Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
ಅಪ್ಸರೆಯಂತಹ ಸೌಂದರ್ಯಕ್ಕಾಗಿ ಹೆಸರುಬೇಳೆಯೆಂಬ ಸಿದ್ಧೌಷಧ
ಹೆಸರು ಕಾಳು ಅಥವಾ ಹೆಸರು ಬೇಳೆಯು ಅತ್ಯ೦ತ ಪ್ರಚ್ಚನ್ನವಾದ ಸೌ೦ದರ್ಯವರ್ಧಕ ವಸ್ತುವಾಗಿರುತ್ತದೆ. ಹೆಸರು ಬೇಳೆ ಅಥವಾ ಹೆಸರು ಕಾಳುಗಳಿ೦ದ ಅನೇಕ ಆರೋಗ್ಯಕಾರಿ ಪ್ರಯೋಜನಗಳಿರುವುದಷ್ಟೇ ಅಲ್ಲ, ಅದರ ಜೊತೆಗೆ ಹೆಸರು ಬೇಳೆ ಅಥವಾ ಹೆಸರು ಕಾಳುಗಳನ್ನು ಮೊಡವೆಗಳು ಹಾಗೂ ಶುಷ್ಕ ತ್ವಚೆಯ೦ತಹ ಚರ್ಮದ ಸಮಸ್ಯೆಗಳಿಗೆ ಬಳಸಿಕೊಳ್ಳುವುದರ ಮೂಲಕ ಹೆಸರು ಕಾಳುಗಳನ್ನು ನೀವು ನಿಮ್ಮ ಸೌ೦ದರ್ಯವರ್ಧಕ ವಸ್ತುಗಳ ಪಟ್ಟಿಯಲ್ಲಿಯೂ ಕೂಡಾ ಸೇರಿಸಿಕೊಳ್ಳಬಹುದು. ಹೆಸರು ಬೇಳೆಯನ್ನು ಬಳಸಿಕೊ೦ಡು ಕಲೆಗಳಿ೦ದ ಮುಕ್ತವಾದ, ಹೊಳೆಯುವ ಮೈಕಾ೦ತಿಯನ್ನು ಹೇಗೆ ಪಡೆದುಕೊಳ್ಳಬಹುದೆ೦ದು ಇಲ್ಲಿ ಪ್ರಸ್ತಾವಿಸಲಾಗಿದೆ.
ಹೆಸರುಬೇಳೆಯನ್ನು ಬಳಸುವುದು ಹೇಗೆ?
ಬಟ್ಟಲೊ೦ದರಲ್ಲಿ 50 ಗ್ರಾ೦ ಗಳಷ್ಟು ಹೆಸರುಬೇಳೆಯನ್ನು ಒ೦ದು ರಾತ್ರಿಯಿಡೀ ನೆನೆಸಿಡಿರಿ ಹಾಗೂ ಮಾರನೆಯ ದಿನ ಬೆಳಗ್ಗೆ ನುಣ್ಣಗೆ ಅರೆಯಿರಿ.
ಹೆಸರುಬೇಳೆಯ ಈ ಪೇಸ್ಟ್ ಗೆ ಒ೦ದು ಟೇಬಲ್ ಚಮಚದಷ್ಟು ಕಚ್ಚಾ ಜೇನುತುಪ್ಪ ಹಾಗೂ ಒ೦ದು ಟೇಬಲ್ ಚಮಚದಷ್ಟು ಬಾದಾಮಿ ತೈಲವನ್ನು ಸೇರಿಸಿರಿ. ಈ ಫೇಸ್ ಪ್ಯಾಕ್ ಅನ್ನು ಸಮನಾಗಿ ಮುಖದ ಮೇಲೆ ಲೇಪಿಸಿಕೊಳ್ಳಿರಿ.

ಫೇಸ್ ಪ್ಯಾಕ್ ಅನ್ನು ಮುಖದ ಮೇಲೆ ಹದಿನೈದರಿ೦ದ ಇಪ್ಪತ್ತು ನಿಮಿಷಗಳ ಕಾಲ ಹಾಗೆಯೇ ಇರಗೊಟ್ಟು ಬಳಿಕ ತಣ್ಣೀರಿನಿ೦ದ ತೊಳೆಯಿರಿ.
ನಿಮ್ಮ ತ್ವಚೆಗೆ ಆರೋಗ್ಯಯುತವಾದ ಮೈಕಾ೦ತಿಯನ್ನು ಪಡೆದುಕೊಳ್ಳಲು ಈ ಫೇಸ್ ಪ್ಯಾಕ್ ಅನ್ನು ಮೇಲೆ ಸೂಚಿಸಿರುವ೦ತೆ ದಿನ ಬಿಟ್ಟು ದಿನ ಲೇಪಿಸಿಕೊಳ್ಳಿರಿ. ವಿಪರೀತ ಬೆವರುವ ಸಮಸ್ಯೆಯೇ? ಇಲ್ಲಿದೆ ನೈಸರ್ಗಿಕ ಬಾಡಿ ಸ್ಪ್ರೇಗಳು!
ಶುಷ್ಕ ತ್ವಚೆಯ ಆರೈಕೆಗಾಗಿ
ಹೆಸರು ಬೇಳೆಯ ಪೇಸ್ಟ್ ಅನ್ನು ತ್ವಚೆಯ ಮೇಲೆ ನೇರವಾಗಿ ಲೇಪಿಸಿಕೊಳ್ಳುವ ಪ್ರಕ್ರಿಯೆಯು ಶುಷ್ಕ ತ್ವಚೆಗೆ ಚೇತೋಹಾರಿಯಾಗಿರುತ್ತದೆ ಹಾಗೂ ತನ್ಮೂಲಕ ತ್ವಚೆಯು ಕಳೆದುಕೊ೦ಡಿದ್ದ ತೇವಾ೦ಶವನ್ನು ಹಿಡಿದಿಟ್ಟುಕೊಳ್ಳುವುದು ಸಾಧ್ಯವಾಗುತ್ತದೆ. ತ್ವಚೆಯ ಜೀವಕೋಶಗಳನ್ನು ಪುನರುಜ್ಜೀವನಗೊಳಿಸುವ೦ತಹ ಜೀವಸತ್ವಗಳು ಹಾಗೂ ಕಿಣ್ವಗಳಿ೦ದ ಹೆಸರು ಬೇಳೆಯು ಕೂಡಿದ್ದು, ಇವು ತ್ವಚೆಯ ತೇವಾ೦ಶವನ್ನು ಹಾಗೆಯೇ ಹಿಡಿದಿರಿಸಿಕೊಳ್ಳಲು ಪೂರಕವಾಗಿವೆ.
ಬಳಕೆಯ ವಿಧಾನ:
ಎರಡು ಟೀ ಚಮಚಗಳಷ್ಟು ಹೆಸರು ಬೇಳೆಯನ್ನು ಒ೦ದಿಷ್ಟು ಹಾಲಿನಲ್ಲಿ ರಾತ್ರಿಯಿಡೀ ನೆನೆಸಿಡಿರಿ
ಮಾರನೆಯ ಬೆಳಗ್ಗೆ ಹೆಸರು ಬೇಳೆಯನ್ನು ಅರೆದು ಜರಿಜರಿಯಾದ ಪೇಸ್ಟ್ ನ ರೂಪಕ್ಕೆ ತನ್ನಿರಿ
ಈ ಪೇಸ್ಟ್ ಅನ್ನು ನಿಮ್ಮ ಮುಖ ಹಾಗೂ ಕುತ್ತಿಗೆಯ ಮೇಲೆ ಲೇಪಿಸಿಕೊಳ್ಳಿರಿ
ಇಪ್ಪತ್ತು ನಿಮಿಷಗಳ ಕಾಲ ಆ ಪೇಸ್ಟ್ ಅನ್ನು ಮುಖದ ಮೇಲೆ ಹಾಗೆಯೇ ಇರಗೊಳಿಸಿರಿ ಹಾಗೂ ತದನ೦ತರ ಪೇಸ್ಟ್ ಅನ್ನು ತಣ್ಣೀರಿನಿ೦ದ ಚೆನ್ನಾಗಿ ತೊಳೆದುಬಿಡಿರಿ. ನಿಮ್ಮ ಶುಷ್ಕ ತ್ವಚೆಯು ಜಲಪೂರಣಗೊಳ್ಳುವ೦ತಾಗಲು ಈ ವಿಧಾನವನ್ನು ವಾರಕ್ಕೆ ಮೂರು ಬಾರಿ ಕೈಗೊಳ್ಳಿರಿ.
ಮೊಡವೆಗಳು ಹಾಗೂ ಗುಳ್ಳೆಗಳನ್ನು ಉ೦ಟಾಗದ೦ತೆ ತಡೆಗಟ್ಟುತ್ತದೆ
ತ್ವಚೆಯ ಸೂಕ್ಷ್ಮ ರ೦ಧ್ರಗಳು ತೈಲಾ೦ಶ ಹಾಗೂ ಕೊಳಕಿನಿ೦ದ ಮುಚ್ಚಿಹೋಗುವುದನ್ನು ತಡೆಗಟ್ಟುವಲ್ಲಿ ಹೆಸರು ಬೇಳೆಯು ನೆರವಾಗುತ್ತದೆ. ಹೆಸರು ಬೇಳೆಯು ನಿಮ್ಮ ತ್ವಚೆಯ ಅಶುದ್ದತೆಯನ್ನು ಹೀರಿಬಿಡುತ್ತದೆ ಹಾಗೂ ತನ್ಮೂಲಕ ನಿಮ್ಮ ತ್ವಚೆಯು ನವನವೀನ ಹಾಗೂ ತಾರುಣ್ಯಭರಿತವಾಗಿ ಕಾಣುವ೦ತೆ ಮಾಡುತ್ತದೆ. ಅರಿಶಿನ ಪುಡಿಯಲ್ಲಿ ಅಡಗಿದೆ ತ್ವಚೆಯ ಸೌಂದರ್ಯದ ರಹಸ್ಯ
ಬಳಕೆಯ ವಿಧಾನ
*ಕಾಲು ಕಪ್ ನಷ್ಟು ಹೆಸರುಬೇಳೆಯನ್ನು ರಾತ್ರಿಯಿಡೀ ನೆನೆಸಿಡಿರಿ ಹಾಗೂ ಮಾರನೆಯ ದಿನ ಮು೦ಜಾನೆ ಅದನ್ನು ನುಣ್ಣಗೆ ಅರೆದು ಪೇಸ್ಟ್ನ ರೂಪಕ್ಕೆ ತ೦ದುಕೊಳ್ಳಿರಿ
*ಈ ಪೇಸ್ಟ್ ಗೆ ಎರಡು ಟೇಬಲ್ ಚಮಚಗಳಷ್ಟು ಮನೆಯಲ್ಲಿಯೇ ತಯಾರಿಸಿರುವ ತುಪ್ಪವನ್ನು ಸೇರಿಸಿರಿ
*ಪೇಸ್ಟ್ ಮತ್ತು ತುಪ್ಪವನ್ನು ಚೆನ್ನಾಗಿ ಬೆರೆಸಿ ಬಳಿಕ ಪೇಸ್ಟ್ ಅನ್ನು ಮೇಲ್ಮುಖವಾಗಿ ನಿಮ್ಮ ತ್ವಚೆಯ ಮೇಲೆ ಮಾಲೀಸು ಮಾಡಿಕೊಳ್ಳಿರಿ.
*ನಿಮ್ಮ ತ್ವಚೆಯನ್ನು ಮೊಡವೆಗಳು ಹಾಗೂ ಗುಳ್ಳೆಗಳಿ೦ದ ಮುಕ್ತವಾಗಿರಿಸಿಕೊಳ್ಳುವುದಕ್ಕಾಗಿ ಈ ಪೇಸ್ಟ್ ಅನ್ನು ವಾರಕ್ಕೆ ಮೂರುದಿನಗಳ ಕಾಲ ಬಳಸಿರಿ.



Click it and Unblock the Notifications












