Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬಿಳಿ ಕೂದಲಿನ ಸಮಸ್ಯೆಗೆ-ಸ್ಟೆಪ್ ಬೈ ಸ್ಟೆಪ್ ನೆಲ್ಲಿಕಾಯಿಯ ಚಿಕಿತ್ಸೆ!
ವಯಸ್ಸಲ್ಲದ ವಯಸ್ಸಿನಲ್ಲಿ ಕೆಲವರ ಕೂದಲು ಬಿಳಿಯಾಗುತ್ತಿದೆ. ಹೆಚ್ಚುತ್ತಿರುವ ಒತ್ತಡ, ವಾತಾವರಣ ಹಾಗೂ ಹಲವಾರು ಸಮಸ್ಯೆಗಳು ಇದಕ್ಕೆ ಕಾರಣವಾಗಿರಬಹುದು. ಇಂದಿನ ದಿನಗಳಲ್ಲಿ 30 ದಾಟುತ್ತಿರುವಾಗಲೇ ಕೂದಲು ಬಿಳಿಯಾಗಲು ಆರಂಭವಾಗುತ್ತದೆ. ಶಾಂಪೂಗಳಲ್ಲಿ ಇರುವಂತಹ ಕೆಲವೊಂದು ರಾಸಾಯನಿಕಗಳು ಇದಕ್ಕೆ ಕಾರಣವಾಗಿದೆ. ಚಿಕ್ಕ ಪ್ರಾಯದಲ್ಲಿಯೇ ಬಿಳಿ ಕೂದಲು ಬರಲು ಕಾರಣವೇನು?
ಬಿಳಿಕೂದಲಿಗೆ ಮನೆಮದ್ದನ್ನು ಬಳಸಿದರೆ ತುಂಬಾ ಒಳ್ಳೆಯದು. ನೆಲ್ಲಿಕಾಯಿಯಲ್ಲಿ ಬಿಳಿ ಕೂದಲನ್ನು ಕಪ್ಪಗೆ ಮಾಡುವಂತಹ ಸಾಮರ್ಥ್ಯವಿದೆ. ಇದರಲ್ಲಿ ದಾಳಿಂಬೆಗಿಂತ 17 ಪಟ್ಟು ಹೆಚ್ಚು ಆ್ಯಂಟಿಆಕ್ಸಿಡೆಂಟ್‌ಗಳಿವೆ. ಆ್ಯಂಟಿಆಕ್ಸಿಡೆಂಟ್‌ಗಳು ಕೂದಲಿನ ಬುಡವನ್ನು ಬಲಿಷ್ಠಗೊಳಿಸಿ ಫ್ರೀ ರ್ಯಾಡಿಕಲ್ ವಿರುದ್ಧ ರಕ್ಷಣಾ ಪದರವನ್ನು ನಿರ್ಮಿಸುತ್ತದೆ. ಪಿಎಚ್ ಸಮತೋಲನವನ್ನು ಸ್ಥಾಪಿಸುವುದರಿಂದ ಕೂದಲು ಬಿಳಿಯಾಗುವುದು ನಿಲ್ಲುವುದು. ಬಿಳಿ ಕೂದಲಿನ ನಿಯಂತ್ರಣಕ್ಕೆ ಪರಿಣಾಮಕಾರಿ ಮನೆಮದ್ದು

ನೆಲ್ಲಿಕಾಯಿಯಲ್ಲಿ ಇರುವಂತಹ ವಿಟಮಿನ್ ಸಿ ಕಾಲಜನ್ ಮಟ್ಟವನ್ನು ವೃದ್ಧಿಸುತ್ತದೆ. ಇದರಿಂದ ಕೂದಲಿನ ಸ್ಥಿತಿಸ್ಥಾಪಕತ್ವ ಸುಧಾರಣೆಯಾಗಿ ಕೂದಲು ತುಂಡಾಗುವುದು ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೆ ನೆಲ್ಲಿಕಾಯಿಯಲ್ಲಿ ಉನ್ನತ ಮಟ್ಟದ ವಿಟಮಿನ್ ಹಾಗೂ ಖನಿಜಾಂಶಗಳು ಇವೆ. ಇದರಿಂದ ಕೂದಲು ಬಲಿಷ್ಠ, ದಪ್ಪಗೆ ಹಾಗೂ ಕಪ್ಪಗೆ ಆಗುವುದು. ಬನ್ನಿ ನೆಲ್ಲಿಕಾಯಿ ಬಳಸಿಕೊಂಡು ಬಿಳಿ ಕೂದಲು ತಡೆಯುವ ವಿಧಾನವನ್ನು ತಿಳಿಯಿರಿ. ಬಿಳಿಕೂದಲಿನ ಸಮಸ್ಯೆಯ ಕಿರಿಕಿರಿ, ಮನೆಮದ್ದೇ ಸರಿ!
*ಸ್ಟೆಪ್-1
ನೆಲ್ಲಿಕಾಯಿಯನ್ನು ತುಂಡು ಮಾಡಿಕೊಳ್ಳಿ.
*ಸ್ಟೆಪ್-2
ಅದನ್ನು ಮಿಕ್ಸಿಗೆ ಹಾಕಿ ಜ್ಯೂಸ್ ತೆಗೆಯಿರಿ
*ಸ್ಟೆಪ್-3
ಒಂದು ಪಿಂಗಾಣಿಗೆ ಜ್ಯೂಸ್ ಅನ್ನು ಹಾಕಿ.
*ಸ್ಟೆಪ್-4
ಕೂದಲನ್ನು ಸಣ್ಣ ಸಣ್ಣ ವಿಭಾಗವಾಗಿ ಮಾಡಿಕೊಂಡು ನೆಲ್ಲಿಕಾಯಿ ಜ್ಯೂಸ್ ಹಾಗೂ ಅದರ ತಿರುಳನ್ನು ಕೂದಲಿಗೆ ಹಚ್ಚಿಕೊಳ್ಳಿ.
*ಸ್ಟೆಪ್-5
ಕೂದಲು ಮತ್ತು ಸಂಪೂರ್ಣ ಬುರುಡೆ ನೆಲ್ಲಿಕಾಯಿ ಜ್ಯೂಸ್‌ನಿಂದ ಒದ್ದೆಯಾಗಿರುವಂತೆ ನೋಡಿಕೊಳ್ಳಿ.
*ಸ್ಟೆಪ್-6
ಒಂದು ಗಂಟೆ ಹಾಗೆ ಇರಲಿ. ಬಳಿಕ ಶಾಂಪೂವಿನಿಂದ ತೊಳೆಯಿರಿ. ವಾರದಲ್ಲಿ ಎರಡು ಸಲ ಈ ಮನೆಮದ್ದನ್ನು ಬಳಸಿದರೆ ಮುಂದಿನ ಕೆಲವೇ ವಾರಗಳಲ್ಲಿ ನೀವು ಫಲಿತಾಂಶವನ್ನು ಕಾಣಬಹುದು. ಬಿಳಿ ಕೂದಲಿಗೆ ನಿಮ್ಮಲ್ಲಿ ಯಾವುದೇ ರೀತಿಯ ಮನೆಮದ್ದು ಇದ್ದರೆ ಅದನ್ನು ಕಮೆಂಟ್ ಕಾಲಂನಲ್ಲಿ ಬರೆದು ನಮಗೆ ತಿಳಿಸಿ. ಶ್! ಬಿಳಿ ಕೂದಲಿನ ಸಮಸ್ಯೆಗೆ ಇಲ್ಲಿದೆ ಸೀಕ್ರೆಟ್ ಮನೆಮದ್ದು!



Click it and Unblock the Notifications






