Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಬಿಳಿ ಕೂದಲಿನ ನಿಯಂತ್ರಣಕ್ಕೆ ಪರಿಣಾಮಕಾರಿ ಮನೆಮದ್ದು
ಸೌಂದರ್ಯದ ವಿಷಯ ಬಂದರೆ ವಿವಿಧ ರೀತಿಯ ಕೇಶ ವಿನ್ಯಾಸ ಮುಖ್ಯವಾಗುತ್ತದೆ. ಹಾಗೆಯೇ ಕೂದಲ ಆರೈಕೆಯ ಜೊತೆಗೆ ದಟ್ಟವಾದ ಕಪ್ಪು ಕೂದಲು ಎಲ್ಲರನ್ನೂ ಆಕರ್ಷಿಸುತ್ತದೆ. ಅಂದವಾದ ಕಪ್ಪು ಕೂದಲು ತಮ್ಮದಾಗಬೇಕೆಂದು ಸಾಕಷ್ಟು ಜನರು ಬಯಸುವುದನ್ನು ನಾವೆಲ್ಲಾ ಕಾಣುತ್ತಿರುತ್ತೇವೆ. ಆದರೆ ಇತ್ತೀಚಿನ ಒತ್ತಡದ ಜೀವನ ಶೈಲಿ, ಬದುಕಿನ ಜಂಜಾಟಗಳಲ್ಲಿ ಕೂದಲು ಬಿಳಿಯಾಗುವುದು ಕೂಡ ಒಂದು ದೊಡ್ಡ ಸಮಸ್ಯೆಯಾಗಿಬಿಟ್ಟಿದೆ. ಅತಿ ಚಿಕ್ಕ ವಯಸ್ಸಿನಲ್ಲೇ ನೆರೆತ ಕೂದಲಿನಿಂದ ಮರೆಮಾಚಿಕೊಳ್ಳಲು ರಾಸಾಯನಿಕ ವಸ್ತುಗಳ ಮೊರೆ ಹೋಗುತ್ತಿರುವುದನ್ನು ಕಾಣಬಹುದು.
ಸಾಮಾನ್ಯವಾಗಿ ನಿಮ್ಮಲ್ಲಿ ವಿಟಮಿನ್ ಕೊರತೆಯಿದ್ದಾಗ ಅಥವಾ ಒಂದು ವೇಳೆ ನಿಮಗೆ ಥೈರಾಯ್ಡ್ ಗ್ರಂಥಿಯ ಸಮಸ್ಯೆಯಿದ್ದಲ್ಲಿ ಸಹ ಬಿಳಿ ಕೂದಲುಗಳು ಕಂಡು ಬರಬಹುದು. ನಿಮ್ಮ ವಯಸ್ಸು ಇನ್ನೂ ಸಣ್ಣದಾಗಿದ್ದರು ಸಹ, ಬಿಳಿ ಕೂದಲುಗಳು ನಿಮ್ಮನ್ನು ವಯಸ್ಸಾದಂತೆ ಕಾಣುವಂತೆ ಮಾಡುವುದಲ್ಲದೆ, ನಿಮ್ಮ ಸಹೋದ್ಯೋಗಿಗಳು ಮತ್ತು ಸ್ನೇಹಿತರ ಮುಂದೆ ನೀವು ಇದರಿಂದ ಮುಜುಗರಕ್ಕೆ ಒಳಗಾಗುತ್ತೀರಿ. ಆದರೂ ಇದನ್ನು ಉದಾಸೀನ ಮಾಡಲು ಹೋಗಬೇಡಿ, ಬನ್ನಿ, ಅದಕ್ಕಾಗಿ ನಾವು ಹೇಳುವ ಪರಿಹಾರಗಳನ್ನು ಒಮ್ಮೆ ಪ್ರಯತ್ನಿಸಿ ನೋಡಿ... ಚಿಕ್ಕ ಪ್ರಾಯದಲ್ಲಿಯೇ ಬಿಳಿ ಕೂದಲು ಬರಲು ಕಾರಣವೇನು?

ಬಾದಾಮಿ ಎಣ್ಣೆ
ಸಮಪ್ರಮಾಣದಲ್ಲಿ ಬಾದಾಮಿ ಎಣ್ಣೆ, ಲಿಂಬೆರಸ ಮತ್ತು ನೆಲ್ಲಿಕಾಯಿಯ ರಸಗಳನ್ನು ಮಿಶ್ರಣಮಾಡಿಕೊಂಡು (ಬಿಸಿ ಮಾಡಬಾರದು) ನೇರವಾಗಿ ಕೂದಲಿಗೆ ಹಾಗೂ ಕೂದಲ ಬುಡಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ ಬಿಳಿಗೂದಲು ಶೀಘ್ರವೇ ಕಪ್ಪಗಾಗುತ್ತದೆ.
ಕರಿಬೇವಿನ ಎಲೆ
ಈರುಳ್ಳಿ
ಈರುಳ್ಳಿಯ ರಸವನ್ನು ಹಿಂಡಿಹೊಂಡು ಸ್ವಲ್ಪ, ಸ್ವಲ್ಪವಾಗಿಯೇ ಕೂದಲ ಬುಡಕ್ಕೆ ಹಚ್ಚಿ ಮಾಲಿಶ್ ಮಾಡುವುದರಿಂದ ಕೂದಲು ಬಳಿಯಾಗದಂತೆ ತಡೆಯಬಹುದು ಹಾಗೂ ಕೂದಲುದುರುವುದನ್ನೂ ತಡೆಯಬಹುದು.
ಮೆಹೆಂದಿ ಮತ್ತು ಮೊಸರು
ಪರಿಶುದ್ಧವಾದ ಮೆಹೆಂದಿಯನ್ನು ಇದಕ್ಕೆ ಬಳಸಿ. ಪ್ಯಾಕ್ ಮಾಡಿರುವ ಮೆಹಂದಿಯನ್ನು ಬಳಸಬೇಡಿ. ರಾಸಾಯನಿಕಗಳಿಂದ ಮುಕ್ತವಾದ ಮೆಹಂದಿಯು ಇದಕ್ಕೆ ಒಳ್ಳೆಯದು. ಇದನ್ನು ಮಾಡಲು ಮೆಹಂದಿಯನ್ನು ನೀರಿನ ಬದಲಿಗೆ ಬ್ಲಾಕ್ ಟೀಯಲ್ಲಿ ನೆನೆಸಿ. ರಾತ್ರಿಯಿಡೀ ಇದನ್ನು ನೆನೆಯಲು ಬಿಟ್ಟು, ಬೆಳಗ್ಗೆ ಇದಕ್ಕೆ ಒಂದು ಟೇಬಲ್ ಚಮಚ ಆಲೀವ್ ಎಣ್ಣೆಯನ್ನು ಬೆರೆಸಿ.
ನಂತರ ಅರ್ಧ ಕಪ್ ಮೊಸರು ಅಥವಾ ಒಂದು ಮೊಟ್ಟೆಯನ್ನು ಬೆರೆಸಿಕೊಳ್ಳಿ. ಆಮೇಲೆ ಇದನ್ನು ನಿಮ್ಮ ಕೂದಲಿಗೆ ಲೇಪಿಸಿ. 30 ನಿಮಿಷ ಬಿಟ್ಟು, ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ, ಹೀಗೆ ವಾರದಲ್ಲಿ ಎರಡು ಮೂರು ದಿನ ಮಾಡುವುದರಿಂದ ಹೊಳಪಿನ ನೈಸರ್ಗಿಕವಾಗಿ ಕಪ್ಪಗಾಗಿರುವ ಕೂದಲನ್ನು ಪಡೆಯಬಹುದು.
ಹಾಲಿನ ಕೆನೆ ಮತ್ತು ಮೊಟ್ಟೆಯ ಪ್ಯಾಕ್
ಒಂದು ಬಟ್ಟಲು ತೆಗೆದುಕೊಂಡು ಅದರಲ್ಲಿ ಎರಡು ಟೇಬಲ್ ಚಮಚ ತಾಜಾ ಹಾಲಿನ ಕೆನೆಯನ್ನು ಹಾಕಿಕೊಳ್ಳಿ, ಇದಕ್ಕೆ 2 ಮೊಟ್ಟೆಗಳನ್ನು ಒಡೆದು ಕಲೆಸಿ. ಇವೆರಡನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಪ್ಯಾಕನ್ನು ನಿಮ್ಮ ಕೂದಲು ಮತ್ತು ಅದರ ಬುಡಕ್ಕೆ ಲೇಪಿಸಿ. ಶವರ್ ಕ್ಯಾಪ್ನಿಂದ ಮುಚ್ಚಿಕೊಳ್ಳಿ. 30 ನಿಮಿಷಗಳ ನಂತರ ತಣ್ಣೀರಿನಲ್ಲಿ ಶಾಂಪೂ ಮಾಡಿಕೊಂಡು ಇದನ್ನು ತೊಳೆಯಿರಿ.
ಲೋಳೆ ರಸ ಮತ್ತು ಮೊಟ್ಟೆ
ಸಾಸಿವೆ ಎಣ್ಣೆ



Click it and Unblock the Notifications



