Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಮೂಗಿನಲ್ಲಿರುವ ಬ್ಲ್ಯಾಕ್ ಹೆಡ್ಸ್ ತೆಗೆಯಲು ಟಿಪ್ಸ್
ಮೂಗಿನ ಮೇಲೆ ಬ್ಲ್ಯಾಕ್ ಹೆಡ್ಸ್ ಬಿದ್ದರೆ ನೋಡುವರಿಗೆ ಅದು ಎದ್ದು ಕಾಣುವುದರಿಂದ ನಿಮಗೆ ಮುಜುಗರವನ್ನು ತರುವುದು. ತ್ವಚೆಯಲ್ಲಿರುವ ರಾಸಾಯನಿಕಗಳಿಂದ, ಅಧಿಕ ಎಣ್ಣೆ ಪದಾರ್ಥಗಳನ್ನು ತಿನ್ನುವುದು, ದೂಳು ಇವುಗಳಿಂದ ಮೂಗಿನ ಮೇಲೆ ಬ್ಲ್ಯಾಕ್ ಹೆಡ್ಸ್ ಉಂಟಾಗುವುದು.
ತ್ವಚೆಯನ್ನು ಆರೈಕೆ ಮಾಡಿದರೆ ಈ ಬ್ಲ್ಯಾಕ್ ಹೆಡ್ಸ್ ಮಾಯವಾಗುತ್ತದೆ. ಬ್ಲ್ಯಾಕ್ ಹೆಡ್ಸ್ ಅನ್ನು ಹೋಗಲಾಡಿಸಲು ಏನು ಮಾಡಬೇಕೆಂದು ಈ ಕೆಳಗೆ ನೀಡಲಾಗಿದೆ ನೋಡಿ:

1. ಮುಖಕ್ಕೆ ಹಬೆ ತೆಗೆದುಕೊಳ್ಳಬೇಕು
ಮೊದಲು 10-15 ನಿಮಿಷ ಹಬೆ ತೆಗದುಕೊಳ್ಳಬೇಕು, ಆಗ ತ್ವಚೆ ಸ್ವಲ್ಪ ಮೃದುವಾಗುತ್ತದೆ. ಸ್ಟೀಮ್ ತೆಗೆದುಕೊಂಡ ನಂತರ ಆಯ್ಲೀ ಕ್ರೀಮ್(oily cream) ಹಚ್ಚಬೇಕು. ನಂತರ ಬ್ಲ್ಯಾಕ್ ಹೆಡ್ಸ್ ತೆಗೆಯುವ ಪಿನ್ ನಿಂದ ಬ್ಲ್ಯಾಕ್ ಹೆಡ್ಸ್ ಅನ್ನು ಹಿಸುಕಿ ತೆಗೆಯಿರಿ. ನಂತರ ಮುಖಕ್ಕೆ ಕ್ರೀಮ್ ಹಚ್ಚಬೇಕು. ಆದರೆ ಈ ಕ್ರೀಮ್ oily cream ಆಗಿರಬಾರದು. ಈ ರೀತಿ ಮಾಡಿದರೆ ಬ್ಲ್ಯಾಕ್ ಹೆಡ್ಸ್ ಕಡಿಮೆಯಾಗುವುದು. ಇತರ ವಿಧಾನಗಳನ್ನು ತಿಳಿಯಲು ಮುಂದೆ ಓದಿ.

2. ಆಲೂಗಡ್ಡೆಯ ರಸ
ಮುಖಕ್ಕೆ ಆಲೂಗಡ್ಡೆಯ ರಸವನ್ನು ಹಚ್ಚಿ. ಅರ್ಧ ಗಂಟೆಯ ಬಳಿಕ ಮುಖ ತೊಳೆಯಿರಿ. ಆಲೂಗಡ್ಡೆಯಿಂದ ಸ್ಕ್ರಬ್ ಮಾಡಿದರೆ ಬ್ಲ್ಯಾಕ್ ಹೆಡ್ಸ್ ಕಡಿಮೆಯಾಗುತ್ತದೆ.

3. ನಿಂಬೆ ರಸ ಹಚ್ಚಿ
ನಿಂಬೆ ರಸವನ್ನು ಹಾಗೇ ಹಚ್ಚಬಹುದು ಅಥವಾ ಆಲೂಗಡ್ಡೆ ರಸಕ್ಕೆ ನಿಂಬೆ ರಸ ಮಿಶ್ರಣ ಮಾಡಿ ಹಚ್ಚಬಹುದು.

4. ಕ್ಲೆನ್ಸ್ ಮಾಡಿ
ದಿನಾ 3-4 ಬಾರಿ ಮುಖ ತೊಳೆದು ಮುಖವನ್ನು ಕ್ಲೆನ್ಸ್ ಮಾಡಿ. ಹೊರಗಡೆ ಸುತ್ತಾಡಿ ಬಂದ ಮೇಲೆ ಕ್ಲೆನ್ಸ್ ಮಾಡುವುದರಿಂದ ತ್ವಚೆಯ ಆರೋಗ್ಯ ಹೆಚ್ಚುವುದು. ಕ್ಲೆನ್ಸ್ ಗೆ ಫ್ರೂಟ್ ಅಥವಾ ಹಾಲಿನ ರಸವನ್ನು ಬಳಸಬಹುದು.

5. ಎಣ್ಣೆ ಪದಾರ್ಥಗಳಿಂದ ದೂರವಿರಿ
ಅಂದದ ತ್ವಚೆ ಪಡೆಯಲು ಎಣ್ಣೆ ಪದಾರ್ಥಗಳಿಂದ ದೂರವಿರಿ. ಎಣ್ಣೆ ಪದಾರ್ಥಗಳನ್ನು ತಿಂದರೆ ಜಿಡ್ಡು ಹೆಚ್ಚಾಗಿ ಬ್ಲ್ಯಾಕ್ ಹೆಡ್ಸ್, ಮೊಡವೆ ಈ ರೀತಿಯ ಸಮಸ್ಯೆಗಳು ಕಂಡು ಬರುವುದು.

6. ಸ್ಕ್ರಬ್ಬರ್
ಸ್ಕ್ರಬ್ಬರ್ ಬಳಸುವುದು ಒಳ್ಳೆಯದು, ಗುಣಮಟ್ಟದ ಸ್ಕ್ರಬ್ಬರ್ ಮಾತ್ರ ಬಳಸಿ.

7. ಆಯ್ಲೀ ಕ್ರೀಮ್ ಹಚ್ಚಬೇಡಿ
ಬ್ಲ್ಯಾಕ್ ಹೆಡ್ಸ್ ಇರುವವರು ಆಯ್ಲೀ ಕ್ರೀಮ್ ಹಚ್ಚಬಾರದು.



Click it and Unblock the Notifications
