For Quick Alerts
ALLOW NOTIFICATIONS  
For Daily Alerts

ಮೇಕಪ್ ರಿಮೂವಲ್ ವಿಷಯದಲ್ಲಿ ಮಾಡಲೇಬಾರದ ತಪ್ಪುಗಳು

|

ಮೇಕಪ್ ತೆಗೆಯುವುದು ಹಾಗೂ ಚರ್ಮವನ್ನು ಸ್ವಚ್ಛಗೊಳಿಸುವುದು ತ್ವಚೆಯ ಆರೈಕೆಯ ದಿನನಿತ್ಯದ ಕ್ರಿಯೆಗಳೇ ಆಗಿವೆ. ಆದರೆ ಮೇಕಪ್ ತೆಗೆಯುವ ಸೂಕ್ತ ವಿಧಾನ ಹಾಗೂ ಚರ್ಮದ ಆರೈಕೆಯ ಬಗ್ಗೆ ಸಾಕಷ್ಟು ಮಾಹಿತಿ ಇಲ್ಲದ ಕಾರಣ ಬಹುತೇಕರು ಈ ವಿಷಯಗಳಲ್ಲಿ ತಪ್ಪು ವಿಧಾನಗಳನ್ನು ಅನುಸರಿಸುತ್ತಿರುತ್ತಾರೆ. ಅಂಥ ತಪ್ಪು ವಿಧಾನಗಳು ಹಾಗೂ ಯಾವ ರೀತಿ ಆ ತಪ್ಪುಗಳನ್ನು ಸರಿಪಡಿಸಿಕೊಳ್ಳಬಹುದು ಎಂಬ ಬಗ್ಗೆ ಇಲ್ಲಿ ವಿವರಿಸಲಾಗಿದ್ದು, ನೀವೂ ನೋಡಿ ತಿಳಿದುಕೊಳ್ಳಿ.

ಫೇಸ್‌ವಾಶ್‌ನಿಂದ ಮುಖ ತೊಳೆದರೆ ಸಾಕಾ?

ಫೇಸ್‌ವಾಶ್‌ನಿಂದ ಮುಖ ತೊಳೆದರೆ ಸಾಕಾ?

ನೀವು ಅದೆಷ್ಟೇ ಪ್ರಬಲವಾದ ಫೇಸ್ ವಾಶ್ ಬಳಸಿ ಮುಖ ತೊಳೆದರೂ ಅದರಿಂದ ವಾಟರಪ್ರೂಫ್ ಮೇಕಪ್ ಮತ್ತು ಹಟಮಾರಿ ಮ್ಯಾಟ್ ವರ್ಣದ್ರವ್ಯಗಳನ್ನು ಸಂಪೂರ್ಣವಾಗಿ ತೊಳೆದು ಹಾಕಲು ಸಾಧ್ಯವಿಲ್ಲ. ಅದರಲ್ಲೂ ಲಿಕ್ವಿಡ್ ಲಿಪ್‌ಸ್ಟಿಕ್‌ನ ಬಣ್ಣಗಳು ಅಷ್ಟು ಸುಲಭವಾಗಿ ಹೋಗಲಾರವು. ಫೇಸ್ ವಾಶ್ ಮತ್ತು ಕ್ಲೆನ್ಸರ್‌ಗಳು ಸಾಮಾನ್ಯ ಸಾಬೂನಿನ ಗುಣಗಳನ್ನೇ ಹೊಂದಿದ್ದು, ಎಲ್ಲ ರೀತಿಯ ಮೇಕಪ್ ಪಿಗ್ಮೆಂಟ್‌ಗಳನ್ನು ತೊಳೆಯಲಾರವು. ಅಂದರೆ ಮೇಕಪ್ ತೆಗೆಯಲು ನೀವು ಈ ಫೇಸ್‌ವಾಶ್ ಬಳಸಿದಾಗ ಕೇವಲ ಮೇಲ್ಭಾಗದ ತುಸು ಮೇಕಪ್ ಮಾತ್ರ ಹೋಗುತ್ತದೆ.

ಸಾಮಾನ್ಯವಾಗಿ ದಿನದಲ್ಲಿ ನಿಮ್ಮ ತ್ವಚೆ ಬಿಡುಗಡೆ ಮಾಡುವ ಎಣ್ಣೆಯಿಂದಲೇ ಈ ಮೇಕಪ್ ತಾನಾಗಿಯೇ ಬಿಟ್ಟುಕೊಂಡಿರುತ್ತದೆ. ಹೀಗಾಗಿ ಇನ್ನುಳಿದ ಕೆಲ ಭಾಗ ಮೇಕಪ್ ನಿಮ್ಮ ತ್ವಚೆಯ ಸೂಕ್ಷ್ಮ ರಂಧ್ರಗಳಲ್ಲಿ ಹಾಗೇ ಉಳಿದುಕೊಂಡು ಬ್ಯಾಕ್ಟೀರಿಯಾಗಳು ಬೆಳೆಯುವ ತಾಣವಾಗಬಹುದು. ಫೇಸ್ ವಾಶ್‌ನಿಂದ ಮುಖ ತೊಳೆದ ನಂತರ ಟೋನರ್‌ನಲ್ಲಿ ಹತ್ತಿಯನ್ನು ಅದ್ದಿ ಮುಖದ ಮೇಲೆ ಸವರಿ ನೋಡಿ.. ಇನ್ನೂ ಕೊಳೆ ಹತ್ತಿಗೆ ಅಂಟಿಕೊಂಡು ಬರುವುದನ್ನು ನೋಡಬಹುದು. ಅಂದ ಮೇಲೆ ಫೇಸ್‌ವಾಶ್‌ನಿಂದ ಮೇಕಪ್ ಸಂಪೂರ್ಣ ಹೋಗಿಲ್ಲ ಎಂದರ್ಥವಲ್ಲವೇ?

ಚರ್ಮಕ್ಕೆ ಹಾನಿ ಮಾಡದ ಮೇಕಪ್‌ಗಳಿಲ್ಲ

ಚರ್ಮಕ್ಕೆ ಹಾನಿ ಮಾಡದ ಮೇಕಪ್‌ಗಳಿಲ್ಲ

!ಮೈಕೆಲ್ಲರ್ ವಾಟರ್ ಮತ್ತು ಕ್ಲೆನ್ಸಿಂಗ್ ಮಿಲ್ಕ್‌ಗಳಲ್ಲಿ ಹತ್ತಿಯನ್ನು ಅದ್ದಿ ಅದರಿಂದ ತ್ವಚೆಯ ಮೇಲಿನ ಮೇಕಪ್ ತೆಗೆಯುವುದು ಸಾಮಾನ್ಯ ವಿಧಾನವಾಗಿದೆ. ಆದರೆ ಇದರಿಂದಲೂ ಮೇಕಪ್ ಪೂರ್ಣವಾಗಿ ಹೋಗುವುದಿಲ್ಲ. ಮೈಕೆಲ್ಲರ್ ವಾಟರ್ ಮತ್ತು ಕ್ಲೆನ್ಸಿಂಗ್ ಮಿಲ್ಕ್‌ಗಳು ಟೋನರ್‌ಗಳಿಗೆ ಪರ್ಯಾಯವಾಗಲಾರವು ಮತ್ತು ಅವು ಮೇಕಪ್ ತೆಗೆಯುವ ಸೂಕ್ತ ಸಾಧನಗಳಾಗಲಾರವು ಎಂಬುದನ್ನು ತಿಳಿದುಕೊಳ್ಳಿ. ಇನ್ನು ಕೆಲ ಮೇಕಪ್‌ಗಳು ನಿಮ್ಮ ಚರ್ಮಕ್ಕೆ ಯಾವುದೇ ಹಾನಿಯನ್ನು ಉಂಟು ಮಾಡಲಾರವು ಹಾಗೂ ಅವನ್ನು ಸಂಪೂರ್ಣವಾಗಿ ತೆಗೆಯದಿದ್ದರೂ ಚರ್ಮಕ್ಕೆ ಹಾನಿಯಾಗದು ಎಂಬುದಾಗಿ ಅವನ್ನು ತಯಾರಿಸುವ ಕಂಪನಿಗಳು ಹೇಳಿಕೊಳ್ಳುತ್ತವೆ.

ಆದರೆ ಇದು ಪೂರ್ಣ ಸತ್ಯವಲ್ಲ! ಇದನ್ನು ನಂಬಿ ಮೇಕಪ್ ಅಂಶಗಳನ್ನು ಚರ್ಮದ ಮೇಲೆ ಹಾಗೆಯೇ ಬಿಟ್ಟರೆ ಖಂಡಿತವಾಗಿಯೂ ನಿಮ್ಮ ಚರ್ಮಕ್ಕೆ ಸರಿಪಡಿಸಲಾಗದ ಹಾನಿಯಾಗಬಹುದು.

ಮೈಕೆಲ್ಲರ್ ವಾಟರ್ ಅನ್ನು ಡಿಟರ್ಜೆಂಟ್ ಗುಣ ಹೊಂದಿರುವ ಮೈಕೆಲ್ ಕಣಗಳು ಅಥವಾ ಸಾಬೂನಿನ ಅಂಶಗಳಿಂದ ತಯಾರಿಸಲಾಗಿರುತ್ತದೆ. ಮೇಕಪ್ ತೆಗೆಯಲು ಈ ಲಿಕ್ವಿಡ್ ಅನ್ನು ತ್ವಚೆಗೆ ಸವರುವುದು ಹಾಗೂ ಬಹಳ ಹೊತ್ತು ಹಾಗೇ ಬಿಡುವುದು ವೈಜ್ಞಾನಿಕವಾಗಿ ತಪ್ಪು ವಿಧಾನವಾಗಿದೆ. ಇನ್ನು ಕ್ಲೆನ್ಸಿಂಗ್ ಮಿಲ್ಕ್‌ಗಳು ಮೇಕಪ್‌ನ ಕೆಲ ಭಾಗವನ್ನು ತೊಳೆದರೂ ತ್ವಚೆಯ ಸಹಜ ತೈಲಗಳನ್ನು ಒಣಗಿಸಿಬಿಡುತ್ತವೆ. ಅಲ್ಲಿಗೆ ಮೇಕಪ್ ತೆಗೆಯಲು ಬಳಸುವ ಕ್ಲೆನ್ಸರ್‌ಗಳನ್ನು ತೊಳೆಯುವುದೇ ಅತಿ ಮುಖ್ಯ. ಅದಕ್ಕಾಗಿ ಶುದ್ಧ ನೀರನ್ನು ಬಳಸಬೇಕಾಗುತ್ತದೆ !

ಮೇಕಪ್ ವೈಪ್ ಸಾಧನಗಳ ಬದಲು ಮರುಬಳಕೆಯ ಪ್ಯಾಡ್ ಬಳಕೆ ಸೂಕ್ತ

ಮೇಕಪ್ ವೈಪ್ ಸಾಧನಗಳ ಬದಲು ಮರುಬಳಕೆಯ ಪ್ಯಾಡ್ ಬಳಕೆ ಸೂಕ್ತ

ಮೇಕಪ್ ತೆಗೆಯಲು ಸಮಯ ಇಲ್ಲದವರು ಅಥವಾ ಆಲಸ್ಯತನ ಹೊಂದಿರುವವರು ಮೇಕಪ್ ವೈಪ್ ಸಾಧನಗಳನ್ನು ಬಳಸುತ್ತಾರೆ. ಆದರೆ ಇದು ನಿತ್ಯದ ಅಭ್ಯಾಸವಾಗಿ ಬಿಡುವ ಸಾಧ್ಯತೆಯಿದೆ. ಸಿಂಥೆಟಿಕ್ ಫೈಬರ್‌ಗಳಿಂದ ತಯಾರಿಸಲಾದ ಈ ವೈಪ್‌ಗಳು ಹಾನಿಕಾರಕ ಸರ್ಫಾಂಕ್ಟಂಟ್‌ಗಳನ್ನು ಹೊಂದಿರುವುದರಿಂದ ನಿಮ್ಮ ಚರ್ಮವು ಒಣಗಿ ಅದು ಬಿರುಕು ಬಿಟ್ಟು ವಯಸ್ಸಾದವಂತೆ ಕಾಣಿಸಲಾರಂಭಿಸುತ್ತದೆ. ಹೀಗಾಗಲು ನೀವು ಖಂಡಿತವಾಗಲೂ ಬಯಸಲಾರಿರಿ.. ಅಲ್ಲವೇ..!

ಮೇಕಪ್ ವೈಪ್ ಸಾಧನಗಳಿಗಿಂತ ಮರುಬಳಕೆಯ ಕ್ಲೆನ್ಸಿಂಗ್ ಪ್ಯಾಡ್‌ಗಳ ಬಳಕೆಯೇ ಅತ್ಯಂತ ಸುರಕ್ಷಿತವಾಗಿದೆ. ಇತ್ತೀಚೆಗಷ್ಟೇ ಮಾರುಕಟ್ಟೆಗೆ ಬಂದಿರುವ ಈ ಮರುಬಳಕೆ ಕ್ಲೆನ್ಸಿಂಗ್ ಪ್ಯಾಡ್‌ಗಳು ಸಾಕಷ್ಟು ಜನಪ್ರಿಯವಾಗುತ್ತಿವೆ. ಇವುಗಳಲ್ಲಿರುವ ಫೈಬರ್‌ಗಳು ಚರ್ಮವನ್ನು ಅತ್ಯಂತ ಸೂಕ್ಷ್ಮ ಪದರುಗಳಾಗಿ ಬಿಡಿಸಿ ಸ್ವಚ್ಛಗೊಳಿಸುತ್ತವೆ. ಮೇಕಪ್ ತೆಗೆಯುವ ಆಯಿಲ್‌ಗಳು ಮತ್ತು ಮಿಲ್ಕ್‌ಗಳನ್ನು ಬಳಸಿದ ನಂತರ ಅವುಗಳನ್ನು ತೆಗೆಯಲು ಕಾಟನ್ ಪ್ಯಾಡ್‌ಗಳ ಬದಲಾಗಿ ಈ ಮರುಬಳಕೆ ಪ್ಯಾಡ್‌ಗಳನ್ನು ಬಳಸಬಹುದು.

ಬೈ-ಫೇಸ್ಡ್ ಕ್ಲೆನ್ಸರ್ (ಎರಡು ಹಂತದ ಕ್ಲೆನ್ಸರ್) ಅಷ್ಟೊಂದು ಪರಿಣಾಮಕಾರಿಯಲ್ಲ !

ಬೈ-ಫೇಸ್ಡ್ ಕ್ಲೆನ್ಸರ್ (ಎರಡು ಹಂತದ ಕ್ಲೆನ್ಸರ್) ಅಷ್ಟೊಂದು ಪರಿಣಾಮಕಾರಿಯಲ್ಲ !

ತೈಲ ಮತ್ತು ಮೈಕೆಲ್ಲರ್ ವಾಟರ್‌ನಿಂದ ತಯಾರಿಸಲಾಗಿರುವ ಬೈ-ಫೇಸ್ಡ್ ಕ್ಲೆನ್ಸರ್‌ಗಳು ಇತ್ತೀಚೆಗೆ ಹೆಚ್ಚು ಜನಪ್ರಿಯತೆ ಪಡೆಯುತ್ತಿವೆ. ಮೇಕಪ್ ಅನ್ನು ಸಂಪೂರ್ಣವಾಗಿ ತೆಗೆದುಹಾಕುವುದಾಗಿ ಇವುಗಳ ತಯಾರಕರು ಹೇಳಿಕೊಂಡರೂ ಅದು ಸತ್ಯವಲ್ಲ. ಕಾಟನ್ ಪ್ಯಾಡ್‌ಗಳನ್ನು ಪದೇ ಪದೇ ಇವುಗಳಲ್ಲಿ ಅದ್ದಿ ನಿಮ್ಮ ಚರ್ಮವನ್ನು ಸ್ವಚ್ಛಗೊಳಿಸಿಕೊಳ್ಳುವಷ್ಟರಲ್ಲಿ ನೀವು ಸುಸ್ತಾಗಿ ಹೋಗುವಿರಿ. ಇನ್ನು ಈ ಬೈ-ಫೇಸ್ಡ್ ಕ್ಲೆನ್ಸರ್‌ಗಳು ತ್ವಚೆಯ ಮೇಲೆ ಜಿಗುಟು ಮತ್ತು ಸಾಬೂನಿನ ಅಂಶಗಳನ್ನು ಉಳಿಸುವುದರಿಂದ ತ್ವಚೆಯು ಒಣಗಿ, ಅದು ಬಿರುಸಾದಂತೆ ಅನಿಸಲಾರಂಭಿಸುತ್ತದೆ.

ಆಯಿಲ್ ಕ್ಲೆನ್ಸರ್‌ಗಳ ಬಳಕೆಯೇ ಹೆಚ್ಚು ಸೂಕ್ತ

ಆಯಿಲ್ ಕ್ಲೆನ್ಸರ್‌ಗಳ ಬಳಕೆಯೇ ಹೆಚ್ಚು ಸೂಕ್ತ

ಆಯಿಲ್ ಕ್ಲೆನ್ಸರ್‌ಗಳು (ಕ್ಲೆನ್ಸಿಂಗ್ ಬಾಮ್ ಮತ್ತು ಆಯಿಲ್‌ಗಳು) ಮೇಕಪ್ ಅನ್ನು ಬೇಗನೆ ಬ್ರೇಕಪ್ ಮಾಡಿ, ಅದಷ್ಟೂ ಮೃದುವಾಗಿ ಮೇಕಪ್ ತೆಗೆದು ಹಾಕುತ್ತವೆ. ಬೈ-ಫೇಸ್ಡ್ ಕ್ಲೆನ್ಸರ್‌ಗಳಿಗಿಂತಲೂ ಇವು ಹೆಚ್ಚು ಪರಿಣಾಮಕಾರಿಯಾಗಿವೆ. ಇವನ್ನು ಬಳಸುವುದರಿಂದ ಪದೇ ಪದೇ ತ್ವಚೆಯ ಮೇಲೆ ಉಜ್ಜುವ ಅವಶ್ಯಕತೆ ಇರಲಾರದು ಹಾಗೂ ಸಾಕಷ್ಟು ಸಮಯವೂ ಇದರಿಂದ ಉಳಿತಾಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಹಲವಾರು ಕಂಪನಿಯ ಆಯಿಲ್ ಕ್ಲೆನ್ಸರ್‌ಗಳು ಮಾರುಕಟ್ಟೆಯಲ್ಲಿ ಸಿಗುತ್ತಿರುವುದರಿಂದ ನೀವು ಮತ್ತೆ ಬೈ-ಫೇಸ್ಡ್ ಕ್ಲೆನ್ಸರ್‌ಗಳ ಮೊರೆ ಹೋಗುವ ಅಗತ್ಯವೇ ಇಲ್ಲ.

ಯಾವ ವಸ್ತುವನ್ನು ಯಾವ ಅನುಕ್ರಮದಲ್ಲಿ ಬಳಸಬೇಕೆಂಬ ವಿಚಾರದಲ್ಲಿಯೇ ಬಹಳಷ್ಟು ಜನ ಎಡವುತ್ತಾರೆ. ಆದಷ್ಟೂ ಬೇಗನೆ ತ್ವಚೆಯನ್ನು ಸ್ವಚ್ಛಗೊಳಿಸಿಕೊಂಡು ನಿರಾಳರಾಗುವುದು ಎಲ್ಲರ ಬಯಕೆಯಾಗಿರುತ್ತದೆ. ಇದಕ್ಕಾಗಿ ಡಬಲ್ ಕ್ಲೆನ್ಸಿಂಗ್ ವಿಧಾನವು ಅತ್ಯಂತ ಸೂಕ್ತವಾಗಿದೆ. ಇದಕ್ಕಾಗಿ ಮೊದಲಿಗೆ ಆಯಿಲ್ ಕ್ಲೆನ್ಸರ್ ತೆಗೆದುಕೊಂಡು ಅದನ್ನು ಬೆರಳುಗಳಿಂದ ಚರ್ಮದ ಮೇಲೆ ಸವರಿಕೊಳ್ಳಿ. ಕಣ್ಣು ಹಾಗೂ ತುಟಿ ಸೇರಿದಂತೆ ಎಲ್ಲೆಡೆಯೂ ಈ ಕ್ಲೆನ್ಸರ್‌ನಿಂದ ನಿಧಾನವಾಗಿ ಮಸಾಜ್ ಮಾಡಿ.

ಮುಖದ ಮೇಲಿನ ಮೇಕಪ್ ಸಂಪೂರ್ಣ ಬಿಟ್ಟುಕೊಳ್ಳುವವರೆಗೂ ಮಸಾಜ್ ಮುಂದುವರೆಸಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ಹಿತವಾಗಿ ಮುಖ ತೊಳೆದು ಎಷ್ಟಾಗುತ್ತೋ ಅಷ್ಟು ಸ್ವಚ್ಛಗೊಳಿಸಿಕೊಳ್ಳಿ. ಒಂದೊಮ್ಮೆ ಮೈಕೆಲ್ಲರ್ ವಾಟರ್ ಬಳಸಲೇಬೇಕೆಂದರೆ ಈ ಹಂತದಲ್ಲಿ ಅದನ್ನು ಬಳಸಬಹುದು. ಈಗ ಕಾಟನ್ ಪ್ಯಾಡ್‌ಗಳನ್ನು ಮೈಕೆಲ್ಲರ್ ವಾಟರ್‌ನಲ್ಲಿ ಅದ್ದಿ ಅದರಿಂದ ಉಳಿದುಹೋದ ಮೇಕಪ್ ನಿವಾರಿಸಿಕೊಳ್ಳಬಹುದು.

ಇದರ ನಂತರ ಒದ್ದೆಯಾಗಿರುವ ತ್ವಚೆಗೆ ಜೆಲ್ ಕ್ಲೆನ್ಸರ್ ಬಳಸಬೇಕು. ಜೆಲ್ ಕ್ಲೆನ್ಸರ್ ಅನ್ನು ತ್ವಚೆಯ ಮೇಲೆ ಮಸಾಜ್ ಮಾಡಿ ಅದನ್ನು 60 ಸೆಕೆಂಡುಗಳವರೆಗೆ ಹಾಗೇ ಇರಲು ಬಿಡಬೇಕು. ಇಷ್ಟು ಮಾಡಿದ ಮೇಲೆ ತಣ್ಣನೆಯ ನೀರಿನಿಂದ ಮುಖ ತೊಳೆದು ಮುಖವನ್ನು ಸ್ವಚ್ಛವಾಗಿ ಒರೆಸಿಕೊಂಡು ಬಿಡಬೇಕು. ಇಲ್ಲಿಗೆ ಚರ್ಮದ ಸ್ವಚ್ಛತಾ ಕ್ರಿಯೆ ಪೂರ್ಣಗೊಂಡಂತಾಗುತ್ತದೆ.

ತ್ವಚೆ ರಕ್ಷಣೆ ಮಾಡುವ ಎಕ್ಸ್‌ಫೋಲೆಟ್

ತ್ವಚೆ ರಕ್ಷಣೆ ಮಾಡುವ ಎಕ್ಸ್‌ಫೋಲೆಟ್

ಇನ್ನು ನೀವು ಚರ್ಮವನ್ನು ಎಕ್ಸ್‌ಫೋಲಿಯೇಟ್ ಮಾಡಬಯಸುವಿರಾದರೆ, ಎಎಚ್‌ಎ ಮತ್ತು ಬಿಎಚ್‌ಎ ಕೆಮಿಕಲ್‌ಗಳನ್ನು ಅಥವಾ ಮ್ಯಾನುವಲ್ ಸ್ಕ್ರಬ್‌ಗಳನ್ನು ಅದಕ್ಕಾಗಿ ಬಳಸಬಹುದು. ಇದರ ನಂತರ ಕ್ಲೇ ಮಾಸ್ಕ್ ಬಳಸಬಹುದು. ಇದರ ನಂತರ ಟೋನರ್‌ಗಳನ್ನು ಬಳಸಬಹುದು. ತ್ವಚೆಯನ್ನು ಸ್ವಚ್ಛಗೊಳಿಸುವ ಸರಿಯಾದ ಪ್ರಕ್ರಿಯೆ ಯಾವುದೆಂಬುದು ಈಗ ತಿಳಿಯಿತಲ್ಲವೇ..!?

ಮೇಲೆ ಹೇಳಿದ ಪ್ರಕ್ರಿಯೆಯು ತುಸು ಸುದೀರ್ಘ ಎನಿಸಿದರೂ ಕೆಲ ವಿಷಯಗಳನ್ನು ನೀವು ಖಾತರಿಪಡಿಸಿಕೊಳ್ಳುವುದು ಒಳ್ಳೆಯದು. ನೀವು ಸುಂದರವಾಗಿ ಕಾಣಬೇಕಾದರೆ ಎರಡು ಹಂತದ ತ್ವಚೆಯ ಕ್ಲೆನ್ಸಿಂಗ್ ಅಗತ್ಯವಾಗಿರುತ್ತದೆ. ಜಗತ್ತಿನಲ್ಲಿ ಸಿಗುವ ದುಬಾರಿ ಹಾಗೂ ಜನಪ್ರಿಯ ಸಾಧನಗಳನ್ನು ನೀವು ಇದಕ್ಕಾಗಿ ಬಳಸಬಹುದು. ಆದರೆ ಸನ್‌ಸ್ಕ್ರೀನ್‌ಗಳು ಮತ್ತು ಮೇಕಪ್‌ಗಳ ಅವಶೇಷಗಳು ನಿಮ್ಮ ತ್ವಚೆಯ ರಂಧ್ರಗಳಲ್ಲಿ ಉಳಿದುಕೊಳ್ಳುವುದರಿಂದ ಅವೆಲ್ಲವೂ ನಿರುಪಯೋಗಿಯಾಗಿ ಬಿಡುತ್ತವೆ. ತ್ವಚೆಯ ರಂಧ್ರಗಳಲ್ಲಿ ಬ್ಯಾಕ್ಟಿರೀಯಾಗಳು ಬೆಳೆಯುವುದರಿಂದ ದಿನಗಳೆದಂತೆ ತ್ವಚೆಗೆ ಹಾನಿ ಹೆಚ್ಚಾಗದಂತೆ ತಡೆಯುವುದೇ ಮುಖ್ಯವಾಗಿದೆ.

English summary

Things People Get Wrong About Makeup Removal, And How To Rectify

Things people get wrong about makeup removal and how to rectify, read on
X
Desktop Bottom Promotion