For Quick Alerts
ALLOW NOTIFICATIONS  
For Daily Alerts

ನೀವು ವೀಕೆಂಡ್‌ನಲ್ಲಿ ಈ 6 ಸ್ಕಿನ್‌ ಕೇರ್‌ ಟಿಪ್ಸ್ ಪಾಲಿಸಿದರೆ ವಾರಪೂರ್ತಿ ತ್ವಚೆ ಕಾಂತಿಯುತವಾಗಿರುತ್ತೆ

|

ವೀಕೆಂಡ್‌ನಲ್ಲಿ ನಮ್ಮ ತ್ವಚೆಗೂ ಸ್ವಲ್ಪ ಆರೈಕೆ ಬೇಕಾಗುತ್ತದೆ, ವಾರವಿಡೀ ಕೆಲಸದ ಒತ್ತಡ ಕಾರಣ ತ್ವಚೆ ಆರೈಕೆ ಕಡೆಗೆ ಹೆಚ್ಚೇನು ಗಮನ ಕೊಡಲು ಸಾಧ್ಯವಿಲ್ಲ. ಅದೇ ವೀಕೆಂಡ್‌ನಲ್ಲಿ ನಿಮ್ಮ ತ್ವಚೆಯನ್ನು ರಿಲ್ಯಾಕ್ಸ್ ಮಾಡಿ, ವಾರವಿಡೀ ಹೊಳಪಿನಿಂದ ಆಕರ್ಷಕವಾಗಿರುತ್ತದೆ.

skin care routine

ಅಲ್ಲದೆ ನೀವು ವೀಕೆಂಡ್‌ನಲ್ಲಿ ಸ್ಕಿನ್‌ ಕೇರ್‌ ಮಾಡುವುದರಿಂದ ಈ ಪ್ರಮುಖ ಪ್ರಯೋಜನಗಳಿವೆ:
* ನಿಮ್ಮ ತ್ವಚೆಯಲ್ಲಿ ಬೇಗನೆ ನೆರಿಗೆ ಬೀಳುವುದನ್ನು ತಡೆಗಟ್ಟುತ್ತದೆ.
* ತ್ವಚೆಯ ಕಾಂತಿ ಹೆಚ್ಚುತ್ತದೆ
* ಮುಖದಲ್ಲಿ ಕೊಲೆಜಿನ್ ಉತ್ಪತ್ತಿ ಹೆಚ್ಚುವುದು
* ಡೆಡ್‌ಸ್ಕಿನ್‌ ತೆಗೆದು ಹಾಕಿ ಮುಖವನ್ನು ಆಕರ್ಷಕವಾಗಿ ಇಟ್ಟುಕೊಳ್ಳಬಹುದು.
ಈ ವೀಕೆಂಡ್‌ನಲ್ಲಿ ಸ್ಕಿನ್‌ಕೇರ್‌ ಮಾಡಿದರೆ ಒಂದು ವಾರದವರೆಗೆ ತ್ವಚೆ ಮಂಕಾಗದೆ ಅಂದವಾಗಿರುತ್ತದೆ.

ವೀಕೆಂಡ್‌ ಸ್ಕಿನ್‌ ಕೇರ್‌ ಎಂದರೆ ಏನೆಲ್ಲಾ ಮಾಡಬೇಕು?
ಸೂಚನೆ: ಇದನ್ನು ಎಲ್ಲಾ ಬಗೆಯ ತ್ವಚೆಯವರು ಮಾಡಬಹುದು.

ಎಕ್ಸ್‌ಫೋಲೆಟ್

ಎಕ್ಸ್‌ಫೋಲೆಟ್

ನೀವು ತೆಗೆದುಕೊಳ್ಳುವ ಒತ್ತಡ ನಿಮ್ಮ ಮನಸ್ಸಿನ ಮೇಲೆ ಮಾತ್ರವಲ್ಲ ತ್ವಚೆ ಮೇಲೂ ಬೀಳುತ್ತದೆ. ನಮ್ಮ ಮನಸ್ಸಿನ ಸ್ಥಿತಿಯಂತೆ ತ್ವಚೆ ಆರೋಗ್ಯ ಇರುತ್ತದೆ. ಮನಸ್ಸು ಮಂಕಾಗಿದ್ದರೆ ತ್ವಚೆ ಕೂಡ ಮಂಕಾಗುವುದು, ಆದ್ದರಿಂದಲೇ ನಮ್ಮ ಮುಖ ನೋಡಿದ ತಕ್ಷಣ ಗೊತ್ತಾಗುತ್ತೆ. ಆದ್ದರಿಂದ ಮುಖದ ತ್ವಚೆಗೆ ರಿಲ್ಯಾಕ್ಸ್ ಬೇಕಾಗುತ್ತದೆ, ಅಂದ್ರೆ ತ್ವಚೆ ಆಮ್ಲಜನಕವನ್ನು ಹೀರಿಕೊಳ್ಳಬೇಕು. ಅದಕ್ಕೆ ಡೆಡ್‌ಸ್ಕಿನ್ ತೆಗೆಯಬೇಕು. ನೀವು ಎಕ್ಸ್ಪೋಲೆಟ್‌ ಮಾಡಿದರೆ ಡೆಡ್‌ಸ್ಕಿನ್‌ ತೆಗೆಯಬಹುದು.

ಕಾಫಿ ಸ್ಕ್ರಬ್ ಅಥವಾ 1 ಚಮಚ ಆಲೀವ್‌ ಎಣ್ಣೆಗೆ 2 ಚಮಚ ಸಕ್ಕರೆ ಹಾಕಿ ಸ್ಕ್ರಬ್ ಮಾಡಿ.

ಟೋನರ್ ಬಳಸಿ

ಟೋನರ್ ಬಳಸಿ

ನೀವು ಪ್ರತಿದಿನ ಮೇಕಪ್ ತೆಗೆಯಲು ಟೋನರ್ ಬಳಸಬೇಕು, ಅಲ್ಲದೆ ವೀಕೆಂಡ್‌ನಲ್ಲಿ ಎಕ್ಸ್ಫೋಲೆಟ್‌ ಮಾಡಿದ ಮೇಲೆ ಟೋನರ್ ಬಳಸಿ. ಹೀಗೆ ಮಾಡುವುದರಿಂದ ತ್ವಚೆಯಲ್ಲಿರುವ ಕಶ್ಮಲ ತೆಗೆಯಬಹುದು, ತ್ವಚೆಯ pH ಬ್ಯಾಲೆನ್ಸ್ ಮಾಡಬಹುದು.

ಸ್ಟೀಮ್ ಮಾಡಿ

ಸ್ಟೀಮ್ ಮಾಡಿ

ಇನ್ನು ನಿಮ್ಮ ತ್ವಚೆ ರಂಧ್ರಗಳು ತೆರೆದುಕೊಂಡು ಅದರಲ್ಲಿರುವ ಬೇಡದ ಕಶ್ಮಲಗಳು ಹೊರ ಬರಲು ಸ್ಟೀಮ್‌ ತೆಗೆದುಕೊಳ್ಳಿ. ಸ್ಟೀಮ್‌ ತೆಗೆದುಕೊಳ್ಳುವುದರಿಂದ ಮುಖದ ತ್ವಚೆಯಲ್ಲಿ ರಕ್ತ ಸಂಚಾರ ಚೆನ್ನಾಗಿ ಆಗುತ್ತದೆ.

 ಫೇಸ್‌ ಮಾಸ್ಕ್‌ ಮಾಡಿ

ಫೇಸ್‌ ಮಾಸ್ಕ್‌ ಮಾಡಿ

ನಂತರ ನಿಮ್ಮ ಮುಖಕ್ಕೆ ಹೊಂದುವ ಫೇಸ್‌ ಮಾಸ್ಕ್ ಹಚ್ಚಿ 20 ನಿಮಿಷ ರಿಲ್ಯಾಕ್ಸ್ ಮಾಡಿ. ಫೇಸ್‌ ಮಾಸ್ಕ್‌ ನೀವೇ ಮನೆಯಲ್ಲಿಯೂ ಮಾಡಬಹುದು. ಹಣ್ಣುಗಳ ಫೇಸ್‌ ಮಾಸ್ಕ್‌ ಮುಖಕ್ಕೆ ಹಚ್ಚಬಹುದು, ಇನ್ನು ಮಾರುಕಟ್ಟೆಯಲ್ಲಿಯೂ ಫೇಸ್‌ ಮಾಸ್ಕ್‌ ದೊರೆಯುವುದು, ನಿಮಗೆ ಸೂಕ್ತವಾದ ಫೇಸ್‌ ಮಾಸ್ಕ್ ಬಳಸಬಹುದು.

 ಐ ಕ್ರೀಮ್ ಬಳಸಿ

ಐ ಕ್ರೀಮ್ ಬಳಸಿ

ತುಂಬಾ ಸ್ಟ್ರೆಸ್‌ನಿಂದಾಗಿ ಕಣ್ಣಿನ ಕೆಳಗಡೆ ಕಪ್ಪು ಬೀಳುವುದು. ನೀವು ಐ ಕ್ರೀಮ್‌ ಬಳಸುವುದರಿಂದ ಈ ರೀತಿ ಡಾರ್ಕ್‌ ಸರ್ಕಲ್‌ ಹೋಗಲಾಡಿಸಬಹುದು.

ಮಾಯಿಶ್ಚರೈಸರ್ ಹಚ್ಚುವ ಮುನ್ನ ಐ ಕ್ರೀಮ್‌ ಬಳಸಿ.

 ಮಾಯಿಶ್ಚರೈಸರ್

ಮಾಯಿಶ್ಚರೈಸರ್

ಪ್ರತಿದಿನದಂತೆ ವೀಕೆಂಡ್‌ ತ್ವಚೆ ಆರೈಕೆ ಮಾಡಿದ ಮೇಲೂ ಮಾಯಿಶ್ಚರೈಸರ್‌ ಹಚ್ಚಬೇಕು. ಇದರಿಂದ ತ್ವಚೆ ಮೃದುವಾಗಿ ಆಕರ್ಷಕವಾಗಿ ಕಾಣುವುದು. ನಿಮ್ಮ ತ್ವಚೆಗೆ ಸೂಕ್ತವಾಗುವ ಮಾಯಿಶ್ಚರೈಸರ್ ಬಳಸಿ.

English summary

Best Weekend Skin Care Routine in Kannada

If you do these weekend skin care routine you will get glowing skin, read on....
Story first published: Saturday, December 3, 2022, 21:37 [IST]
X
Desktop Bottom Promotion