For Quick Alerts
ALLOW NOTIFICATIONS  
For Daily Alerts

Men fashion Tips: ಯಾವ ಬಣ್ಣದ ಪ್ಯಾಂಟ್‌ಗೆ ಯಾವ ಶೂ ಸಕತ್‌ ಸ್ಟೈಲಿಷ್ ಲುಕ್‌ ನೀಡುತ್ತೆ?

By Kiran Dondole
|

ಫ್ಯಾಶನ್ ಲೋಕದಲ್ಲಿ ಒಂದಲ್ಲೊಂದು ಹೊಸತನಗಳು ಬರುತ್ತಲೇ ಇರುತ್ತವೆ. ಅದರಲ್ಲೂ ಶೂಗಳ ಬಗ್ಗೆ ಗಮನ ಹರಿಸಿದರೆ ಕಾಲಕ್ಕೆ ತಕ್ಕಂತೆ ಯಾವ ರೀತಿಯ ಚೇಂಜಸ್ ಗಳಾಗಿದೆ ಎಂಬುವುದನ್ನು ನಾವು ಗಮನಿಸಬಹುದಾಗಿದೆ.

ಹೌದು, ಚಂದ ಚಂದದ ಬಟ್ಟೆಗಳನ್ನು ತೊಟ್ಟು ಅದಕ್ಕೆ ಹೋಲುವ ಶೂ ಗಳನ್ನು ಧರಿಸುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಇಂದಿನ ಕಾಲದ ಯುವಕರಂತೂ ಪ್ಯಾಂಟ್ ಗಳಿಗೆ ಸಖತ್ ಆಗಿ ಸೂಟ್ ಆಗುವ ಶೂಗಳನ್ನು ಧರಿಸುವುದು ಸಹಜವಾಗಿದೆ. ಹೊಸ ಟ್ರೆಂಡ್ ಶೂಗಳು ಮಾರುಕಟ್ಟೆಗಳಲ್ಲಿ ಸದ್ದು ಮಾಡುತ್ತಿದ್ದು ಯುವಕರನ್ನು ಕೈ ಬೀಸಿ ಕರೆಯುತ್ತಿದೆ.

ಹೊಸತನಗಳ ಶೂಗಳು ಬಂದಾಗ ಯುವಕರಿಗೆ ಮ್ಯಾಚಿಂಗ್ ಪ್ಯಾಂಟ್ ಗಳ ಸಮಸ್ಯೆಯೂ ಕಾಡುತ್ತೆ. ಕಪ್ಪು ಶೂ ಗೆ ಯಾವ ಬಣ್ಣದ ಪ್ಯಾಂಟ್ ತೊಡಬೇಕು, ಕಂದು ಬಣ್ಣದ ಶೂಗೆ ಯಾವ ಬಣ್ಣದ ಪ್ಯಾಂಟ್ ಹಾಕಬೇಕು ಎನ್ನುವ ಗೊಂದಲ ಸಾಮಾನ್ಯವಾಗಿ ಬರುತ್ತದೆ

ಹೀಗಾಗಿ ಯಾವ ಬಣ್ಣದ ಪ್ಯಾಂಟ್ ಜೊತೆ ಯಾವ ರೀತಿಯ ಮ್ಯಾಚಿಂಗ್ ಶೂ ಧರಿಸಬೇಕು ಅನ್ನೋ ಯುವಕರ ಗೊಂದಲವನ್ನು ನಿವಾರಿಸಲಿದೆ ಈ ಲೇಖನ.

ಫಾರ್ಮಲ್ಸ್ ಬಟ್ಟೆಗಳಿಗೆ ಶೂ ಬೇಕೇ ಬೇಕು!

ಫಾರ್ಮಲ್ಸ್ ಬಟ್ಟೆಗಳಿಗೆ ಶೂ ಬೇಕೇ ಬೇಕು!

ಇಂದಿನ ಜಾಯಮಾನದಲ್ಲಿ ಚಪ್ಪಲಿಗಳ ಬದಲು ಬೂಟುಗಳು ಬಳಕೆ ಹೆಚ್ಚಿದೆ ಚಪ್ಪಲಿಗಳ ಜಾಗಕ್ಕೆ ಶೂಗಳು ಲಗ್ಗೆ ಇಟ್ಟಿದೆ ಅಂದ್ರೂ ತಪ್ಪಾಗಲ್ಲ. ಇನ್ನು ಅನೇಕ ಐಟಿ-ಬಿಟಿ ಕಚೇರಿಗಳಲ್ಲಂತೂ ಫಾರ್ಮಲ್ಸ್ ಬಟ್ಟೆ ತೊಡುವುದು ಸಾಮಾನ್ಯವಾಗಿದೆ. ಇನ್ನು ಫಾರ್ಮಲ್ಸ್ ಬಟ್ಟೆ ತೊಟ್ಟರೆ ಫಾರ್ಮಲ್ ಶೂ ಧರಿಸಲೇಬೇಕು. ಇಲ್ಲದಿದ್ದರೆ ಆ ಫಾರ್ಮಲ್ಸ್ ಬಟ್ಟೆಯ ಅಂದವೇ ಹೋಗಿಬಿಡುತ್ತೆ. ಕಪ್ಪು, ಕಂದು ಬಣ್ಣದ ಶೂಗಳನ್ನು ಆಯಾಯ ಪ್ಯಾಂಟ್ ಗೆ ಹೊಂದುವಂತೆ ಧರಿಸುತ್ತಾರೆ.

ಮ್ಯಾಚಿಂಗ್ ಶೂ ತೊಟ್ಟಿಲ್ಲಂದ್ರೆ ಏನಾಗುತ್ತೆ?

ಮ್ಯಾಚಿಂಗ್ ಶೂ ತೊಟ್ಟಿಲ್ಲಂದ್ರೆ ಏನಾಗುತ್ತೆ?

ಅನೇಕ ಜನರು ಪ್ಯಾಂಟ್ ಗಳಿಗೆ ಮ್ಯಾಚಿಂಗ್ ಶೂ ಗಳನ್ನು ಧರಿಸುವುದಿಲ್ಲ ಇದರಿಂದ ಏನು ಸಮಸ್ಯ್ತೆ ಆಗುವುದಿಲ್ಲ. ಆದರೆ ಪ್ಯಾಂಟ್ ಗೆ ಮ್ಯಾಚಿಂಗ್ ಶೂ ತೊಡದಿದ್ದರೆ ಅವರು ಧರಿಸಿದ ಬಟ್ಟೆಯ ಲುಕ್ ಹಾಳಾಗಿ ಬಿಡುತ್ತದೆ. ದುಬಾರಿ ಹಣ ಕೊಟ್ಟು ಖರೀದಿಸಿದ ಬಟ್ಟೆಗೆ ವ್ಯಾಲ್ಯೂ ಇಲ್ಲದಂತೆ ಆಗಿಬಿಡುತ್ತದೆ. ಹೀಗಾಗಿ ಶೂ ಹಾಕುವಾಗ ಮ್ಯಾಚಿಂಗ್ ಪ್ಯಾಂಟ್ ತೊಡುವುದು ಉತ್ತಮ ನಿರ್ಧಾರ.

ಕಪ್ಪು ಬಣ್ಣದ ಬೂಟುಗಳು ಆಲ್ ಟೈಂ ಫೇವರೀಟ್!

ಕಪ್ಪು ಬಣ್ಣದ ಬೂಟುಗಳು ಆಲ್ ಟೈಂ ಫೇವರೀಟ್!

ಅನೇಕರ ಫೇವರೀಟ್ ಕಪ್ಪು ಬಣ್ಣದ ಬೂಟುಗಳು. ಹೌದು, ಯಾವುದೇ ರೀತಿಯ ಪ್ಯಾಂಟ್ ತೊಟ್ಟರು ಕಪ್ಪು ಬಣ್ಣದ ಬೂಟುಗಳು ಸೂಟ್ ಆಗುತ್ತದೆ. ಪ್ರತಿಯೊಂದು ಸಂದರ್ಭಕ್ಕೂ ಹೊಂದುವ ಬೂಟ್ ಎಂದರೆ ಕಪ್ಪು ಬಣ್ಣದ ಬೂಟುಗಳು ಎಂದರು ತಪ್ಪಾಗಲ್ಲ. ಫಾರ್ಮರ್ಲ್ ಉಡುಗೆಗಳಿಗಂತೂ ಕಪ್ಪು ಬಣ್ಣದ ಬೂಟುಗಳು ಹೇಳಿ ಮಾಡಿಸಿದ ಮ್ಯಾಚಿಂಗ್ ಆಗಿದೆ. ಕಪ್ಪು ಶೂಗಳು ಎಷ್ಟು ಫೇಮಸ್ ಅಂದರೆ, ಪುರುಷರ ಆನ್‌ಲೈನ್ ಸ್ಟೈಲಿಂಗ್ ಸೇವೆ ನೀಡುತ್ತಿರುವ ಲ್ಯೂಕ್ ಮೆಕ್‌ಡೊನಾಲ್ಡ್ ಹೇಳುತ್ತಾರೆ, "ನಿಮ್ಮ ವಾರ್ಡ್ ರೋಬ್ ನಲ್ಲಿರುವ ಶೂಗಳ ಪೈಕಿ ಒಂದು ಜೋಡಿ ಕಪ್ಪು ಬಣ್ಣದ ಶೂಗಳು ಬಹುಶಃ ನೀವು ಅತೀ ಹೆಚ್ಚು ಬಾರಿ ಧರಿಸುವ ಶೂಗಳಾಗಿರುಬಹುದು" ಎಂದಿದ್ದಾರೆ. ಈ ಮೂಲಕ ಕಪ್ಪು ಬಣ್ಣದ ಶೂಗಳು ಎಲ್ಲರಿಗೂ ಅಚ್ಚುಮೆಚ್ಚು ಎಂದಿದ್ದಾರೆ. ಅಲ್ಲದೇ ಕಪ್ಪು ಬಣ್ಣದ ಶೂಗಳಿಗೆ ಅದರದೆ ಆದ ಡಿಗ್ನಿಟಿ ಇದೆ. ಕಪ್ಪು ಪ್ಯಾಂಟ್, ಕಂದು ಪ್ಯಾಂಟ್, ಲೈಟ್ ಅಥವಾ ಡಾರ್ಕ್ ಬಣ್ಣದ ಯಾವುದೇ ಪ್ಯಾಂಟ್ ಗಳಿರಲಿ ಆ ಬಣ್ಣದ ಪ್ಯಾಂಟ್ ಗಳಿಗೆ ಕಪ್ಪು ಬಣ್ಣದ ಶೂ ಸಹಜವಾಗೇ ಸೂಟ್ ಆಗುತ್ತದೆ. ಅನೇಕ ಕಾರ್ಯುಕ್ರಮಗಳಲ್ಲಿ ಹಿರಿಯ ಹಾಗೂ ಕಿರಿಯ ವ್ಯಕ್ತಿಗಳು ಕಪ್ಪು ಬಣ್ಣದ ಶೂಗಳನ್ನೇ ಧರಿಸುತ್ತಾರೆ. ಹೆಚ್ಚಿನ ಗಣ್ಯರು ಕಬ್ಬು ಬಣ್ಣದ ಶೂ ಅನ್ನೇ ಧರಿಸುವುದು ಹೆಚ್ಚು.

ಈಗೀನ ಟ್ರೆಂಡಿಂಗ್ ಕಂದು ಬಣ್ಣದ ಶೂಗಳು!

ಈಗೀನ ಟ್ರೆಂಡಿಂಗ್ ಕಂದು ಬಣ್ಣದ ಶೂಗಳು!

ಕಪ್ಪು ಬಣ್ಣದ ಶೂಗಳು ಸಾಮಾನ್ಯವಾಗಿ ಧರಿಸುವುದಿದ್ದರೂ ಇಂದಿನ ಟ್ರೆಂಡಿಗ್ ಎಂದೇ ಕಂದು ಬಣ್ಣದ ಶೂಗಳನ್ನು ಕರೆಯುತ್ತಾರೆ. ಕಪ್ಪು ಬಣ್ಣದ ಶೂ ಬಳಿಕ ಕಂದು ಬಣ್ಣದ ಬಣ್ಣದ ಶೂಗಳಿಗೆ ಎರಡನೇ ಮಾನ್ಯತೆ ಇದೆ. ಕಪ್ಪು ಬಣ್ಣದ ಬೂಟು ಸಾಂಪ್ರದಾಯಿಕ ಗುಣ ಹೊಂದಿದ್ದರೆ ಕಂದು ಬಣ್ಣದ ಬೂಟು ಸ್ಟೈಲಿಶ್ ಗೆ ಹೆಸರುವಾಸಿಯಾಗಿದೆ. ಇಂದಿನ ಅನೇಕ ಯುವಕರು ಕಂದು ಬಣ್ಣದ ಶೂಗಳನ್ನು ಧರಿಸುವುದು ಹೆಚ್ಚು. ಜೀನ್ಸ್ ಪ್ಯಾಂಟ್ ಆಗಿರಬಹುದು, ಫಾರ್ಮಲ್ಸ್ ಪ್ಯಾಂಟ್ ಆಗಿರಬಹುದು ಎಲ್ಲದಕ್ಕೂ ಈ ಕಂದು ಬಣ್ಣದ ಶೂ ಬೆಸ್ಟ್ ಮ್ಯಾಂಚಿಂಗ್ ಆಗುತ್ತದೆ. ಬೂದು, ನೀಲಿ, ಕಪ್ಪು, ಕ್ರೀಂ ಬಣ್ಣದ ಪ್ಯಾಂಟ್ ಗಳು ಕಂದು ಬಣ್ಣದ ಶೂಗಳಿಗೆ ಸಖತ್ ಹೋಲುತ್ತದೆ. ಲೇಸ್ ಇದ್ದರೆ ಅಂತಹ ಶೂಗಳ ವ್ಯಾಲ್ಯೂ ಕೂಡ ಜಾಸ್ತಿ. ಇನ್ನು ನಾವು ಜೀನ್ಸ್ ಪ್ಯಾಂಟ್ ಗಳನ್ನು ಧರಿಸುವುದಾದರೆ ಲೇಸ್ ಇಲ್ಲದ ಶೂಗಳು, ಲೋಫರ್ಸ್ ಶೂಗಳು ಅತ್ಯುತ್ತಮ ಆಕರ್ಷಕವಾಗಿರುತ್ತದೆ. ಅಲ್ಲದೇ ಈಗೀನ ಟ್ರೆಂಡಿಂಗ್ ಪ್ಯಾಂಟ್ ಗಳಿಗೂ ಕಂದು ಬಣ್ಣದ ಶೂ ಗಳು ಸೂಟ್ ಆಗುತ್ತದೆ.

ನೀಲಿ ಹಾಗೂ ಕೆಂಪು ಬಣ್ಣದ ಶೂಗಳು!

ನೀಲಿ ಹಾಗೂ ಕೆಂಪು ಬಣ್ಣದ ಶೂಗಳು!

ಈ ಹಿಂದೆ ಶೂಗಳೆಂದರೆ ಕಪ್ಪು ಅಥಾವ ಕಂದು ಬಣ್ಣದ್ದು ಎನ್ನುವ ಒಂದು ಮಾತು ಇತ್ತು. ಆದರೆ ಇದೀಗ ಈ ಟ್ರೆಂಡ್ ಬದಲಾಗಿದೆ. ಇತ್ತೀಚಿನ ದಿನಗಳಲ್ಲಿ ವಿವಿಧ ಬಣ್ಣಗಳಲ್ಲಿ ಶೂಗಳು ಸಿಗುತ್ತವೆ. ಇನ್ನು ನೀಲಿ ಬಣ್ಣ ಹಾಗೂ ಕೆಂಪು ಬಣ್ಣದ ಶೂಗಳು ಕೂಡ ಇತ್ತೀಚಿನ ದಿನಗಳಲ್ಲಿ ಸಖತ್ ಸದ್ದು ಮಾಡುತ್ತಿದೆ. ಪಾರ್ಟಿಗಳಿಗೆ ಹೆಚ್ಚಿನವರು ಡಾರ್ಕ್ ಬಣ್ಣದ ಶೂಗಳನ್ನು ತೊಡುವುದು ಹೆಚ್ಚು, ದೂರದಿಂದ ಈ ಬಣ್ಣದ ಶೂಗಳು ಆಕರ್ಷಿಸುತ್ತವೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಬಣ್ಣದ ಶೂಗಳನ್ನು ಧರಿಸುತ್ತಾರೆ. ಫಂಕಿ ಶೂಗಳು ಎಂದು ಕೂಡ ಈ ಕಲರ್ ನ ಶೂಗಳನ್ನು ಕರೆಯುತ್ತಾರೆ. ಕಂದು, ಬಿಳಿ, ಕಪ್ಪು ಬಣ್ಣದ ಪ್ಯಾಂಟ್ ಗಳಿಗೆ ಕೆಂಪು ಹಾಗೂ ನೀಲಿ ಬಣ್ಣದ ಶೂಗಳು ತುಂಬಾನೇ ಸೂಟ್ ಆಗುತ್ತದೆ. ನೀಲಿಯಲ್ಲೂ ಲೈಟ್ ಬ್ಲೂ, ಡಾರ್ಕ್ ಬ್ಲೂ ಬಣ್ಣದ ಶೂಗಳು ಚಾಲ್ತಿಯಲ್ಲಿದ್ದರೆ. ಕೆಂಪುವಿನಲ್ಲಿ ಒಂದೇ ಅಂದರೆ ಡಾರ್ಕ್ ಬಣ್ಣದ ಶೂಗಳು ನಮಗೆ ಕಾಣ ಸಿಗುತ್ತದೆ. ಈಗೀನ ಯೂತ್ ಗಳಿಗೆ ಲುಕ್ ನೀಡುವ ಈ ಶೂಗಳು ಈಗೀನ ಟ್ರೆಂಡಿಂಗ್ ಆಗಿದೆ.

ಬಿಳಿ ಬಣ್ಣದ ಶೂಗಳು!

ಬಿಳಿ ಬಣ್ಣದ ಶೂಗಳು!

ಸದ್ಯ ಮೋಸ್ಟ್ ಟ್ರೆಂಡಿಂಗ್ ನಲ್ಲಿರುವ ಶೂಗಳ ಪೈಕಿ ಎಂದರೆ ಬಿಳಿ ಬಣ್ಣದ ಶೂಗಳು. ಹಿಂದಿನ ದಿನಗಳಲ್ಲಿ ಶಾಲೆಗಳಲ್ಲಿ ಈ ಬಣ್ಣದ ಶೂಗಳನ್ನು ಬಳಕೆ ಮಾಡುತ್ತಿದ್ದರು. ಆದರೆ ಈಗ ಟ್ರೆಂಡ್ ಬದಲಾಗಿದೆ. ಹೆಚ್ಚಿನ ಯುವಕರು ಬಿಳಿ ಬಣ್ಣದ ಪ್ಯಾಂಟ್ ಗಳನ್ನು ತೊಡುವುದು ಸರ್ವೇ ಸಾಮಾನ್ಯ. ಕಪ್ಪು, ಕೆಂಪು, ನೀಲಿ, ಬಿಳಿ, ಕಂದು, ಬೂದು ಬಣ್ಣದ ಪ್ಯಾಂಟ್ ಗಳಿಗೆ ಬಿಳಿ ಬಣ್ಣದ ಶೂಗಳನ್ನು ತೊಡುತ್ತಾರೆ. ಜೀನ್ಸ್ ಅಥವಾ ಫಾರ್ಮಲ್ಸ್ ಎರಡು ರೀತಿಯ ಪ್ಯಾಂಟ್ ಗಳಿಗೆ ಬಿಳಿ ಬಣ್ಣದ ಶೂಗಳು ಸೂಟ್ ಆಗುತ್ತವೆ. ಬಾಲಿವುಡ್ ನ ಹಲವು ತಾರೆಯರು ವಿವಿಧ ಶೋಗಳಲ್ಲಿ ಬಿಳಿ ಶೂ ತೊಟ್ಟು ಫಂಕಿಯಾಗಿ ತೆರಳುತ್ತಾರೆ.

ಮಲ್ಟಿ ಕಲರ್ ಶೂಗಳು!

ಮಲ್ಟಿ ಕಲರ್ ಶೂಗಳು!

ಇನ್ನೊಂದು ಟ್ರೆಂಡಿಂಗ್ ನಲ್ಲಿರುವ ಶೂಗಳೆಂದರೆ ಅದು ಮಲ್ಟಿ ಕಲರ್ ಬೂಟುಗಳು. ವಿವಿಧ ಬಣ್ಣದಿಂದ ಕೂಡಿರುವ ಈ ಶೂಗಳು ಫ್ಯಾಶನ್ ಪ್ರಿಯರ ಫೇವರೀಟ್. ನೀಲಿ, ಕಪ್ಪು, ಕಂದು, ಬೂದು ಸೇರಿ ಕೆಲ ಬಣ್ಣದ ಪ್ಯಾಂಟ್ ಗಳಿಗೆ ಇದು ಸೂಟ್ ಆಗುತ್ತೆ. ಫಾರ್ಮಲ್ಸ್ ಬಟ್ಟೆಗಳಿಗೆ ಈ ಶೂಗಳನ್ನು ಬಳಕೆ ಮಾಡುವುದು ಕಡಿಮೆ. ಆದರೆ ಜೀನ್ಸ್ ಅಥವಾ ಕ್ಯಾಶುವಲ್ ಪ್ಯಾಂಟ್ ಗಳಿಗೆ ಈ ಬಣ್ಣದ ಶೂಗಳು ಸಖತ್ ಸೂಟ್ ಆಗುತ್ತದೆ. ಈಗೀನ ದಿನಗಳಲ್ಲಿ ಮಲ್ಟಿ ಕಲರ್ ಶರ್ಟ್ ಗಳು ಸಿಗುತ್ತಿದೆ. ಇದಕ್ಕೆ ಹೋಲುವ ಕಪ್ಪು ಬಣ್ಣದ ಪ್ಯಾಂಟ್ ಧರಿಸಿ ಅದಕ್ಕೆ ಈ ಮಲ್ಟಿ ಕಲರ್ಡ್ ಶೂ ಧರಿಸಿದರೆ ಲುಕ್ ಸಖತ್ ಆಗಿ ಇರಲಿದೆ.

English summary

How To match Your Shoe Color To Your Trousers in kannada

How To match Your Shoe Color To Your Trousers in kannada, Read on,
X
Desktop Bottom Promotion