Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಎಚ್ಚರ: ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗುತ್ತಿರುವ ಲಕ್ಷಣಗಳಿವು!
ಆರೋಗ್ಯವು ಸಾಮಾನ್ಯವಾಗಿದೆ ಎಂದು ನಮಗೆ ಅನಿಸುತ್ತದೆ. ಆದರೆ ಕೆಲವೊಮ್ಮೆ ಪದೇ ಪದೇ ಹಸಿವು ಆಗುವುದು, ತೂಕ ಹೆಚ್ಚಳವಾಗುವುದು ಇತ್ಯಾದಿಗಳು ಅನಾರೋಗ್ಯದ ಲಕ್ಷಣಗಳಾಗಿರುತ್ತದೆ. ಎಷ್ಟೇ ಪ್ರಯತ್ನ ಪಟ್ಟರೂ ತೂಕ ಇಳಿಯದೇ ಇದ್ದರೆ ಅದು ರಕ್ತದಲ್ಲಿನ ಸಕ್ಕರೆ ಅಂಶವು (ಬ್ಲಡ್ ಶುಗರ್) ಹೆಚ್ಚಾಗುತ್ತಿರುವ ಲಕ್ಷಣಗಳಾಗಿದೆ. ಬ್ಲಡ್ ಶುಗರ್ ಎಷ್ಟು ಬಾರಿ ಪರೀಕ್ಷೆ ಆಗಬೇಕು?
ಹಾಗಂತ ಮಧುಮೇಹಿಗಳು ಮಾತ್ರ ತಮ್ಮ ಆಹಾರ ಕ್ರಮದ ಬಗ್ಗೆ ಎಚ್ಚರಿಕೆ ವಹಿಸುವುದಲ್ಲ, ಸಾಮಾನ್ಯ ಜನರು ಆಹಾರ ಕ್ರಮವನ್ನು ಸರಿಯಾಗಿ ಪಾಲಿಸಿಕೊಂಡು ಹೋದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡಬಹುದಾಗಿದೆ. ಇದನ್ನು ಕಡೆಗಣಿಸುತ್ತಾ ಹೋದರೆ ರಕ್ತದಲ್ಲಿನ ಸಕ್ಕರೆ ಅಂಶವು ಹೆಚ್ಚಾಗಿ ಅದು ಮಧುಮೇಹಕ್ಕೆ ಸೇರಲ್ಪಡುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗಿದೆ ಎನ್ನುವುದಕ್ಕೆ ಕೆಲವೊಂದು ಲಕ್ಷಣಗಳನ್ನು ಇಲ್ಲಿ ನೀಡಲಾಗಿದೆ. ಇದನ್ನು ಗಮನಿಸಿಕೊಳ್ಳಿ.....

ಅತಿಯಾದ ಬಾಯಾರಿಕೆ
ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾದಾಗ ಕಿಡ್ನಿ ಸಕ್ಕರೆಯನ್ನು ಹೊರಗೆ ಹಾಕಲು ಅತಿಯಾಗಿ ಕೆಲಸ ಮಾಡುತ್ತದೆ. ಮೂತ್ರದ ಮೂಲಕ ಸಕ್ಕರೆಯು ಹೊರಬೀಳುವುದು. ಇದರಿಂದಾಗಿ ಅತಿಯಾದ ಬಾಯಾರಿಕೆ ಅಥವಾ ನಿರ್ಜಲೀಕರಣ ಉಂಟಾಗಬಹುದು.

ಪದೇ ಪದೇ ಹಸಿವು
ಮೂತ್ರ ಜಾಸ್ತಿಯಾದಾಗ ಕ್ಯಾಲರಿ ದಹಿಸಲ್ಪಡುತ್ತದೆ. ರಕ್ತದಲ್ಲಿ ಅತಿಯಾಗಿ ಸಕ್ಕರೆ ಅಂಶ ಇರುವ ಕಾರಣ ಆಹಾರದಲ್ಲಿನ ಸಕ್ಕರೆ ಅಂಶವು ಕೋಶಗಳನ್ನು ಸೇರಿಕೊಳ್ಳುವುದಿಲ್ಲ. ಇದರಿಂದಾಗಿ ಪದೇ ಪದೇ ಹಸಿವಾಗುತ್ತದೆ.

ಆಗಾಗ ಮೂತ್ರಶಂಕೆ
ರಕ್ತದಲ್ಲಿನ ಸಕ್ಕರೆ ಅಂಶವನ್ನು ಮೂತ್ರದ ಮೂಲಕ ಕಿಡ್ನಿ ಹೊರಹಾಕುವಾಗ ನಿರ್ಜಲೀಕರಣ ಮತ್ತು ಬಾಯಾರಿಕೆ ಉಂಟಾಗುತ್ತದೆ. ಇದರಿಂದಾಗಿ ನೀರನ್ನು ಹೆಚ್ಚು ಸೇವಿಸಬೇಕಾಗುತ್ತದೆ. ಇದರಿಂದ ಮೂತ್ರಶಂಕೆಯು ಹೆಚ್ಚಾಗುವುದು.

ತೂಕ ಕಳೆದುಕೊಳ್ಳುವುದು
ಮೂತ್ರಶಂಕೆಯು ಅತಿಯಾದಾಗ ಕ್ಯಾಲರಿ ದಹಿಸುವುದು ಹೆಚ್ಚಾಗುತ್ತಾ ಹೋಗುತ್ತದೆ. ಇದರಿಂದಾಗಿ ತೂಕವು ಕಡಿಮೆಯಾಗುವುದು.

ಮರಗಟ್ಟುವಿಕೆ
ರಕ್ತದಲ್ಲಿನ ಸಕ್ಕರೆ ಮಟ್ಟವು ಅತಿಯಾದಾಗ ಅದು ನರಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ಇದರಿಂದ ಮರಗಟ್ಟುವಿಕೆ ಉಂಟಾಗಿ ಕೈ ಹಾಗೂ ಕಾಲುಗಳಲ್ಲಿ ಸ್ಪರ್ಶಜ್ಞಾನ ಇಲ್ಲದಂತಾಗುತ್ತದೆ.

ದೃಷ್ಟಿ ಮಂಜಾಗುವುದು
ಸಕ್ಕರೆ ಪ್ರಮಾಣವು ರಕ್ತದಲ್ಲಿ ಹೆಚ್ಚಾದ ಸಂದರ್ಭದಲ್ಲಿ ಅತಿಯಾದ ಮೂತ್ರಶಂಕೆಯಿಂದ ನಿರ್ಜಲೀಕರಣ ಮಾತ್ರವಲ್ಲದೆ ಕಣ್ಣುಗಳು ಒಣಗುವುದು. ಇದರಿಂದ ದೃಷ್ಟಿ ಮಂಜಾಗುವುದು.



Click it and Unblock the Notifications
