For Quick Alerts
ALLOW NOTIFICATIONS  
For Daily Alerts

ಶೇವಿಂಗ್ ಮಾಡುವಾಗ 'ರೇಜರ್ ಬರ್ನ್' ಆದರೆ, ಈ ಟಿಪ್ಸ್ ಅನುಸರಿಸಿ

|

ಅಗತ್ಯವಾಗಿ ಕಚೇರಿಯಲ್ಲಿ ಮೀಟಿಂಗ್ ಕರೆದಿದ್ದಾರೆ. ಬೆಳಗ್ಗೆ ಎದ್ದು ಹೋಗಬೇಕು ಎನ್ನುವಷ್ಟರಲ್ಲಿ ತಕ್ಷಣ ಮುಖಕ್ಕೆ ಕೈಯಾಡಿಸಿದಾಗ ಗಡ್ಡ, ಮೀಸೆ ಹಾಗೆ ಬೆಳೆದಿರುವುದು. ಗಡ್ಡ ಕ್ಷೌರ ಮಾಡದೆ ಹೋದರೆ ಅದು ಶಿಸ್ತು ಎಂದು ಅನಿಸದು. ಹೀಗಾಗಿ ತುಂಬಾ ಅವಸರದಲ್ಲಿ ಗಡ್ಡ ತೆಗೆಯಲು ಮುಂದಾಗುತ್ತೀರಿ. ಈ ವೇಳೆ ಕ್ಷೌರ ಮಾಡುವಾಗ ಮುಖದ ಮೇಲೆ ಹಲವಾರು ಗಾಯಗಳು ಮೂಡುವುದು. ಮುಖದ ಮೇಲಿನ ಕೂದಲು ತೆಗೆಯಲು ಕ್ಷೌರ ಮಾಡುವುದು ಅಷ್ಟು ಸುಲಭವೇನಲ್ಲ. ಇದು ನಯವಾಗಿ ಅಥವಾ ಪ್ರಯತ್ನವಿಲ್ಲದೆ ನಡೆಯದು. ಹೀಗೆ ಕ್ಷೌರ ಮಾಡುವಾಗ ಕಾಡುವಂತಹ ಸಮಸ್ಯೆಯೆಂದರೆ ಅದು ಮುಖದ ಮೇಲೆ ಗಾಯವನ್ನು ಉಂಟು ಮಾಡುವುದು. ಇದನ್ನು ರೇಜರ್ ಬರ್ನ್ ಎಂದು ಕರೆಯಲಾಗುತ್ತದೆ. ಇಂತಹ ಸಮಸ್ಯೆಯು ಸಹಜವಾಗಿ ಕಾಡುವುದು. ಯಾಕೆಂದರೆ ಮುಖದ ಮೇಲಿನ ಕೂದಲು ತೆಗೆಯುವಾಗ ಸಹಜವಾಗಿಯೇ ಅದು ಚರ್ಮದ ಮೇಲೆ ಒತ್ತಡ ಹಾಕುವುದು. ಇದರಿಂದ ಗಾಯ ಮತ್ತು ರಕ್ತಸ್ರಾವ ಕೂಡ ಆಗುವುದು.

ರೇಜರ್ ಬರ್ನ್ ಎನ್ನುವುದು ಚರ್ಮದ ಉರಿಯೂತ ಆಗಿದೆ. ಇದು ಕ್ಷೌರ ಮಾಡುವ ವೇಳೆ ಮುಖದ ಮೇಲಿನ ಗಾಯ, ಗೆರೆ ಅಥವಾ ಕಿರಿಕಿರಿಯಾಗಿರಬಹುದು. ಇಂತಹ ಗಾಯ ಅಥವಾ ಗೆರೆಯು ಕೆಲವು ಗಂಟೆಗಳ ಕಾಲ ಅಥವಾ ದಿನಗಳ ಕಾಲ ತೊಂದರೆ ನೀಡಬಹುದು. ಅದರ ತೀವ್ರತೆಗೆ ಅನುಗುಣವಾಗಿ ಅದು ಬೇಗನೆ ಗುಣವಾಗುವುದು ಅಥವಾ ಹೆಚ್ಚು ಸಮಯ ಹಾಗೆ ಇರುವುದು. ರೇಜರ್ ಬರ್ನ್ ನ ಕೆಲವೊಂದು ಸಾಮಾನ್ಯ ಲಕ್ಷಣಗಳೆಂದರೆ ಸುಡುವುದು, ಕೆಂಪಾಗುವುದು, ತುರಿಕೆ ಇತ್ಯಾದಿ. ಕಿರಿಕಿರಿಯು ತೀವ್ರವಾಗಿದ್ದರೆ ಆಗ ಈ ಸಮಸ್ಯೆಯು ಮತ್ತಷ್ಟು ಹೆಚ್ಚಾಗಬಹುದು. ಇದರಿಂದಾಗಿ ನೋವಿನಿಂದ ಕೂಡಿದ ಬೊಕ್ಕೆ ಅಥವಾ ಗಾಯವಾಗಬಹುದು.

ರೇಜರ್ ಬರ್ನ್‌ನ್ನು ತಡೆಯಲು ತೆಗೆದುಕೊಳ್ಳಬೇಕಾದ ಕ್ರಮಗಳು

ರೇಜರ್ ಬರ್ನ್‌ನ್ನು ತಡೆಯಲು ತೆಗೆದುಕೊಳ್ಳಬೇಕಾದ ಕ್ರಮಗಳು

ರೇಜರ್ ಬರ್ನ್‌ನ್ನು ತಡೆಯಲು ತೆಗೆದುಕೊಳ್ಳಬೇಕಾದ ಮೊದಲ ಹೆಜ್ಜೆಯೆಂದರೆ ಅದು ನೋವು ಮತ್ತು ಅನಪೇಕ್ಷಿತ ಚರ್ಮದ ಪರಿಸ್ಥಿತಿಗೆ ಕಾರಣವೇನು ಎಂದು ತಿಳಿಯಬೇಕು. ರೇಜರ್ ಬರ್ನ್ ಗೆ ಹಲವಾರು ರೀತಿಯ ಕಾರಣಗಳು ಇರಬಹುದು. ಇದರಲ್ಲಿ ಮುಖ್ಯವಾಗಿ ಸೂಕ್ಷ್ಮವಾದ ಚರ್ಮ, ಕ್ಷೌರ ಮಾಡುವ ವೇಳೆ ಚರ್ಮಕ್ಕೆ ಲ್ಯುಬ್ರಿಕೆಂಟ್ ನೀಡದೆ ಇರುವುದು, ಕೆಲವೊಂದು ಕ್ರಿಮ್, ಉತ್ಪನ್ನ ಮತ್ತು ಅಂಶದಿಂದ ಆಗುವ ಪ್ರತಿಕ್ರಿಯೆ, ತುಂಬಾ ಒತ್ತಡ ಹಾಕಿ ಅಥವಾ ವೇಗವಾಗಿ ಕ್ಷೌರ ಮಾಡುವುದು, ತುಂಬಾ ಹಳೆ ಬ್ಲೇಡ್ ಬಳಕೆ ಮಾಡುವುದು, ಕ್ಷೌರದ ವೇಳೆ ಅತಿಯಾಗಿ ಒತ್ತಡ ಹಾಕುವುದರಿಂದ ಚರ್ಮದ ಅಂಗಾಂಶಗಳು ಕಿತ್ತುಹೋಗುವುದು, ಇದರ ಪರಿಣಾಮವಾಗಿ ಕಿರಿಕಿರಿ ಇತ್ಯಾದಿ ಕಂಡುಬರುವುದು, ಕೂದಲು ಬೆಳೆಯುವ ವಿರುದ್ಧ ದಿಕ್ಕಿನಲ್ಲಿ ಕ್ಷೌರ ಮಾಡುವುದು, ತುಂಬಾ ಸೂಕ್ಷ್ಮ ಅಥವಾ ಕಿರಿಕಿರಿ ಉಂಟು ಮಾಡುವ ಜಾಗದಲ್ಲಿ ಮತ್ತೆ ಕ್ಷೌರ ಮಾಡುವುದು. ರೇಜರ್ ಬರ್ನ್ ನ್ನು ಕೆಲವೊಂದು ಸರಳ ಕ್ರಮಗಳನ್ನು ಅನುಸರಿಸುವ ಮೂಲಕವಾಗಿ ತಡೆಯಬಹುದು. ಕ್ಷೌರ ಮಾಡುವ ವೇಳೆ ತುಂಬಾ ಎಚ್ಚರಿಕೆಯ ವಿಧಾನ ಅನುಸರಿಸಬೇಕು. ತುಂಬಾ ಸೂಕ್ಷ್ಮವಾಗಿರುವಂತಹ ಚರ್ಮದವರಿಗೆ ಇದು ತುಂಬಾ ಮುಖ್ಯವಾಗಿರುವುದು. ಯಾಕೆಂದರೆ ಅವರು ಕಿರಿಕಿರಿ ಅಥವಾ ಅಲರ್ಜಿಯ ಸಮಸ್ಯೆಯನ್ನು ಎದುರಿಸಬಹುದು.

Most Read: ಶೇವಿಂಗ್ ಮಾಡಬೇಕಾದಾಗ ಕ್ರೀಮ್ ಬಳಸುವ ಅಗತ್ಯವಿದೆಯಾ?

ರೇಜರ್ ಬರ್ನ್ ನಿವಾರಣೆ-ವೈದ್ಯಕೀಯ ವಿಧಾನ

ರೇಜರ್ ಬರ್ನ್ ನಿವಾರಣೆ-ವೈದ್ಯಕೀಯ ವಿಧಾನ

ರೇಜರ್ ನಿಂದಾಗಿ ಯಾವುದೇ ಗಾಯ ಅಥವಾ ಗೆರೆ ಮೂಡಿದ್ದರೆ ಅಂತಹ ಸಂದರ್ಭದಲ್ಲಿ ಕೆಲವು ದಿನಗಳ ಕಾಲ ಕ್ಷೌರ ಮಾಡದೆ ಇರುವುದು ಒಳ್ಳೆಯದು ಎಂದು ಚರ್ಮ ತಜ್ಞರು ಹೇಳುವರು. ಈಗಾಗಲೇ ಉರಿಯೂತಕ್ಕೆ ಒಳಗಾಗಿರುವಂತಹ ಚರ್ಮಕ್ಕೆ ಮತ್ತೆ ಕ್ಷೌರ ಮಾಡಿದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವುದು. ರೇಜರ್ ನಿಂದಾಗಿರುವ ಗಾಯ ಅಥವಾ ಗೆರೆ ನಿವಾರಣೆ ಮಾಡಲು ಶೇ.1ರಷ್ಟು ಹೈಡ್ರೋಕಾರ್ಟಿಸೋನ್ ಕ್ರೀಮ್ ಬಳಸಬಹುದು. ಇದರಿಂದ ಗಾಯ, ಕೆಂಪಾಗುವುದು ಮತ್ತು ಉರಿಯೂತ ನಿವಾರಣೆ ಆಗುವುದು. ಚರ್ಮವು ತುಂಬಾ ಸೂಕ್ಷ್ಮವಾಗಿದ್ದರೆ ಅಥವಾ ಮೊಡವೆಗಳು ಇದ್ದರೆ ಆಗ ನೀವು ಈ ಕ್ರೀಮ್ ಬಳಸುವ ಮೊದಲು ವೈದ್ಯರ ಸಲಹೆ ಪಡೆಯಿರಿ. ಬ್ಯಾಕ್ಟೀರಿಯಾ ವಿರೋಧಿ ವಾಶ್ ಅಥವಾ ಆ್ಯಂಟಿಬಯೋಟಿಕ್ ನ್ನು ನೀವು ಬಲಸಬಹುದು.

ಗ್ಲೈಕೊಲಿಕ್ ಆಮ್ಲ ಮತ್ತು ಸಾಲಿಸ್ಯಾಲಿಕ್ ಆಮ್ಲ(ಮೊಡವೆ ನಿವಾರಣೆಗೆ ಸಾಮಾನ್ಯವಾಗಿ ಬಳಕೆ ಮಾಡುವರು) ರೇಜರ್ ಬರ್ನ್ ನಿವಾರಣೆ ಮಾಡಲು ತುಂಬಾ ಪರಿಣಾಮಕಾರಿಯಾಗಿ ಇರುವುದು.

ಕೆಲವೊಂದು ಉತ್ಪನ್ನಗಳು

ಕೆಲವೊಂದು ಉತ್ಪನ್ನಗಳು

ರೇಜರ್ ಬರ್ನ್ ನಿವಾರಣೆ ಮಾಡಲು ಹಲವಾರು ರೀತಿಯ ಉತ್ಪನ್ನಗಳು ಇಂದು ಸೌಂದರ್ಯವರ್ಧಕ ಮಾರುಕಟ್ಟೆಯಲ್ಲಿ ಲಭ್ಯವಿದೆ. ಉದಾಹರಣೆಗೆ, ರೋಸ್ಮೆರಿ ಒಳಗೊಂಡಿರುವಂತಹ ಶೇವಿಂಗ್ ಜೆಲ್ ನ್ನು ನೀವು ಬಳಸಿಕೊಂಡರೆ ಅದರಿಂದ ಸೋಂಕಿನ ವಿರುದ್ಧ ಹೋರಾಡಬಹುದು ಮತ್ತು ತೈಲದ ಅಂಶವು ಇಲ್ಲದೆ ಇರುವ ಕಾರಣದಿಂದಾಗಿ ಚರ್ಮದ ರಂಧ್ರವನ್ನು ಮುಚ್ಚದೆ ಹಾಗೆ ಅದು ಮೊಶ್ಚಿರೈಸ್ ಮಾಡುವುದು. ಗ್ಲೈಕೊಲಿಕ್ ಆಮ್ಲವಿರುವಂತಹ ಉತ್ಪನ್ನದಲ್ಲಿ ಚಾ ಮರದ ಎಣ್ಣೆಯು ಇರುವ ಕಾರಣ ಅದು ಸತ್ತ ಚರ್ಮದ ಅಂಶವನ್ನು ತೆಗೆಯುವುದು. ಇದರೊಂದಿಗೆ ವಿಟಮಿನ್ ಇ ಯು ಚರ್ಮಕ್ಕೆ ತೇವಾಂಶ ನೀಡುವಲ್ಲಿ ತುಂಬಾ ಪರಿಣಾಮಕಾರಿಯಾಗಿದೆ. ರೇಜರ್ ಬರ್ನ್ ಎನ್ನುವುದು ನಿಮಗೆ ನಿರಂತರವಾಗಿ ಕಾಡುವಂತಹ ಸಮಸ್ಯೆಯಾಗಿದ್ದರೆ ಆಗ ಇದು ಬೇರೆ ರೀತಿಯ ಚರ್ಮದ ಸಮಸ್ಯೆಗೆ ಕಾರಣವಾಗಬಹುದು. ಇದಕ್ಕೆ ನೀವು ಕೂದಲು ತೆಗೆಯಲು ಯಾವುದೇ ಪರ್ಯಾಯ ವಿಧಾನವನ್ನು ಕಂಡುಕೊಳ್ಳಬೇಕು.

ಲೇಸರ್

ಲೇಸರ್

ಕೆಲವೊಂದು ಅಧ್ಯಯನಗಳ ಪ್ರಕಾರ ರೇಜರ್ ಬರ್ನ್ ಚಿಕಿತ್ಸೆಗೆ ಲೇಸರ್ ಚಿಕಿತ್ಸೆಯು ತುಂಬಾ ಪರಿಣಾಮಕಾರಿ ಎಂದು ಹೇಳಲಾಗುತ್ತದೆ. ನೀವು ಚರ್ಮ ತಜ್ಞರ ಜತೆಗೆ ಮಾತನಾಡಿ, ಯಟ್ರಿಯಮ್-ಅಲ್ಯೂಮಿನಿಯಂ-ಗಾರ್ನೆಟ್ ಲೇಸರ್ ಚಿಕಿತ್ಸೆ ಮಾಡಿಕೊಳ್ಳಬಹುದು.

ವಿದ್ಯುದ್ವಿಚ್ಛೇದನ

ವಿದ್ಯುದ್ವಿಚ್ಛೇದನ

ಇದು ತುಂಬಾ ಮುಂದುವರಿದ ಚಿಕಿತ್ಸಾ ವಿಧಾನವಾಗಿದೆ. ಒಂದು ಸಾಧನವನ್ನು ಬಳಸಿಕೊಂಡು ಕೂದಲಿನ ಬೆಳವಣಿಗೆಯ ಕೇಂದ್ರವನ್ನು ನಾಶ ಮಾಡಲಾಗುತ್ತದೆ. ಈ ಚಿಕಿತ್ಸೆಯನ್ನು ಯಾವಾಗಲೂ ತಜ್ಞರ ಸಮ್ಮುಖದಲ್ಲಿ ಮತ್ತು ಚರ್ಮ ತಜ್ಞರ ಸಲಹೆ ಮೇರೆಗೆ ಮಾತ್ರ ಮಾಡಬಹುದು.

ಎಲೆಕ್ಟ್ರಿಕ್ ಶೇವರ್

ಎಲೆಕ್ಟ್ರಿಕ್ ಶೇವರ್

ರೇಜರ್ ನ ಬ್ಲೇಡ್ ಗಳಿಂದಾಗಿ ತುಂಬಾ ಕಿರಿಕಿರಿ ಉಂಟಾಗುತ್ತಲಿದ್ದರೆ ಆಗ ನೀವು ಎಲೆಕ್ಟ್ರಿಕ್ ಶೇವರ್ ಗಳನ್ನು ಬಳಸಿ.

ನೈಸರ್ಗಿಕ ವಿಧಾನದಿಂದ ರೇಜರ್ ಬರ್ನ್ ನಿವಾರಣೆ

ನೈಸರ್ಗಿಕ ವಿಧಾನದಿಂದ ರೇಜರ್ ಬರ್ನ್ ನಿವಾರಣೆ

ರೇಜರ್ ಬರ್ನ್ ಉಂಟಾಗುವಂತಹ ಹೆಚ್ಚಿನ ಜನರು ನೈಸರ್ಗಿಕ ಅಥವಾ ಮನೆಮದ್ದನ್ನು ಬಳಸುವರು. ಇದು ತುಂಬಾ ಸರಳ, ಸುರಕ್ಷಿತ ಮತ್ತು ಒಳ್ಳೆಯ ಫಲಿತಾಂಶ ನೀಡುವುದು.

Most Read: ಶೇವಿಂಗ್ ಮಾಡಿಕೊಳ್ಳಬೇಕಾದಾಗ ಬ್ಲೇಡ್‌ನ ಉರಿ ತಪ್ಪಿಸಲು 10 ಸಲಹೆಗಳು

ಅಲೋವೆರಾ

ಅಲೋವೆರಾ

ಇದರಲ್ಲಿ ಶಮನಕಾರಿ ಗುಣವಿದೆ ಮತ್ತು ಇದು ಚಿಕಿತ್ಸಕ ಪ್ರಕ್ರಿಯೆಯನ್ನು ಸುಗಮಗೊಳಿಸುವುದು. ಒಂದು ತಾಜಾ ಅಲೋವೆರಾ ಎಲೆಯನ್ನು ತುಂಡು ಮಾಡಿಕೊಂಡು, ಅದರ ಲೋಳೆ ತೆಗೆಯಿರಿ ಮತ್ತು ಅದನ್ನು ನೇರವಾಗಿ ಚರ್ಮಕ್ಕೆ ಉಜ್ಜಿಕೊಳ್ಳಿ ಅಥವಾ ಅಲೋವೆರಾದ ಅಂಶವು ಅತಿಯಾಗಿ ಇರುವಂತಹ ಲೋಷನ್ ನ್ನು ನೀವು ರೇಜರ್ ಬರ್ನ್ ಗೆ ಬಳಸಬಹುದು.

ಅಸ್ಪಿರಿನ್ ಪೇಸ್ಟ್

ಅಸ್ಪಿರಿನ್ ಪೇಸ್ಟ್

ಎರಡು ಅಸ್ಪಿರಿನ್ ನ್ನು ಒಂದು ಲೋಟ ಬಿಸಿ ನೀರಿಗೆ ಹಾಕಿ ಮತ್ತು ಅದರ ನಯವಾದ ಪೇಸ್ಟ್ ಮಾಡಿಕೊಳ್ಳಿ. ಇದರ ಬಳಿಕ ಚರ್ಮಕ್ಕೆ ಹಚ್ಚಿಕೊಂಡು 10-15 ನಿಮಿಷ ಕಾಲ ಹಾಗೆ ಬಿಡಿ. ನಂಜುನಿರೋಧಕ ಹಾಗೂ ಉರಿಯೂತ ಶಮನಕಾರಿ ಗುಣ ಹೊಂದಿರುವ ಇದನ್ನು ರೇಜರ್ ಬರ್ನ್ ಚಿಕಿತ್ಸೆಗೆ ಹೆಚ್ಚಾಗಿ ಬಳಸಲಾಗುತ್ತದೆ.

ಆ್ಯಪಲ್ ಸೀಡರ್ ವಿನೇಗರ್

ಆ್ಯಪಲ್ ಸೀಡರ್ ವಿನೇಗರ್

ಆ್ಯಪಲ್ ಸೀಡರ್ ವಿನೇಗರ್ ಮತ್ತು ನೀರನ್ನು ಮಿಶ್ರಣ ಮಾಡಿಕೊಂಡು ಅದನ್ನು ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಿ. ಇದು ಆರಂಭದಲ್ಲಿ ನಿಮಗೆ ಸ್ವಲ್ಪ ಉರಿ ಉಂಟು ಮಾಡುವುದು. ಆದರೆ ಇದು ರೇಜರ್ ಬರ್ನ್ ನ್ನು ತುಂಬಾ ವೇಗವಾಗಿ ಗುಣ ಮಾಡಲು ನೆರವಾಗುವುದು.

ಟೀ ಟೀ ಮರದ ಎಣ್ಣೆ

ಟೀ ಟೀ ಮರದ ಎಣ್ಣೆ

ಚರ್ಮದ ಸೋಂಕನ್ನು ನಿವಾರಣೆ ಮಾಡುವಂತಹ ಔಷಧೀಯ ಗುಣವು ಇದರಲ್ಲಿ ಇದೆ ಎಂದು ಈಗಾಗಲೇ ಸಾಬೀತು ಆಗಿದೆ. ಇದರಲ್ಲಿ ನಂಜುನಿರೋಧಕ ಮತ್ತು ಶಿಲೀಂಧ್ರ ವಿರೋಧಿ ಗುಣಗಳು ಇವೆ ಎಂದು ಅಮೆರಿಕಾದ ಕ್ಯಾನ್ಸರ್ ಸೊಸೈಟಿ ಹೇಳಿದೆ. ಇದು ಚರ್ಮಕ್ಕೆ ಶಮನ ನೀಡುವುದು ಮತ್ತು ಮೊಡವೆಗಳಿಂದ ಆಗಿರುವಂತಹ ಗಾಯವನ್ನು ಗುಣ ಪಡಿಸುವುದು. ಇದನ್ನು ನೀವು ನೀರು ಅಥವಾ ಆಲಿವ್ ತೈಲದೊಂದಿಗೆ ಮಿಶ್ರಣ ಮಾಡಿಕೊಂಡು ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಬೇಕು.

ಓಟ್ ಮೀಲ್ ಸ್ನಾನ

ಓಟ್ ಮೀಲ್ ಸ್ನಾನ

ಕಾಲುಗಳು ಅಥವಾ ಕೈಗಳಲ್ಲಿ ರೇಜರ್ ಬರ್ನ್ ಇದ್ದರೆ ಆಗ ನೀವು ಓಟ್ ಮೀಲ್ ನ ಸ್ನಾನ ಮಾಡುವುದು ತುಂಬಾ ಪರಿಣಾಮಕಾರಿ ಆಗಿರುವುದು. ಚರ್ಮಕ್ಕೆ ಇದು ತುಂಬಾ ಪರಿಣಾಮಕಾರಿಯಾಗಿ ಇದು ಶಮನ ನೀಡುವುದು. ಓಟ್ ಮೀಲ್ ನ್ನು ಹುಡಿ ಮಾಡಿಕೊಂಡು ಅದನ್ನು ಸ್ನಾನ ಮಾಡುವ ನೀರಿಗೆ ಹಾಕಿ. ಬಿಸಿ ನೀರಿಗೆ ಹಾಕಿಕೊಂಡು 20 ನಿಮಿಷ ಕಾಲ ಹಾಗೆ ನೆನೆಯಲು ಬಿಡಿ.

ನಂಜುನಿರೋಧಕವಾಗಿ ನೀವು ಚೆಂಡು ಹೂವಿನ ಕ್ರೀಮ್ ನ್ನು ಬಳಸಿಕೊಳ್ಳಬಹುದು.

ಗ್ರೀನ್ ಟೀ

ಗ್ರೀನ್ ಟೀ

ಇದು ಶಮನವನ್ನು ಉತ್ತೇಜಿಸುವುದು ಮತ್ತು ಗಾಯದ ಆಳವನ್ನು ಕಡಿಮೆ ಮಾಡಲು ತುಂಬಾ ಪರಿಣಾಮಕಾರಿ ಆಗಿರುವುದು. ಒಂದು ಕಪ್ ಗ್ರೀನ್ ಟೀ ಮಾಡಿ ಮತ್ತು ಅದನ್ನು ಫ್ರಿಡ್ಜ್ ನಲ್ಲಿ ಇಟ್ಟು ತಂಪು ಮಾಡಿ ಮತ್ತು ಅದನ್ನು ಬಾಧಿತ ಚರ್ಮಕ್ಕೆ ಒಂದು ನಯವಾದ ಬಟ್ಟೆ ಅಥವಾ ಹತ್ತಿ ಬಳಸಿಕೊಂಡು ಹಚ್ಚಿಕೊಳ್ಳಿ.

ತಾಜಾ ಅವಕಾಡೋ

ತಾಜಾ ಅವಕಾಡೋ

ತಾಜಾ ಅವಕಾಡೋದ ತಿರುಳನ್ನು ತೆಗೆದು ಅದನ್ನು ಗಾಯವಾದ ಜಾಗಕ್ಕೆ ಹಚ್ಚಿಬಿಡಿ. ಇದು ಚರ್ಮಕ್ಕೆ ಒಳ್ಳೆಯ ಮೊಶ್ಚಿರೈಸ್ ನೀಡುವುದು.

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆ

ಇದು ಅದ್ಭುತವಾಗಿ ಮೊಶ್ಚಿರೈಸ್ ಆಗಿ ಕೆಲಸ ಮಾಡುವುದು. ರೇಜರ್ ಬರ್ನ್ ಆಗಿರುವಂತಹ ಜಾಗಕ್ಕೆ ನೀವು ಬಾದಾಮಿ ಎಣ್ಣೆ ಹಚ್ಚಿಕೊಳ್ಳಿ. ಇದು ಚರ್ಮಕ್ಕೆ ಶಮನ ನೀಡುವುದು. ತೆಂಗಿನ ಎಣ್ಣೆ ಬಳಸಿಕೊಂಡರೂ ಅದರಲ್ಲಿ ಮೊಶ್ಚಿರೈಸ್ ಗುನಗಳು ಇವೆ.

ಸ್ಟ್ರಾಬೆರಿ ಮತ್ತು ಹುಳಿ ಕ್ರೀಮ್

ಸ್ಟ್ರಾಬೆರಿ ಮತ್ತು ಹುಳಿ ಕ್ರೀಮ್

ರೇಜರ್ ನಿಂದಾಗಿ ಆಗಿರುವಂತಹ ಗಾಯದ ನೋವನ್ನು ನಿವಾರಣೆ ಮಾಡಲು ಇದು ತುಂಬಾ ಪರಿಣಾಮಕಾರಿ ಮನೆಮದ್ದು. ಸ್ವಲ್ಪ ಸ್ಟ್ರಾಬೆರಿ ರಸವನ್ನು ಹುಳಿ ಕ್ರೀಮ್ ನ ಜತೆಗೆ ಮಿಶ್ರಣ ಮಾಡಿಕೊಳ್ಳಿ. ಇದರ ಪೇಸ್ಟ್ ಮಾಡಿಕೊಳ್ಳಿ ಮತ್ತು 10-15 ನಿಮಿಷ ಕಾಲ ಚರ್ಮಕ್ಕೆ ಹಚ್ಚಿಕೊಳ್ಳಿ. ಸ್ಟ್ರಾಬೆರಿಯು ಊತ ತಗ್ಗಿಸುವುದು ಮತ್ತು ಹುಳಿ ಕ್ರೀಮ್ ತಂಪನ್ನು ನೀಡುವಲ್ಲಿ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು.

English summary

Prevent Razor Burns with these Quick to follow Tips

Razor burn is the inflammation of the skin, and includes all cuts, nicks, scratches or irritation associated with shaving. A rash or a scratch can hurt for a few hours or a few days, depending on its severity. Some of the common symptoms of razor burns include burning, redness, itching and stinging. The problem can aggravate if there is a severe case of irritation, thereby leading to painful breakouts and blisters.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X