Latest Updates
-
ನವರಾತ್ರಿ ಗರ್ಬಾ ಸಂಭ್ರಮ: ನಕಲಿ ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆಡಿ! -
ದೆಹಲಿ AQI ಏರಿಕೆ: ಮನೆಯೊಳಗೆ 'ಏರ್ ಶೀಲ್ಡ್' ಸಿದ್ಧಪಡಿಸಿ, ಕೇವಲ 20 ನಿಮಿಷದಲ್ಲಿ ಧೂಳಿನಿಂದ ಬಚಾವಾಗಿ! -
ನವರಾತ್ರಿ ಹಬ್ಬದ ಸಂಭ್ರಮ: ಕುತ್ತು ಹಿಟ್ಟು, ಸಿಹಿ ತಿಂಡಿ ಕೊಳ್ಳುವಾಗ ಈ ತಪ್ಪು ಮಾಡಬೇಡಿ! -
ಶಾರ್ದೀಯ ನವರಾತ್ರಿ 2026: ಘಟಸ್ಥಾಪನೆ ಮುಹೂರ್ತ, ಬಣ್ಣಗಳ ಪಟ್ಟಿ ಮತ್ತು ಹಬ್ಬದ ಫ್ಯಾಷನ್ ಟಿಪ್ಸ್ ಇಲ್ಲಿದೆ! -
ಮಂಡಿ ನೋವಿನ ಚಿಂತೆಯೇ ಬೇಡ: ಗರ್ಬಾ ಆಡುವ ಮುನ್ನ ಈ 7 ನಿಮಿಷದ ಸಿಂಪಲ್ ವರ್ಕೌಟ್ ಟ್ರೈ ಮಾಡಿ! -
ಫ್ಲಿಪ್ಕಾರ್ಟ್-ಅಮೆಜಾನ್ ಸೇಲ್: ದಂಪತಿಗಳ ಶಾಪಿಂಗ್ಗೆ 10 ಮನಿ ರೂಲ್ಸ್ಗಳು! -
ಡೆಂಗ್ಯೂ ಭೀತಿ: ಮಳೆಗಾಲದ ಮುನ್ನ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 20 ನಿಮಿಷದ ಈ ಕೆಲಸ ಮಾಡಿ -
ನಂದಿನಿ ಹಾಲಿನ ದರ ಏರಿಕೆ: ಲೀಟರ್ಗೆ ₹8 ಹೆಚ್ಚಳ, ನಿಮ್ಮ ತಿಂಗಳ ಬಜೆಟ್ ಮೇಲೆ ಎಂತಹ ಪರಿಣಾಮ? -
'ದೃಶ್ಯಂ' ಆಡಿಯೋ ಟ್ರೆಂಡ್: ನಿಮ್ಮ ರೀಲ್ಸ್ ವೈರಲ್ ಮಾಡಲು ಈ ಸಿಂಪಲ್ ಟಿಪ್ಸ್ ಮಿಸ್ ಮಾಡ್ಬೇಡಿ! -
ವಿಶ್ವ ಮಾನಸಿಕ ಆರೋಗ್ಯ ದಿನ: ಆತಂಕ ಮತ್ತು ಸ್ಕ್ರೀನ್ ಸುಸ್ತಿನಿಂದ ಮುಕ್ತಿ ಪಡೆಯಲು 10 ನಿಮಿಷದ ಈ 'ಮಾರ್ನಿಂಗ್ ರಿಸೆಟ್' ಟ್ರೈ ಮಾಡಿ!
ತ್ವಚೆಯ ಎಲ್ಲಾ ಸಮಸ್ಯೆಗಳಿಗೆ ಮೂರು ಬಗೆಯ ಹಣ್ಣುಗಳ ಫೇಸ್ ಪ್ಯಾಕ್
ಸೌಂದರ್ಯ ವೃದ್ಧಿಸಿಕೊಳ್ಳಲು ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಫೇಶಿಯಲ್ ಗಳು ಲಭ್ಯವಿದೆ. ಆದರೆ ಇವುಗಳಲ್ಲಿ ಹೆಚ್ಚಾಗಿ ರಾಸಾಯನಿಕವು ಇರುವ ಕಾರಣದಿಂದಾಗಿ ಇದು ಚರ್ಮಕ್ಕೆ ಹಾನಿ ಉಂಟು ಮಾಡುವುದು. ಈ ಹಿನ್ನೆಲೆಯಲ್ಲಿ ಕೆಲವೊಂದು ನೈಸರ್ಗಿಕದತ್ತ ಹಣ್ಣುಗಳನ್ನು ಬಳಸಿಕೊಂಡು ಮನೆಯಲ್ಲೇ ತಯಾರಿಸಿದ ಫೇಶಿಯಲ್ ಖಂಡಿತವಾಗಿಯೂ ಮುಖದ ಕಾಂತಿ ವೃದ್ಧಿಸುವುದು ಮಾತ್ರವಲ್ಲದೆ, ಇದು ಯಾವುದೇ ಅಡ್ಡಪರಿಣಾಮ ಉಂಟು ಮಾಡದು. ಆದರೆ ಕೆಲವೊಂದು ವಿಚಾರಗಳನ್ನು ಗಮನಿಸಬೇಕು. ಯಾಕೆಂದರೆ ಚರ್ಮವು ತುಂಬಾ ಸೂಕ್ಷ್ಮವಾಗಿದ್ದರೆ ಆಗ ಫೇಶಿಯಲ್ ಮಾಡಿದರೆ ಮೊಡವೆ ಹಾಗೂ ಇತರ ಸೋಂಕು ಉಂಟಾಗುವುದು.
ಫೇಶಿಯಲ್ ನಲ್ಲಿ ಇರುವಂತಹ ಕೆಲವೊಂದು ರಾಸಾಯನಿಕಗಳು ಹಾನಿ ಮಾಡುವುದು. ಇದರಿಂದಾಗಿಯೇ ಈ ಲೇಖನದಲ್ಲಿ ಹಣ್ಣುಗಳಣ್ನು ಬಳಸಿಕೊಂಡು ಫೇಶಿಯಲ್ ಬಳಸುವ ಬಗ್ಗೆ ತಿಳಿಸಿಕೊಡಲಿದ್ದೇವೆ. ಹಣ್ಣುಗಳಲ್ಲಿ ವಿಟಮಿನ್ ಗಳು, ಖನಿಜಾಂಶಗಳು ಮತ್ತು ಆಂಟಿಆಕ್ಸಿಡೆಂಟ್ ಗಳು ಸಮೃದ್ಧವಾಗಿದೆ. ಇದರಿಂದ ಚರ್ಮವು ತುಂಬಾ ಆರೋಗ್ಯಕಾರಿ ಹಾಗೂ ಅದ್ಭುತವಾಗಿ ಕಾಣುವುದು. ನಿಮಗೆ ಹಣ್ಣುಗಳನ್ನು ತಿನ್ನಲು ಇಷ್ಟವಿಲ್ಲ ಎಂದಾದರೆ ಆಗ ನೀವು ಈ ಹಣ್ಣುಗಳಿಂದ ಫೇಶಿಯಲ್ ತಯಾರಿಸಿ. ಯಾಕೆಂದರೆ ಇದು ತ್ವಚೆಗೆ ಕಾಂತಿ ನೀಡುವುದು. ಮನೆಯಲ್ಲೇ ತಯಾರಿಸಬಹುದಾದ ಕೆಲವೊಂದು ಫೇಶಿಯಲ್ ಪ್ಯಾಕ್ ಗಳ ಬಗ್ಗೆ ನಾವು ನಿಮಗೆ ತಿಳಿಸಲಿದ್ದೇವೆ. ಇದನ್ನು ನೀವು ತಿಳಿದುಕೊಳ್ಳಿ. ಪ್ರತಿಯೊಬ್ಬರು ಪ್ರಯತ್ನಿಸಲೇಬೇಕಾಗಿರುವ ಕೆಲವೊಂದು ಫೇಸ್ ಮಾಸ್ಕ್ ಗಳು

1.ಸ್ಟ್ರಾಬೆರಿ ಮತ್ತು ಜೇನುತುಪ್ಪದ ಫೇಸ್ ಪ್ಯಾಕ್
•ಒಂದು ಪಿಂಗಾಣಿಯಲ್ಲಿ ಸ್ಟ್ರಾಬೆರಿ ತುಂಡು ಮಾಡಿ ಹಾಕಿಕೊಳ್ಳಿ.
•ಇದಕ್ಕೆ ಎರಡು ಚಮಚ ಜೇನುತುಪ್ಪ ಹಾಕಿ.
•ಎರಡನ್ನು ಸರಿಯಾಗಿ ಮಿಶ್ರಣ ಮಾಡಿ ಮತ್ತು ಮುಖಕ್ಕೆ ಹಚ್ಚಿ.
•ವೃತ್ತಾಕಾರದಲ್ಲಿ ಇದನ್ನು ಮುಖಕ್ಕೆ ಮಸಾಜ್ ಮಾಡಿಕೊಳ್ಳಿ ಮತ್ತು ಸ್ವಲ್ಪ ಸಮಯ ಹಾಗೆ ಬಿಡಿ.
•ಇದು ಒಣಗಿದ ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದು ಹೊಳೆಯುವ ಸುಂದರ ತ್ವಚೆ ನೀಡುವುದು. ಸ್ಟ್ರಾಬೆರಿ ಸಿಟ್ರಸ್ ಹಣ್ಣು ಆಗಿರುವ ಕಾರಣದಿಂದಾಗಿ ಇದು ಎಣ್ಣೆಯುಕ್ತ ಚರ್ಮಕ್ಕೆ ತುಂಬಾ ಒಳ್ಳೆಯ ಆಯ್ಕೆ. ಜೇನುತುಪ್ಪವು ಒಳ್ಳೆಯ ಮೊಶ್ಚಿರೈಸರ್ ಆಗಿ ಕೆಲಸ ಮಾಡುವ ಮೂಲಕ ತ್ವಚೆಯ ಆರೈಕೆ ಮಾಡುವುದು. ಇದು ತುಂಬಾ ಸರಳ ವಿಧಾನವಾಗಿದೆ.
2.ಪಪ್ಪಾಯಿ, ಬಾಳೆಹಣ್ಣು ಮತ್ತು ಜೇನುತುಪ್ಪದ ಫೇಸ್ ಪ್ಯಾಕ್ ಒಣ ಚರ್ಮಕ್ಕಾಗಿ
•ಮೊದಲನೇಯದಾಗಿ ಒಂದು ಸೂಚನೆ: ಇದು ತುಂಬಾ ಮೊಶ್ಚಿರೈಸರ್ ನೀಡುವಂತಹ ಫೇಸ್ ಪ್ಯಾಕ್ ಮತ್ತು ತುಂಬಾ ಒಣ ಚರ್ಮ ಇರುವವರಿಗೆ ಮಾತ್ರ ಇದು ಲಾಭಕಾರಿ ಆಗಿರಲಿದೆ. ಒಣ ಚರ್ಮವು ತುರಿಕೆ, ಬಿರುಕು ಉಂಟು ಮಾಡುವುದು.
•ಪಪ್ಪಾಯಿ, ಬಾಳೆಹಣ್ಣು ಮತ್ತು ಜೇನುತುಪ್ಪವನ್ನು ಜತೆಯಾಗಿ ಸೇರಿಸಿಕೊಂಡು ರುಬ್ಬಿಕೊಳ್ಳಿ ಮತ್ತು ಮೆತ್ತಗಿನ ಪೇಸ್ ಮಾಡಿ.
•ಸಮಾನ ಪ್ರಮಾಣದ ಪಪ್ಪಾಯಿ, ಬಾಳೆಹಣ್ನು ಮತ್ತು ಕೆಲವು ಚಮಚ ಜೇನುತುಪ್ಪ ಹಾಕಿಬಿಡಿ ಮತ್ತು ಇದು ನೆರವು ನೀಡುವುದು.
3.ಸಿಟ್ರಸ್ ಹಣ್ಣುಗಳ ಫೇಸ್ ಪ್ಯಾಕ್
•ಎಣ್ಣೆಯುಕ್ತ ಚರ್ಮವು ನಿಮ್ಮ ಸಮಸ್ಯೆಯಾಗಿದ್ದರೆ ಆಗ ನಿಮಗೆ ಮೊಡವೆ ಹಾಗೂ ಬೊಕ್ಕೆಗಳು ಸಾಮಾನ್ಯವಾಗಿರುವುದು.
•ಇದರಿಂದ ನೀವು ಸಿಟ್ರಸ್ ಹಣ್ಣುಗಳನ್ನು ಬಳಸಿಕೊಂಡು ಫೇಸ್ ಪ್ಯಾಕ್ ತಯಾರಿಸಿಕೊಳ್ಳಿ. ಕಿತ್ತಳೆ, ಸ್ಟ್ರಾಬೆರಿ, ಚೆರ್ರಿ ಬಳಕೆ ಮಾಡಬಹುದು.
•ಎಲ್ಲವನ್ನು ಜತೆಯಾಗಿ ಸೇರಿಸಿಕೊಳ್ಳಿ ಮತ್ತು ಅದನ್ನು ನೇರವಾಗಿ ಮುಖಕ್ಕೆ ಹಚ್ಚಿಕೊಳ್ಳಿ.
•ಸಿಟ್ರಸ್ ಹಣ್ಣುಗಳಲ್ಲಿ ಇರುವಂತಹ ರಸವು ಈ ಪ್ಯಾಕ್ ನ್ನು ಸ್ವಲ್ಪ ಮೆತ್ತಗೆ ಆಗಿ ಇಡುವುದು.
•ಸಿಟ್ರಸ್ ಹಣ್ಣುಗಳಲ್ಲಿ ವಿಟಮಿನ್ ಸಿ, ಆಂಟಿಆಕ್ಸಿಡೆಂಟ್ ಮತ್ತು ಸ್ಯಾಲಿಸಿಲಿಕ್ ಆಮ್ಲವು ಇರುವುದು. ಇದು ಚರ್ಮಕ್ಕೆ ತುಂಬಾ ಹಿತ ನೀಡುವುದು.
•ನೀವು ಇದಕ್ಕೆ ಅರಶಿನವನ್ನು ಹಾಕಬೇಕಿದ್ದರೆ ಆಗ ಬಳಸಬಹುದು. ಯಾಕೆಂದರೆ ಇದರಲ್ಲಿ ಕೂಡ ಕೆಲವೊಂದು ಉರಿಯೂತ ಶಮನಕಾರಿ ಗುಣಗಳು ಇವೆ.
•ಇದು ಪ್ಯಾಕ್ ಹಾಗೆ ಮುಖದ ಮೇಲೆ ಒಣಗಲು ಬಿಡಿ.
•ಈ ಫೇಸ್ ಪ್ಯಾಕ್ ನ್ನು ವಾರದಲ್ಲಿ ಒಂದು ಅಥವಾ ಎರಡು ಸಲ ಬಳಸಿಕೊಳ್ಳಬಹುದು. ಆದರೆ ಈ ಫೇಸ್ ಪ್ಯಾಕ್ ಹಚ್ಚಿಕೊಂಡ ಬಳಿಕ ಲೋಷನ್ ಹಚ್ಚಲು ಮರೆಯಬೇಡಿ.



Click it and Unblock the Notifications


