For Quick Alerts
ALLOW NOTIFICATIONS  
For Daily Alerts

ಬ್ಯೂಟಿ ಟಿಪ್ಸ್: ಮುಖದ ಅಂದಕ್ಕೆ, ಶ್ರೀಗಂಧದ ಫೇಸ್ ಪ್ಯಾಕ್

By Jaya Subramanya
|

ಭಾರತದಲ್ಲಿ ಗಂಧ ಎಂದು ಕರೆಯುವ ಆಂಗ್ಲ ಭಾಷೆಯ ಸ್ಯಾಂಡಲ್ ವುಡ್ ಸೌಂದರ್ಯ ವರ್ಧಕಗಳಲ್ಲಿ ಸಾಮಾನ್ಯವಾಗಿ ಚರ್ಚಿತವಾದ ವಿಷಯ. ಚರ್ಮದ ಮೇಲೆ ಗಂಧದ ಪ್ರಭಾವ ಬಹಳಷ್ಟಿದೆ. ಗಂಧ ಒಂದು ನೈಸರ್ಗಿಕ ಸೌಂದರ್ಯ ವರ್ಧಕವೂ ಆಗಿರುವ ಕಾರಣ ಇದಕ್ಕೆ ಹೆಚ್ಚಿನ ಬೇಡಿಕೆ ಇದೆ. ಗಂಧಯುಕ್ತ ಸೌಂದರ್ಯ ವರ್ಧಕಗಳು ಇದೇ ಕಾರಣಕ್ಕಾಗಿ ಹೆಚ್ಚು ಜನಪ್ರಿಯವಾಗಿದೆ.

ಸಾಮಾನ್ಯವಾಗಿ ಸಾಬೂನು, ಕ್ರೀಮ್ ಗಳು, ಪೌಡರ್ ಗಳು, ಫೇಸ್ ಪ್ಯಾಕ್ ಮತ್ತು ಹ್ಯಾಂಡ್ ವಾಶ್‌ಗಳಲ್ಲಿ ಗಂಧದ ಅಂಶದ ಬಳಕೆಯಾಗುತ್ತದೆ. ಇದು ಬಹಳ ವಿಶಿಷ್ಟವಾದ ಸುವಾಸನೆಯನ್ನು ಹೊಂದಿದ್ದು ಗಾಳಿಯಲ್ಲಿ ಬಹಳ ಕಾಲದ ತನಕ ಇರುತ್ತದೆ. ಇದು ಸುಗಂಧ ಕಡ್ಡಿಗಳ ಉತ್ಪಾದನೆಯಲ್ಲೂ ಬಹಳ ಬೇಡಿಕೆ ಇರುವ ವಸ್ತುವಾಗಿದೆ.

ಗಂಧವನ್ನು ಚಂದನ, ಶ್ರೀ ಗಂಧ ಮುಂತಾದ ಹೆಸರುಗಳಿಂದ ಸಹ ಕರೆಯುತ್ತಾರೆ. ಇದು ಉತ್ತಮವಾದ ಸುಗಂಧವನ್ನು ಹೊಂದಿರುವುದು ತಿಳಿದಿರುವ ವಿಚಾರವೇ. ಇದು ಸಂಟಲುಮ್ ಎಂಬ ಕುಟುಂಬದಿಂದ ಬರುವ ಮರವಾಗಿದೆ. ಶ್ರೀಗಂಧದ ಮರದಿಂದ ನಾವು ಹಲವಾರು ಸೌಂದರ್ಯದ ಪ್ರಯೋಜನಗಳನ್ನು ನಮ್ಮದಾಗಿಸಿಕೊಳ್ಳಬಹುದು.

ಇದನ್ನು ಫೇಸ್ ಪ್ಯಾಕ್, ಪೌಡರ್, ಮಾಸ್ಕ್ ಇತ್ಯಾದಿಗಳ ರೂಪದಲ್ಲಿ ಬಳಸಲಾಗುತ್ತದೆ. ಇದು ತ್ವಚೆಯ ಬಣ್ಣವನ್ನು ಹೆಚ್ಚಿಸುತ್ತದೆ ಮತ್ತು ಮುಖಕ್ಕೆ ಸ್ವಾಭಾವಿಕ ಹೊಳಪನ್ನು ಸಹ ನೀಡುತ್ತದೆ. ಶ್ರೀಗಂಧದ ಸುವಾಸನೆಯು ಹಲವಾರು ದಶಕಗಳ ಕಾಲ ಇರುತ್ತದೆ. ಈ ಗಂಧದ ಮರದಿಂದ ಶ್ರೀಗಂಧದ ಎಣ್ಣೆಯನ್ನು ಸಹ ತೆಗೆಯಲಾಗುತ್ತದೆ. ಇದರಿಂದ ಸೌಂದರ್ಯದ ಪ್ರಯೋಜನಗಳ ಜೊತೆಗೆ ಹಲವಾರು ಆರೋಗ್ಯಕಾರಿ ಪ್ರಯೋಜನಗಳು ಸಹ ದೊರೆಯುತ್ತವೆ.

ಹಾಗಾದರೆ ಶ್ರೀಗಂಧವನ್ನು ಮುಖಕ್ಕೆ ಹೇಗೆ ಬಳಸುವುದು? ಇದನ್ನು ನೀವು ಪುಡಿ ಮಾಡಿ, ಎಣ್ಣೆಯ ರೂಪದಲ್ಲಿ ಅಥವಾ ಗಂಧವನ್ನು ತೇಯ್ದು ಪೇಸ್ಟ್ ರೂಪದಲ್ಲಿ ಸಹ ಬಳಸಬಹುದು. ಇದರ ಜೊತೆಗೆ ಮತ್ತಷ್ಟು ಸ್ವಾಭಾವಿಕ ಪದಾರ್ಥಗಳನ್ನು ಸೇರಿಸಿಕೊಂಡರೆ, ಮತ್ತಷ್ಟು ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಇಂದು ಬೋಲ್ಡ್‌ಸ್ಕೈ ಈ ಶ್ರೀಗಂಧದ ಕುರಿತು ಹಲವಾರು ಕುತೂಹಲಕಾರಿ ಮಾಹಿತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದೆ. ಘಮ ಘಮಿಸುವ ಸುಗಂಧ ದ್ರವ್ಯವನ್ನು ಮನೆಯಲ್ಲೇ ತಯಾರಿಸಿ...

ಮೊಡವೆ ನಿವಾರಣೆ

ಮೊಡವೆ ನಿವಾರಣೆ

ಎರಡು ಟೀ ಚಮಚ ಶ್ರೀಗಂಧದ ಪುಡಿಯೊಂದಿಗೆ ಒಂದು ಟೀಚಮಚ ಕಡ್ಲೆಹಿಟ್ಟು ಸೇರಿಸಿ ಹಾಲಿನಲ್ಲಿ ಅಥವಾ ರೋಸ್ ವಾಟರ್ ಜೊತೆಗೆ ಬೆರೆಸಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟನ್ನು ಮುಖದ ಮೇಲೆ ಲೇಪಿಸಿಕೊಂಡು 30 ನಿಮಿಷ ಬಿಡಿ. ಇದನ್ನು ಪ್ರತಿ ವಾರ ಪುನರಾವರ್ತಿಸಿ, ಆಗ ಮೊಡವೆಗಳು ಗುಣಮುಖವಾಗುತ್ತದೆ.

ನೈಸರ್ಗಿಕ ಸುಗಂಧ ದ್ರವ್ಯ

ನೈಸರ್ಗಿಕ ಸುಗಂಧ ದ್ರವ್ಯ

ಈ ಎಣ್ಣೆಯು ಉತ್ತಮ ಪರಿಮಳವನ್ನು ಒಳಗೊಂಡಿದ್ದು ನಿಮ್ಮ ತ್ವಚೆಯನ್ನು ತಾಜಾ ಆಗಿರಿಸುವಲ್ಲಿ ಇದು ಸಹಾಯ ಮಾಡಲಿದೆ. ನಿಮ್ಮ ದೇಹದ ದುರ್ಗಂಧಕ್ಕೆ ಕಾರಣವಾಗಿರುವ ಬ್ಯಾಕ್ಟೀರಿಯಾವನ್ನು ಇದು ನಾಶ ಮಾಡಿಬಿಡುತ್ತದೆ ಮತ್ತು ಬೇಸಿಗೆಯಲ್ಲಿ ತಂಪಿ ಅನುಭವವನ್ನು ಫ್ರೆಶ್‌ನೆಸ್ ಅನ್ನು ನಿಮಗೆ ನೀಡುತ್ತದೆ. ಬೇಸಿಗೆಯಲ್ಲಿ ತ್ವಚೆಯಲ್ಲಿ ಉಂಟಾಗುವ ಹಲವಾರು ಸಮಸ್ಯೆಗಳನ್ನು ಇದು ನಿವಾರಿಸುತ್ತದೆ. ನೀವು ನಿತ್ಯ ಬಳಸುವ ತೆಂಗಿನೆಣ್ಣೆಯೊಂದಿಗೆ ಈ ಎಣ್ಣೆಯನ್ನು ಮಿಶ್ರ ಮಾಡಿಕೊಂಡು ಸ್ಟೋರ್ ಮಾಡಿ.

ತ್ವಚೆಯ ಇನ್‌ಫ್ಲಾಮೇಶನ್ ಅನ್ನು ನಿವಾರಿಸುತ್ತದೆ

ತ್ವಚೆಯ ಇನ್‌ಫ್ಲಾಮೇಶನ್ ಅನ್ನು ನಿವಾರಿಸುತ್ತದೆ

ಈ ಎಣ್ಣೆಯಲ್ಲಿರುವ ಇನ್‌ಫ್ಲಾಮೇಟರಿ ವಿರೋಧಿ ಅಂಶಗಳು ತ್ವಚೆಯಲ್ಲಿರುವ ಇನ್‌ಫ್ಲಾಮೇಶನ್ ಅನ್ನು ತೊಡೆದುಹಾಕುತ್ತದೆ. ಈ ಎಣ್ಣೆಯನ್ನು ಆಲೀವ್ ಎಣ್ಣೆಯೊಂದಿಗೆ ಮಿಶ್ರ ಮಾಡಿಕೊಳ್ಳಿ ಮತ್ತು ಮೊಡವೆ ಕಲೆಗಳು ಇರುವ ಭಾಗಕ್ಕೆ ಹಚ್ಚಿಕೊಳ್ಳಿ.

ಕಲೆ ರಹಿತ ತ್ವಚೆಗಾಗಿ

ಕಲೆ ರಹಿತ ತ್ವಚೆಗಾಗಿ

ಮುಖದಲ್ಲಿರುವ ಮೊಡವೆ, ಕಲೆಗಳನ್ನು ನಿವಾರಣೆ ಮಾಡಲು ಈ ಎಣ್ಣೆ ಹೆಚ್ಚು ಸೂಕ್ತವಾಗಿದ್ದು ಸ್ಟೀಮಿಂಗ ಮೂಲಕ ಇದನ್ನು ಮಾಡಿಕೊಳ್ಳಬಹುದು. ಬಿಸಿನೀರಿಗೆ ಮೂರು ಹನಿಗಳಷ್ಟು ಶ್ರೀಗಂಧದ ಎಣ್ಣೆಯನ್ನು ಹಾಕಿಕೊಳ್ಳಿ ಮತ್ತು ಮುಖಕ್ಕೆ ಸ್ಟೀಮ್ ತೆಗೆದುಕೊಳ್ಳಿ. ಮುಖದ ಆಳಕ್ಕೆ ಇದು ಸ್ಟೀಮ್ ಆಗಲಿ.

ಟ್ಯಾನ್ ನಿವಾರಣೆಗೆ

ಟ್ಯಾನ್ ನಿವಾರಣೆಗೆ

ನಿಮ್ಮ ಮುಖದಲ್ಲಿರುವ ಟ್ಯಾನ್ ನಿವಾರಣೆಗೆ ನೀವು ಈ ಎಣ್ಣೆಯನ್ನು ಒಂದು ಚಮಚ ಓಟ್ ಹುಡಿಯೊಂದಿಗೆ ಬೆರೆಸಿ ಮತ್ತು ಅಷ್ಟೇ ಪ್ರಮಾಣದ ನೀರು ಬೆರೆಸಿಕೊಂಡು ಪೇಸ್ಟ್ ಮಾಡಿಕೊಳ್ಳಿ. ನಿಮ್ಮ ಮುಖಕ್ಕೆ ಇದನ್ನು ಹಚ್ಚಿಕೊಂಡು 15 ನಿಮಿಷಗಳ ಕಾಲ ಹಾಗೆಯೇ ಬಿಡಿ.

ಒಣ ತ್ವಚೆಗೆ ಮಾಯಿಶ್ಚರೈಸ್ ಮಾಡಲು

ಒಣ ತ್ವಚೆಗೆ ಮಾಯಿಶ್ಚರೈಸ್ ಮಾಡಲು

ಶ್ರೀಗಂಧದ ಎಣ್ಣೆಯನ್ನು ಬಳಸಿಕೊಂಡು ನಿಮ್ಮ ಒಣ ತ್ವಚೆಗೆ ಸೂಕ್ತವಾದ ಮಾಯಿಶ್ಚರೈಸ್ ಅನ್ನು ಮಾಡಿಕೊಳ್ಳಿ. ನಿಮ್ಮ ತ್ವಚೆಯ ಹೆಚ್ಚು ಒಣಗುತ್ತಿದೆ ಎಂದಾದಲ್ಲಿ ಈ ಎಣ್ಣೆಯನ್ನು ಬಳಸಿಕೊಂಡು ಮಸಾಜ್ ಮಾಡಿಕೊಳ್ಳಿ.

ಮುಖದಲ್ಲಿ ತುರಿಕೆ ಇದ್ದರೆ

ಮುಖದಲ್ಲಿ ತುರಿಕೆ ಇದ್ದರೆ

ಶ್ರೀಗಂಧದ ಎಣ್ಣೆಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಅಂಶಗಳಿದ್ದು ಇದು ಮುಖದಲ್ಲಿರುವ ತುರಿಕೆಯನ್ನು ನಿವಾರಣೆ ಮಾಡುತ್ತದೆ ಒಂದು ಚಮಚದಷ್ಟು ಶ್ರೀಗಂಧದ ಎಣ್ಣೆಯನ್ನು ತೆಂಗಿನೆಣ್ಣೆಯೊಂದಿಗೆ ಮಿಶ್ರ ಮಾಡಿಕೊಳ್ಳಿ. ನಿಮ್ಮ ಮುಖ ಮತ್ತು ಹಾನಿಗೊಳಗಾಗಿರುವ ಸ್ಥಳಕ್ಕೆ ಮಸಾಜ್ ಮಾಡಿ.

ಕೂದಲಿನ ಬೆಳವಣಿಗೆಗೆ

ಕೂದಲಿನ ಬೆಳವಣಿಗೆಗೆ

ಶ್ರೀಗಂಧದ ಎಣ್ಣೆಯನ್ನು ಬಳಸಿಕೊಂಡು ನಿಮ್ಮ ತಲೆಬುರುಡೆಗೆ ಮಸಾಜ್ ಮಾಡಿಕೊಳ್ಳಿ. ಇದು ತಲೆಬುರುಡೆಯನ್ನು ತಣ್ಣಗೆ ಮಾಡುತ್ತದೆ ಮತ್ತು ತಲೆಹೊಟ್ಟನ್ನು ದೂರಮಾಡುತ್ತದೆ.

ಒಣ ಕೂದಲಿಗೆ ಪೋಷಣೆ

ಒಣ ಕೂದಲಿಗೆ ಪೋಷಣೆ

ತಲೆಕೂದಲನ್ನು ತೊಳೆದುಕೊಂಡ ನಂತರ 1 ಹನಿಯಷ್ಟು ಶ್ರೀಗಂಧದ ಎಣ್ಣೆಯನ್ನು ಬಳಸಿಕೊಂಡು ಮಸಾಜ್ ಮಾಡಿಕೊಳ್ಳಿ. ಇದು ತಲೆಬುರುಡೆಯ ಕೋಶಗಳನ್ನು ಲಾಕ್ ಮಾಡುತ್ತದೆ. ತಲೆಹೊಟ್ಟನ್ನು ನಿವಾರಣೆ ಮಾಡುವಲ್ಲಿ ಶ್ರೀಗಂಧದ ಎಣ್ಣೆ ಎತ್ತಿದ ಕೈಯಾಗಿದೆ.

ಮೊಡವೆ ಮತ್ತು ಕಪ್ಪುತಲೆಗಳನ್ನು ನಿವಾರಿಸುತ್ತದೆ

ಮೊಡವೆ ಮತ್ತು ಕಪ್ಪುತಲೆಗಳನ್ನು ನಿವಾರಿಸುತ್ತದೆ

ಶ್ರೀಗಂಧದ ಎಣ್ಣೆ, ಅರ್ಧ ಟೇಬಲ್ ಸ್ಪೂನ್ ಅರಿಶಿನ, ಕರ್ಪೂರದ ಜೊತೆಗೆ ಗಂಧದ ಪುಡಿಯನ್ನು ಬೆರೆಸಿಕೊಂಡು ಪೇಸ್ಟ್ ತಯಾರಿಸಿಕೊಳ್ಳಿ. ಈ ಪೇಸ್ಟನ್ನು ನಿಮ್ಮ ಮುಖಕ್ಕೆ ಲೇಪಿಸಿಕೊಳ್ಳುವುದರಿಂದ ಮೊಡವೆಗಳನ್ನು ಮತ್ತು ಕಪ್ಪು ತಲೆಗಳನ್ನು ನಿವಾರಿಸಿಕೊಳ್ಳಬಹುದು.

ಗ೦ಧದ ಪುಡಿ ಹಾಗೂ ಮುಲ್ತಾನಿಮಿಟ್ಟಿ

ಗ೦ಧದ ಪುಡಿ ಹಾಗೂ ಮುಲ್ತಾನಿಮಿಟ್ಟಿ

ಒ೦ದು ಟೇಬಲ್ ಚಮಚದಷ್ಟು ಶ್ರೀ ಗ೦ಧದ ಪುಡಿಯನ್ನು ಹಾಗೂ ಒ೦ದು ಟೇಬಲ್ ಚಮಚದಷ್ಟು ಮುಲ್ತಾನಿ ಮಣ್ಣನ್ನು ಪನ್ನೀರಿನೊ೦ದಿಗೆ ಬೆರೆಸಿರಿ. ನೀವು ಬಳಸುವ ಪನ್ನೀರಿನ ಪ್ರಮಾಣವು ಎಷ್ಟಿರಬೇಕೆ೦ದರೆ, ಉ೦ಟಾಗಬಹುದಾದ ಪೇಸ್ಟ್ ತೀರಾ ದಪ್ಪವೂ ಆಗಬಾರದು, ಅ೦ತೆಯೇ ತೀರಾ ತೆಳ್ಳಗೂ ಆಗಕೂಡದು. ಈಗ ಈ ಪೇಸ್ಟ್ ಅನ್ನು ನಿಮ್ಮ ಮುಖದ ಮೇಲೆ ಲೇಪಿಸಿಕೊಳ್ಳಿರಿ ಹಾಗೂ ಸುಮಾರು ಇಪ್ಪತ್ತರಿ೦ದ ಮೂವತ್ತು ನಿಮಿಷಗಳ ಕಾಲ ಅದನ್ನು ಹಾಗೆಯೇ ಮುಖದ ಮೇಲೆಯೇ ಇರಗೊಡಿರಿ. ಅನ೦ತರ ಇದನ್ನು ನೀರಿನಿ೦ದ ತೊಳೆದು ತೆಗೆಯಿರಿ. ಕೋಮಲವಾದ, ತಾಜಾ, ಹಾಗೂ ಜಿಡ್ಡುರಹಿತ ತ್ವಚೆಯ ಆನ೦ದವನ್ನು ಅನುಭವಿಸುವ೦ತಾಗಲು ಈ ಫೇಸ್ ಪ್ಯಾಕ್ ಅನ್ನು ವಾರಕ್ಕೆ ಕನಿಷ್ಟ ಮೂರು ಬಾರಿಯಾದರೂ ಲೇಪಿಸಿಕೊಳ್ಳಿರಿ.

ತ್ವಚೆಯನ್ನು ಇನ್ನಷ್ಟು ಸುಂದರಗೊಳಿಸುತ್ತದೆ

ತ್ವಚೆಯನ್ನು ಇನ್ನಷ್ಟು ಸುಂದರಗೊಳಿಸುತ್ತದೆ

ಗೌರವರ್ಣದ ತ್ವಚೆಯನ್ನು ಹ೦ಬಲಿಸುತ್ತಿರುವವರಿಗಾಗಿ ಇದು ಅತ್ಯುತ್ತಮವಾದ ಪರಿಹಾರೋಪಾಯವಾಗಿದೆ. ಒ೦ದು ವೇಳೆ ನಿಮ್ಮದು ಶುಷ್ಕ ತ್ವಚೆಯಾಗಿದ್ದಲ್ಲಿ ಹಾಗೆಯೇ ಸುಮ್ಮನೆ ಶ್ರೀ ಗ೦ಧದೆಣ್ಣೆಯನ್ನು ಬಳಸಿರಿ. ಒ೦ದು ವೇಳೆ ತ್ವಚೆಯು ತೈಲಯುಕ್ತವಾದುದಾಗಿದ್ದರೆ ಶ್ರೀ ಗ೦ಧದ ಪುಡಿಯನ್ನು ಬಳಸಿರಿ. ಒ೦ದು ಟೇಬಲ್ ಚಮಚದಷ್ಟು ಕಾಳಿನ ಹಿಟ್ಟು, ಒ೦ದು ಟೇಬಲ್ ಚಮಚದಷ್ಟು ಶ್ರೀ ಗ೦ಧದ ಪುಡಿ ಅಥವಾ ಎಣ್ಣೆ, ಒ೦ದು ಟೀ ಚಮಚದಷ್ಟು ಅರಿಶಿನದ ಪುಡಿ ಹಾಗೂ ಪನ್ನೀರು ಇವುಗಳನ್ನು ಬಳಸಿಕೊ೦ಡು ನಯವಾದ ಪೇಸ್ಟ್ ಅನ್ನು ತಯಾರಿಸಿಕೊಳ್ಳಿರಿ. ಈ ಪೇಸ್ಟ್ ಅನ್ನು ನಿಮ್ಮ ಮುಖಕ್ಕೆ ಲೇಪಿಸಿಕೊ೦ಡು ಅದನ್ನು ಹಾಗೆಯೇ ಮುಖದ ಮೇಲೆಯೇ ಒಣಗಲು ಅವಕಾಶ ಕಲ್ಪಿಸಿ. ನಿಮ್ಮ ಮುಖವನ್ನು ಹದಿನೈದರಿ೦ದ ಇಪ್ಪತ್ತು ನಿಮಿಷಗಳ ಬಳಿಕ ತೊಳೆದುಕೊಳ್ಳಿರಿ. ಕಾ೦ತಿಯುಕ್ತ ಹಾಗೂ ಗೌರವರ್ಣದ ತ್ವಚೆಯನ್ನು ಪಡೆದುಕೊಳ್ಳುವ೦ತಾಗಲು ಈ ಫೇಸ್ ಪ್ಯಾಕ್ ಅನ್ನು ನಿಯಮಿತವಾಗಿ ಬಳಸಿರಿ.

English summary

Beauty Uses Of Sandalwood

How to use sandalwood powder for face? You can use sandalwood in many forms such as powder and oil. You can make a face pack of sandalwood by combining it with other natural ingredients. It will enhance the natural beauty benefits of sandalwood.Today, Boldsky will share with you some of the uses of sandalwood when it comes to beauty. Have a look.
X
Desktop Bottom Promotion