For Quick Alerts
ALLOW NOTIFICATIONS  
For Daily Alerts

ಜೀರ್ಣಕ್ರಿಯೆ ತೊಂದರೆ: ಲಕ್ಷಣಗಳು, ಕಾರಣಗಳು, ಮನೆಮದ್ದು

|

ಕೆಲವರಿಗೆ ಆಹಾರದಲ್ಲಿ ಸ್ವಲ್ಪ ವ್ಯತ್ಯಾಸ ಉಂಟಾದರೆ ಸಾಕು ಅಜೀರ್ಣ ಸಮಸ್ಯೆ ಕಾಡುತ್ತದೆ. ಹೊಟ್ಟೆ ಉಬ್ಬುವುದು, ಗ್ಯಾಸ್ಟ್ರಿಕ್‌ ಮುಂತಾದ ತೊಂದರೆಗಳು ಉಂಟಾಗುವುದು. ಹೀಗೆಲ್ಲಾ ಆಗುವುದಕ್ಕೆ ಪ್ರಮುಖ ಕಾರಣ ಜೀರ್ಣಕ್ರಿಯೆಯಲ್ಲಿ ತೊಂದರೆ.

Weak Digestion: Symptoms, Causes And Home Remedies

ನಾವು ಆರೋಗ್ಯವಾಗಿರಬೇಕೆಂದರೆ ಜೀರ್ಣಕ್ರಿಯೆ ವ್ಯವಸ್ಥೆ ಸರಿಯಾಗಿ ಕೆಲಸ ಮಾಡಬೇಕು. ಜೀರ್ಣಕ್ರಿಯೆ ಸರಿಯಾಗಿ ನಡೆದರೆ ದೇಹಕ್ಕೆ ಅಗ್ಯತವಾದ ಪೋಷಕಾಂಶಗಳನ್ನು ಹೀರಿಕೊಳ್ಳುವುದು ಸುಲಭವಾಗುವುದು ಹಗೂ ಬೇಡದ ರಾಸಾಯನಿಕಗಳನ್ನು ಹೊರ ಹಾಕಲು ಸಹಕಾರಿ.

ಜೀರ್ಣಕ್ರಿಯೆ ಸರಿಯಾಗಿ ನಡೆಯದಿದ್ದರೆ ಗ್ಯಾಸ್ಟ್ರಿಕ್, ಅಲ್ಸರ್, ಗಾಲ್‌ಬ್ಲೇಡರ್ ಮುಂತಾದ ಸಮಸ್ಯೆ ಉಂಟಾಗುವುದು. ಅಜೀರ್ಣ ಉಂಟಾದಾಗ ಎದೆಯುರಿ ಕೂಡ ಕಂಡು ಬರುತ್ತದೆ. ಈ ಲೇಖನದಲ್ಲಿ ನಿಮ್ಮ ಜೀರ್ಣಕ್ರಿಯೆ ಸಮಸ್ಯೆ ಹೋಗಲಾಡಿಸಲು ಏನು ಮಾಡಬೇಕು, ಮನೆಮದ್ದುಗಳೇನು ಎಂದು ಹೇಳಿದ್ದೇವೆ ನೋಡಿ:

ಜೀರ್ಣಕ್ರಿಯೆ ಸಮಸ್ಯೆ ಎಂದರೇನು?

ಜೀರ್ಣಕ್ರಿಯೆ ಸಮಸ್ಯೆ ಎಂದರೇನು?

ಎಷ್ಟೇ ಆರೋಗ್ಯವಂತರಾಗಿದ್ದರೂ ಕೆಲವೊಮ್ಮೆ ಜೀರ್ಣಕ್ರಿಯೆಯಲ್ಲಿ ತೊಂದರೆ ಉಂಟಾಗುವುದುಂಟು. ಈ ರೀತಿಯಾದಾಹ ಹೊಟ್ಟೆ ಉಬ್ಬುವುದು, ತಲೆಸುತ್ತು, ವಾಂತಿ, ಬೇಧಿ ಮುಂತಾದ ಸಮಸ್ಯೆಗಳು ಕಂಡು ಬರಬಹುದು. ಈ ರೀತಿ ಅಪರೂಪಕ್ಕೆ ಉಂಟಾಗುತ್ತದೆ.

ಆದರೆ ಕೆಲವರಿಗೆ ಯಾವಾಗಲೂ ಅಜೀರ್ಣ ಸಮಸ್ಯೆ ಕಾಡುತ್ತಿರುತ್ತದೆ. ಆಹಾರ ತಿಂದ ಬಳಿಕ ಎದೆಯುರಿ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುವುದು. ಇನ್ನು ಅಜೀರ್ಣ ಸಮಸ್ಯೆಯಿದ್ದರೆ ಮೈಗ್ರೇನ್, ಒತ್ತಡ, ಖಿನ್ನತೆ, ಸಂಧಿ ನೋವು, ತುರಿಕೆ, ಮೊಡವೆ, ಅಲರ್ಜಿ ಈ ರೀತಿಯ ಸಮಸ್ಯೆಗಳು ಉಂಟಾಗುವುದು.

ಈ ರೀತಿಯ ಸಮಸ್ಯೆ ಕೆಲವೊಂದು ಆಹಾರಗಳನ್ನು ತಿಂದಾಗ ಉಂಟಾಗುತ್ತದೆ. ಯಾವ ಆಹಾರಗಳನ್ನು ತಿಂದಾಗ ಈ ರೀತಿ ಉಂಟಾಗುತ್ತದೋ ಅಂಥ ಆಹಾರಗಳನ್ನು ಸೇವಿಸಲು ಹೋಗಬಾರದು.

ಜೀರ್ಣಕ್ರಿಯೆ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ?

ಜೀರ್ಣಕ್ರಿಯೆ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ?

ಜೀರ್ಣಕ್ರಿಯೆ ಏಕೆ ದುರ್ಬಲವಾಗುತ್ತದೆ ಎಂದು ತಿಳಿಯುವ ಮೊದಲು ಜೀರ್ಣಕ್ರಿಯೆ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎಂದು ನೋಡೋಣ:

  • ಜೀರ್ಣಕ್ರಿಯೆ ವ್ಯವಸ್ಥೆ ಮೊದಲು ಪ್ರಾರಂಭವಾಗುವುದು ಬಾಯಿಯ ಮೂಲಕ. ಹೌದು ಆಹಾರವನ್ನು ತಿನ್ನುವಾಗ ಅದನ್ನು ಚಿಕ್ಕ-ಚಿಕ್ಕ ತುಂಡುಗಳನ್ನಾಗಿ ಮಾಡುವ ಕೆಲಸ ಬಾಯಿ ಮಾಡುತ್ತದೆ.
  • ಜಗಿದ ಆಹಾರ ಅನ್ನನಾಳದ ಮುಖಾಂತರ ಹೊಟ್ಟೆಯನ್ನು ಸೇರುತ್ತದೆ.
  • ಹೊಟ್ಟೆಯಲ್ಲಿ ಹೊಟ್ಟೆ ಆಮ್ಲ ಆಹಾರವನ್ನು ವಿಂಗಡಿಸಿ ಅದನ್ನು ಚಿಕ್ಕ ಕರುಳಿಗೆ ತಳ್ಳುತ್ತದೆ.
  • ಚಿಕ್ಕ ಕರುಳಿನಲ್ಲಿ ಅದು ಮತ್ತಷ್ಟು ಚಿಕ್ಕ ಕಣಗಳಾಗಿ ವಿಂಗಡನೆಯಾಗಿ ಪೋಷಕಾಂಶಗಳನ್ನು ಹೀರಿಕೊಳ್ಳಲಾಗುತ್ತದೆ.
  • ಉಳಿದ ಆಹಾರಗಳು ದೊಡ್ಡ ಕರುಳಿಗೆ ಹೋಗುತ್ತದೆ, ಅಲ್ಲಿ ನೀರಿನಂಶ ಹೀರಿಕೊಳ್ಳಲಾಗುವುದು, ನಂತರ ಏನು ಉಳಿಯುತ್ತದೆ ಅದು ವೇಸ್ಟ್ ಅಥವಾ ಕಶ್ಮಲ
  • ಇದು ಮೂತ್ರ ಹಾಗೂ ಮಲದ ರೂಪದಲ್ಲಿ ಹೊರ ಹೋಗುತ್ತದೆ.
  • ಜೀರ್ಣಕ್ರಿಯೆಯಲ್ಲಿ ತೊಂದರೆ ಇರುವವರೆಗೆ ಈ ಪ್ರಕ್ರಿಯೆ ಯಾವುದಾದರೂ ಒಂದರಲ್ಲಿ ತೊಂದರೆ ಉಂಟಾಗಿ ಇಡೀ ಜೀರ್ಣಾಂಗ ವ್ಯವಸ್ಥೆ ದುರ್ಬಲವಾಗಿರುತ್ತದೆ.

     ಜೀರ್ಣಾಂಗ ವ್ಯವಸ್ಥೆ ದುರ್ಬಲವಾಗಲು ಕಾರಣವೇನು?

    ಜೀರ್ಣಾಂಗ ವ್ಯವಸ್ಥೆ ದುರ್ಬಲವಾಗಲು ಕಾರಣವೇನು?

    ಅನಾರೋಗ್ಯಕರ ಆಹಾರ ಸೇವನೆ: ಸಂಸ್ಕರಿಸಿದ ಆಹಾತ, ಜಂಕ್ ಫುಡ್, ಅತ್ಯಧಿಕ ಕಾರ್ಬೋಹೈಡ್ರೇಟ್ಸ್, ಸಕ್ಕರೆ, ಉಪ್ಪು, ಕೊಬ್ಬಿನಂಶ ಸೇವನೆ. ಪೋಕಾಂಶ ಕಮ್ಮಿ ಇರುವ ಆಹಾರಗಳ ಸೇವನೆ ಹೊಟ್ಟೆ ಉಬ್ಬಲು ಹಾಗೂ ಎದೆಯುರಿ ಸಮಸ್ಯೆ ಉಂಟಾಗಲು ಕಾರಣವಾಗಿದೆ.

    ದೈಹಿಕ ವ್ಯಾಯಾಮ ಇಲ್ಲದಿರುವುದು: ಜೀರ್ಣಾಂಗ ವ್ಯವಸ್ಥೆ ದುರ್ಬಲವಾಗಲು ಮತ್ತೊಂದು ಪ್ರಮುಖ ಕಾರಣವೆಂದರೆ ದೈಹಿಕ ವ್ಯಾಯಾಮ ಮಾಡದೇ ಇರುವುದು. ದಿನದಲ್ಲಿ ಅರ್ಧ ಗಂಟೆ ದೈಹಿಕ ವ್ಯಾಯಾಮಕ್ಕೆ ಮೀಸಲಿಟ್ಟರೆ ಈ ರೀತಿಯ ಸಮಸ್ಯೆ ಕಾಡುವುದಿಲ್ಲ.

    ಹಣ್ಣು, ತರಕಾರಿಗಳನ್ನು ಕಡಿಮೆ ತಿನ್ನುವುದು: ಹಣ್ಣು, ತರಕಾರಿಗಳನ್ನು ಕಡಿಮೆ ತಿನ್ನುವುದರಿಂದ ನಾರಿನಂಶದ ಕೊರತೆ ಉಂಟಾಗಿ ಜೀರ್ಣಕ್ರಿಯೆಗೆ ತೊಂದರೆ ಉಂಟಾಗುವುದು.

    ನಿದ್ದೆ: ಸರಿಯಾದ ನಿದ್ದೆ ಇಲ್ಲದೆ ಹೋದರೆ ಕೂಡ ಜೀರ್ಣಕ್ರಿಯೆ ದುರ್ಬಲವಾಗುವುದು.

    ಸಾಕಷ್ಟು ನೀರು ಕುಡಿಯದಿದ್ದರೆ: ದಿನದಲ್ಲಿ 8 ಲೋಟ ನೀರು ಕುಡಿಯುವುದು ಆರೋಗ್ಯಕ್ಕೆ ತುಂಬಾನೇ ಅವಶ್ಯಕ. ನೀರು ಕಡಿಮೆಯಾದರೆ ಜೀರ್ಣಕ್ರಿಯೆ ಸರಿಯಾಗಿ ನಡೆಯುವುದಿಲ್ಲ.

    ಜೀರ್ಣಕ್ರಿಯೆ ವ್ಯವಸ್ಥೆ ದುರ್ಬಲವಾಗಿದ್ದರೆ ಕಂಡು ಬರುವ ಲಕ್ಷಣಗಳು

    ಜೀರ್ಣಕ್ರಿಯೆ ವ್ಯವಸ್ಥೆ ದುರ್ಬಲವಾಗಿದ್ದರೆ ಕಂಡು ಬರುವ ಲಕ್ಷಣಗಳು

    • ಹೊಟ್ಟೆ ಹಾಳಾಗುವುದು, ಅದರಲ್ಲೂ ಹಗಲು ಹೊತ್ತಿನಲ್ಲಿ ಹೊಟ್ಟೆ ಸಮಸ್ಯೆ ಕಾಡುವುದು
    • ತೂಕದಲ್ಲಿ ಬದಲಾವಣೆ
    • ನಿದ್ದೆಗೆ ತೊಂದರೆ ಉಂಟಾಗುವುದು
    • ಆಗಾಗ ತಲೆಸುತ್ತು
    • ತ್ವಚೆಯಲ್ಲಿ ತುರಿಕೆ
    • ಎದೆಯುರಿ
    • ಗ್ಯಾಸ್
    • ಹೊಟ್ಟೆ ಉಬ್ಬುವುದು
    • ಮಲಬದ್ಧತೆ
    • ಬೇಧಿ
    •  ಜೀರ್ಣಕ್ರಿಯೆ ಹೇಗೆ ಉತ್ತಮ ಪಡಿಸಬಹುದು?

      ಜೀರ್ಣಕ್ರಿಯೆ ಹೇಗೆ ಉತ್ತಮ ಪಡಿಸಬಹುದು?

      • ನಿಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಿ. ಅಂದರೆ ತಿನ್ನುವ ಆಹಾರದಲ್ಲಿ ಹಣ್ಣು, ತರಕಾರಿಗಳು ಹೆಚ್ಚಾಗಿರಲಿ.
      • ಸಾಕಷ್ಟು ನೀರು ಕುಡಿಯಿರಿ.
      • ನಾರಿನಂಶವಿರುವ ಆಹಾರಗಳನ್ನು ತಿನ್ನಿ. ಸೊಪ್ಪು, ತರಕಾರಿಗಳಲ್ಲಿ ನಾರಿನಂಶ ಅಧಿಕವಿರುತ್ತದೆ
      • ಪ್ರತಿದಿನ ದೈಹಿಕ ವ್ಯಾಯಾಮ ಮಾಡಿ.
      • ಸಂಸ್ಕರಿಸಿದ ಆಹಾರದಿಂದ ದೂರವಿರಿ.
      • ಇತರ ಸಲಹೆಗಳು:

        • ನಿದ್ದೆ ಸರಿಯಾಗಿ ಮಾಡಿ
        • ನೆಲದಲ್ಲಿ ಕೂತು ಊಟ ಮಾಡಿ
        • ಆರೋಗ್ಯಕರ ಸ್ನ್ಯಾಕ್ಸ್ ತಿನ್ನಿ
        • ನಿಮ್ಮ ಆಹಾರದಲ್ಲಿ ಫಿಶ್ ಆಯಿಲ್ ಸೇರಿಸಿ
        • ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಿ
        • ಮದ್ಯಪಾನ ಮಿತವಾಗಿರಲಿ
        • ತಂಬಾಕು ಸೇವನೆ ಮಾಡಬೇಡಿ
        • ಜೀರ್ಣಕ್ರಿಯೆ ವೃದ್ಧಿಗೆ ಮನೆಮದ್ದುಗಳು

          ಜೀರ್ಣಕ್ರಿಯೆ ವೃದ್ಧಿಗೆ ಮನೆಮದ್ದುಗಳು

          1. ಪುದೀನಾ ಟೀ:

          ದಿನದಲ್ಲಿ ಒಂದು ಲೋಟ ಪುದೀನಾ ಟೀ ಕುಡಿಯಿರಿ. ಪುದೀನಾ ಅತೀ ಹೆಚ್ಚು ಸೇವಿಸುವುದು ಕೂಡ ಒಳ್ಳೆಯದಲ್ಲ, ಹೆಚ್ಚು ಬಳಸಿದರೆ ತಲೆಸುತ್ತು, ಅಜೀರ್ಣ ಉಂಟಾಗುವುದು. ದಿನದಲ್ಲಿ 1-2 ಲೋಟ ಪುದೀನಾ ಟೀ ಕುಡಿಯಿರಿ ಸಾಕು.

          1-2 ಪುದೀನಾ ಎಲೆಯನ್ನು ಬ್ಲ್ಯಾಕ್‌ ಟೀ ಅಥವಾ ಬಿಸಿ ನೀರಿಗೆ ಹಾಕಿ ಕುಡಿಯಬಹುದು.

           ಚಾಮೋಯಿಲ್ ಟೀ

          ಚಾಮೋಯಿಲ್ ಟೀ

          ಜೀರ್ಣಕ್ರಿಯೆ ಚೆನ್ನಾಗಿ ನಡೆಯಲು ಚಾಮೋಯಿಲ್ ಟೀ ಕುಡಿಯುವುದು ಕೂಡ ತುಂಬಾ ಒಳ್ಳೆಯದು.

          • ಬಿಸಿ ನೀರಿಗೆ ಚಾಮೋಯಿಲ್ ಟೀ ಬ್ಯಾಗ್ ಡಿಪ್ ಮಾಡಿ, ಅದಕ್ಕೆ ಜೇನು ಸೇರಿಸಿ ಕುಡಿಯಿರಿ.
          • ಇದನ್ನು ಕುಡಿಯುವುದಾದರೆ ದಿನದಲ್ಲಿ 2 ಲೋಟಕ್ಕಿಂತ ಹೆಚ್ಚು ಕುಡಿಯಬೇಡಿ.

            ಶುಂಠಿ

            ಶುಂಠಿ

            ಅಜೀರ್ಣ ಸಮಸ್ಯೆ ಹೋಗಲಾಡಿಸಲು ಶುಂಠಿ ಕೂಡ ಅತ್ಯುತ್ತಮವಾದ ಮನೆಮದ್ದು. ಊಟವಾದ ಬಳಿಕ ಒಂದು ಲೋಟ ಶುಂಠಿ ಟೀ ಕುಡಿಯುವುದು ಅಥವಾ ಒಂದು ಚಿಕ್ಕ ತುಂಡು ಶುಂಠಿ ಬಾಯಿಗೆ ಹಾಕಿ ಜಗಿಯುವುದು ಒಳ್ಳೆಯದು.

            ಇನ್ನು ಊಟವಾದ ಬಳಿಕ ನೀರಿಗೆ ನೀರು ಕುಡಿಯುವುದು ಕೂಡ ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು.

            ನಿಂಬೆರಸ

            ನಿಂಬೆರಸ

            ನಿಂಬೆರಸ ಅತ್ಯಂತ ಪರಿಣಾಮಕಾರಿಯಾದ ಮನೆಮದ್ದಾಗಿದೆ. ಇದು ಮಲಬದ್ಧತೆ ಸಮಸ್ಯೆ ಹೋಗಲಾಡಿಸಲು ಕೂಡ ಸಹಕಾರಿ. ಎರಡು ಚಿಕ್ಕ ನಿಂಬೆ ಹಣ್ಣಿನ ತುಂಡನ್ನು ಕಾಲು ಲೀಟರ್ ನೀರಿಗೆ ಹಾಕಿ ಕುದಿಸಿ ಸ್ವಲ್ಪ ತಣ್ಣಗಾಗಲು ಬಿಡಿ. ನಂತರ ನಿಂಬೆ ಹೋಳು ತೆಗೆದು ಆ ನೀರನ್ನು ಕುಡಿಯಿರಿ. ಇದನ್ನು ಊಟವಾದ ಬಳಿಕ ಕುಡಿಯಿರಿ ಜೀರ್ಣಕ್ರಿಯೆಗೆ ತುಂಬಾನೇ ಸಹಕಾರಿ.

            ಜೀರ್ಣಕ್ರಿಯೆ ದುರ್ಬಲವಾಗಿರುವವರು ತಿನ್ನಬೇಕಾದ ಆಹಾರಗಳು

            • ಸೇಬು
            • ಚಿಯಾ ಬೀಜ
            • ಮೊಸರು
            • ಬೆಳ್ಳುಳ್ಳಿ, ಈರುಳ್ಳಿ, ಬಾಳೆಹಣ್ಣು
            • ಬೀಟ್‌ರೂಟ್
            • ಓಟ್ಸ್, ಕೆಂಪಕ್ಕಿ ಅನ್ನ, ಬಾರ್ಲಿ
            • ಸೊಪ್ಪು
            • ಸಾಲಮೋನ್
            • ತಿನ್ನಬಾರದ ಆಹಾರಗಳು

              ತಿನ್ನಬಾರದ ಆಹಾರಗಳು

              • ಹಾಲು ಹಾಕಿದ ಕಾಫಿ
              • ಅಧಿಕ ಕೊಬ್ಬಿನ ಆಹಾರಗಳು
              • ಕರಿದ ಪದಾರ್ಥಗಳು
              • ಕೃತಕ ಸಿಹಿ
              • ಸೂಚನೆ: ಆಗಾಗ ಅಜೀರ್ಣ ಸಮಸ್ಯೆ ಕಾಡುತ್ತಿದ್ದರೆ ನಿರ್ಲಕ್ಷ್ಯ ಮಾಡಬೇಡಿ, ಕೆಲವೊಮ್ಮೆ ಹೊಟ್ಟೆ ಕ್ಯಾನ್ಸರ್ ಸಮಸ್ಯೆ ಉಂಟಾದಾಗ ಈ ರೀತಿಯ ಅಜೀರ್ಣ ಸಮಸ್ಯೆ ಕಾಡುವುದು.

English summary

Weak Digestion: Symptoms, Causes And Home Remedies

Digestive problems or weak digestion can occur when the food is not digested properly or due to underlying problems like gastroesophageal reflux disease, ulcers or gallbladder disease, bile duct issues or food intolerances.
Story first published: Tuesday, June 16, 2020, 17:44 [IST]
X
Desktop Bottom Promotion