Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಕೂದಲಿನ ವಿನ್ಯಾಸಕ್ಕೆ ಚಿನ್ನದ ಆಭರಣ

ಆದರೆ 'ಓಲ್ಡ್ ಈಸ್ ಗೋಲ್ಡ್ 'ಅನ್ನುವಂತೆ ಹಳೆಯ ರೀತಿಯ ಕೂದಲಿನ ವಿನ್ಯಾಸಗಳು ಪುನಃ ಫ್ಯಾಷನ್ ಆಗುತ್ತಿವೆ. ಅದರಲ್ಲೂ ಮದುಮಗಳಿಗೆ ಚಿನ್ನದಿಂದ ತಯಾರಿಸಿದ ಕ್ಲಿಪ್ ಮತ್ತು ಕೆಲವು ಆಭರಣಗಳನ್ನು ಬಳಸಿ ಕೂದಲಿನ ವಿನ್ಯಾಸ ಮಾಡಲಾಗುವುದು. ಅದೇ ರೀತಿ ಕೂದಲಿನ ವಿನ್ಯಾಸಕ್ಕೆ ಬಳಸುವ ಇನ್ನಿತರ ವಸ್ತುಗಳಾವುವು ಎಂದು ಇಲ್ಲಿ ತಿಳಿದುಕೊಳ್ಳಿ.
1. ಅಲಂಕಾರಿಕ ಬಾಚಣಿಗೆ: ಇದು ಕೂದಲನ್ನು ಬಾಚಲು ಇರುವ ಬಾಚಣಿಗೆ ಅಲ್ಲ, ಕೂದಲನ್ನು ತುರುಬು ಕಟ್ಟಿ ಅಲಂಕಾರವಾಗಿ ವಜ್ರ ಅಥವಾ ಚಿನ್ನದಿಂದ ತಯಾರಿಸಿದ ಬಾಚಣಿಗೆಯನ್ನು ಕೂದಲಿಗೆ ಸಿಕ್ಕಿಸಲಾಗುವುದು, ಈ ರೀತಿಯ ಕೇಶ ವಿನ್ಯಾಸ ಆಡಂಬರದ ಮದುವೆಗಳಿಗೆ ಚೆನ್ನಾಗಿ ಒಪ್ಪುತ್ತೆ.
2. ಚಿನ್ನದ ಬಲೆ: ಚಿನ್ನವನ್ನು ಚಿಕ್ಕ ಬಲೆಯ ರೀತಿಯಲ್ಲಿ ವಿನ್ಯಾಸಗೊಳಿಸಿರುತ್ತಾರೆ, ಕೂದಲನ್ನು ಬಾಚಿ ತುರುಬು ಕಟ್ಟಿ ಅದರ ಸುತ್ತ ಈ ಬಲೆಯನ್ನು ಹಾಕಲಾಗುವುದು, ಹೆಂಗಸರು ಕೊಂಡೆಗೆ ಕಪ್ಪು ಬಣ್ಣದ ನೆಡ್ ಹಾಕಿದ್ದನ್ನು ನೋಡಿರಬಹುದು, ಅದೇ ರೀತಿಯ ಚಿನ್ನದ ಬಲೆ. ಇದನ್ನು ಬಳಸಿದರೆ ಮದುಮಗಳ ಚೆಲುವು ಮತ್ತಷ್ಟು ಹೆಚ್ಚುವುದು.
3. ಟಯೆರಾ : ಮದುಮಗಳ ಕೇಶ ವಿನ್ಯಾಸದಲ್ಲಿ ಈ ಆಭರಣವನ್ನು ಹೆಚ್ಚಾಗಿ ಬಳಸಲಾಗುತ್ತೆ. ಇದನ್ನು ಮದುವೆ ಸಮಯದಲ್ಲಿ ಹೊರೆತು ಪಡಿಸಿ ಬೇರೆ ಸಮಯದಲ್ಲಿ ಹಾಕಲು ಸಾಧ್ಯವಿಲ್ಲ.
4. ಚಿನ್ನದ ಹೇರ್ ಪಿನ್ : ಹೂವಿನ, ಚಿಟ್ಟೆಯ ವಿನ್ಯಾಸದ ಈ ಪಿನ್ ಗಳನ್ನು ಮದುವೆ ಇನ್ನಿತರ ಸಮಾರಂಭಗಳಲ್ಲಿ ಮಹಿಳೆಯರು ತೊಟ್ಟುಕೊಳ್ಳುತ್ತಾರೆ. ಈ ರೀತಿಯ ಚಿನ್ನದ ಆಭರಣಗಳು ಹೆಣ್ಣು ಮಕ್ಕಳ ಚೆಲುವನ್ನು ಮತ್ತಷ್ಟು ಹೆಚ್ಚಿಸುತ್ತದೆ.



Click it and Unblock the Notifications
