಣಹಣ್ಣುಗಳು ಕಡಿಮೆಮಾಡುವಲ್ಲಿ ಸಹಕಾರಿಯಾಗಿವೆ ಎಂದು ತಿಳಿಸಿದ್ದಾರೆ.
ಮೆಟಬಾಲಿಕ್ ಸಿಂಡ್ರೋಮ್ ಸಮಸ್ಯೆಯಲ್ಲಿದ್ದ 22 ಮಂದಿ ರೋಗಿಗಳಿಗೆ 12 ವಾರದ ಅವಧಿ ದಿನವೂ ಒಂದಿಷ್ಟು ನಟ್ಸ್ ತಿನ್ನುವಂತೆ ಹೇಳಲಾಯಿತು. ಆನಂತರ ಈ ರೋಗಿಗಳ ಮೂತ್ರ ಪರೀಕ್ಷೆ ಮಾಡಿದಾಗ, ಒಣಹಣ್ಣುಗಳನ್ನು ಸೇವಿಸದ ರೋಗಿಗಳಿಗಿಂತ, ಇವರಲ್ಲಿ ಸೆರೊಟೊನಿನ್ ಮಟ್ಟ ಹೆಚ್ಚಾಗಿದ್ದುದು ಕಂಡುಬಂದಿದೆ.
ನಟ್ಸ್ ಸೇವನೆಯಿಂದ ಸೆರೊಟೊನಿನ್ ಅಂಶ ಹೆಚ್ಚುಗೊಂಡಿರುವುದನ್ನು ಇದೇ ಮೊದಲ ಬಾರಿಗೆ ಕಂಡುಹಿಡಿಯಲಾಗಿದೆ ಎಂದಿದ್ದಾರೆ. ಆದರೆ ಒಣಹಣ್ಣುಗಳಲ್ಲಿ ಹೆಚ್ಚು ಕ್ಯಾಲೊರಿಯೂ ಇರುವುದರಿಂದ ದಿನಕ್ಕೆ ಸ್ವಲ್ಪ ಮಾತ್ರ ಸೇವಿಸಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
