For Quick Alerts
ALLOW NOTIFICATIONS  
For Daily Alerts

ಕೂದಲು ಮತ್ತು ಚರ್ಮದ ರಕ್ಷಣೆಗೆ ಬಾಳೆಹಣ್ಣಿನ ಆರೈಕೆ

|

ಬಾಳೆ ಹಣ್ಣು ತಿನ್ನಲು ರುಚಿಕರವಾದ, ಬಹಳ ಸುಲಭವಾಗಿ, ಎಲ್ಲಾ ಕಾಲಮಾನದಲ್ಲೂ ಲಭ್ಯವಾಗುವ ಹಣ್ಣು. ಬಾಳೆ ಹಣ್ಣಿನಲ್ಲಿ ವಿವಿಧ ಜಾತಿಯನ್ನು ಸಹ ಕಾಣಬಹುದು. ಜಾತಿಯಲ್ಲಿ ವಿವಿಧತೆ ಇದ್ದರೂ ಅದರಲ್ಲಿ ಇರುವ ಪೋಷಕಾಂಶ ಹಾಗೂ ವಿಟಮಿನ್ ಗಳು ಒಂದೇ ಬಗೆಯಲ್ಲಿ ಇರುತ್ತವೆ. ಈ ಹಣ್ಣನ್ನು ಸೇವಿಸಲು ಯಾವುದೇ ವಯೋಮಾನದ ತಾರತಮ್ಯವಿಲ್ಲ.

Beauty Benefits Of Banana For Hair And Skincare

ಹಸಿವಾದಾಗ, ತಿನ್ನಬೇಕು ಎನಿಸಿದಾಗಲೆಲ್ಲಾ ಈ ಹಣ್ಣನ್ನು ತಿನ್ನಬಹುದು. ಇದರ ಬೆಲೆಯು ಕೈಗೆಟಕುವ ದರದಲ್ಲಿ ಇರುವುದರಿಂದ ಸುಲಭವಾಗಿ ಖರೀದಿಸಬಹದು.

ಬಾಳೆಹಣ್ಣಿನ ಪ್ರಯೋಜನ

ಬಾಳೆಹಣ್ಣಿನ ಪ್ರಯೋಜನ

ಬಾಳೆ ಹಣ್ಣು ತಿನ್ನುವುದರಿಂದ ದೇಹದ ಆರೋಗ್ಯ ಸುಧಾರಣೆಯಾಗುವಂತೆ, ಸೌಂದರ್ಯ ವರ್ಧಕ ಉತ್ಪನ್ನವಾಗಿ ಬಳಸುವುದರ ಮೂಲಕವೂ ಸೌಂದರ್ಯವನ್ನು ವೃದ್ಧಿಸಿಕೊಳ್ಳಬಹುದು. ಬಾಳೆ ಹಣ್ಣು ತಿನ್ನುವುದರಿಂದ ಶಕ್ತಿಯು ವೃದ್ಧಿಯಾಗುತ್ತದೆ. ಬಾಳೆಹಣ್ಣಿನಲ್ಲಿ ಇರುವ ಪೀತವರ್ಣ ದ್ರವ್ಯವು ಅದ್ಭುತ ರೀತಿಯಲ್ಲಿ ಚರ್ಮ ಮತ್ತು ಕೂದಲ ಆರೋಗ್ಯವನ್ನು ಕಾಪಾಡುವುದು. ಚರ್ಮ ಅಕಾಲಿಕವಾಗಿ ಸುಕ್ಕುಗಟ್ಟುವುದು ಹಾಗೂ ಉರಿಯೂತಗಳಿಂದ ಬಳಲುವುದನ್ನು ಬಹುಬೇಗ ನಿವಾರಿಸುವುದು. ಅಂತೆಯೇ ಕೇಶರಾಶಿಯ ಕೋಶಗಳ ವೃದ್ಧಿಗೆ ಸಹ ಉತ್ತೇಜನ ನೀಡುವುದು.

ನಿಮ್ಮ ಚರ್ಮ ಸದಾ ತೇವಾಂಶದಿಂದ ಕೂಡಿರಬೇಕು, ಕೂದಲು ಸಹ ರೇಷ್ಮೆ ಎಳೆಯಂತೆ ನಯವಾದ ಹೊಳಪನ್ನು ಹೊಂದಿರಬೇಕು ಎಂದರೆ ಬಾಳೆ ಹಣ್ಣಿನ ಮೊರೆ ಹೋಗಬಹುದು. ಇದರಲ್ಲಿ ವಿಟಮಿನ್ ಎ, ಬಿ, ಸಿ ಸಮೃದ್ಧವಾಗಿದೆ. ಜೊತೆಗೆ ಉತ್ತಮ ಪೊಟ್ಯಾಸಿಯಮ್ ಗುಣವನ್ನು ಹೊಂದಿರುವುದರಿಂದ ನೈಸರ್ಗಿಕ ಚಿಕಿತ್ಸಕನಾಗಿ ಆರೈಕೆ ಮಾಡುವುದು. ನೀವು ಬಾಳೆಹಣ್ಣಿನ ಮೂಲಕ ಯಾವೆಲ್ಲಾ ಸೌಂದರ್ಯದ ಆರೈಕೆಯನ್ನು ಮಾಡಬಹುದು ಎನ್ನುವುದನ್ನು ತಿಳಿಯಲು ಮುಂದಿನ ವಿವರಣೆಯನ್ನು ಪರಿಶೀಲಿಸಿ.

ಚರ್ಮದ ಆರೈಕೆಯಲ್ಲಿ ಬಾಳೆ ಹಣ್ಣಿನ ಪಾತ್ರ

1. ಚರ್ಮವನ್ನು ಮೃದು ಗೊಳಿಸುತ್ತದೆ

1. ಚರ್ಮವನ್ನು ಮೃದು ಗೊಳಿಸುತ್ತದೆ

ಬಾಳೆ ಹಣ್ಣಿನ ಮುಖವಾಡ ಅಥವಾ ಬಾಳೆ ಹಣ್ಣಿನ ಲೇಪನವನ್ನು ಬಳಸಿದರೆ ಚರ್ಮದ ಆರೋಗ್ಯವು ಸುಧಾರಣೆ ಕಾಣುವುದು. ಇದರಲ್ಲಿ ಇರುವ ಪೊಟ್ಯಾಸಿಯಂ ಗುಣ ಚರ್ಮವನ್ನು ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ. ಇದು ಒಣ ಚರ್ಮವನ್ನು ಹೆಚ್ಚು ತೇವಾಂಶದಿಂದ ಕೂಡಿರುವಂತೆ ಮಾಡುವುದು. ಗಣನೀಯವಾಗಿ ಬಾಳೆ ಹಣ್ಣಿನ ಆರೈಕೆ ಮಾಡುತ್ತಾ ಬಂದರೆ ಒಣ ಚರ್ಮವು ತೇವಾಂಶ ಭರಿತವಾಗಿ, ಮೃದುವಾದ ರೂಪವನ್ನು ಪಡೆದುಕೊಳ್ಳುವುದು. ಜೊತೆಗೆ ಹೆಚ್ಚಿನ ಆಕರ್ಷಣೆಯನ್ನು ನೀಡುವುದು.

2. ಜಿಡ್ಡನ್ನು ನಿಯಂತ್ರಿಸುವುದು

2. ಜಿಡ್ಡನ್ನು ನಿಯಂತ್ರಿಸುವುದು

ಬಾಳೆ ಹಣ್ಣು ಅತ್ಯುತ್ತಮ ಎಕ್ಸಫೋಲಿಯೇಟರ್ ಆಗಿ ಕಾರ್ಯನಿರ್ವಹಿಸುತ್ತದೆ. ಹೆಚ್ಚಿನ ಪೊಟ್ಯಾಸಿಯಂ ಗುಣ ಹೊಂದಿರುವುದರಿಂದ ಚರ್ಮದ ಮೇಲೆ ಉಗುಳುವ ಜಿಡ್ಡಿನಂಶವನ್ನು ನಿಯಂತ್ರಣದಲ್ಲಿ ಇಡುತ್ತದೆ. ಇದರಿಂದ ಚರ್ಮವು ಹೆಚ್ಚು ಮೇದೋಗ್ರಂಥಿಗಳ ಸ್ರವಿಕೆಯನ್ನು ನಿಯಂತ್ರಿಸಲು ಸಹಾಯ ಮಾಡುವುದು. ಆಗ ಚರ್ಮವು ಹೈಡ್ರೇಟ್ ಆಗಿ ಮೃದು ಹಾಗೂ ಆರೋಗ್ಯದಿಂದ ಕೂಡಿರುತ್ತದೆ.

3. ಸುಕ್ಕುಗಳನ್ನು ನಿಯಂತ್ರಿಸುವುದು

3. ಸುಕ್ಕುಗಳನ್ನು ನಿಯಂತ್ರಿಸುವುದು

ವಯಸ್ಸಾದಂತೆ ಚರ್ಮದಲ್ಲಿ ಸುಕ್ಕುಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಅಧಿಕ ಸಮಯಗಳ ಕಾಲ ಧೂಳು, ಹೊಗೆ, ಸೂರ್ಯನ ಕಿರಣಕ್ಕೆ ತೆರೆದುಕೊಳ್ಳುವವರಲ್ಲಿ ಹಾಗೂ ವಿವಿಧ ಸೌಂದರ್ಯ ವರ್ಧಕ ಉತ್ಪನ್ನಗಳ ಬಳಕೆಯಿಂದ ಚರ್ಮ ಅಕಾಲಿಕವಾಗಿ ಸುಕ್ಕುಗಟ್ಟುವುದು. ಆಗ ಚರ್ಮವು ಸೂಕ್ಷ್ಮ ರೇಖೆಗಳಿಂದ ಕೂಡಿದ್ದು, ವಯಸ್ಸಾದ ಚಿಹ್ನೆಯನ್ನು ತೋರುವುದು. ಅಂತಹ ಸಮಸ್ಯೆಗಳಿಗೆ ಬಾಳೆಹಣ್ಣಿನ ಸೇವನೆ ಹಾಗೂ ಚರ್ಮದ ಮೇಲೆ ಬಾಳೆ ಹಣ್ಣಿನ ಲೇಪನ ಹೊಂದುವುದು ಸೂಕ್ತ. ಆಗ ನೈಸರ್ಗಿಕವಾಗಿಯೇ ಸುಕ್ಕುಗಟ್ಟುವುದನ್ನು ತಡೆಯಬಹುದು. ಬಾಳೆಹಣ್ಣಿನಲ್ಲಿ ಉತ್ಕರ್ಷಣ ನಿರೋಧಕ ಗುಣವಿದೆ. ಅದು ಆರೋಗ್ಯ ವೃದ್ಧಿಗೆ ಸಹಾಯ ಮಾಡುವುದು.

4. ಮೊಡವೆಗಳಿಗೆ ಚಿಕಿತ್ಸೆ ನೀಡುವುದು

4. ಮೊಡವೆಗಳಿಗೆ ಚಿಕಿತ್ಸೆ ನೀಡುವುದು

ಬಾಳೆ ಹಣ್ಣಿನಲ್ಲಿ ವಿಟಮಿನ್ ಎ, ಸತು, ಮ್ಯಾಂಗನೀಸ್ ಸೇರಿದಂತೆ ಅನೇಕ ಪೋಷಕಾಂಶಗಳಿವೆ. ಹಾಗಾಗಿ ಬಾಳೆ ಹಣ್ಣಿನ ಸಿಪ್ಪೆಯಿಂದ ಮುಖದ ಮೇಲೆ ಮೃದುವಾದ ಮಸಾಜ್ ಮಾಡುವುದು, ಬಾಳೆಹಣ್ಣಿನ ಲೇಪನ ಅನ್ವಯಿಸುವುದರಿಂದ ಮುಖದಲ್ಲಿ ಉಂಟಾಗುವ ಉರಿಯೂತ ಹಾಗೂ ಮೊಡವೆಗಳನ್ನು ನಿವಾರಿಸಬಹುದು. ಮೊಡವೆಗಳ ನಿವಾರಣೆಗೆ ಬಾಳೆ ಹಣ್ಣು ಅದ್ಭುತ ಚಿಕಿತ್ಸೆ ನೀಡುವುದು.

ಕೂದಲ ಆರೈಕೆಯಲ್ಲಿ ಬಾಳೆಹಣ್ಣಿನ ಪಾತ್ರ

1. ತಲೆ ಹೊಟ್ಟು ನಿವಾರಣೆಗೆ

1. ತಲೆ ಹೊಟ್ಟು ನಿವಾರಣೆಗೆ

ಶತಮಾನಗಳಿಂದಲೂ ಬಾಳೆ ಹಣ್ಣು, ಸಿಪ್ಪೆ, ಎಲೆ, ಹೂವು ಹಾಗೂ ಕಾಯಿಯನ್ನು ವಿವಿಧ ಚಿಕಿತ್ಸೆಗಳಿಗೆ ಬಳಸಲಾಗುತ್ತದೆ. ಬಾಳೆಹಣ್ಣಿನಲ್ಲಿ ಉತ್ಕರ್ಷಣ ನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ. ಬಾಳೆಹಣ್ಣಿನ ಲೇಪನವನ್ನು ಕೇಶರಾಶಿಗಳಿಗೆ ಅನ್ವಯಿಸುವುದರಿಂದ ತಲೆಯಲ್ಲಿ ಉಂಟಾಗುವ ಕಿರಿಕಿರಿ, ಶುಷ್ಕತೆ, ಶಿಲೀಂಧ್ರಗಳ ಸಮಸ್ಯೆ ಹಾಗೂ ತಲೆಹೊಟ್ಟು ನಿವಾರಣೆಯಾಗುವುದು. ಬಾಳೆ ಹಣ್ಣಿನ ಲೇಪನವನ್ನು ಆಗಾಗ ನೆತ್ತಿ ಹಾಗೂ ಕೂದಲ ಬುಡಕ್ಕೆ ಅನ್ವಯಿಸುವುದರಿಂದ ಕೇಶರಾಶಿಗಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸಬಹುದು.

2. ಮೃದುವಾದ ಕೇಶರಾಶಿ ಪಡೆಯಲು

2. ಮೃದುವಾದ ಕೇಶರಾಶಿ ಪಡೆಯಲು

ಬಾಳೆಹಣ್ಣಿನಲ್ಲಿ ಸಿಲಿಕಾ ಅಂಶ ಹೆಚ್ಚಾಗಿರುತ್ತದೆ. ಕಾಲಜನ್ ಮತ್ತು ಪ್ರೋಟೀನ್ ಅನ್ನು ಉತ್ಪಾದಿಸಲು ಸಿಲಿಕಾ ಉತ್ತೇಜನ ನೀಡುವುದು. ಬಾಳೆ ಹಣ್ಣಿನ ಲೇಪನ ಅನ್ವಯಿಸಿಕೊಳ್ಳುವುದರಿಂದ ಕೂದಲಿನ ಆರೋಗ್ಯ ಸುಧಾರಣೆಯಾಗುವುದು. ಕೂದಲು ಒಡೆಯುವುದು, ಬಣ್ಣ ಕಳೆದುಕೊಳ್ಳುವುದು ಹಾಗೂ ಉದುರುವ ಸಮಸ್ಯೆಗಳು ನಿವಾರಣೆಯಾಗುವುದು. ಜೊತೆಗೆ ಕೂದಲು ಮೃದುವಾದ ರೂಪವನ್ನು ಪಡೆದುಕೊಳ್ಳುತ್ತದೆ.

3. ಕೂದಲ ಹೊಳಪಿಗೆ

3. ಕೂದಲ ಹೊಳಪಿಗೆ

ಮೃದುವಾದ, ನಯವಾದ ಮತ್ತು ಆಧ್ರಕ ಕೂದಲನ್ನು ಪಡೆಯಲು ಬಾಳೆಹಣ್ಣನ್ನು ಬಹಳ ಪರಿಣಾಮಕಾರಿಯಾಗಿ ಬಳಸಬಹುದು. ಬಾಳೆ ಹಣ್ಣು ಪೊಟ್ಯಾಸಿಯಂ, ವಿಟಮಿನ್, ಕ್ಯಾಲ್ಸಿಯಮ್, ಕಾರ್ಬೋಹೈಡ್ರೇಟ್ ಅಂಶ ಹಾಗೂ ನೈಸರ್ಗಿಕವಾಗಿ ಇರುವ ತೈಲ ಗುಣವು ಕೂದಲಿಗೆ ಪೋಷಣೆ ನೀಡುತ್ತವೆ. ಕೂದಲು ಗಾಢವಾದ ಬಣ್ಣ ಹಾಗೂ ಸುಂದರವಾದ ಹೊಳಪನ್ನು ಪಡೆದುಕೊಳ್ಳುವುದು.

4. ಕೂದಲ ಬೆಳವಣಿಗೆಗೆ

4. ಕೂದಲ ಬೆಳವಣಿಗೆಗೆ

ಬಾಳೆ ಹಣ್ಣಿನಲ್ಲಿ ಇರುವ ಉತ್ಕರ್ಷಣ ನಿರೋಧಕ ಗುಣವು ನೆತ್ತಿ ಮತ್ತು ಕೂದಲನ್ನು ಬಲವಾದ ರಕ್ಷಣಾ ವ್ಯವಸ್ಥೆಯಿಂದ ಕೂಡಿರುವಂತೆ ಮಾಡುವುದು. ಬಾಳೆ ಹಣ್ಣಿನ ಆರೈಕೆ ಪಡೆದರೆ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಬಹುದು. ಇದು ಕೂದಲು ವಯಸ್ಸಾಗುವುದನ್ನು ತಡೆಯುತ್ತದೆ. ಅಲ್ಲದೆ ಕೂದಲಿನ ಕೋಶಗಳ ಚೀಲವನ್ನು ಬಲಪಡಿಸುತ್ತದೆ. ಇದರಿಂದಾಗಿ ಕೇಶರಾಶಿಯು ಉದ್ದವಾಗಿ ಬೆಳೆಯಲು ಸಹ ಅನುಕೂಲವಾಗುವುದು.

English summary

Beauty Benefits Of Banana For Hair And Skincare

Tasty to eat, banana has multi-benefits for health, skin, and hair as well. While eating banana helps in boosting energy, banana puree gives us amazing skin and gorgeous hair. It is useful to fight off premature ageing of the skin and it is also one of the best natural treatments to get silky, smooth and shiny hair. One regular banana can add value to your beauty regime and give you quality results.
X
Desktop Bottom Promotion