For Quick Alerts
ALLOW NOTIFICATIONS  
For Daily Alerts

ಮಳೆಗಾಲದಲ್ಲಿ ಟ್ರೆಂಡ್‌ನಲ್ಲಿರುವ 5 ಲಿಪ್‌ಸ್ಟಿಕ್‌ ಕಲರ್ಸ್

|

ತುಂಬಾ ದಿನದಿಂದ ನಿಮ್ಮಲ್ಲಿರುವ ಲಿಪ್‌ಸ್ಟಿಕ್‌ ಕಲೆಕ್ಷನ್‌ನಲ್ಲಿ ಯಾವುದೇ ಹೊಸ ಬಣ್ಣದ ಸೇರ್ಪಡೆಯಾಗಿಲ್ಲವೇ? ಹಾಗಾದರೆ ನಿಮ್ಮ ಮೇಕಪ್‌ ಕಿಟ್‌ಗಳಿಗೆ ಹೊಸ ಬಣ್ಣದ ಲಿಪ್‌ಸ್ಟಿಕ್‌ ಸೇರಿಸುವ ಸಮಯ ಬಂದಿದೆ. ಹೌದು ಇದು ಮಳೆಗಾಲ, ಈ ಮಳೆಗಾಲದಲ್ಲಿ ಮೇಕಪ್ ಮಾಡುವಾಗ ಸ್ವಲ್ಪ ಕೇರ್‌ಫುಲ್‌ ಆಗಿರಬೇಕು, ಇಲ್ಲಾಂದರೆ ಮುಖ ಬ್ರೈಟ್ ಕಾಣುವುದಿಲ್ಲ.

ಮುಖಕ್ಕೆ ಮಿನಿಮಮ್ ಮೇಕಪ್ ಮಾಡುವುದಾದರೂ ಕಾಜಲ್‌, ಲಿಪ್‌ಸ್ಟಿಕ್ ಬಳಸೇ ಬಳಸುತ್ತೇವೆ. ಇದೀಗ ನೀವು ಯಾವ ಬಣ್ಣದ ಲಿಪ್‌ಸ್ಟಿಕ್ ಮಳೆಗಾಲದಲ್ಲಿ ಹೆಚ್ಚು ಟ್ರೆಂಡ್‌ನಲ್ಲಿದೆ ಎಂದು ಯೋಚಿಸುತ್ತಿದ್ದಾರೆ ಇಲ್ಲಿದೆ ನೋಡಿ ಟ್ರೆಂಡಿ ಕಲರ್‌ಗಳ ಪಟ್ಟಿ.

ಮಳೆಗಾಲದಲ್ಲಿ ಮೋಡ ಮುಸುಕಿದ ವಾತಾವರಣದ ನಡುವೆಯೂ ಈ ಬಣ್ಣಗಳು ನಿಮ್ಮ ಸೌಂದರ್ಯವನ್ನು ಹೈಲೈಟ್ ಮಾಡುತ್ತವೆ, ಬನ್ನಿ ಆ ಬಣ್ಣಗಳಾವುವು ಎಂದು ನೋಡೋಣ:

 ಮ್ಯೂವೆ

ಮ್ಯೂವೆ

ನೀವು ಹಚ್ಚಿರುವ ಲಿಪ್‌ಸ್ಟಿಕ್ ನೋಡುಗರ ಗಮನ ಸೆಳೆಯುವಂಥ ಬಣ್ಣ ಫ್ಲರ್ಟಿ ಮ್ಯೂವೆದ್ದಾಗಿದೆ. ಇನ್ನು ಈ ಬಣ್ಣದ ಲಿಪ್‌ಸ್ಟಿಕ್‌ ಎಲ್ಲಾ ಬಣ್ಣದ ತ್ವಚೆಯವರಿಗೆ ಕೂಡ ಆಕರ್ಷಕವಾಗಿ ಕಾಣುತ್ತದೆ. ಮಳೆಗಾಲದಲ್ಲಿ ನಿಮ್ಮ ಡ್ರೆಸ್ಸಿಂಗ್‌ ಕೋಡ್‌ಗೂ ಈ ಬಣ್ಣ ತುಂಬಾ ಆಕರ್ಷಕವಾಗಿ ಕಾಣುತ್ತದೆ.

 ಆರೇಂಜ್

ಆರೇಂಜ್

ಫೀಯರ್ಸ್ ಆರೇಂಜ್ ಕೂಡ ಕೆಂಪು ಬಣ್ಣದ ಲಿಪ್‌ಸ್ಟಿಕ್‌ನಂತೆಯೇ ಆಕರ್ಷಕ ಬಣ್ಣದ ಶೇಡ್ ಆಗಿದೆ. ಯಾವುದೇ ಮೇಕಪ್ ಹಚ್ಚದಿದ್ದರೂ ಇದು ಒಂದು ಲಿಪ್‌ಸ್ಟಿಕ್ ಹಚ್ಚಿದರೆ ಸಾಕು ಮುಖ ಆಕರ್ಷಕವಾಗಿ ಕಾಣುತ್ತದೆ. ಮಿನಿಮಮ್ ಮೇಕಪ್ ಇಷ್ಟಪಡುವವರು ಈ ಬಣ್ಣದ ಲಿಪ್‌ಸ್ಟಿಕ್ ಬಳಸುವುದು ಸೂಕ್ತ.

ರೆಡ್

ರೆಡ್

ಲಿಪ್‌ಸ್ಟಿಕ್ ಬಳಸುವವರ ಬಳಿ ಕೆಂಪು ಬಣ್ಣದ ಲಿಪ್‌ಸ್ಟಿಕ್‌ ಇದ್ದೇ ಇರುತ್ತದೆ. ಅಲ್ಲದೆ ಈ ಬಣ್ಣ ಎಲ್ಲರಿಗೂ ಆಕರ್ಷಕವಾಗಿ ಕಾಣುವುದರಿಂದ ಈ ಬಣ್ಣವನ್ನೇ ಹೆಚ್ಚಾಗಿ ಬಳಸುತ್ತಾರೆ. ಮಳೆಗಾಲದಲ್ಲಿ ಕೆಂಪು ಬಣ್ಣದ ಲಿಪ್‌ಸ್ಟಿಕ್ ಬಳಸುವಾಗ ಮ್ಯಾಟ್‌ ಶೇಡ್‌ಗಿಂತ ಗ್ಲೋಸಿ ರೆಡ್‌ ಬಣ್ಣದ ಲಿಪ್‌ಸ್ಟಿಕ್ ಆಯ್ಕೆ ಒಳ್ಳೆಯದು.

ಚೆರ್ರಿ

ಚೆರ್ರಿ

ಸಿಂಪಲ್ ಅಂಡ್ ಬ್ಯೂಟಿಫುಲ್ ಆಗಿ ಕಾಣ ಬಯಸುವವರು ಚೆರ್ರಿ ಬಣ್ಣದ ಲಿಪ್‌ಸ್ಟಿಕ್ ಬಳಸಬಹುದು. ಈ ರೀತಿಯ ಲಿಪ್‌ಸ್ಟಿಕ್‌ ದಿನ ನಿತ್ಯ ಬಳಸಲು ಚೆನ್ನಾಗಿರುತ್ತದೆ. ಆಫೀಸ್‌ ಡ್ರೆಸ್‌ ಕೋಡ್‌ಗೆ ಈ ಲಿಪ್‌ಸ್ಟಿಕ್ ಬಣ್ಣ ಸೂಕ್ತವಾಗಿದೆ. ಇನ್ನು ತುಂಬಾ ಗಾಢವಾದ ಬಣ್ಣ ಇಷ್ಟಪಡದವರು ಈ ಬಣ್ಣದ ಲಿಪ್‌ಸ್ಟಿಕ್ ಬಳಸಬಹುದು.

 ಫ್ಯೂಶಿಯಾ

ಫ್ಯೂಶಿಯಾ

ಕೆಂಪು ಬಣ್ಣದ ಲಿಪ್‌ಸ್ಟಿಕ್‌ನಂತೆಯೇ ಸಕತ್ ಹಾಟ್‌ ಕಲರ್ ಲಿಪ್‌ಸ್ಟಿಕ್ ಬಣ್ಣ ಇದಾಗಿದೆ. ಇನ್ನು ಮಳೆಗಾಲಕ್ಕೆ ಸೂಕ್ತವಾದ ಬಣ್ಣದ ಲಿಪ್‌ಸ್ಟಿಕ್ ಇದಾಗಿದ್ದು ಇದು ನಿಮಗೆ ಸಕತ್ ಬೋಲ್ಡ್ ಲುಕ್ ನೀಡುತ್ತದೆ. ಫಂಕ್ಷನ್‌, ಪಾರ್ಟಿಗೆ ಹೋಗುವಾಗ ಹಾಕಲು ಸೂಕ್ತವಾದ ಲಿಪ್‌ಸ್ಟಿಕ್ ಬಣ್ಣ ಇದಾಗಿದೆ. ಅಲ್ಲದೆ ಇದು ಎಲ್ಲಾ ಬಣ್ಣದ ತ್ವಚೆಯವರಿಗೂ ಆಕರ್ಷಕವಾಗಿಯೇ ಕಾಣುತ್ತದೆ.

English summary

Gorgeous Lipstick Shades To Turn The Cloudy Monsoon Days Cheerful

To make matters easy for you, we have narrowed down top 5 lipsticks shades that will instantly turn those cloudy monsoon days cheerful.
Story first published: Tuesday, June 30, 2020, 9:30 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X