For Quick Alerts
ALLOW NOTIFICATIONS  
For Daily Alerts

ಸೂಕ್ಷ್ಮ ಚರ್ಮ ಹೊಂದಿರುವ ಪುರುಷರಿಗೆ ಸಿಂಪಲ್ ಶೇವಿಂಗ್ ಟಿಪ್ಸ್

|

ಮಹಿಳೆಯರಿಗೆ ದಿನಾಲೂ ಮೇಕಪ್ ಮಾಡಿಕೊಳ್ಳುವುದು ಒಂದು ಅಭ್ಯಾಸವಾದರೆ, ಅದೇ ಪುರುಷರಿಗೆ ತಮ್ಮ ಮೀಸೆ ಹಾಗೂ ಗಡ್ಡವನ್ನು ಸುಸ್ತಿಯಲ್ಲಿಡಲು ತುಂಬಾ ಕಷ್ಟಪಡಬೇಕಾಗುತ್ತದೆ. ಪ್ರತಿನಿತ್ಯವೂ ಶೇವಿಂಗ್ ಮಾಡಿಕೊಂಡು ತಮ್ಮ ಸೌಂದರ್ಯವನ್ನು ಕಾಪಾಡಿ ಕೊಳ್ಳಬೇಕಾಗುತ್ತದೆ. ಶೇವಿಂಗ್ ಮಾಡಿಕೊಳ್ಳುವಾಗ ತುಂಬಾ ಎಚ್ಚರಿಕೆ ವಹಿಸಬೇಕು. ಯಾಕೆಂದರೆ ಚರ್ಮಕ್ಕೆ ಗಾಯವಾಗಿ ರಕ್ತ ಬರಬಹುದು ಮತ್ತು ಈ ಗಾಯವು ತುಂಬಾ ಸಮಯದ ತನಕ ಇರಬಹುದು. ಇದಕ್ಕಾಗಿ ಯಾವಾಗಲೂ ಶೇವಿಂಗ್ ಮಾಡುವಾಗ ನಮ್ಮ ಗಮನ ಅದರತ್ತಲೇ ಇರಬೇಕು. ಹೀಗಾಗಿ ಈ ಲೇಖನದಲ್ಲಿ ತುಂಬಾ ಸೂಕ್ಷ್ಮ ಚರ್ಮವನ್ನು ಹೊಂದಿರುವಂತಹ ಪುರುಷರಿಗೆ ಶೇವಿಂಗ್ ಮಾಡಲು ಕೆಲವು ಸಲಹೆಗಳನ್ನು ನೀಡಲಿದ್ದೇವೆ. ಇದನ್ನು ನೀವು ತಿಳಿಯಿರಿ.

ಸೂಕ್ಷ್ಮ ಚರ್ಮವಿರುವಂತಹ ಪುರುಷರಿಗೆ ಶೇವಿಂಗ್ ಸಲಹೆಗಳು

ನಾವು ಇಂದು ರೋಬೊಟಿಕ್ ಯುಗದಲ್ಲಿ ಇದ್ದೇವೆ. ಪ್ರತಿಯೊಂದಕ್ಕೆ ತಂತ್ರಜ್ಞಾನ, ಕೃತಕ ಜಾಣ್ಮೆ ಮತ್ತು ಯಂತ್ರಗಳ ಮೇಲೆ ಅವಲಂಬಿತವಾಗಿದ್ದೇವೆ. ನಮ್ಮ ದೇಹದ ಸ್ಟೈಲಿಂಗ್ ಹಾಗೂ ಗ್ರೂಮಿಂಗ್ ಗೆ ಹಲವಾರು ರೀತಿಯ ಉತ್ಪನ್ನಗಳು ಹಾಗೂ ತಂತ್ರಜ್ಞಾನಗಳು ಮಾರುಕಟ್ಟೆಯಲ್ಲಿ ಸಿಗುವುದು. 2019ರ ವರ್ಷದಲ್ಲಿ ನಾವಿರುವಾಗ ಮರುಕಟ್ಟೆಯಲ್ಲಿ ಹಲವಾರು ವಿಧದ ಆಯ್ಕೆಗಳು ನಮಗೆ ಸಿಗುತ್ತಿದೆ ಮತ್ತು ಯಾರೂ ಕೂಡ ನಮ್ಮ ಮೇಲೆ ಏಕಸ್ವಾಮಿತ್ವ ಸಾಧಿಸಲು ಸಾಧ್ಯವಿಲ್ಲ. ಪುರುಷರ ವಿಚಾರಕ್ಕೆ ಬಂದರೆ ಆಗ ಪ್ರಮುಖವಾಗಿ ಶೇವಿಂಗ್ ಅಥವಾ ಗಡ್ಡವನ್ನು ವಿನ್ಯಾಸ ಮಾಡಲು ಹಲವಾರು ರೀತಿಯ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಇಂದು ಲಭ್ಯವಿದೆ. ನಿಮ್ಮ ಚರ್ಮ ದಿಂದಾಗಿ ಇಂತಹ ಉತ್ಪನ್ನಗಳನ್ನು ಖರೀದಿಸಲು ಸಾಧ್ಯವಾಗದೆ ಇದ್ದರೆ ಆಗ ನಿಮಗೆ ಹೇಗನಿಸಬಹುದು? ಹೌದು, ನಾವಿಲ್ಲಿ ಸೂಕ್ಷ್ಮ ಚರ್ಮದ ಬಗ್ಗೆ ಹೇಳುತ್ತಿದ್ದೇವೆ. ಇದು ಪುರುಷರಿಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಲಿದೆ. ಆದರೆ ಇದನ್ನು ತಡೆಯುವ ಮತ್ತು ಸಲಹೆ ಪಡೆಯುವ ಮೊದಲು ನಿಮ್ಮ ಚರ್ಮವು ಸೂಕ್ಷ್ಮವೇ ಎಂದು ತಿಳಿಯಬೇಕು.

Most Read: ಗಡ್ಡ ಮೀಸೆ ಇಲ್ಲದೆ ಇರುವ ಪುರುಷರ ಸಂಕಷ್ಟಗಳು

Shave Sensitive Skin

ನಿಮಗೆ ರೇಜರ್ ನಿಂದ ಗಾಯವಾಗಿದೆಯಾ?

ಶೇವಿಂಗ್ ಮಾಡುವಾಗ ಯಾವಾಗಲೂ ಗಾಯವಾಗುತ್ತಿದೆಯಾ?

ನಿಮ್ಮ ಚರ್ಮವು ಸೂಕ್ಷ್ಮವಾಗಿದ್ದರೆ ಆಗ ನೀವು ಚಿಂತೆ ಮಾಡಬೇಡಿ. ಯಾಕೆಂದರೆ ನಾವು ಇಲ್ಲಿ ಸೂಕ್ಷ್ಮ ಚರ್ಮಕ್ಕೆ ಕೆಲವು ಸಲಹೆಗಳನ್ನು ನೀಡಲಿದ್ದೇವೆ.

ಚರ್ಮವನ್ನು ತಯಾರುಗೊಳಿಸಿ

ನೀವು ಶೇವಿಂಗ್ ಗೆ ಮೊದಲು ಚರ್ಮವನ್ನು ಸರಿಯಾಗಿ ತಯಾರುಗೊಳಿಸಿ. ಇದಕ್ಕೆ ಮೂರು ಆಯ್ಕೆಗಳು ಇವೆ.ಸ್ಕ್ರಬ್, ವಾಶ್, ತೇವಾಂಶ ನೀಡುವುದು.ಇದರ ಪರಿಣಾಮವಾಗಿ ಮುಖದ ಕೂದಲು ತುಂಬಾ ನಯವಾಗುವುದು.

ಸರಿಯಾದ ಸಾಧನ

ಶೇವ್ ಜೆಲ್ ಹಾಕಿಕೊಂಡರೆ ಕೂದಲು ಮೆತ್ತಗೆ ಆಗುವುದು. ಇದರಿಂದ ಚರ್ಮಕ್ಕೆ ಆಗುವಂತಹ ಅಪಾಯ ಕೂಡ ತಡೆಯಬಹುದು. ತುಂಬಾ ಆಧುನಿಕ ರೇಜರ್ ಮತ್ತು ಹಲವಾರು ಬ್ಲೇಡ್ ಗಳು ಇರುವುದನ್ನು ಬಳಸಿಕೊಳ್ಳಿ. ಇದರಿಂದ ಶೇವಿಂಗ್ ಚೆನ್ನಾಗಿ ಆಗುವುದು.

ಬ್ಲೇಡ್ ಗಳನ್ನು ವಿಶ್ಲೇಷಿಸಿ

ನೀವು ತಪ್ಪಾಗಿ ಬ್ಲೇಡ್ ಬಳಸಿದರೆ ಅದರಿಂದ ಚರ್ಮಕ್ಕೆ ಹಾನಿ ಆಗುವುದು ಮತ್ತುಕಿರಿಕಿರಿ ಉಂಟಾಗುವುದು. ಇದರಿಂದ ನೀವು ಯಾವಾಗಲೂ ಸರಿಯಾಗಿ ಬ್ಲೇಡ್ ಬಳಸಿಕೊಳ್ಳಿ. ಚರ್ಮಕ್ಕೆ ಇದು ಸರಿಯಾಗಿ ಹೊಂದಿಕೊಳ್ಳುವುದೇ ಎಂದು ವಿಶ್ಲೇಷಿಸಿ. ಶೇವಿಂಗ್ ವೇಳೆ ಹಿತಕರವೆನಿಸದಿದ್ದರೆ ಕೂಡಲೇ ನೀವು ಬ್ಲೇಡ್ ಬದಲಾಯಿಸಿಕೊಳ್ಳಿ.

ಶೇವಿಂಗ್ ವಿಧಾನ

ರೇಜರ್ ಗಿಂತಲೂ ಮುಖ್ಯವಾಗಿ ಶೇವಿಂಗ್ ತಂತ್ರವು ತುಂಬಾ ಮುಖ್ಯವಾಗಿರುವುದು. ರೇಜರ್ ನಿಮಗಾಗಿ ಕೆಲಸ ಮಾಡುತ್ತದೆ ಮತ್ತು ಶೇವ್ ಮಾಡಲು ನೆರವಾಗುವುದು. ಕೂದಲು ಬೆಳೆಯುವ ನಿರ್ದೇಶನದಲ್ಲಿ ಯಾವಾಗಲೂ ಶೇವ್ ಮಾಡಿ ಮತ್ತು ಇದರ ಬಳಿಕ ಸಾಮಾನ್ಯವಾಗಿ ಮಾಡಿ. ನಿಮಗೆ ಬೇಕೆನಿಸಿದರೆ ಆಗ ನೀವು ಕೂದಲು ಬೆಳೆಯುವ ವಿರುದ್ಧ ದಿಕ್ಕಿನಲ್ಲೂ ಶೇವ್ ಮಾಡಬಹುದು.

Most Read: ಪುರುಷರ ಮುಖದ ಕಾಂತಿಗೆ ನೈಸರ್ಗಿಕ ಫೇಸ್‪‌ಪ್ಯಾಕ್‌ಗಳು

ಕೊನೆಗೆ ಉತ್ತಮವಾಗಿರುವುದು

ಮುಖದಲ್ಲಿ ತುಂಬಾ ಸೂಕ್ಷ್ಮ ಭಾಗವಾಗಿರುವಂತಹ ತುಟಿಗಳ ಸುತ್ತಲಿನ ಕೂದಲು ತೆಗೆಯಲು ನೀವು ಕೊನೆಗೆ ಪ್ರಯತ್ನಿಸಿ. ಈ ಭಾಗದಲ್ಲಿ ತುಂಬಾ ಎಚ್ಚರಿಕೆಯಿಂದ ಶೇವ್ ಮಾಡಿಕೊಳ್ಳಬೇಕು. ಈ ವೇಳೆ ಶೇವ್ ಜೆಲ್ ಸಂಪೂರ್ಣವಾಗಿ ಒದ್ದೆ ಮಾಡಿರುತ್ತದೆ ಮತ್ತು ಇದು ಗಾಯವಾಗುವುದು ಮತ್ತು ಉರಿಯ ಪರಿಸ್ಥಿತಿ ಕಡಿಮೆ ಮಾಡುವುದು. ಕ್ಲಿಷ್ಟವಾಗಿರುವ ಭಾಗವನ್ನು ಒಂದು ಬ್ಲೇಡ್ ನ ರೇಜರ್ ನಿಂದ ಶೇವ್ ಮಾಡಿ. ಇದರಲ್ಲಿ ಮುಖ್ಯವಾಗಿ ಮೂಗಿನ ಕೆಳಗಿನ ಭಾಗವು ಸೇರಿಕೊಂಡಿದೆ.

ಸ್ವಚ್ಛತೆಯು ಆರೋಗ್ಯಕ್ಕೆ ಒಳ್ಳೆಯದು

ಸೂಕ್ಷ್ಮ ಚರ್ಮವು ಸೋಂಕು ಮತ್ತು ಅಲರ್ಜಿಗೆ ಒಳಗಾಗುವುದನ್ನು ತಪ್ಪಿಸಲು ರೇಜರ್ ನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ, ಯಾವಾಗಲೂ ಬ್ಲೇಡ್ ನ್ನು ತೊಳೆಯುತ್ತಲಿರಿ. ಈ ಅಭ್ಯಾಸಗಳು ಮತ್ತು ತಂತ್ರಗಳು ಬ್ಲೇಡ್ ನ ಒಳಗಡೆ ಕೊಳೆ ನಿಲ್ಲುವುದನ್ನು ತಡೆಯುವುದು ಮತ್ತು ಹಿತಕರವಾಗಿ ಶೇವ್ ಮಾಡಲು ನೆರವು ನೀಡುವುದು.

Most Read:ಪುರುಷರ ಮುಖದ ಅಂದ ಚಂದ ಹೆಚ್ಚಿಸಲು, ಒಂದಿಷ್ಟು ಬ್ಯೂಟಿ ಟಿಪ್ಸ್

ಜಾಗೃತಿ ವಹಿಸಿ

ಮುಖವನ್ನು ಯಾವಾಗಲೂ ನೀವು ರಕ್ಷಿಸಿಕೊಳ್ಳಿ. ಶೇವಿಂಗ್ ಮಾಡಿದ ಬಳಿಕ ಸಂಪೂರ್ಣವಾಗಿ ಮುಖ ತೊಳೆಯಿರಿ. ತಣ್ಣೀರು ಬಳಸಿಕೊಂಡು ಕುತ್ತಿಗೆ ಮತ್ತು ಮುಖ ತೊಳೆದು ಒರೆಸಿಕೊಳ್ಳಿ. ಚರ್ಮಕ್ಕೆ ಶಮನ ನೀಡಲು ಆಫ್ಟರ್ ಶೇವ್ ಬಳಸಲು ಮರೆಯಬೇಡಿ. ಆಫ್ಟರ್ ಶೇವ್ ಲೋಷನ್ ಚರ್ಮಕ್ಕೆ ಮೊಶ್ಚಿರೈಸ್ ನೀಡುವುದು.

English summary

Easy Steps to Shave Sensitive Skin

We are in the robotic age where everyone is dependent on technology, artificial intelligence, and machines. Whether it comes to styling or grooming we are all surrounded by various products and technology. Moreover, it's 2019, where we have thousands of options around and no monopoly can rule us. Talking about men's essential grooming- 'shaving' or 'beard style', it is optimized by various products in the market.
X
Desktop Bottom Promotion