Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಬೆಂಗಳೂರಿನಲ್ಲಿ ದಾಖಲೆ ಬರೆದ ಉಷ್ಣಾಂಶ: ಬಿಸಿಲಿನಲ್ಲಿ ಓಡಾಡಿದರೆ ಆರೋಗ್ಯ ಜೋಪಾನ!
ನಮ್ಮ ಬೆಂಗಳೂರಿನ ತಣ್ಣನೆಯ ಗಾಳಿಗೆ ಮನ ಸೋಲದವರು ಯಾರು? ಆ ತಣ್ಣನೆಯ ಗಾಳಿ ನಮ್ಮನ್ನು ಸೋಕಿದಾಗ ಆಹಾ ಇಲ್ಲಿಯ ಹವಾ ಎಷ್ಟು ಚೆಂದ ಎಂದು ಬೆಂಗಳೂರನ್ನು ಹಾಡಿ ಹೊಗಳುತ್ತಿದ್ದ ಕಾಲ ಮರೆಯಾಗುತ್ತಿದೆಯೇ? ಗಾರ್ಡನ್ ಸಿಟಿ ಬೆಂಗಳೂರಿನಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗುತ್ತಿದ್ದು ಹವಾಮಾನದಲ್ಲಿ ಬದಲಾವಣೆಯಾಗುತ್ತಿದ್ದು ಜನ ಸೆಕೆ.. ಸೆಕೆ ಎಂದು ಒದ್ದಾಡುವಂತಾಗಿದೆ.
ಎಸಿ ಲ್ಯಾಂಡ್ ನಿಧಾನಕ್ಕೆ ಸೆಕೆಯ ನಾಡಾಗಿ ಬದಲಾವಣೆಯಾಗಿದೆ. ಬೆಳಗ್ಗೆ 10 ಗಂಟೆಯಿಂದ 3 ಗಂಟೆಯವರೆಗೆ ಸುಡು ಬಿಸಿಲಿನಿಂದಾಗಿ ಹೊರಗಡೆ ಓಡಾಡಲು ಜನರಿಗೆ ಕಷ್ಟವಾಗುತ್ತಿದೆ. ಆರೋಗ್ಯ ತಜ್ಞರು ಕೂಡ ಮಧ್ಯಾಹ್ನ ಹೊತ್ತಿನಲ್ಲಿ ಬಿಸಿಲಿನಲ್ಲಿ ತಿರುಗಾಡಬೇಡಿ ಎಂದು ಸಲಹೆ ನೀಡುತ್ತಿದ್ದಾರೆ.

ಮೊದಲೆಲ್ಲಾ ಬೇಸಿಗೆಯಲ್ಲೂ ಬೆಂಗಳೂರು ತಂಪಾಗಿ ಇತ್ತು, ಗಾರ್ಡನ್ ಸಿಟಿಯಾಗಿದ್ದ ಬೆಂಗಳೂರು ಹೆಸರಿನಲ್ಲಿಷ್ಟೇ ಗಾರ್ಡನ್ ಸಿಟಿ ಉಳಿಸಿಕೊಂಡಿದೆ, ಅದರ ಹಚ್ಚ ಹಸಿರು ಬಹುತೇಕ ಕಣ್ಮರೆಯಾಗಿದೆ, ಅದರ ಪರಿಣಾಮ ಬೆಂಗಳೂರಿನಲ್ಲೂ ಉಷ್ಣಾಂಶ ಹೆಚ್ಚಾಗುತ್ತಿದೆ. ಅಲ್ಲದೆ ಇದೀಗ ಭಾರತದಲ್ಲಿ ಹೀಟ್‌ವೇವ್ ಉಂಟಾಗಿದ್ದು ಹಲವು ಕಡೆ ಉಷ್ಣಾಂಶ 45 ಡಿಗ್ರಿC ತಲುಪಿದೆ.
ಬೆಂಗಳೂರಿನಲ್ಲಿ ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕಳೆದ ಒಂದು ವಾರದಿಂದ 2-3 ಡಿಗ್ರಿC ಉಷ್ಣಾಂಶ ಹೆಚ್ಚಾಗಿದೆ. ಬೆಂಗಳೂರು 36.5ಡಿಗ್ರಿCನೊಂದಿಗೆ ಹೊಸ ದಾಖಲೆ ಬರೆದಿದೆ. ಐಎಂಡಿ ವಿಜ್ಞಾನಿ ಎ ಪ್ರಸಾದ್ "ಕಳೆದ ಐದು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಬೆಂಗಳೂರು ಗರಿಷ್ಠ ತಾಪಮಾನ ಹೊಂದಿದೆ' ಎಂದು ಹೇಳಿದ್ದಾರೆ. 2016ರಲ್ಲಿ 39 ಡಿಗ್ರಿ C ತಲುಪಿತ್ತು, ಇದೀಗ ಮತ್ತೊಮ್ಮೆ ಬಿಸಿಲಿನ ಝಳ ಹೆಚ್ಚಾಗುವ ಸೂಚನೆಗಳಿವೆ.
ಬಿಸಿಲಿನಲ್ಲಿ ತಿರುಗಾಡುವಾಗ ಜಾಗ್ರತೆ
* ಚುನಾವಣೆ ಬೇರೆ ಬಂದಿದೆ, ಜನರು ಪ್ರಚಾರ ಕಾರ್ಯಗಳಲ್ಲಿ ಭಾಗಿಯಾಗುವಾಗ ಮುನ್ನೆಚ್ಚರಿಕೆವಹಿಸದಿದ್ದರೆ ಆರೋಗ್ಯದ ಮೇಲೆ ಪ್ರಭಾವ ಬೀರಬಹುದು. ಮಧ್ಯಾಹ್ನ ಹೊತ್ತಿನಲ್ಲಿ ಬಿಸಿಲಿನಲ್ಲಿ ತಿರುಗಾಡಬೇಡಿ.
* ಸಾಕಷ್ಟು ನೀರು ಕುಡಿಯಿರಿ: ದಾಹವಾಗದಿದ್ದರೂ ನೀರು ಕುಡಿಯಿರಿ, ಎಷ್ಟು ನೀರು ಕುಡಿಯುತ್ತೀರೋ ಅಷ್ಟು ಒಳ್ಳೆಯದು. ಮನೆಯ ಎದುರುಗಡೆ, ಮಹಡಿ ಮೇಲೆ ಪಕ್ಷಿಗಳಿಗೂ ಸ್ವಲಪ್ ನೀರಿಡಿ. ಹೀಗೆ ಮಾಡಿದರೆ ಅವುಗಳ ಪ್ರಾಣ ರಕ್ಷಣೆ ಮಾಡಿದಂತಾಗುವುದು.
* ಸಡಿಲವಾದ ಕಾಟನ್ ಬಟ್ಟೆ ಧರಿಸಿ: ಬಿಸಿಲಿನಲ್ಲಿ ಕಪ್ಪು ಬಣ್ಣದ ಬಟ್ಟೆ ಧರಿಸಬೇಡಿ, ಇದರಿಂದ ಸೆಕೆ ಮತ್ತಷ್ಟು ಅಧಿಕವಾದಂತೆ ಅನಿಸುವುದು. ತೆಳು ಬಣ್ಣದ ಸಡಿಲವಾದ ಕಾಟನ್ ಬಟ್ಟೆ ಧರಿಸಿ.
ಸನ್‌ಸ್ಕ್ರೀನ್ ಬಳಸಿ: ಮನೆಯೊಳಗಡೆ ಇರುವಾಗ ಹಾಗೂ ಮನೆಯಿಂದ ಹೊರಗಡೆ ಹೋಗುವಾಗ ಸನ್‌ಸ್ಕ್ರೀನ್ ಬಳಸಿ.
*ಸನ್‌ಸ್ಟ್ರೋಕ್ ಬಗ್ಗೆ ಎಚ್ಚರ: ಬೆಂಗಳೂರಿಗರಿಗೆ ತೀವ್ರ ತಾಪಮಾನದ ಅನುಭವ ಇರುವುದಿಲ್ಲ. ಇದ್ದಕ್ಕಿದ್ದಂತೆ ಉಷ್ಣಾಂಶ ಹೆಚ್ಚಾಗಿರುವುದರಿಂದ ಹೆಚ್ಚು ಬಿಸಿಲಿನಲ್ಲಿದ್ದರೆ ಹೀಟ್‌ಸ್ಟ್ರೋಕ್ ಉಂಟಾಗಬಹುದು. ಆದ್ದರಿಂದ ಹೊರಗಡೆ ತಿರುಗಾಡಲು ಹೋಗಬೇಡಿ. ಹೊರಗಡೆ ಹೋಗುವಾಗ ನೀರಿನ ಬಾಟಲಿ ಜೊತೆಗೆ ಕೊಂಡೊಯ್ಯಿರಿ.
* 9 ಗಂಟೆಯ ಬಳಿಕ ಸಂಜೆ 6 ಗಂಟೆಯ ಮೊದಲು ವ್ಯಾಯಾಮ ಮಾಡಬೇಡಿ: ಸೆಕೆ ಅಧಿಕವಾಗಿರುವಾಗ ಬಿಸಿಲಿನ ತೀವ್ರತೆ ಹೆಚ್ಚಾಗುತ್ತಿದ್ದಂತೆ ವ್ಯಾಯಾಮ ಮಾಡಬೇಡಿ, ಸಂಜೆ ಕೂಡ ಅಷ್ಟೇ 6 ಗಂಟೆಯ ಬಳಿಕವಷ್ಟೇ ವ್ಯಾಯಾಮ ಮಾಡಿ. ಅದರಲ್ಲೂ ತುಂಬಾ ಶ್ರಮದ ವ್ಯಾಯಾಮ ಮಾಡಬೇಡಿ. ಲಘು ವ್ಯಾಯಾಮ ಮಾಡಿ, ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳುವುದು ತುಂಬಾನೇ ಅವಶ್ಯಕವಾಗಿದೆ. ಬೇಸಿಗೆಯಲ್ಲಿ 2 ಲೀಟರ್ ನೀರು ಕುಡಿಯುತ್ತಿದ್ದರೆ 3 ಲೀಟರ್‌ಗೆ ಏರಿಸಿ.
* ತಂಪು ಪಾನೀಯ, ಫ್ರಿಡ್ಜ್ ನೀರು ಕುಡಿಯಬೇಡಿ: ಬೇಸಿಗೆಯಲ್ಲಿ ತಂಪು ಪಾನೀಯ ಕುಡಿಯಬೇಕೆನಿಸುವುದು, ಹಾಗಂತ ಫ್ರಿಡ್ಜ್ ನೀರು ಕುಡಿಯಬೇಡಿ ಹಾಗೆಯ ಕೃತಕ ತಂಪು ಪಾನೀಯಗಳನ್ನು ಕುಡಿಯಬೇಡಿ, ಐಸ್‌ಕ್ರೀಮ್, ಐಸ್ ಕ್ರೀಮ್ ಮಿಲ್ಕ್ ಶೇಕ್ ಇವುಗಳಿಂದ ದೂರವಿರಿ. ನೀವು ಮಡಿಕೆಯಲ್ಲಿ ನೀರು ಹಾಕಿ ಕುಡಿದರೆ ನೀರು ಫ್ರಿಡ್ಜ್‌ನಷ್ಟೇ ತಂಪಾಗಿರುತ್ತದೆ. ಆ ನೀರನ್ನು ಬಳಸಬಹುದು.
ಮಕ್ಕಳನ್ನು ಕೂಡ ಬಿಸಿಲಿನಲ್ಲಿ ಆಟವಾಡಲು ಬಿಡಬೇಡಿ. ಅವರಿಗೆ ನೀರು, ತಾಜಾ ಜ್ಯೂಸ್, ಮಜ್ಜಿಗೆ ಕುಡಿಸಿ.
ಬಿಸಿಲಿನ ತಾಪ ಹೆಚ್ಚಾದಾಗ ಜಾಗ್ರತೆವಹಿಸದಿದ್ದರೆ ಆರೋಗ್ಯ ಅಪಾಯ, ಆದ್ದರಿಂದ ಮುನ್ನೆಚ್ಚರಿಕೆವಹಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
