For Quick Alerts
ALLOW NOTIFICATIONS  
For Daily Alerts

ಪುರುಷರೇ, ಕಂಕುಳಿನ ಕೂದಲು ಶೇವ್ ಬದಲು ಟ್ರಿಮ್ ಮಾಡಬೇಕು, ಏಕೆ ಗೊತ್ತಾ?

|

ಕಂಕುಳಿನ ಕೂದಲು ಬೆಳೆಸುವುದು ಅನೇಕ ಪುರುಷರಿಗೆ ಇಷ್ಟ. ಅನೇಕರು ಇದನ್ನು ತೆಗೆಯೋದೆ ಇಲ್ಲ. ಇನ್ನು ಕೆಲವರು ಕೊಂಚ ಕೂದಲು ಬಂದರೆ ಸಾಕು ಕಂಕುಳಿನ ಕೂದಲನ್ನು ಕಂಪ್ಲೀಟ್ ಶೇವ್ ಮಾಡುತ್ತಾರೆ. ಕೆಲವರಿಗೆ ಕಂಕುಳಿನ ಕೂದಲು ಬಿಟ್ಟರೆ ತುರಿಸುವುದು, ಬೆವರುವ ಅನುಭವ ಆಗುತ್ತದೆ ಅದಕ್ಕಾಗಿ ಅನೇಕರು ಕಂಕುಳಿನ ಕೂದಲನ್ನು ತೆಗೆಯುತ್ತಾರೆ. ಇನ್ನು ಕೆಲವರಿಗೆ ಕೂದಲು ಇದ್ದರೆ ಇಷ್ಟವಾಗುತ್ತದೆ. ಕಂಕುಳಿನಲ್ಲಿ ಏನೋ ಇದೆ ಎನ್ನುವ ಅನುಭವ ಮೂಡುತ್ತದೆ. ಇನ್ನು ಕೆಲವರು ಸ್ಲೀವ್ ಲೆಸ್ ಹಾಕಿದರೆ ಕಾಣಲು ಲುಕ್ ಇರುವುದಿಲ್ಲ ಎನ್ನುವ ಉದ್ದೇಶಕ್ಕೆ ತೆಗೆಯುತ್ತಾರೆ. ಹೀಗೆ ಒಬ್ಬೊಬ್ಬರು ಒಂದೊಂದು ಕಾರಣದಿಂದ ತೆಗೆಯುತ್ತಾರೆ ಅಥವಾ ಹಾಗೇ ಬಿಡುತ್ತಾರೆ.

ಇನ್ನು ಭಾರತದಂತಹ ಹವಾಮಾನದಲ್ಲಿ ಕಂಕುಳಿನ ಕೂದಲು ತೆಗೆಯೋದೆ ಒಳ್ಳೆಯದು. ಬೇಸಿಗೆ ಕಾಲದಲ್ಲಂತು ಎಂತಹವರನ್ನೂ ಬೆವರಿನಲ್ಲಿ ಒದ್ದೆ ಮಾಡುತ್ತದೆ. ಇದರ ಜೊತೆಗೆ ದೇಹದಿಂದ ದುರ್ಗಂಧ ಬೇರೆ. ಹೆಚ್ಚಾಗಿ ಕಂಕುಳ ಭಾಗಗಳಲ್ಲಿ ಬೆವರಿನ ದುರ್ಗಂಧ ಬೀರಲು ಪ್ರಾರಂಭವಾಗುತ್ತದೆ. ಹೀಗಾಗಿ ಈ ಸಮಯದಲ್ಲಿ ಕೂದಲನ್ನು ತೆಗೆಯೋದೆ ಒಳ್ಳೆದು. ಇನ್ನು ಕೆಲ ವೈದ್ಯರ ಪ್ರಕಾರ ಕಂಕುಳದಲ್ಲಿ ಕೂದಲು ಬಿಟ್ಟು ಸ್ವಚ್ಛವಾಗಿಡದಿದ್ದರೆ ಆರೋಗ್ಯಕ್ಕೂ ಹಾನಿಕಾರಕವಂತೆ. ಹೀಗಾಗಿ ಕಂಕುಳದ ಕೂದಲನ್ನು ತೆಗೆಯುವುದು ಉತ್ತಮ. ಆದರೆ ತಜ್ಞರ ಪ್ರಕಾರ ಕಂಕುಳದ ಕೂದಲನ್ನು ಶೇವ್ ಮಾಡುವುದಕ್ಕಿಂತ ಟ್ರಿಪ್ ಮಾಡಿದರೆ ಉತ್ತಮವಂತೆ. ಯಾಕೆ? ಮಿಸ್ ಮಾಡದೆ ಈ ಸ್ಟೋರಿ ಓದಿ.

ಸೂಕ್ಷ್ಮವಾದ ಜಾಗ!

ಸೂಕ್ಷ್ಮವಾದ ಜಾಗ!

ನಮ್ಮ ಕಂಕುಳಿನ ಭಾಗವು ಸಮತಟ್ಟಾಗಿ ಇಲ್ಲ. ಉದಾಹರಣೆಗೆ ನಮ್ಮ ತಲೆ ಬುರುಡೆ ಸಮತಟ್ಟಾಗಿದೆ ಹೀಗಾಗಿ ತಲೆ ಕೂದಲನ್ನು ರೇಜರ್ ನಿಂದ ತೆಗೆಯಲು ಸುಲಭ. ಆದರೆ ಕಂಕುಳಿನ ಭಾಗ ಹಾಗೇ ಇಲ್ಲ. ಚರ್ಮ ಸಮತಟ್ಟಾಗಿ ಇಲ್ಲ. ಹೀಗಾಗಿ ರೇಜರ್ ನಿಂದ ಸರಿಯಾಗಿ ತೆಗೆಯಲು ಕಷ್ಟವಾಗುತ್ತದೆ. ಅಲ್ಲದೇ ಕಂಕುಳು ಭಾಗ ಸೂಕ್ಷ್ಮ ಚರ್ಮವನ್ನು ಹೊಂದಿದೆ. ಇಲ್ಲಿ ರೇಸರ್ ಬಳಸುವುದರಿಂದ ಗಾಯಗಳು ಸಂಭವಿಸಬಹುದು. ಎಷ್ಟೇ ಮೆಲ್ಲ ತೆಗೆದರು ಅನೇಕರಿಗೆ ನೋವಾಗುವ, ಗಾಯವಾಗುವ ಅನುಭವ ಆಗಿರುತ್ತದೆ. ಈ ಕಾರಣಕ್ಕೆ ಈ ಭಾಗದ ಕೂದಲನ್ನು ತೆಗೆಯಲು ರೇಜರ್ ಬದಲು ಟ್ರಿಪ್ ಬಳಸಬಹುದು. ಝಿರೋ ನಂಬರ್ ಅಥವಾ ಒನ್ ನಂಬರ್ ಟ್ರಿಮ್ಮರ್ ಬಳಸಿ ಸುಲಭವಾಗಿ, ಹೇಗೆ ಬೇಕಾದರೂ ಕೂದಲು ತೆಗೆಯಬಹುದು. ಯಾವುದೇ ಗಾಯ, ನೋವಿಲ್ಲದೆ ನಿಮ್ಮ ಕಂಕುಳವನ್ನು ಕ್ಲೀನ್ ಮಾಡಬಹುದು.

ಮುಳ್ಳಿನಂತೆ ಚುಚ್ಚುತ್ತೆ!

ಮುಳ್ಳಿನಂತೆ ಚುಚ್ಚುತ್ತೆ!

ನೀವು ಫುಲ್ ಶೇವ್ ಮಾಡಿದರಿ ಅಂದುಕೊಳ್ಳಿ. ಮತ್ತೆ ಕೊಂಚ ದಿನದಲ್ಲಿ ಕೂದಲು ಬೆಳೆಯಲು ಆರಂಭವಾಗುತ್ತದೆ. ಆದರೆ ನೀವು ಪ್ರತೀ ಭಾರೀ ಶೇವ್ ಮಾಡಿದರೆ ನಿಮ್ಮ ಕಂಕುಳದ ಕೂದಲ ಗಟ್ಟಿ ಹಾಗೂ ಒರಟು ಆಗುತ್ತದೆ. ಬ್ಲೇಡ್ ಬಳಸುವುದರಿಂದ ಕೂದಲು ಒರಟಾಗಿ ನಿಮ್ಮ ತೋಳಿಗೆ ಚುಚ್ಚಲು ಆರಂಭವಾಗುತ್ತದೆ. ಸಂಪೂರ್ಣವಾಗಿ ಮತ್ತೆ ಕೂದಲು ಬರುವವರೆಗೆ ಈ ಚುಚ್ಚುವ ನೋವು ಇರುತ್ತದೆ. ಆದರೆ ಟ್ರಿಮ್ ಮಾಡಿದರೆ ಆ ರೀತಿಯ ಅನುಭ ಇರುವುದಿಲ್ಲ. ಒಂದು ನಂಬರ್ ಇಟ್ಟು ಕೂದಲು ತೆಗೆದರೆ ಇಂತಹ ಸಮಸ್ಯೆ ಬರುವುದು ವಿರಳ.

ತೀವ್ರ ನೋವು!

ತೀವ್ರ ನೋವು!

ಸಂಪೂರ್ಣವಾಗಿ ರೇಜರ್ ನಿಂದ ಕಂಕುಳ್ದ ಕೂದಲು ತೆಗೆದರೆ ಗಾಯವಾಗದಿದ್ದರು ನೋವಿನ ಅನುಭವ ಉಂಟಾಗುತ್ತದೆ. ಸೋಪು ಹಾಕಿದಾಗ ಒಂದು ರೀತಿಯ ನೋವು ಉಂಟಾಗುತ್ತದೆ. ಇನ್ನು ಕೂದಲು ತೆಗೆಯುವುದರಿಂದ ಈ ಜಾಗ ತುಂಬಾನೇ ನೈಸ್ ಆಗಿ ಕೆಲವರಿಗೆ ಕೆಟ್ಟ ಫೀಲಿಂಗ್ಸ್ ಆಗುವುದುಂಟು. ಹೀಗಾಗಿ ಟ್ರಿಮ್ ಮಾಡಬಹುದು. ಕೊಂಚ ಕೂದಲು ಉಳಿಸಬಹುದು. ಇನ್ನು ಸಾಫ್ಟ್ ಆಗಿರುವ ಜಾಗದಲ್ಲಿ ಕೂದಲು ತೆಗೆಯುವುದರಿಂದ ಚಿಕ್ಕ ಗಾಯವಾದರೂ ಕೂಡ ಆ ಗಾಯ ಸರಿಯಾಗಲು ಟೈಂ ಹಿಡಿಯುತ್ತದೆ. ಇನ್ನು ಕೆಲವರಿಗೆ ಅಲರ್ಜಿ, ಪಿಂಪಲ್ಸ್, ಗುಳ್ಳೆಗಳು ಏಳಬಹುದು.

ಬೆವರುವುದು ಜಾಸ್ತಿ!

ಕೂದಲು ಇದ್ದರೆ ಜಾಸ್ತಿ ಬೆವರಿದ ಅನುಭವ ಆಗುವುದಿಲ್ಲ. ಆದರೆ ಕಂಪ್ಲೀಟ್ ಶೇವ್ ಮಾಡಿದರೆ ಕಂಕುಳ ತೀವ್ರವಾಗಿ ಬೆವರುತ್ತದೆ. ಸಂಪೂರ್ಣ ಶೇವ್ ನಿಂದ ಅದು ಜಾರಿದಂತಹ ಅನುಭವ ಆಗುವುದುಂಟು. ಕೆಲವರಿಗೆ ಶರ್ಟ್ ಹಾಕಿದಾಗ ಬೆವರಿದರೆ ಕೆಟ್ಟ ಅನುಭವ ನೀಡುವುಂಟು.

ಹೀಗೆ ಕಂಕುಳಿನ ಕೂದಲನ್ನು ರೇಜರ್ ಹಾಕಿ ತೆಗೆಯುವುದಕ್ಕಿಂತ ಟ್ರಿಪ್ ಮಾಡಿ ತೆಗೆಯಬಹುದು. ಅದರಿಂದಾಗುವ ಲಾಭವನ್ನು ನಾವು ಗಮನಿಸಬಹುದು.

English summary

Reasons Why Men Should Not Shave Their Armpit But Trim It Instead in kannada

Reasons Why Men Should Not Shave Their Armpit But Trim It Instead in kannada , Read on
X
Desktop Bottom Promotion