Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಐಸಿಡಬ್ಲ್ಯೂನಲ್ಲಿ ಮಿಂಚಿದ ಮಿಂಚು ಕಂಗಳ ಚೆಲುವೆ ಇಲಿಯಾನಾ ಡಿಕ್ರೂಸ್
ಸುಲಕ್ಷಣಾ ಧಿರಿಸುಗಳು ಐಸಿಡಬ್ಲ್ಯೂ 2014 ರ ಕೊನೆಯ ದಿನದಂದು ಆಕರ್ಷಕವಾಗಿದ್ದವು. ಈ ವಿನ್ಯಾಸದ ಧಿರಿಸಿಗೆ ತಮ್ಮನ್ನು ಪ್ರದರ್ಶಿಸಿಕೊಂಡ ಇಲಿಯಾನಾ ಡಿಕ್ರೂಸ್ ಗುಲಾಬಿ ಬಣ್ಣದ ಸೀರೆ ಗೌನ್‌ನಲ್ಲಿ ಮನಸೆಳೆಯುವಂತಿದ್ದರು. ಚಿನ್ನ, ಎಳೆ ಮತ್ತು ಲೇಸ್ ಹೊಂದಿರುವ ಈ ಸೀರೆ ಗೌನ್ ಒಳಗೊಂಡಿದ್ದು ಅದ್ಭುತವಾಗಿ ಕಂಡುಬರುತ್ತಿತ್ತು.
ಇಲಿಯಾನಾ ಗುಲಾಬಿ ಬಣ್ಣದ ಸೀರೆಯಲ್ಲಿ ಮಾಡಿದ ರಾಂಪ್ ವಾಕ್ ಅಂತೂ ಕಣ್ಮನ ಸೆಳೆಯುವಂತಿತ್ತು. ಸುಲಕ್ಷಣಾ ಸಂಗ್ರಹದ ಗುಲಾಬಿ ಬಣ್ಣದ ನೆಟ್ ಸೀರೆಯನ್ನು ಧರಿಸಿದ್ದ ಇಲಿಯಾನಾ ತಮ್ಮ ಸೀರೆಯಲ್ಲಿ ಎಂಬ್ರಾಯಿಡರಿ ವಿನ್ಯಾಸವನ್ನು ಹೊಂದಿದ್ದರು. ಇದು ಚಿನ್ನ ಮತ್ತು ನೆಟ್ ಮಾದರಿಯಲ್ಲಿತ್ತು. ಇದರ ರವಿಕೆಯನ್ನು ಫ್ಲೋರಲ್ ಮಾದರಿಯಲ್ಲಿ ರೂಪಿಸಲಾಗಿತ್ತು. ಸುಲಕ್ಷಣಾ ವಿನ್ಯಾಸಕಿ ವಿನ್ಯಾಸಪಡಿಸಿದ ಈ ಸೀರೆ ಇಲಿಯಾನಾರಿಗೆ ಅದ್ಭುತವಾಗಿ ಕಾಣುತ್ತಿತ್ತು.

ಇನ್ನೂ ಹೆಚ್ಚಾಗಿ ಹೇಳಬೇಕೆಂದರೆ, ಐಸಿಡಬ್ಲ್ಯೂ 2014 ರ ಅಂತಿಮ ಸುತ್ತಿನಲ್ಲಿ, ಅದ್ಭುತ ಶೋಸ್ಟೋಪರ್ ಆಗಿದ್ದರು. ಧರೆಗಿಳಿದ ಅಪ್ಸರೆಯಂತೆ ಮಿಂಚುತ್ತಿದ್ದ ಈ ಚೆಲುವೆ ತಮ್ಮ ಸುಂದರ ದೇಹಸಿರಿಯನ್ನು ಈ ಸೀರೆಯಲ್ಲಿ ಪ್ರದರ್ಶಿಸಿದ್ದಾರೆ.
ಐಸಿಡಬ್ಲ್ಯೂ 2014: ರೋಹಿತ್ ಬಾಲಾ ಅವರ ಮನಸೆಳೆಯುವ ಸಂಗ್ರಹ
ಸುಲಕ್ಷಣಾ ಸಂಗ್ರಹದ ಸೀರೆಯಲ್ಲಿ ಇಲಿಯಾನಾ ಮಾಡಿದ ರಾಂಪ್ ವಾಕ್ ಅಂತೂ ಮನಸೆಳೆಯುವಂತಿತ್ತು. ಈ ಸುಂದರಿ ಹೆಜ್ಜೆ ಮೇಲೆ ಹೆಜ್ಜೆ ಹಾಕಿ ಗುಲಾಬಿ ಸೀರೆಯಲ್ಲಿ ತಮ್ಮನ್ನು ತೆರೆದಿಟ್ಟ ಕ್ಷಣ ಹೆಚ್ಚು ಮನೋಹರವಾಗಿತ್ತು.
ಯಾವುದೇ ಆಭರಣಗಳಿಲ್ಲದೆ ರವಿಕೆಯಲ್ಲಿ ಮಾಡಿದ ವಿನ್ಯಾಸವು ಇಲಿಯಾನಾರಿಗೆ ಹೆಚ್ಚು ಶೋಭಾಯಮಾನವಾಗಿತ್ತು ಎಂದೇ ಹೇಳಬಹುದು. ಸರಳ ಪೋನಿಟೈಲ್ ಅನ್ನು ಹಾಕಿದ್ದ ಬೆಡಗಿ ಸರಳ ಮೇಕಪ್‌ನಲ್ಲಿ ಗಮನಸೆಳೆಯುವಂತಿದ್ದರು.



Click it and Unblock the Notifications
