Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ರೇಷ್ಮೆಯಂಥ ತ್ವಚೆ ಬೇಕೆಂದರೆ ಮೊಸರು ಬಳಸಿ

ಮೊಸರು ಚರ್ಮದ ಪಿಎಚ್ ಮಟ್ಟವನ್ನೂ ಸರಿದೂಗಿಸಿಕೊಂಡು ಹೋಗಲು ಸಹಕಾರಿ. ಮೊಸರಿನ ನಿರಂತರ ಬಳಕೆಯಿಂದ ಸೌಂದರ್ಯಕ್ಕೆ ಅವಶ್ಯಕವಾದ ಅನೇಕ ಪ್ರಯೋಜನ ಪಡೆಯಬಹುದು. ಸೌಂದರ್ಯ ವೃದ್ಧಿಗೆ ಮೊಸರನ್ನು ಹೇಗೆ ಬಳಸುವುದು ಎಂದು ಇಲ್ಲಿ ತಿಳಿಯಿರಿ.
ತ್ವಚೆಗೆ ಮೊಸರನ್ನು ಯಾವ ರೀತಿ ಬಳಸಬಹುದು?
* ಮೊಸರಿನ ಬಾಡಿ ಸ್ಕ್ರಬ್: ಒಂದು ಕಪ್ ಮೊಸರಿಗೆ 1 ಚಮಚ ಸಕ್ಕರೆ, ಅರಿಶಿಣ, ಲೋಳೆಸರ ಬೆರೆಸಿ ಹಚ್ಚಿಕೊಳ್ಳಬೇಕು. ಅರಿಶಿಣ ತ್ವಚೆಯಲ್ಲಿನ ಕೊಳೆಯನ್ನು ಹೋಗಲಾಡಿಸಿದರೆ ಸಕ್ಕರೆ ಸ್ಕ್ರಬ್ ನಂತೆ ನಿರ್ಜೀವ ಕಣವನ್ನು ಹೋಗಿಸುತ್ತದೆ ಮತ್ತು ಲೋಳೆ ಸರ ಚರ್ಮವನ್ನು ಮೃದುಗೊಳಿಸುತ್ತೆ. ಓಟ್ ಮೀಲನ್ನು ಮೊಸರಿನೊಂದಿಗೆ ಬೆರೆಸಿ ಹಚ್ಚಿಕೊಂಡರೆ ಉತ್ತಮ ಫಲಿತಾಂಶ ಹೊಂದಬಹುದು.
* ಮೊಸರಿನ ಪ್ಯಾಕ್: ಸ್ವಲ್ಪ ಮುಲ್ತಾನಿ ಮಿಟ್ಟಿಗೆ ಮೊಸರು ಮತ್ತು ರೋಸ್ ವಾಟರ್ ಬೆರೆಸಿ ಪೇಸ್ಟ್ ನಂತೆ ಮಾಡಿಕೊಂಡು ಹಚ್ಚಿಕೊಳ್ಳುವುದರಿಂದ ಚರ್ಮ ತಿಳಿಗೊಂಡು ಟ್ಯಾನ್ ಕೂಡ ಪರಿಣಾಮಕಾರಿಯಾಗಿ ಹೋಗಿಸುತ್ತದೆ. ಇದನ್ನು ಮೊಣ ಕಾಲು, ಮಂಡಿ, ಮೊಣಕೈ ಮತ್ತು ಹೊಟ್ಟೆ ಮೇಲೆ ಹಚ್ಚಿಕೊಂಡರೆ ಸೂರ್ಯನ ಕಿರಣಗಳಿಂದಾದ ಕಪ್ಪನ್ನು ಬೇಗನೆ ನಿವಾರಿಸಿಕೊಳ್ಳಬಹುದು.
* ಮೊಸರಿನ ಲೋಶನ್: ಒಂದು ಚಮಚ ಬಾದಾಮಿ ಎಣ್ಣೆಯೊಂದಿಗೆ ಮೊಸರನ್ನು ಬೆರೆಸಿ ಸ್ನಾನಕ್ಕೆ ಮುನ್ನ ಹಚ್ಚಿಕೊಂಡು ಸ್ನಾನ ಮಾಡಿದರೆ ಚರ್ಮ ಆರೋಗ್ಯಕರ ಮತ್ತು ತಾಜಾ ಆಗಿರುತ್ತದೆ. ಈ ರೀತಿ ಮಾಡುವುದರಿಂದ ಚರ್ಮ ಒಣಗುವಿಕೆಯನ್ನು ತಡೆದು ರೇಷ್ಮೆ ಮತ್ತು ಹೊಳೆಯುವ ಚರ್ಮವನ್ನು ನೀಡುತ್ತದೆ.
* ಮೊಸರಿನ ಫೇಸ್ ಮಾಸ್ಕ್: ಕ್ಯಾರೆಟ್ ರಸ, ಕೇಸರಿ, ಜೇನು ಮತ್ತು ಮೊಸರನ್ನು ಬೆರೆಸಿ ಸ್ನಾನಕ್ಕೆ ಮುನ್ನ ಹಚ್ಚಿಕೊಂಡು ಅದು ಒಣಗಿದ ನಂತರ ಸ್ನಾನ ಮಾಡಿದರೆ ಚರ್ಮದಲ್ಲಿ ಆದ ಭಾರೀ ಬದಲಾವಣೆ ನಿಮಗೇ ಗೋಚರಿಸುತ್ತೆ.
* ಶೇವ್ ಆದ ನಂತರದ ಕ್ರೀಂ: ಸೌತೆಕಾಯಿ ರಸದೊಂದಿಗೆ ಮೊಸರು ಸೇರಿಸಿ ಶೇವ್ ಆದ ನಂತರ ಹಚ್ಚಿಕೊಂಡರೆ ಉರಿಯೂ ಇರುವುದಿಲ್ಲ, ಕಪ್ಪೂ ಆಗುವುದಿಲ್ಲ ಮತ್ತು ತ್ವಚೆ ತಾಜಾ ಆಗಿರುತ್ತೆ.



Click it and Unblock the Notifications
