For Quick Alerts
ALLOW NOTIFICATIONS  
For Daily Alerts

ಉಗುರುಗಳ ಆರೋಗ್ಯ ಕಾಪಾಡಲು ಸುಲಭ ಹಾಗೂ ಸರಳ ಪರಿಹಾರ

By Divya Pandith
|

ಕೈಗಳ ಸೌಂದರ್ಯ ಹೆಚ್ಚಾಗಬೇಕೆಂದರೆ ಉದ್ದವಾದ ಉಗುರು, ಅದಕ್ಕೆ ಸೂಕ್ತವಾದ ಆಕಾರ, ಉಡುಗೆಗೆ ಹೋಲುವ ಬಣ್ಣಗಳಿಂದ ಅಲಂಕಾರ ಮಾಡಿದರೆ ಅದರ ಸೊಬಗೆ ಬೇರೆ. ಸಾಮಾನ್ಯವಾಗಿ ಅನೇಕ ಮಹಿಳೆಯರು ತಮ್ಮ ಕೈ ಉಗುರು ಸುಂದರವಾಗಿ ಕಾಣಿಸಬೇಕೆಂದು ಬಯಸುತ್ತಾರೆ. ಅದಕ್ಕೆ ವಿವಿಧ ಬಗೆಯ ಬಣ್ಣಗಳಿಂದ ಅಲಂಕಾರಗೊಳಿಸುವುದು ಎಂದರೆ ಅದೇನೋ ಒಂದು ರೀತಿಯ ಖುಷಿ ಹಾಗೂ ಉತ್ಸಾಹ.

ಆದರೆ ಕೆಲವರಿಗೆ ಉಗುರು ಉದ್ದದ ಆಕಾರದಲ್ಲಿ ಬೆಳೆಯುವುದಿಲ್ಲ. ಪದೇ ಪದೇ ಮುರಿಯುವುದು, ಪೋಷಕಾಂಶಗಳ ಕೊರತೆಯಿಂದ ಉಗುರುಗಳ ಬಣ್ಣ ಕಳೆದುಕೊಳ್ಳುವುದು ಅಥವಾ ಕೆಲವು ಸೋಂಕುಗಳಿಗೆ ಒಳಗಾಗಿ ಮೊಂಡಾದ ಉಗುರನ್ನು ಹೊಂದಿರುತ್ತಾರೆ. ಅಂತಹವರಿಗಾಗಿ ಬೋಲ್ಡ್ ಸ್ಕೈ ಕೆಲವು ಆರೈಕೆಯ ವಿಧಾನಗಳನ್ನು ತಿಳಿಸಿಕೊಡುತ್ತಿದೆ.

ಶಿಲೀಂಧ್ರ ಸೋಂಕು, ಎಸ್ಜಿಮಾ, ರಕ್ತಹೀನತೆ ಮತ್ತು ಸೋರಿಯಾಸಿಸ್ ಮುಂತಾದ ಕಾರಣಗಳಿಂದ ಉಗುರು ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆಗಳಿರುತ್ತವೆ. ನೀವು ನಿಮ್ಮ ಸಮಸ್ಯೆಗಳಿಂದ ಹೊರ ಬಂದು ನೀಳವಾದ ಉಗುರು ಹಾಗೂ ಹೊಳಪಿನಿಂದ ಕೂಡಿರುವ ಉಗುರುಗಳ ಕನಸನ್ನು ಕಂಡಿದ್ದರೆ, ಈ ಮುಂದೆ ವಿವರಿಸಲಾದ ವಿಧಾನವನ್ನು ಅನುಸರಿಸಿ. ನಿಮ್ಮ ಕನಸು ನನಸಾಗುವುದು....

ತೆಂಗಿನ ಎಣ್ಣೆ

ತೆಂಗಿನ ಎಣ್ಣೆ

ತೆಂಗಿನೆಣ್ಣೆಯನ್ನು ಬಳಸುವುದರಿಂದ ಉಗುರು ಗಟ್ಟಿಯಾಗುವುದು, ತೇವಾಂಶದಿಂದ ಕೋಡಿರುವುದು ಹಾಗೂ ಉದ್ದ ಮತ್ತು ಹೊಳಪಿನಿಂದ ಕೂಡಿರುವಂತೆ ಮಾಡುತ್ತದೆ.

ಬೆಚ್ಚಗಿನ ತೆಂಗಿನೆಣ್ಣೆಯನ್ನು ನಿಮ್ಮ ಉಗುರುಗಳಿಗೆ ಅನ್ವಯಿಸಿ.

ನಂತರ 5-10 ನಿಮಿಷಗಳ ಕಾಲ ಮಸಾಜ್ ಮಾಡಿ.

ಮಸಾಜ್ ಮಾಡುವುದರಿಂದ ರಕ್ತ ಸಂಚಾರ ಸುಗಮಗೊಳ್ಳುತ್ತದೆ. ಜೊತೆಗೆ ಎಣ್ಣೆಯು ಉಗುರುಗಳನ್ನು ಹೈಡ್ರೇಟ್ ಆಗಿರುವಂತೆ ಮಾಡುತ್ತದೆ.

ನಿತ್ಯವು 2-3 ಬಾರಿ ಮಾಡುವುದರಿಂದ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದು.

ವಿಟಮಿನ್ -ಇ

ವಿಟಮಿನ್ -ಇ

ಮಾಯಿಶ್ಚರೈಸ್‌‌ಗಳ ಕೊರತೆಯಿಂದಾಗಿ ಉಗುರುಗಳು ಅನಾರೋಗ್ಯಕ್ಕೆ ತುತ್ತಾಗುತ್ತವೆ. ವಿಟಮಿನ್ ಇ ಎಣ್ಣೆ ಬಳಸುವುದರಿಂದ ಉಗುರು ಆರೋಗ್ಯಯುತವಾಗಿ ಹಾಗೂ ಉದ್ದವಾಗಿ ಬೆಳೆಯುತ್ತದೆ.

ವಿಟಮಿನ್ ಇ ಮಾತ್ರೆಯಿಂದ ಎಣ್ಣೆಯನ್ನು ತೆಗೆಯಿರಿ.

ಎಣ್ಣೆಯನ್ನು ಉಗುರುಗಳ ಮೇಲೆ ಅನ್ವಯಿಸಿ.

ಇದನ್ನು 2-3 ನಿಮಿಷಗಳ ಕಾಲ ಮಸಾಜ್ ಮಾಡಿ.

ನಿತ್ಯವೂ ಮಲಗುವ ಮುನ್ನ ಈ ವಿಧಾನವನ್ನು ಅನುಸರಿಸಿದರೆ ಉತ್ತಮ ಫಲಿತಾಂಶವನ್ನು ಪಡೆಯಬಹುದು.

ಬಿಸಿ ಎಣ್ಣೆಯ ಮಸಾಜ್

ಬಿಸಿ ಎಣ್ಣೆಯ ಮಸಾಜ್

ಬಿಸಿ ಎಣ್ ಎಣ್ಣೆಯ ಮಸಾಜ್ ಮಾಡುವುದರಿಂದ ಉಗುರುಗಳ ಮತ್ತು ತೊಗಲುಗಳ ಆರೋಗ್ಯವನ್ನು ಸುಧಾರಿಸಬಹುದು.

ನೈಸರ್ಗಿಕ ಎಣ್ಣೆಗಳಾದ ಆಲಿವ್ ಎಣ್ಣೆ, ಕ್ಯಾಸ್ಟರ್ ಎಣ್ಣೆ, ತೆಂಗಿನೆಣ್ಣೆ, ಸೂರ್ಯಕಾಂತಿ ಎಣ್ಣೆ ಹಾಗೂ ಇನ್ನಿತರ ಎಣ್ಣೆಗಳನ್ನತೆಗೆದುಕೊಳ್ಳಬಹುದು.

ಎಲ್ಲಾ ಎಣ್ಣೆಯನ್ನು ಮಿಶ್ರಗೊಳಿಸಿ.

ಅವು ಬಿಸಿಯಾಗುವಂತೆ ಮಾಡಿ.

ಸ್ವಲ್ಪ ಉಗುರು ಬೆಚ್ಚಗಿರುವಾಗ ಎಣ್ಣೆಯಲ್ಲಿ ನಿಮ್ಮ ಉಗುರುಗಳನ್ನು ಅದ್ದಿ.

ಸ್ವಲ್ಪ ಸಮಯದ ನಂತರ ನೀರಿನಿಂದ ತೊಳೆಯಿರಿ.

ನಂತರ ಒಣಗಿರುವ ಟವೆಲ್‌ನಿಂದ ಕೈಗಳನ್ನು ಒಣಗಿಸಿ.

ಇದೇ ರೀತಿ ವಾರಕ್ಕೊಮ್ಮೆ ಮಾಡಿದರೆ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದು.

ಗ್ರೀನ್ ಟೀ

ಗ್ರೀನ್ ಟೀ

ಗ್ರೀನ್ ಟೀಯಲ್ಲಿ ಸಮೃದ್ಧವಾದ ಆಂಟಿಆಕ್ಸಿಡೆಂಟ್ಗಳಿರುತ್ತವೆ. ಇವು ಉಗುರುಗಳ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಗಟ್ಟಿಯಾಗಿ ಬೆಳೆಯುವಂತೆ ಮಾಡುತ್ತದೆ. ಒಂದು ಪಾತ್ರೆಯಲ್ಲಿ ಒಂದು ಕಪ್ ನೀರನ್ನು ಹಾಕಿ.

ನೀರನ್ನು ಕುದಿಸಿ. ನಂತರ ಕೆಲವು ಗ್ರೀನ್ ಟೀ ಎಲೆಗಳನ್ನು ಹಾಕಿ.

ಉಗುರು ಬೆಚ್ಚಗಿರುವ ಟೀಯಲ್ಲಿ ಉಗುರುಗಳನ್ನು ಅದ್ದಿ. 10-15 ನಿಮಿಷಗಳ ಕಾಲ ಬಿಡಿ.

ಹೀಗೆ ದಿನದಲ್ಲಿ ಎರಡುಬಾರಿ ಮಾಡಿ.

ಇನ್ನೊಂದು ಸರಳ ವಿಧಾನವೆಂದರೆ, 2-3 ಟೀ ಚಮಚ ಗ್ರೀನ್ ಟೀಯನ್ನು ಒಂದು ಬೌಲ್ ನಲ್ಲಿ ಹಾಕಿ.

ಅದಕ್ಕೆ ಕೆಲವು ಹನಿಗಳಷ್ಟು ಗೋಧಿ ಎಣ್ಣೆ ಮತ್ತು ಉಪ್ಪನ್ನು ಸೇರಿಸಿ, ಮಿಶ್ರಗೊಳಿಸಿ.

ನಂತರ 5-10 ನಿಮಿಷಗಳ ಕಾಲ ಉಗುರುಗಳನ್ನು ಮಿಶ್ರಣದಲ್ಲಿ ಅದ್ದಿಡಿ.

ನಂತರ ಟವೆಲ್ನಿಂದ ಸ್ವಚ್ಛಗೊಳಿಸಿ.

ವಾರದಲ್ಲಿ 2-3 ಬಾರಿ ಮಾಡುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು.

ಟೊಮೆಟೊ

ಟೊಮೆಟೊ

ಟೊಮೆಟೊ ಲೈಕೋಫೀನ್ ಮತ್ತು ಬಯೊಟಿನ್‌ಗಳನ್ನು ಸಮೃದ್ಧವಾಗಿ ಪಡೆದುಕೊಂಡಿದೆ. ಇದು ಉಗುರುಗಳ ಬೆಳವಣಿಗೆಗೆ ಉತ್ತೇಜನ ನೀಡುತ್ತದೆ. ತುಂಟಾಗುವ ಪರಿಯನ್ನು ತಡೆಯುತ್ತದೆ.

ಒಂದು ಟೊಮೆಟೊವನ್ನು ಬ್ಲೆಂಡರ್/ಮಿಕ್ಸರ್ ನಲ್ಲಿ ರುಬ್ಬಿಕೊಳ್ಳಿ.

ನುಣ್ಣಗೆ ರುಬ್ಬಿ

ನಂತರ ಒಂದು ಬೌಲ್‌ಗೆ ವರ್ಗಾಯಿಸಿ

ನಂತರ ರುಬ್ಬಿಕೊಂಡ ಟೊಮೆಟೊ ರಸಕ್ಕೆ ಕೆಲವು ಹನಿಗಳಷ್ಟು ಆಲಿವ್ ಎಣ್ಣೆಯನ್ನು ಸೇರಿಸಿ.

ನಿಮ್ಮ ಉಗುರುಗಳನ್ನು ಮಿಶ್ರಣದಲ್ಲಿ 10 ನಿಮಿಷಗಳ ಕಾಲ ನೆನೆಸಿ.

ಸ್ವಚ್ಛವಾದ ಟವೆಲ್ನಿಂದ ಉಗುರುಗಳನ್ನು ಒರೆಸಿ.

ಉತ್ತಮ ಫಲಿತಾಂಶಕ್ಕೆ ದಿನಕ್ಕೊಮ್ಮೆ ಈ ವಿಧಾನವನ್ನು ಅನ್ವಯಿಸಿ.

ಆಪಲ್ ಸೈಡರ್ ವಿನೆಗರ್

ಆಪಲ್ ಸೈಡರ್ ವಿನೆಗರ್

ಇದರಲ್ಲಿ ಪೊಟ್ಯಾಸಿಯಮ್, ಮೆಗ್ನಿಷಿಯಂ, ಕಬ್ಬಿಣ ಸೇರಿದಂತೆ ಅನೇಕ ಬಗೆಯ ಉತ್ತಮ ಪೋಷಕಾಂಶಗಳನ್ನು ಒಳಗೊಂಡಿದೆ. ಇವು ಉಗುರುಗಳ ಆರೋಗ್ಯವನ್ನು ಕಾಪಾಡುತ್ತವೆ.

ಎರಡು ಟೀ ಚಮಚಮ ಆಪಲ್ ವಿನಿಗರ್ ತೆಗೆದುಕೊಂಡರೆ ಅದೇ ಪ್ರಮಾಣದಷ್ಟು ನೀರನ್ನು ಸೇರಿಸಿ.

ಅದರಲ್ಲಿ ಉಗುರುಗಳನ್ನು ಅದ್ದಿ 10 ನಿಮಿಷಗಳ ಕಾಲ ಬಿಡಿ.

ಒಂದು ಟವೆಲ್ ಸಹಾಯದಿಂದ ಕೈಗಳನ್ನು ಒಣಗಿಸಿ.

ನಿತ್ಯವೂ ಈ ವಿಧಾನ ಅನ್ವಯಿಸಿದರೆ ಉತ್ತಮ ಫಲಿತಾಂಶ ಪಡೆಯ ಬಹುದು.

ಮೊಟ್ಟೆಯ ಹಳದಿ ಭಾಗ ಮತ್ತು ಜೇನುತುಪ್ಪ

ಮೊಟ್ಟೆಯ ಹಳದಿ ಭಾಗ ಮತ್ತು ಜೇನುತುಪ್ಪ

ಮೊಟ್ಟೆಯ ಹಳದಿಯ ಭಾಗ ಉಗುರುಗಳನ್ನು ಬಲಪಡಿಸಲು ಪ್ರೋಟೀನ್ಗಳನ್ನು ನೀಡಿದರೆ ಜೇನುತುಪ್ಪ ಸೋಂಕುಗಳಿಂದ ರಕ್ಷಣೆ ನೀಡುತ್ತದೆ.

ಮೊಟ್ಟೆಯ ಹಳದಿ ಭಾಗ ಮತ್ತು ಟ ಟೇಬಲ್ ಚಮಚ ಜೇನುತುಪ್ಪವನ್ನು ಸೇರಿಸಿ.

ಮಿಶ್ರಣಕ್ಕೆ ಸ್ವಲ್ಪ ನೀರನ್ನು ಸೇರಿಸಿ.

ಮಿಶ್ರಣವು ಬಹಳ ತೆಳುವಾಗಿರಬಾರದು. ಗಟ್ಟಿಯಾಗಿರಬೇಕು.

ನಂತರ ಅವುಗಳನ್ನು ಉಗುರುಗಳಿಗೆ ಅನ್ವಯಿಸಿ, 10 ನಿಮಿಷಗಳ ಕಾಲ ಆರಲು ಬಿಡಿ.

ನಂತರ ಸಾಮಾನ್ಯ ನೀರಿನಲ್ಲಿ ತೊಳೆಯಿರಿ.

ಅಗಸೆ ಬೀಜದ ಎಣ್ಣೆ

ಅಗಸೆ ಬೀಜದ ಎಣ್ಣೆ

ಅಗಸೆ ಬೀಜದ ಎಣ್ಣೆ ವಿಟಮಿನ್ ಬಿ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಒಮೆಗಾ -3 ಕೊಬ್ಬಿನ ಆಮ್ಲಗಳಂತಹ ಆರೋಗ್ಯಕರ ಘಟಕಗಳನ್ನು ಹೊಂದಿರುತ್ತವೆ. ಈ ಘಟಕಗಳು ನಿಮ್ಮ ಉಗುರುಗಳನ್ನು ಆರೋಗ್ಯಕರವಾಗಿ ಮತ್ತು ಪ್ರಬಲವಾಗಿ ಇರುವಂತೆ ಮಾಡುತ್ತವೆ.

ಅಗಸೆ ಬೀಜದ ಎಣ್ಣೆಯನ್ನು ಉಗುರುಗಳಿಗೆ ಅನ್ವಯಿಸಿ.

ಕೆಲವು ಸಮಯಗಳ ಕಾಲ ಮಸಾಜ್ ಮಾಡಿ.

ಮಲಗುವ ಮುನ್ನ ನಿತ್ಯವೂ ಈ ಪ್ರಕ್ರಿಯೆಯನ್ನು ಮಾಡಿ. ಉತ್ತಮ ಫಲಿತಾಂಶ ಪಡೆಯಿರಿ.

ಬಿಯರ್

ಬಿಯರ್

ಬಿಯರ್ ಪೊಟ್ಯಾಸಿಯಮ್, ಮೆಗ್ನೀಶಿಯಂ, ಸೆಲೆನಿಯಮ್ ಅನ್ನು ಹೊಂದಿರುತ್ತದೆ, ಇದು ನಿಮ್ಮ ಉಗುರುಗಳನ್ನು ಬಲಪಡಿಸುತ್ತದೆ ಮತ್ತು ಪೋಷಿಸುತ್ತದೆ.

ಅರ್ಧ ಕಪ್ ಬಿಯರ್ ತೆಗೆದುಕೊಳ್ಳಿ.

ಅದಕ್ಕೆ 1/4 ಕಪ್ ಆಪಲ್ ಸೈಡರ್ ವಿನೆಗರ್ ಸೇರಿಸಿ.

ಆಲಿವ್ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ.

ಎಲ್ಲಾ ಸಾಮಾಗ್ರಿಗಳನ್ನು ಸೇರಿಸಿ, ಮಿಶ್ರಗೊಳಿಸಿ.

ನಿಮ್ಮ ಬೆರಳುಗಳನ್ನು ಈ ಮಿಶ್ರಣದಲ್ಲಿ 10-15 ನಿಮಿಷಗಳ ಕಾಲ ನೆನೆಸಿ.

ಪ್ರತಿ ವಾರಕ್ಕೊಮ್ಮೆ ಈ ಪ್ರಕ್ರಿಯೆಯನ್ನು ಮಾಡಿದರೆ ಉತ್ತಮ ಫಲಿತಾಂಶ ಪಡೆಯಬಹುದು.

ಸಮುದ್ರದ ಉಪ್ಪು

ಸಮುದ್ರದ ಉಪ್ಪು

ಸಮುದ್ರ ಉಪ್ಪು ನಿಮ್ಮ ಉಗುರುಗಳಿಗೆ ಬಹಳ ಒಳ್ಳೆಯ ಗುಣಗಳನ್ನು ಹೊಂದಿದೆ. ಇದು ನಿಮ್ಮ ಉಗುರುಗಳನ್ನು ಪ್ರಬಲವಾಗಿಸುತ್ತದೆ ಮತ್ತು ನಿಮ್ಮ ಉಗುರುಗಳಿಗೆ ಹೊಳಪನ್ನು ನೀಡುತ್ತದೆ.

ಒಂದು ಬೌಲ್‌ನಲ್ಲಿ ಬೆಚ್ಚಗಿನ ನೀರನ್ನು ತೆಗೆದುಕೊಳ್ಳಿ. ಅದಕ್ಕೆ 2 ಟೇಬಲ್ ಚಮಚ ಸಮುದ್ರದ ಉಪ್ಪನ್ನು ಸೇರಿಸಿ.

ನಿಮ್ಮ ಬೆರಳುಗಳನ್ನು ಅದರಲ್ಲಿ ಅದ್ದಿ15-20 ನಿಮಿಷಗಳ ಕಾಲ ನೆನೆಯಲು ಬಿಡಿ.

ಸ್ವಚ್ಛವಾದ ಟವೆಲ್ ನಿಂದ ಕೈಗಳನ್ನು ಒಣಗಿಸಿ.

ಪ್ರತಿ ದಿನ ಈ ಪ್ರಕ್ರಿಯೆಯನ್ನು ಮಾಡಿದರೆ ಉತ್ತಮ ಫಲಿತಾಂಶ ಪಡೆಯಬಹುದು.

ಉಗುರುಗಳನ್ನು ಬಲಪಡಿಸುವುದು ಹೇಗೆ

ಉಗುರುಗಳನ್ನು ಬಲಪಡಿಸುವುದು ಹೇಗೆ

ಬಲವಾದ ಉಗುರುಗಳಿಗಾಗಿ ನೀವು ಅನುಸರಿಸಬಹುದಾದ ಕೆಲವು ಹಂತಗಳು ಇಲ್ಲಿವೆ:

ಆಹಾರ: ನಿಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ ಉಗುರುಗಳ ಆರೋಗ್ಯವನ್ನು ಕಾಪಾಡಬಹುದು. ಮೊಟ್ಟೆ, ಹೂಕೋಸು, ಬಾದಾಮಿ, ಮಸೂರ, ಸೋಯಾಬೀನ್, ಹಾಲು ಮುಂತಾದ ಪ್ರೋಟೀನ್‌ಗಳು, ಖನಿಜಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ.ವ್ಯಾಯಾಮ: ನಿಯಮಿತ ವ್ಯಾಯಾಮವು ರಕ್ತ ಪರಿಚಲನೆಯಲ್ಲಿ ಸಹಾಯ ಮಾಡುತ್ತದೆ. ಇದು ನಿಮ್ಮ ಉಗುರುಗಳನ್ನು ಆರೋಗ್ಯಕರವಾಗಿ ಮತ್ತು ಬಲವಾಗಿ ಮಾಡುತ್ತದೆ. ನೀರು ಹೆಚ್ಚು ನೀರನ್ನು ಕುಡಿಯುವುದರಿಂದ ಉಗುರುಗಳ ಆರೋಗ್ಯ ಉತ್ತಮವಾಗಿರುತ್ತವೆ.

ಉಗುರುಗಳನ್ನು ಗ್ರೂಮ್ ಮಾಡಿ

ಉಗುರುಗಳನ್ನು ಗ್ರೂಮ್ ಮಾಡಿ

ನಿಮ್ಮ ಉಗುರುಗಳನ್ನು ನಿಯಮಿತವಾಗಿ ಫೈಲ್ ಮಾಡಿ. ಇದು ನಿಮ್ಮ ಉಗುರುಗಳನ್ನು ಒಡೆಯುವ ಮತ್ತು ಸಿಪ್ಪೆ ಸುರಿಯುವಂತಹ ಸಮಸ್ಯೆಗಳನ್ನು ತಡೆಯುತ್ತದೆ. ಕೈ ಗ್ಲೌಸ್: ಬಟ್ಟೆ ಮತ್ತು ಭಕ್ಷ್ಯಗಳನ್ನು ತೊಳೆಯುತ್ತಿರುವಾಗ ಕೈ ಗ್ಲೌಸ್ ಗಳನ್ನು ಬಳಸಿ. ಇದು ನಿಮ್ಮ ಉಗುರುಗಳನ್ನು ಸಾಬೂನು ಮತ್ತು ಮಾರ್ಜಕಗಳಲ್ಲಿ ಕಠಿಣವಾದ ವಿಷಯದಿಂದ ರಕ್ಷಿಸುತ್ತದೆ.

ಮುನ್ನೆಚ್ಚರಿಕೆ

ಮುನ್ನೆಚ್ಚರಿಕೆ

ಉಗುರು ಬಣ್ಣವನ್ನು ಅನ್ವಯಿಸುವಾಗ ಜಾಗರೂಕರಾಗಿರಿ.ಇದು ಅಸಿಟೋನ್ ಮತ್ತು ಫಾರ್ಮಾಲ್ಡಿಹೈಡ್ನಂತಹ ಹಾನಿಕಾರಕ ರಾಸಾಯನಿಕಗಳನ್ನು ಹೊಂದಿಲ್ಲವೆಂದು ಖಚಿತಪಡಿಸಿಕೊಳ್ಳಿ.

ಹೆಚ್ಚಿನ ಆಲ್ಕೋಹಾಲ್ ವಿಷಯದೊಂದಿಗೆ ಕೈ ಸ್ಯಾನಿಟೈಜರ್ಗಳನ್ನು ಬಳಸುವುದನ್ನು ತಪ್ಪಿಸಿ. ಇದು ನಿಮ್ಮ ಉಗುರುಗಳನ್ನು ಸುಲಭವಾಗಿ ಹಾಳು ಮಾಡುತ್ತದೆ.

ನೇಲ್ ಪಾಲಿಶ್ ರಿಮೂವರ್ ಗಳನ್ನು ಹೆಚ್ಚು ಬಳಸದಿರಿ. ಅದು ಉಗುರುಗಳ ಆರೋಗ್ಯವನ್ನು ಹಾಳುಮಾಡುತ್ತದೆ.

English summary

Amazing Home Remedies To Treat Brittle Nails

When nails break, it can be very painful. Brittle nails are a common problem faced by both men and women. What causes nails to break? There are many factors like ageing, over-exposure to chemicals, frequent hand washing, dehydration, frequent use of nail polish, or even scratching your pet. In this article we will provide you with some homemade remedies that will help you make your nails stronger. Let's take a look.
X
Desktop Bottom Promotion