Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಿರಿಮಿರಿ ಮಿಂಚಿಂಗ್-ಶಾಹೀದ್, ಮೀರಾ ಜೋಡಿ
ಮದುವೆಗಳ ಆಮಂತ್ರಣ ಹೆಚ್ಚಾಗಿ ಬಂದರೆ ಒಂದು ಖುಷಿ, ಬಂಧು-ಮಿತ್ರರನ್ನು ಭೇಟಿಯಾಗಿ ಅವರ ಜೊತೆಗೆ ಸಂತಸ ಹಂಚಿಕೊಳ್ಳಬಹುದು. ಆದರೆ ಅದೇ ಮದುವೆಗೆ ಸಿದ್ಧಗೊಂಡು ಹೋಗುವುದು ಒಂದು ತಲೆನೋವಿನ ಕೆಲಸ. ಯಾವ ಬಟ್ಟೆ ಧರಿಸಬೇಕು, ಹೇಗೆ ಅಲಂಕಾರಗೊಳ್ಳಬೇಕು ಎಂಬ ಪ್ರಶ್ನೆಗಳು ನಮ್ಮನ್ನು ಕಾಡುತ್ತದೆ.

ಇತ್ತೀಚೆಗೆ ನವ ವಧು-ವರರಾದ ಮೀರಾ ರಜಪೂತ್ ಮತ್ತು ಶಾಹೀದ್ ಕಪೂರ್ ಸಾಂಪ್ರದಾಯಿಕ ಉಡುಗೆಯಲ್ಲಿ ವಿನ್ಯಾಸಕಾರರಾದ ಮೆಸಬಾರವರ ಮದುವೆಯಲ್ಲಿ ಕಂಡು ಬಂದರು. ಈ ನವದಂಪತಿಗಳು ನೋಡುಗರ ಕಣ್ಮನವನ್ನು ತಮ್ಮ ಸೌಂದರ್ಯದಿಂದ ಆಕರ್ಷಿಸಿದರು ಎಂದರೆ ತಪ್ಪಾಗಲಾರದು. ಇವರಿಬ್ಬರನ್ನು ನಾವು ಕಣ್ತುಂಬಿಕೊಳ್ಳುವ ಅವಕಾಶ ಈ ಮದುವೆಯಲ್ಲಿ ನಮಗೆ ಎರಡು ಬಾರಿ ಲಭ್ಯವಾಯಿತು. ಒಂದು ರಾತ್ರಿ ನಡೆದ ಮೆಹಂದಿ ಕಾರ್ಯಕ್ರಮದಲ್ಲಿ ಇವರು ನಮ್ಮ ಕ್ಯಾಮೆರಾ ಕಣ್ಣಿಗೆ ಬಿದ್ದರು ಮತ್ತು ಮದುವೆಯ ದಿನವೂ ಸಹ ಇವರು ಕಂಡು ಬಂದರು.
ನಮಗೆಲ್ಲಾ ಗೊತ್ತಿರುವಂತೆ ವರ್ಷದ ಈ ಸಮಯದಲ್ಲಿ ನಾವು ಹಲವಾರು ಮದುವೆಗಳಿಗೆ ಭೇಟಿ ನೀಡಬೇಕಾಗಿರುತ್ತದೆ. ಆಗ ನಮಗೆ ಎದುರಾಗುವ ಒಂದೇ ಸಮಸ್ಯೆ ಯಾವ ಬಟ್ಟೆ ಧರಿಸಬೇಕು, ನಾವು ಹೇಗೆ ಕಾಣಿಸಿಕೊಳ್ಳಬೇಕು ಎಂಬುದು. ಈ ವಿಚಾರವಾಗಿ ನಮಗೆ ಶಾಹೀದ್ ಮತ್ತು ಮೀರಾರವರು ಸಹಾಯ ಮಾಡುತ್ತಾರೆ ಎಂದು ಭಾವಿಸಿದೆವು. ಶಾಹೀದ್ ಈ ಸಮಾರಂಭಕ್ಕೆ ಕೆಂಪು ಕುರ್ತಾ ಧರಿಸಿ, ಅದಕ್ಕೆ ಒಪ್ಪುವ ಬೂದು ಬಣ್ಣದ ಪ್ಯಾಂಟ್ ಧರಿಸಿದ್ದರು.
ಮೀರಾ ಸಹ ಶಹೀದ್‌ರವರ ಬಟ್ಟೆಗೆ ಅನುಗುಣವಾದ ವೈಟ್ ಸೂಟ್ ಧರಿಸಿದ್ದರು. ಶಹೀದ್ ತಮ್ಮ ಮೀಸೆಯನ್ನು ಹುರಿಗೊಳಿಸಿ, ಅದನ್ನು ಗಿರಿಜಾ ಮೀಸೆಯಂತೆ ಚೂಪಾಗಿ ಸುರುಳಿ ಸುತ್ತಿದ್ದರು. ಇದು ಅವರ ಇಡೀ ಲುಕ್‌ಗೆ ಒಂದು ಬಗೆಯ ಗಂಭೀರತೆಯನ್ನು ನೀಡಿತ್ತು. ಜೊತೆಗೆ ಅವರ ಹೇರ್ ಸ್ಟೈಲ್ ಕ್ರೂ ಕಟ್ ಸಹ ಅವರ ನಿಲುವಿಗೆ ಒಪ್ಪುತ್ತಿತ್ತು. ಮೀರಾ ತಮ್ಮ ಮುಗುಳ್ನಗೆಯಿಂದ ನೆರೆದವರ ಮನಸ್ಸನ್ನು ಕದ್ದಿದ್ದರು.
ಮದುವೆಯ ದಿನ ಶಾಹೀದ್ ನೇವಿ ಬ್ಲಾಕ್ ಬ್ಲೇಜರ್ ಧರಿಸಿದ್ದರು. ಮೀರಾ ಇಂದು ಸಹ ಬಣ್ಣದ ನೆಟ್ ಸೀರೆಯನ್ನು ಉಟ್ಟಿದ್ದರು. ಕೈ-ಕೈ ಹಿಡಿದು ಕೊಂಡು ಯುವರಾಜ-ಯುವರಾಣಿಯಂತೆ ಮದುವೆಗೆ ಬಂದ ಈ ನವದಂಪತಿಗಳು ನೆರೆದವರ ಮನಸ್ಸನ್ನು ಪುಳಕಗೊಳಿಸಿದ್ದಂತು ಸುಳ್ಳಲ್ಲ ಬಿಡಿ.
ಅರ್ಥವಾಯಿತಲ್ಲವೇ, ನೀವು ನಿಮ್ಮ ಸಂಗಾತಿ ಇಬ್ಬರೂ ಮದುವೆಗೆ ಹೋಗಬೇಕು ಎಂದಾದಲ್ಲಿ, ನಮ್ಮ ಶಾಹೀದ್ ಮತ್ತು ಮೀರಾರವರು ಅನುಸರಿಸಿದ ಮಾದರಿಯನ್ನು ಅನುಸರಿಸಿ, ನೀವು ಸಹ ನವದಂಪತಿಗಳಂತೆಯೇ ಕಂಗೊಳಿಸುವುದರಲ್ಲಿ ಸುಳ್ಳಲ್ಲ!



Click it and Unblock the Notifications



