Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಟೀಯಿಂದ ಹೆಚ್ಚಿಸಬಹುದು ತ್ವಚೆ ಸೌಂದರ್ಯ

ಟೀಯನ್ನು ಸೌಂದರ್ಯವರ್ಧಕವಾಗಿ ಈ ಕೆಳಗಿನ ವಿಧಾನದಂತೆ ಬಳಸಿದರೆ ಕಾಂತಿಯುತ ತ್ವಚೆ ನಿಮ್ಮದಾಗುವುದು.
ಟೀ, ಓಟ್ಸ್ ಮತ್ತು ಜೇನಿನ ಮಿಶ್ರಣ: ಅರ್ಧ ಕಪ್ ಓಟ್ ಮೀಲ್ಸ್ ತೆಗೆದುಕೊಂಡು ಅದನ್ನು ನುಣ್ಣಗೆ ಪುಡಿಮಾಡಬೇಕು. ನಂತರ ಇದಕ್ಕೆ ಟೀ ಮತ್ತು 2 ಚಮಚ ಜೇನು ಹಾಕಿ ಪೇಸ್ಟ್ ರೀತಿ ಮಿಶ್ರ ಮಾಡಿ ಮುಖ ಮತ್ತು ಮೈಗೆ ಹಚ್ಚಬೇಕು. ನಂತರ 15 ನಿಮಿಷ ಬಿಟ್ಟು ಸ್ನಾನ ಮಾಡಬೇಕು. ಈ ರೀತಿ ವಾರಕ್ಕೆ ಒಮ್ಮೆ ಮಾಡುತ್ತಾ ಬಂದರೆ ತ್ವಚೆಹೊಳಪು ಹೆಚ್ಚಾಗುವುದು.
ಟೀ, ಅಕ್ಕಿ ಮತ್ತು ನಿಂಬೆರಸ: 3 ಚಮಚ ಅಕ್ಕಿಪುಡಿಗೆ ಅರ್ಧ ಗ್ಲಾಸ್ ಟೀ ಹಾಕಿ, ನಿಂಬೆ ರಸ ಹಾಕಿ ಮಿಶ್ರಣ ಮಾಡಬೇಕು. ನಂತರ ಇದನ್ನು ಮೈಗೆ ಹಚ್ಚಿ 20 ನಿಮಿಷದ ಬಳಿಕ ಸ್ನಾನ ಮಾಡಬೇಕು. ಇದು ಮುಖದಲ್ಲಿರುವ ಕಪ್ಪು ಕಲೆಗಳನ್ನು ಹೋಗಲಾಡಿಸುತ್ತದೆ. ಮೈಕಾಂತಿ ಹೆಚ್ಚಿಸಿಕೊಳ್ಳಲು ಈ ವಿಧಾನ ಕೂಡ ಬಳಸಬಹುದು.
ಟೀ ಮತ್ತು ಕೋಕಾ: ಚಾಕಲೇಟ್ ಮತ್ತು ಟೀಯಲ್ಲಿ antioxidants. ಪ್ರಮಾಣ ಅಧಿಕವಾಗಿದೆ. 3-4 ಚಮಚ ಕೋಕಾ ಪುಡಿಯನ್ನು ಅರ್ಧ ಗ್ಲಾಸ್ ಟೀಯಲ್ಲಿ ಮಿಶ್ರ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷದ ಬಿಟ್ಟು ಮುಖ ತೊಳೆದರೆ ಮುಖದಲ್ಲಿ ನೆರಿಗೆಗಳು ಇದ್ದರೆ ಮರೆಮಾಚುತ್ತದೆ ಮತ್ತು ಅಕಾಲಿಕ ನೆರಿಗೆ ಬೀಳುವುದನ್ನು ತಡೆಗಟ್ಟುತ್ತದೆ.
ಟೀ ಮತ್ತು ಜೋಳದ ಹಿಟ್ಟು: 3 ಚಮಚ ಜೋಳದ ಹಿಟ್ಟಿಗೆ 3 ಚಮಚ ಟೀ ಹಾಕಿ ಮಿಶ್ರ ಮಾಡಿ ಮುಖಕ್ಕೆ ಹಚ್ಚಿ 15 ನಿಮಿಷ ಬಿಡಬೇಕು. ನಂತರ ಹದ ಬಿಸಿನೀರಿನಿಂದ ಮುಖ ತೊಳೆಯಬೇಕು. ಈ ರೀತಿ ಮಾಡಿದರೆ ನಿರ್ಜೀವ ತ್ವಚೆಯನ್ನು ಹೋಗಲಾಡಿಸಿ, ತ್ವಚೆ ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.
ಟೀ ಮತ್ತು ಬಾಳೆಹಣ್ಣು: ಬಾಳೆಹಣ್ಣನ್ನು ಪೇಸ್ಟ್ ರೀತಿ ಮಾಡಿ ಅದಕ್ಕೆ 2 ಚಮಚ ಟೀ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಡಬೇಕು. ನಂತರ ಹದ ಬಿಸಿನೀರಿನಿಂದ ಮುಖ ತೊಳೆಯಬೇಕು. ಒಣ ತ್ವಚೆ ಇರುವವರು ಈ ವಿಧಾನ ಪಾಲಿಸಿದರೆ ಉತ್ತಮ ಪ್ರಯೋಜನ ಪಡೆಯಬಹುದು.



Click it and Unblock the Notifications
