Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ತೂಕ ಹೆಚ್ಚುವುದನ್ನು ಬೇಗ ಕಂಡುಕೊಳ್ಳಬಹುದು

ತೂಕ ಹೆಚ್ಚುತ್ತಿರುವುದನ್ನು ಸುಲಭವಾಗಿ ಗುರುತಿಸುವ ಐದು ಮಾರ್ಗಗಳು ಇಲ್ಲಿವೆ. ಹೇಗೆಂದು ತಿಳಿದುಕೊಳ್ಳಿ.
ತೂಕ ಹೆಚ್ಚುತ್ತಿರುವುದನ್ನು ಪತ್ತೆ ಮಾಡುವುದು ಹೀಗೆ.
1. ಮೆಟ್ಟಲು ಹತ್ತಲು ಸುಸ್ತೆನಿಸಿದರೆ ಅಥವಾ ಹೆಚ್ಚು ಸಮಯ ನಡೆಯಲು ಅಸಾಧ್ಯವೆನಿಸಿದರೆ ಅದು ತೂಕ ಹೆಚ್ಚುತ್ತಿರುವುದರ ಸೂಚನೆ. ವ್ಯಾಯಾಮದ ಅಭಾವವೇ ಇದಕ್ಕೆ ಕಾರಣ. ದೇಹದಲ್ಲಿ ಸೇರಿಕೊಂಡ ಬೇಡದ ಕೊಬ್ಬು ಕಾಲುಗಳ ಮೇಲೆ ಒತ್ತಡ ಹೇರಿ ನಡೆಯಲು ಸಾಧ್ಯವಾಗದಂತೆ ನೋವು ಕಾಣಿಸಿಕೊಂಡು ಸುಸ್ತೆನಿಸುತ್ತದೆ.
2. ತೂಕ ಹೆಚ್ಚುತ್ತಿರುವ ಮೊದಲ ಸೂಚನೆ ಕಾಣಿಸಿಕೊಳ್ಳುವುದೇ ಮುಖದ ಮೇಲೆ. ನಿಮ್ಮ ಮುಖ ದುಂಡಗಾದಂತೆ ಕಂಡರೆ ಅಥವಾ ಕೆನ್ನೆ ಅಗಲವಾಗಿದ್ದರೆ, ನಿಜಕ್ಕೂ ತೂಕ ಹೆಚ್ಚಾಗುತ್ತಿದೆ ಎಂದೇ ಅರ್ಥ.
3. ನೀವು ಮೊದಲು ಸುಲಭವಾಗಿ ತೊಡುವಂತಿದ್ದ ಬಟ್ಟೆಗಳು ಈಗ ಹಾಕಿಕೊಳ್ಳಲು ಬಿಗಿ ಎನಿಸಿದರೆ, ಅದರಲ್ಲೂ ನಿಮ್ಮ ದೇಹದ ಹಿಂಭಾಗ ಅತಿಯಾಗಿ ಬಿಗಿ ಎನಿಸಿದರೆ, ಸದ್ದಿಲ್ಲದೆ ಬೊಜ್ಜು ನಿಮ್ಮ ದೇಹಕ್ಕೆ ಎಂಟ್ರಿ ಕೊಟ್ಟಿದೆ ಎಂದೇ ಅರ್ಥ. ದೇಹದಲ್ಲಿ ಬೊಜ್ಜು ಅತಿಯಾಗಿ ಸೇರಿಕೊಂಡು ಬಿಗಿ ಬಟ್ಟೆ ತೊಟ್ಟರೆ ಉಸಿರಾಡಲೂ ಕಷ್ಟವೆನಿಸುವಂತಾಗುತ್ತದೆ.
4. ಕುಳಿತುಕೊಂಡಾಗ ನಿಮ್ಮ ಹೊಟ್ಟೆ ನಿಮ್ಮ ಕಾಲುಗಳಿಗೆ ತೊಡೆಗಳಿಗೆ ತಾಕುತ್ತಿದೆ ಎಂದಾದರೆ ಅದು ಹೊಟ್ಟೆಯಲ್ಲಿ ಅನವಶ್ಯಕ ಬೊಜ್ಜು ಸೇರಿಕೊಂಡಿರುವುದರ ಸೂಚನೆ.
5. ನಡೆಯುವಾಗ ನಿಮ್ಮ ಎರಡೂ ತೊಡೆಗಳು ಒಂದಕ್ಕೊಂದು ತಾಕುತ್ತಿದ್ದರೆ ಅದು ನೀವು ದಪ್ಪಗಾಗಿರುವುದರ ಗುರುತು.
ಈ ಲಕ್ಷಣಗಳನ್ನು ಮುನ್ನವೇ ಗಮನಿಸಿ ಅತಿಯಾಗಿ ದಪ್ಪಗಾಗುವುದನ್ನು ತಡೆಯಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
