Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಈ 7 ರಸಗಳ ಮಿಶ್ರಣ ಕೂದಲನ್ನು ಮಂದವಾಗಿಸುತ್ತೆ
ಕೂದಲಿಗೆ ಈರುಳ್ಳಿ ಜ್ಯೂಸ್ ಹಚ್ಚಿದರೆ ಒಳ್ಳೆಯದು ಎಂದು ಈ ಹಿಂದೆ ಬರೆದ ಲೇಖನದಲ್ಲಿ ಹೇಳಿದ್ದೆವು. ಈರುಳ್ಳಿ ಜ್ಯೂಸ್ ನಷ್ಟೇ ಇನ್ನಿತರ ಜ್ಯೂಸ್ ಗಳು ಕೂದಲಿನ ಬುಡ ಸ್ಟ್ರಾಂಗ್ (ಗಟ್ಟಿಯಾಗಿಸುವಲ್ಲಿ) ಮಾಡುವಲ್ಲಿ ತುಂಬಾ ಸಹಕಾರಿ. ದಪ್ಪವಾದ ಕೂದಲು ಪಡೆಯಲು ಕೂದಲಿನ ಬುಡ ಸ್ಟ್ರಾಂಗ್ ಆಗಿರಬೇಕು. ಇದಕ್ಕೆ ಎಣ್ಣೆ ಹಚ್ಚಿ ಆರೈಕೆ ಮಾಡುವುದರ ಜೊತೆ ಇನ್ನು ಸ್ವಲ್ಪ ಅಧಿಕ ಆರೈಕೆ ಮಾಡುವುದು ಒಳ್ಳೆಯದು.
ಇಲ್ಲಿ ನಾವು ಹೇಳಿರುವ ಜ್ಯೂಸ್ ಗಳನ್ನು ಕೂದಲಿಗೆ ಬಳಸಿದರೆ ತಲೆ ಬುಡಕ್ಕೆ ಯಾವುದೇ ಬ್ಯಾಕ್ಟೀರಿಯಾಗಳು ದಾಳಿ ಮಾಡದಂತೆ ತಡೆದು, ಕೂದಲಿನ ಬೆಳವಣಿಗೆಗೆ ಅವಶ್ಯಕವಾದ ವಿಟಮಿನ್ ಒದಗಿಸಿ, ಕೂದಲಿನ ಬುಡವನ್ನು ಮತ್ತಷ್ಟು ಸ್ಟ್ರಾಂಗ್ ಆಗಿ ಮಾಡುತ್ತದೆ. ಕೂದಲಿನ ಆರೋಗ್ಯ ಹೆಚ್ಚಿಸುವ ಆ ಆರೋಗ್ಯಕರ ಜ್ಯೂಸ್ ಗಳಾವುವು ಎಂದು ನೋಡೋಣ ಬನ್ನಿ:

ಕ್ಯಾರೆಟ್ ಜ್ಯೂಸ್
ಕ್ಯಾರೆಟ್ ಜ್ಯೂಸ್ ಮಾಡಿ ಅದನ್ನು ಕೂದಲಿನ ಬುಡಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ತಲೆ ತೊಳೆಯಿರಿ. ಹೀಗೆ ಮಾಡಿದರೆ ಕೂದಲಿನ ಬುಡಕ್ಕೆ ಅವಶ್ಯಕವಾದ ಕ್ಯಾರೋಟಿನ್ ದೊರೆಯುತ್ತದೆ.

ಈರುಳ್ಳಿ ಜ್ಯೂಸ್
ಈರುಳ್ಳಿ ಕೂದಲಿಗೆ ಅವಶ್ಯಕವಾದ ರಂಜಕವನ್ನು ನೀಡುತ್ತದೆ, ಇದು ಕೂದಲು ತೆಳ್ಳಗಾಗುವುದನ್ನು ತಡೆಯುತ್ತದೆ.

ನೆಲ್ಲಿಕಾಯಿ
ನೆಲ್ಲಿಕಾಯಿ ನೆಲ್ಲಿಕಾಯಿ ರಸದಲ್ಲಿ ವಿಟಮಿನ್ ಸಿ ಇದ್ದು, ಬ್ಯಾಕ್ಟೀರಿಯಾಗಳು ದಾಳಿ ಮಾಡದಂತೆ ತಡೆದು ಕೂದಲಿನ ಬುಡವನ್ನು ಗಟ್ಟಿಯಾಗಿಸುತ್ತದೆ.

ದಾಸವಾಳ ಹೂವಿನ ಜ್ಯೂಸ್
ದಾಸವಾಳದ ಜ್ಯೂಸ್ ತಲೆ ಹೊಟ್ಟನ್ನು ಹೋಗಲಾಡಿಸುತ್ತದೆ, ಕೂದಲನ್ನು ಕಪ್ಪಾಗಿಸುತ್ತದೆ ಹಾಗೂ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ಕಿತ್ತಳೆ ಜ್ಯೂಸ್
ಇದು ಕೂದಲಿಗೆ ಹಾನಿ ಮಾಡುವ ಹಾನಿಕಾರಕ ರಾಸಾಯನಿಕಗಳ ವಿರುದ್ಧ ಹೋರಾಡಿ ಕೂದಲನ್ನು ರಕ್ಷಣೆ ಮಾಡುತ್ತದೆ.

ಆಲೂಗಡ್ಡೆ
ಆಲೂಗಡ್ಡೆಯ ರಸ ಕೂದಲಿನ ಬುಡವನ್ನು ಗಟ್ಟಿಯಾಗಿಸಿ, ಕೂದಲು ಮಂದವಾಗಿ ಬೆಳೆಯುವಂತೆ ಮಾಡುತ್ತದೆ.

ದ್ರಾಕ್ಷಿ
ಇದು ತಲೆಯ ರಂಧ್ರಗಳ ಉಸಿರಾಟದ ಕ್ರಿಯೆಗೆ ಸಹಾಯ ಮಾಡುತ್ತದೆ. ಸರಿಯಾಗಿ ಆಮ್ಲಜನಕ ಪೂರೈಕೆ ಕೂಡ ಮಂದವಾದ ಕೂದಲಿಗೆ ಅವಶ್ಯಕ.



Click it and Unblock the Notifications
