For Quick Alerts
ALLOW NOTIFICATIONS  
For Daily Alerts

ಲೋಳೆಸರ-ಸೌಂದರ್ಯದ ವಿಷಯದಲ್ಲಿ ಎತ್ತಿದ ಕೈ

By Arshad
|

ಚರ್ಮದ ಆರೈಕೆಯ ವಿಷಯ ಬಂದಾಗ ನಿಸರ್ಗದಲ್ಲಿರುವ ಕೆಲವು ಸಸ್ಯಗಳು ಅದ್ಭುತವಾದ ಆರೈಕೆ ನೀಡುತ್ತವೆ. ಅಲೋವೆರಾ ಅಥವಾ ಲೋಳೆಸರ ಇದರಲ್ಲಿ ಪ್ರಮುಖವಾದ ಸಸ್ಯವಾಗಿದೆ. ಚರ್ಮದ ಆರೈಕೆಗೆ ಬೇಕಾದ ಪೋಷಕಾಂಶಗಳಲ್ಲಿ ಬಹಳಷ್ಟು ಇದರಲ್ಲಿರುವುದೇ ಈ ಪಟ್ಟ ಸಿಗಲು ಕಾರಣವಾಗಿದೆ. ಚರ್ಮದಲ್ಲಿ ಇದುವರೆಗೆ ಇದ್ದ ಹಳೆಯ ಕಲೆಯನ್ನು ನಿವಾರಿಸುವುದರ ಜೊತೆಗೇ ವೃದ್ಧಾಪ್ಯಕ್ಕೆ ಕಾರಣವಾಗುವ ನೆರಿಗೆ ಮೊದಲಾದ ತೊಂದರೆಗಳಿಂದ ರಕ್ಷಿಸುವುದರ ಮೂಲಕ ತಾರುಣ್ಯವನ್ನು ಬಹಳ ವರ್ಷಗಳಿಗೆ ಹೆಚ್ಚಿಸಲು ಸಹಾ ಇದು ನೆರವಾಗಬಲ್ಲದು. ಸೌಂದರ್ಯದ ರಕ್ಷಣಾ ಕವಚ ಲೋಳೆಸರ

ಸಾಮಾನ್ಯವಾಗಿ ಮೊಡವೆ ಒಣಗಿದ ಬಳಿಕ ಉಳಿದ ಕಲೆ, ಚಿಕ್ಕಪುಟ್ಟ ಗಾಯಗಳು, ಸುಟ್ಟ ಗಾಯ, ನೆರಿಗೆ ಮೊದಲಾದ ಚರ್ಮದ ತೊಂದರೆಗಳಿಗೆ ಲೋಳೆಸರ ಅತ್ಯುತ್ತಮವಾದ ಪರಿಹಾರವಾಗಿದೆ. ಆದರೆ ಯಾವುದೇ ಚರ್ಮದ ಆರೈಕೆಯ ಪ್ರಸಾಧನವನ್ನು ಮುಖದ ಮೇಲೆ ಹಚ್ಚಿಕೊಳ್ಳುವ ಮೊದಲು ಇದು ನಿಮಗೆ ಅಲರ್ಜಿಕಾರಕವೇ ಎಂದು ತಿಳಿದುಕೊಳ್ಳುವುದು ಮುಖ್ಯ. ಇದಕ್ಕಾಗಿ ಮೊಣಕೈ ಅಥವಾ ದೇಹದ ಇತರ ಭಾಗದಲ್ಲಿ ಕೊಂಚ ಪ್ರಮಾಣದಲ್ಲಿ ಹಚ್ಚಿ ಅಲರ್ಜಿಯಾಗದು ಎಂದು ಖಚಿತಪಡಿಸುವುದು ಅಗತ್ಯ. ಅಲೋವೆರಾ ಜ್ಯೂಸ್ ನ ಆರೋಗ್ಯ ಲಾಭಗಳು

ಇದಕ್ಕಾಗಿ ಚರ್ಮವೈದ್ಯರ ಸಲಹೆ ಪಡೆದರೆ ಇನ್ನೂ ಉತ್ತಮ. ಒಂದು ವೇಳೆ ನಿಮಗೆ ಅಲರ್ಜಿಯಾದರೆ ಲೋಳೆಸರವನ್ನು ಪ್ರಯೋಗಿಸಲು ಹೋಗಬೇಡಿ. ಇತರರಿಗೆ ಇದು ಚರ್ಮದ ಒಂದು ಸಂಜೀವಿನಿಯಂತೆ ಕೆಲಸ ಮಾಡುತ್ತದೆ. ಇದರ ಬಗ್ಗೆ ಕೆಳಗಿನ ಸ್ಲೈಡ್ ಶೋ ಮೂಲಕ ಹೆಚ್ಚಿನ ಮಾಹಿತಿ ನೀಡಲಾಗಿದೆ..

ನೆರಿಗೆಗಳನ್ನು ನಿವಾರಿಸುತ್ತದೆ

ನೆರಿಗೆಗಳನ್ನು ನಿವಾರಿಸುತ್ತದೆ

ನೆರಿಗೆಗಳು ಮೂಡಲು ಚರ್ಮ ತನ್ನ ಸೆಳೆತವನ್ನು ಕಳೆದುಕೊಳ್ಳುವುದು ಒಂದು ಕಾರಣವಾಗಿದೆ. ಲೋಳೆಸರದ ರಸವನ್ನು ಹಚ್ಚಿ ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳುವ ಮೂಲಕ ಚರ್ಮಕ್ಕೆ ಉತ್ತಮ ಪೋಷಕಾಂಶಗಳನ್ನು ನೀಡಿ ಸೆಳೆತೆ ಹೆಚ್ಚಲು ನೆರವಾಗುತ್ತದೆ. ನೆರಿಗೆ ಬಿದ್ದ ಚರ್ಮದ ಕೆಳಗಿನ ಸ್ಥಳ ತುಂಬಿಕೊಳ್ಳುವುದರಿಂದ ನೆರಿಗೆಯ ಕಣಿವೆ ಇಲ್ಲವಾಗಿ ವೃದ್ಧಾಪ್ಯದ ಸಂಕೇತಗಳು ನಿಧಾನವಾಗಿ ದೂರವಾಗುತ್ತದೆ.

ಚರ್ಮದ ಕಾಂತಿ ಹೆಚ್ಚಿಸುತ್ತದೆ

ಚರ್ಮದ ಕಾಂತಿ ಹೆಚ್ಚಿಸುತ್ತದೆ

ಲೋಳೆಸರದಲ್ಲಿ ಚರ್ಮವನ್ನು ಸ್ವಚ್ಛಗೊಳಿಸುವ ಗುಣವಿರುವುದರಿಂದ ಇದು ಚರ್ಮದ ರಂಧ್ರಗಳಲ್ಲಿರುವ ಸೂಕ್ಷ್ಮಕಣಗಳನ್ನೂ ನಿವಾರಿಸಿ ಚರ್ಮದ ಸಹಜಕಾಂತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಅಲ್ಲದೇ ಹೊರಚರ್ಮಕ್ಕೆ ಅಂಟಿಕೊಂಡೇ ಇರುವ ಸತ್ತ ಜೀವಕೋಶಗಳನ್ನು ಸಡಿಲಗೊಳಿಸಿ ನಿವಾರಿಸಲು ನೆರವಾಗುವ ಮೂಲಕ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.

ಮೊಡವೆಗಳಿಂದ ರಕ್ಷಣೆ ನೀಡುತ್ತದೆ

ಮೊಡವೆಗಳಿಂದ ರಕ್ಷಣೆ ನೀಡುತ್ತದೆ

ಮೊಡವೆಗಳನ್ನು ನಿವಾರಿಸುವುದು ಅಷ್ಟು ಸುಲಭವಲ್ಲ. ಏಕೆಂದರೆ ಮೊಡವೆಗಳನ್ನು ಚಿವುಟಿದ ಬಳಿಕ ಉಳಿದ ಗಾಯ ಕೊಂಚದಿನಗಳ ಬಳಿಕ ಒಣಗಿದರೂ ಶಾಶ್ವತ ಕಲೆಯನ್ನು ಉಳಿಸುತ್ತದೆ. ಇದನ್ನು ಮೂಲದಲ್ಲಿಯೇ ನಿವಾರಿಸಲು ಲೋಳೆಸರದಿಂದ ನಿಯಮಿತವಾಗಿ ಚರ್ಮಕ್ಕೆ ಪೋಷಣೆ ನೀಡುತ್ತಾ ಬಂದರೆ ಮುಖದ ಚರ್ಮದಡಿಯಲ್ಲಿ ಜಿಡ್ಡು ಸಂಗ್ರಹವಾಗುವ ಸಂಭವ ಕಡಿಮೆಯಾಗಿ ಮೊಡವೆಗಳು ಬರುವ ಸಾಧ್ಯತೆಗಳೂ ಕಡಿಮೆಯಾಗುತ್ತವೆ. ಮೊಡವೆಗಳಿಲ್ಲದ ಮುಖ ನೈಸರ್ಗಿಕವಾದ ಚೆಲುವನ್ನು ಪಡೆಯುತ್ತದೆ.

ಆರ್ದ್ರತೆ ನೀಡುತ್ತದೆ

ಆರ್ದ್ರತೆ ನೀಡುತ್ತದೆ

ಮುಖದ ಚರ್ಮಕ್ಕೆ ಆರ್ದ್ರತೆ ನೀಡಲು ಲೋಳೆಸರಕ್ಕಿಂತ ಉತ್ತಮವಾದ ಇನ್ನೊಂದು ವಸ್ತುವಿಲ್ಲ. ಇದರ ನಿಯಮಿತ ಬಳಕೆಯಿಂದ ಚರ್ಮಕ್ಕೆ ಅಗತ್ಯವಾಗಿರುವ ಆರ್ದ್ರತೆ ಲಭಿಸುತ್ತದೆ. ಇದನ್ನು ಯಾವುದೇ ವಿಧದ ಚರ್ಮದವರೂ ಯಾವುದೇ ಅಳುಕಿಲ್ಲದೇ ಬಳಸಬಹುದು.

ಕಲೆಗಳನ್ನು ನಿವಾರಿಸುತ್ತದೆ

ಕಲೆಗಳನ್ನು ನಿವಾರಿಸುತ್ತದೆ

ಒಂದು ವೇಳೆ ಬಿಸಿಲು ಅಥವಾ ಹಳೆಯ ಮೊಡವೆ ಚಿವುಟಿದ್ದರ ಪರಿಣಾಮವಾಗಿ ತ್ವಚೆಯ ಮೇಲೆ ಕಲೆ ಉಳಿದುಕೊಂಡಿದ್ದರೆ ರಾತ್ರಿ ಮಲಗುವ ಮುನ್ನ ಲೋಳೆಸರವನ್ನು ಕೊಂಚ ವೃತ್ತಾಕಾರದಲ್ಲಿ ಕಲೆಯ ಮೇಲೆ ಹಚ್ಚಿ ಮಲಗಿ. ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳುವ ಮೂಲಕ ನಿಧಾನವಾಗಿ ಕಲೆಗಳು ಮಾಯವಾಗುತ್ತವೆ.

English summary

How Aloe Vera Helps Skin

Is aloe vera good for skin? Yes, in fact it is one of the best natural ingredient that does a lot for your skin. How does aloe vera help skin? On one side, aloe vera can solve certain skin issues and on the other side, it can keep your skin young due to its anti-ageing properties. Now, let us briefly discuss how aloe vera helps skin.
Story first published: Saturday, August 29, 2015, 13:04 [IST]
X
Desktop Bottom Promotion