For Quick Alerts
ALLOW NOTIFICATIONS  
For Daily Alerts

ಬೇಸಿಗೆಯಲ್ಲಿ ತ್ವಚೆಯ ರಕ್ಷಣೆಗೆ ಈ 5 ವಸ್ತುಗಳು ನಿಮ್ಮ ಬಳಿಯಿರಲಿ

|

ಬೇಸಿಗೆಯ ಅತಿ ಉಷ್ಣ ಹಾಗೂ ತೇವಾಂಶ ತುಂಬಿದ ವಾತಾವರಣದಲ್ಲಿ ನಿಮ್ಮ ತ್ವಚೆಯ ರಕ್ಷಣೆಗಾಗಿ ಹೆಚ್ಚಿನ ಮುತುವರ್ಜಿ ವಹಿಸುವುದು ಅಗತ್ಯ. ಇದಕ್ಕಾಗಿ ನಿಮ್ಮ ಮೇಕಪ್ ಕಿಟ್‌ನಲ್ಲಿ ಕೆಲವೊಂದು ಅಗತ್ಯ ಬದಲಾವಣೆಗಳನ್ನು ಕೂಡ ಮಾಡಿಕೊಳ್ಳಬೇಕಾಗುತ್ತದೆ. ಸನ್ ಸ್ಕ್ರೀನ್ ಹಚ್ಚಿಕೊಳ್ಳುವುದು ಅಥವಾ ಹೆಚ್ಚೆಚ್ಚು ಎಳನೀರು ಸೇವಿಸುವ ಬಗ್ಗೆ ಮಾತ್ರ ಇಲ್ಲಿ ಹೇಳುತ್ತಿಲ್ಲ.

skincare

ಅದರ ಹೊರತಾಗಿಯೂ ಕೆಲ ಪ್ರಮುಖ ಅಂಶಗಳನ್ನು ತಿಳಿಸಲಿದ್ದೇವೆ. ಬೇಸಿಗೆಯಲ್ಲಿ ನಿಮ್ಮ ಆರೋಗ್ಯದ ಕಡೆಗೆ ಅತಿ ಹೆಚ್ಚು ಗಮನ ನೀಡುವುದು ಅನಿವಾರ್ಯ. ಹೀಗಾಗಿ ಈ ಬೇಸಿಗೆಯಲ್ಲಿ ನಿಮ್ಮ ಬ್ಯಾಗ್‌ನಲ್ಲಿ ಹಾಗೂ ಡ್ರೆಸಿಂಗ್ ಟೇಬಲ್ ಮೇಲೆ ಇರಲೇಬೇಕಾದ ಕೆಲ ವಸ್ತುಗಳನ್ನು ಪಟ್ಟಿ ಮಾಡಿದ್ದೇವೆ... ನೀವೂ ನೋಡಿ...

ಸನ್ ಸ್ಕ್ರೀನ್

ಸನ್ ಸ್ಕ್ರೀನ್

ಸೂರ್ಯನ ಕಿರಣಗಳ ಅಪಾಯ ಕಡಿಮೆ ಮಾಡಲು ಸನ್ ಸ್ಕ್ರೀನ್ ಬೇಕೇ ಬೇಕು ಎಂಬುದು ನಿಜ. ಆದರೆ ಯಾವ ರೀತಿಯ ಸನ್ ಸ್ಕ್ರೀನ್ ಲೋಶನ್ ಬೇಕೆಂಬುದು ಸಹ ಮುಖ್ಯ. 30 ರಿಂದ 50 ಪ್ರಮಾಣದ ಎಸ್‌ಪಿಎಫ್ ಇರುವ ಸನ್ ಬ್ಲಾಕ್ ತಂದಿಟ್ಟುಕೊಳ್ಳಿ. ಮನೆಯಿಂದ ಆಚೆ ಹೊರಡುವ 20 ನಿಮಿಷ ಮುಂಚೆ ಇದನ್ನು ಹಚ್ಚಿಕೊಳ್ಳಿ. ನಂತರ ಪ್ರತಿ 2 ಗಂಟೆಗಳಿಗೊಮ್ಮೆ ಇದನ್ನು ಹಚ್ಚಿಕೊಳ್ಳುತ್ತಲೇ ಇರಿ. ನೀವು ಮನೆಯ ಒಳಗಿದ್ದರೂ ಸಹ ಇದನ್ನು ಹಚ್ಚಿಕೊಳ್ಳುವುದನ್ನು ನಿಲ್ಲಿಸಬೇಡಿ.

Most Read: ಬೇಸಿಗೆಯಲ್ಲಿ ಪುರುಷರು ಕೈಗೊಳ್ಳಬೇಕಾದ ತ್ವಚೆಯ ಕಾಳಜಿಗಳು

ಎಸ್‌ಪಿಎಫ್ ಆಧರಿತ ಲಿಪ್ ಬಾಮ್‌ಗಳು

ಎಸ್‌ಪಿಎಫ್ ಆಧರಿತ ಲಿಪ್ ಬಾಮ್‌ಗಳು

ಲಿಪ್ ಬಾಮ್ ನಿಂದ ನಿಮ್ಮ ನವಿರಾದ ತುಟಿಗಳಿಗೆ ಹೊಳಪು ಸಿಗುತ್ತದೆ ಹಾಗೂ ಅವು ಮೃದುವಾಗಿರುತ್ತವೆ. ಆದರೆ ಅತಿ ಉಷ್ಣಾಂಶ ಹಾಗೂ ತೇವಾಂಶವಿರುವ ಪಟ್ಟಣದಲ್ಲಿ ನೀವು ವಾಸವಾಗಿದ್ದರೆ ಸಾಮಾನ್ಯ ಲಿಪ್ ಬಾಮ್ ಕೆಲಸ ಮಾಡಲಾರವು. ಹೀಗಾಗಿ ಹೆಚ್ಚಿನ ರಕ್ಷಣೆಗಾಗಿ ಎಸ್‌ಪಿಎಫ್ ಆಧರಿತ ಲಿಪ್ ಬಾಮ್‌ಗಳನ್ನೇ ಬಳಸಬೇಕು.

ಚರ್ಮ ಕಪ್ಪಾಗುವಿಕೆ ತಡೆಯಲು ಉಪಾಯ

ಚರ್ಮ ಕಪ್ಪಾಗುವಿಕೆ ತಡೆಯಲು ಉಪಾಯ

ಸೂರ್ಯನ ಶಾಖದಿಂದ ಚರ್ಮ ಕಪ್ಪಾಗುವಿಕೆಯನ್ನು ಟ್ಯಾನಿಂಗ್ ಎನ್ನಲಾಗುತ್ತದೆ. ಇದನ್ನು ತಡೆಯಲು ಕೇವಲ ಸಲೂನ್ ರೀತಿಯ ಸಾಮಾನ್ಯ ಆಂಟಿ ಟ್ಯಾನಿಂಗ್ (ರಾಸಾಯನಿಕ ಅಥವಾ ಆರ್ಗಾನಿಕ್) ಉತ್ಪನ್ನಗಳು ಅಷ್ಟೊಂದು ಪರಿಣಾಮಕಾರಿಯಾಗಿ ಕೆಲಸ ಮಾಡಲಾರವು. ಚರ್ಮದ ಸಂಪೂರ್ಣ ಸುರಕ್ಷತೆ ಬಯಸುತ್ತಿರುವಿರಾದರೆ ಉತ್ತಮ ಗುಣಮಟ್ಟದ ಆಂಟಿ ಟ್ಯಾನಿಂಗ್ ಹಾಗೂ ಫೇಸ್ ಪ್ಯಾಕ್ ಖರೀದಿಸಿ ಬಳಸಲಾರಂಭಿಸಿ.

ಹೇರ್ ಮಾಸ್ಕ್

ಹೇರ್ ಮಾಸ್ಕ್

ವಾತಾವರಣದಲ್ಲಿನ ಕಪ್ಪಾದ ಹೊಗೆ, ಧೂಳು ಹಾಗೂ ಬಿಸಿಲಿಗೆ ಸತತವಾಗಿ ಸುರಿಯುವ ಬೆವರು, ಶಾಖಗಳಿಂದ ಕೂದಲಿನ ಸೌಂದರ್ಯ ಬಲು ಬೇಗನೆ ಹಾಳಾಗುತ್ತದೆ. ಹೀಗಾಗಿ ಕೂದಲಿನ ಆರೋಗ್ಯಕ್ಕಾಗಿ ವಾರಕ್ಕೆ ನಾಲ್ಕು ಬಾರಿ ಶಾಂಪೂ ಹಾಕಿ ಸ್ನಾನ ಮಾಡಿದರೆ ಸಾಲದು. ಅದಕ್ಕಾಗಿ ಕೂದಲಿನ ರಕ್ಷಣೆಗಾಗಿ ವಿಶೇಷವಾಗಿ ತಯಾರಿಸಲಾದ ಹೇರ್ ಮಾಸ್ಕ್ ಬಳಸುವುದು ಸೂಕ್ತ. ಇದರಿಂದ ಕೂದಲಿನ ಹೊಳಪು ಮರುಕಳಿಸಿ ಅವುಗಳಿಗೆ ತೇವಾಂಶ ದೊರಕುತ್ತದೆ. ಇದನ್ನು ದಿನ ಬಿಟ್ಟು ದಿನ ಬಳಸಿದಲ್ಲಿ ಉತ್ತಮ ಪರಿಣಾಮ ಕಾಣಬಹುದು.

Most Read: ಭೃಂಗರಾಜ ತೈಲ: ಕೂದಲಿಗೆ ಲಭಿಸುವ ಪ್ರಯೋಜನಗಳು ಮತ್ತು ಉಪಯೋಗಿಸುವ ವಿಧಾನಗಳು

ಬಾಡಿ ಸ್ಕ್ರಬ್ಸ್ ಬಳಸುವುದು

ಬಾಡಿ ಸ್ಕ್ರಬ್ಸ್ ಬಳಸುವುದು

ಸ್ಕ್ರಬ್ಸ್ ಹಾಗೂ ಎಕ್ಸ್‌ಫೊಲಿಯೇಟರ್‌ಗಳು ಕೇವಲ ನಿಮ್ಮ ಮುಖದ ಅಂದಕ್ಕೆ ಮಾತ್ರ ಸೀಮಿತವಾಗಿಲ್ಲ. ಅವು ನಿಮ್ಮ ಇಡೀ ಶರೀರಕ್ಕೂ ಅಗತ್ಯವಾಗಿವೆ. ಬಿರು ಬೇಸಿಗೆಯ ಈ ದಿನಗಳಲ್ಲಿ ವಿಪರೀತ ಬೆವರಿನಿಂದ ನಿಮ್ಮ ದೇಹ ಒಂದು ರೀತಿ ಎಣ್ಣೆಣ್ಣೆಯಾಗಿರುವುದು ಭಾಸವಾಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ಬಾಡಿ ಸ್ಕ್ರಬ್ಸ್ ಬಳಸುವುದರಿಂದ ಚರ್ಮದ ಮೇಲಿನ ಕಲ್ಮಶವನ್ನು ತೊಡೆದು ಹಾಕಿ ಬೆವರಿನ ದುರ್ಗಂಧ ಮಾಯವಾಗುತ್ತದೆ. ಆದರೆ ಅತಿಯಾಗಿ ಸ್ಕ್ರಬ್ಸ್ ಬಳಕೆ ಯಾವತ್ತೂ ಸರಿಯಲ್ಲ. ಸ್ಕ್ರಬ್ಸ್ ಅತಿಯಾಗಿ ಬಳಸಿದಲ್ಲಿ ಚರ್ಮ ಒಣಗಿದಂತಾಗಿ ಹೊಳಪು ಕಳೆದುಕೊಳ್ಳಬಹುದು. ಸ್ಕ್ರಬ್ಸ್ ಅಥವಾ ಎಕ್ಸ್‌ಫೊಲಿಯೇಟರ್‌ಗಳನ್ನು ವಾರಕ್ಕೆ ಎರಡು ಅಥವಾ ಮೂರು ಬಾರಿ ಬಳಸಬಹುದು.

English summary

skincare must-haves for the hot weather

In a hot and humid city like Mumbai, taking extra care of your skin and making some crucial changes to your make-up kit is of paramount importance. And we are not just talking about the mandatory usage of sunscreen and drinking coconut water here; summer demands a holistic approach towards your lifestyle.
X
Desktop Bottom Promotion