For Quick Alerts
ALLOW NOTIFICATIONS  
For Daily Alerts

ಬ್ಯೂಟಿ ಟಿಪ್ಸ್: ಜೊಜೊಬಾ ಎಣ್ಣೆಯಿಂದ ಕೂದಲಿನ ಆರೈಕೆ

|

ಜೊಜೊಬಾ ಎನ್ನುವ ಹೆಸರು ಕೇಳಿದರೆ ಇದು ತುಂಬಾ ವಿಚಿತ್ರವಾಗಿದೆ ಎಂದು ಅನಿಸುವುದು. ಇದು ಏನಪ್ಪಾ ಎಂದು ನಿಮಗೆ ಪ್ರಶ್ನೆ ಕಾಡದೆ ಇರದು. ಆದರೆ ಜೊಜೊಬಾ ಎಂದರೆ ಅಮೆರಿಕಾದ ಪಶ್ಚಿಮ ಭಾಗಗಳಲ್ಲಿ ಬೆಳೆಯುವಂತಹ ಒಂದು ರೀತಿಯ ಸಸ್ಯವಾಗಿದೆ. ಇದರಿಂದ ತಯಾರಿಸಲ್ಪಟ್ಟ ಎಣ್ಣೆಯನ್ನು ಜೊಜೊಬಾ ಎಣ್ಣೆ ಎಂದು ಕರೆಯುವರು. ಇದನ್ನು ಸೌಂದರ್ಯವರ್ಧಕಗಳಲ್ಲಿ ಹೆಚ್ಚಾಗಿ ಬಳಸುವರು. ಇದನ್ನು ಚರ್ಮ ಹಾಗೂ ಕೂದಲಿನ ಆರೈಕೆಯಲ್ಲಿ ಪ್ರಮುಖವಾಗಿ ಬಳಸಲಾಗುತ್ತದೆ. ಕಾಸ್ಮೆಟಿಕ್ ಕಂಪೆನಿಗಳು ಈ ಎಣ್ಣೆಯನ್ನು ತಮ್ಮ ಹೆಚ್ಚಿನ ಉತ್ಪನ್ನಗಳಲ್ಲಿ ಬಳಸಿಕೊಂಡು ಅದರ ಲಾಭವನ್ನು ಪಡೆಯುತ್ತಲಿದೆ.

ನಿಸ್ತೇಜ ಮತ್ತು ಹಾನಿಗೀಡಾಗಿರುವಂತಹ ಕೂದಲಿನ ಆರೈಕೆಗೆ ಜೊಜೊಬಾ ಎಣ್ಣೆಯನ್ನು ಬಳಸಿಕೊಳ್ಳಬಹುದು. ಇದರಲ್ಲಿ ಇರುವಂತಹ ಉರಿಯೂತ ಶಮನಕಾರಿ ಗುಣವು ತಲೆಬುರುಡೆಯ ಉರಿಯೂತ ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಇದರಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ತಲೆಬುರುಡೆಯ ಸೋಂಕನ್ನು ದೂರವಿಡುವುದು ಮತ್ತು ಆರೋಗ್ಯಕಾರಿ ತಲೆಬುರುಡೆಗೆ ನೆರವಾಗುವುದು.
ಕೂದಲಿನ ಆರೈಕೆಯಲ್ಲಿ ಜೊಜೊಬಾ ಎಣ್ಣೆಯನ್ನು ಬಳಸಿಕೊಳ್ಳುವುದು ಹೇಗೆ ಎಂದು ನೀವು ತಿಳಿಯಿರಿ.

jojoba

ಕೂದಲಿನ ಬೆಳವಣಿಗೆಗೆ

ತಲೆಬುರುಡೆಯು ನೈಸರ್ಗಿಕವಾಗಿರುವಂತಹ ಎಣ್ಣೆಯನ್ನು ಬಿಡುಗಡೆ ಮಾಡಿ ಕೂದಲಿನ ಬೆಳವಣಿಗೆಗೆ ನೆರವಾಗುವುದು. ಈ ನೈಸರ್ಗಿಕ ಎಣ್ಣೆಯನ್ನು ಮೇದೋಗ್ರಂಥಿಗಳ ಸ್ರಾವ ಎಂದು ಕರೆಯಲಾಗುತ್ತದೆ. ಇದು ಕೂದಲಿನ ಕಿರುಚೀಲಗಳನ್ನು ಬಲಪಡಿಸುವುದು. ತಲೆಬುರುಡೆಯಲ್ಲಿ ನಿಗದಿತ ಪ್ರಮಾಣದಲ್ಲಿ ಮೇದೋಗ್ರಂಥಿಯ ಸ್ರಾವವು ಆಗದೆ ಇರುವಾಗ ತೆಲಬುರುಡೆಯು ಒಣಗುವುದು. ಇದರಿಂದಾಗಿ ಕೂದಲು ತುಂಡಾಗುವುದು ಮತ್ತು ಒಣಗುವುದು. ಇದರೊಂದಿಗೆ ಕೂದಲಿನ ತುದಿ ಒಡೆಯುವುದು. ಈ ಎಲ್ಲಾ ಕಾರಣಗಳಿಂದಾಗಿ ಕೂದಲು ಉದುರುವುದು. ಇದರಿಂದಾಗಿ ಕೂದಲಿನಲ್ಲಿ ಮಾಯಿಶ್ಚರೈಸ್ ಉಳಿಸಿಕೊಳ್ಳಲು ಜೊಜೊಬಾ ಎಣ್ಣೆಯನ್ನು ಬಳಸಿದರೆ ಅದರಿಂದ ತುಂಬಾ ನೆರವಾಗುವುದು.

Most Read: ಕೂದಲು ಸೊಂಪಾಗಿ ಬೆಳೆಯಲು 'ಕಪ್ಪು ಬೀಜದ ಎಣ್ಣೆ' ಬಳಸಿ

ಇದಕ್ಕಾಗಿ ನೀವು ಮಾಡಬೇಕಾಗಿರುವುದು ಸಮ ಪ್ರಮಾಣದಲ್ಲಿ ಜೊಜೊಬಾ ಎಣ್ಣೆ, ತೆಂಗಿನೆಣ್ಣೆ ಅಥವಾ ಬಾದಾಮಿ ಎಣ್ಣೆ ಮಿಶ್ರಣ ಮಾಡಿಕೊಳ್ಳಬೇಕು. ಒಂದು ತವಾಗೆ ಈ ಎರಡು ಎಣ್ಣೆಗಳನ್ನು ಹಾಕಿಕೊಂಡು ಅದನ್ನು ಕಡಿಮೆ ಬೆಂಕಿಯಲ್ಲಿ ಬಿಸಿಯಾಗಲು ಬಿಡಿ. ಕೆಲವು ನಿಮಿಷ ಬಿಟ್ಟು ಬೆಂಕಿ ನಂದಿಸಿ. ಎಣ್ಣೆಯು ಕೋಣೆಯ ತಾಪಮಾನಕ್ಕೆ ಬರುವಷ್ಟು ತಣ್ಣಗಾಗಲಿ. ಈ ಎಣ್ಣೆಯನ್ನು ನೀವು ತಲೆಬುರುಡೆ ಮತ್ತು ಕೂದಲಿಗೆ ಹಚ್ಚಿಕೊಂಡು ನಿಧಾನವಾಗಿ ಕೈಬೆರಳುಗಳಿಂದ ಮಸಾಜ್ ಮಾಡಿಕೊಳ್ಳಿ. 30-45 ನಿಮಿಷ ಹಾಗೆ ಬಿಟ್ಟು ಬಳಿಕ ಶಾಂಪೂ ಹಾಕಿಕೊಂಡು ತೊಳೆಯಿರಿ.

ತಲೆಬುರುಡೆ ಶುಚಿಗೊಳಿಸುವುದು

ಮೇಧೋಗ್ರಂಥಿಗಳ ಸ್ರಾವವು ಕಡಿಮೆಯಾದರೆ ಹೇಗೆ ಪರಿಣಾಮ ಬೀರುವುದೋ ಅದೇ ರೀತಿಯಾಗಿ ಇದು ಹೆಚ್ಚಾದರೂ ಅದರಿಂದ ಅಪಾಯವಿದೆ. ಅತಿಯಾಗಿ ಮೇಧೋಗ್ರಂಥಿ ಸ್ರಾವದಿಂದಾಗಿ ತಲೆಬುರುಡೆಯಲ್ಲಿ ಇದು ಉಳಿದುಕೊಂಡು ಕೂದಲಿನ ಕಿರುಚೀಲಗಳನ್ನು ಅಲ್ಲೇ ತಡೆಯೊಡ್ಡುವುದು. ಇದರಿಂದಾಗಿ ಕೂದಲಿನ ಬೆಳವಣಿಗೆಗೆ ತಡೆಯಾಗುವುದು. ಇದರಿಂದಾಗಿ ನಾವು ಕೂದಲಿನ ಬೆಳವಣಿಗೆ ಸರಿಯಾಗಿ ಆಗಲು ಸರಿಯಾದ ರೀತಿಯಲ್ಲಿ ತಲೆಬುರುಡೆ ಆರೈಕೆ ಮಾಡುವುದು ಅತೀ ಅಗತ್ಯವಾಗಿದೆ.

ಜೊಜೊಬಾ ಎಣ್ಣೆ ಮತ್ತು ತೆಂಗಿನೆಣ್ಣೆಯನ್ನು ಸಮಾನ ಪ್ರಮಾಣದಲ್ಲಿ ಸೇರಿಸಿಕೊಂಡು ಬಿಸಿ ಮಾಡಿಕೊಂಡ ಬಳಿಕ ಇದನ್ನು ತಲೆಬುರುಡೆ ಹಾಗೂ ಕೂದಲಿಗೆ ಹಚ್ಚಿಕೊಳ್ಳಿ. ಇದರ ಬಳಿಕ ಅರ್ಧ ಗಂಟೆ ಕಾಲ ಹಾಗೆ ಬಿಡಿ. ಕೂದಲನ್ನು ನೀವು ಬನ್ ನಂತೆ ಸುತ್ತಿಕೊಳ್ಳಿ ಮತ್ತು ಇದಕ್ಕೆ ಶಾವರ್ ಕ್ಯಾಪ್ ಹಾಕಿಕೊಳ್ಳಿ. ಇದರ ಬಳಿಕ ನೀವು ಶಾಂಪೂ ಹಾಕಿಕೊಂಡು ಕೂದಲನ್ನು ತೊಳೆಯಿರಿ.

Most Read: ಮನೆಯಲ್ಲೇ ಮೊಟ್ಟೆ ಹಾಗೂ ಜೇನು ಬಳಸಿಕೊಂಡು ಮಾಡಿ 'ಹೇರ್ ಸ್ಪಾ'

ಶಿಲೀಂಧ್ರ ಸೋಂಕಿಗೆ ಚಿಕಿತ್ಸೆ

ತಲೆಬುರುಡೆಯಲ್ಲಿ ಸತ್ತ ಚರ್ಮದ ಕೋಶಗಳು ಜಮೆಯಾಗಿರುವುದು ಮತ್ತು ಶಿಲೀಂಧ್ರ ಸೋಂಕಿನಿಂದಾಗಿ ಕೂದಲಿನ ಬೆಳವಣಿಗೆ ಮೇಲೆ ಪರಿಣಾಮ ಬೀರುವುದು. ಜೊಜೊಬಾ ಎಣ್ಣೆಯು ಕೀಟಾಣು ಮತ್ತು ಸೋಂಕನ್ನು ದೂರವಿಡುವುದು. ಇದರಿಂದಾಗಿ ತಲೆಬುರುಡೆ ಶುಚಿಯಾಗುವುದು ಮತ್ತು ಕೂದಲಿನ ಬೆಳವಣಿಗೆಗೆ ನೆರವಾಗುವುದು.

ಸ್ವಲ್ಪ ಪ್ರಮಾಣದಲ್ಲಿ ಜೊಜೊಬಾ ಎಣ್ಣೆಯನ್ನು ಬಿಸಿ ಮಾಡಿಕೊಂಡು ಅದನ್ನು ಕೂದಲು ಹಾಗೂ ತಲೆಬುರುಡೆಗೆ ಹಚ್ಚಿಕೊಳ್ಳಿ. ಪ್ರತಿನಿತ್ಯ ನೀವು ಮಲಗುವ ಮೊದಲು ಹೀಗೆ ಮಾಡಿಕೊಳ್ಳಿ. ಮರುದಿನ ಬೆಳಗ್ಗೆ ಕೂದಲು ತೊಳೆಯಿರಿ. ಕೂದಲಿನ ತುದಿ ಒಡೆಯುವ ಸಮಸ್ಯೆಯಿದ್ದರೆ ಆಗ ನೀವು ಈ ಭಾಗಕ್ಕೆ ಎಣ್ಣೆ ಹಚ್ಚಿಕೊಂಡ ಬಳಿಕ ಕೆಲವು ನಿಮಿಷ ಬಿಟ್ಟು ಇದನ್ನು ತೊಳೆಯಬಹುದು.

English summary

Beauty tips:Jojoba Oil For Hair Care

Jojoba oil is extracted from jojoba plants that usually grow in the western part of the US. This oil has been used to enhance beauty whether it is skin care or hair care. Jojoba oil can be used on hair to treat dull and damaged hair. It has anti-inflammatory properties that make it capable of treating any inflammation on the scalp.
Story first published: Thursday, November 29, 2018, 16:31 [IST]
X
Desktop Bottom Promotion