Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಪಾದಗಳನ್ನು ನೋಡಿದರೆ ಮುತ್ತಿಡುವಂತೆ ಇರಬೇಕು!
ಇತ್ತೀಚಿನ ದಿನಗಳಲ್ಲಿ ಪಾದಗಳ ಆರೈಕೆಯ ಬಗ್ಗೆ ಹೆಚ್ಚಿನವರು ಗಮನಹರಿಸುತ್ತಿದ್ದಾರೆ. ವಿಶೇಷವಾಗಿ ಮಹಿಳೆಯರು ಎತ್ತರದ ಚಪ್ಪಲಿಗಳನ್ನು ಖರೀದಿಸಲು ಮುಗಿಬೀಳುತ್ತಿದ್ದಾರೆ. ಇನ್ನೂ ಕೆಲವರು ಮೆತ್ತನೆಯ ಚಪ್ಪಲಿಗಳತ್ತ ಗಮನಹರಿಸುತ್ತಿದ್ದಾರೆ. ಒಟ್ಟಾರೆಯಾಗಿ ತಮ್ಮ ಪಾದಗಳು ವಿವಿಧ ರಂಗಿನಿಂದ ಆಕರ್ಷಕವಾಗಿ ಕಾಣಬೇಕೆಂಬುದು ಎಲ್ಲರ ಬಯಕೆಯಾಗಿದೆ. ನಿಮ್ಮ ಕಾಲಿನ ಆರೈಕೆಯು ಮುಂದಿನ ಆಗುಹೋಗುಗಳನ್ನು ತಡೆಯತ್ತದೆ. ಈ ನಿಟ್ಟಿನಲ್ಲಿ ಕಾಲಿನ ಆರೈಕೆಯ ಬಗ್ಗೆ ಈ ತಾಣದಲ್ಲಿ ಅನೇಕ ಸಂಗತಿಗಳನ್ನು ಈ ಹಿಂದೆ ನಿಮಗಾಗಿ ನೀಡಲಾಗಿದೆ. ಈ ಲೇಖನದಲ್ಲಿಯೂ ಸಹ ಕೆಲವು ಸಂಗತಿಗಳನ್ನು ನೀಡಲಾಗಿದೆ.
ನಿಮ್ಮ ಕಾಲನ್ನು ಬಿಸಿಲಿಗೆ ಹೆಚ್ಚು ಒಡ್ಡಿದರೆ, ಮೆಲನಿನ್ ಎಂಬ ಸತ್ವವು ಉತ್ಪತ್ತಿಯಾಗುತ್ತದೆ. ಇದರಿಂದ ಚರ್ಮವು ಕಪ್ಪಾಗಲು ಪ್ರಾರಂಭಿಸುತ್ತದೆ. ಔಷಧ ಉತ್ಪನ್ನಗಳು ಕೇವಲ ನಿಮ್ಮ ಚರ್ಮದ ಸತ್ತ ಜೀವ ಕೋಶಗಳನ್ನು ಹೊರತೆಗೆದು ಪಾದವನ್ನು ಹಿತಗೊಳಿಸುತ್ತದೆ. ಆದರೆ ಕಪ್ಪು ಕಲೆಗಳನ್ನು ಹೋಗಲಾಡಿಸುವ ಬಗೆ ಹೇಗೆ? ಬನ್ನಿ ಪಾದದ ಕಪ್ಪು ಕಲೆಗಳನ್ನು ಹೋಗಲಾಡಿಸಲು ಕೆಲವು ಸೌಂದರ್ಯವರ್ಧಕ ಪ್ಯಾಕ್‌ಗಳ ಸಂಗತಿಗಳನ್ನು ನಿಮ್ಮ ಉಪಯೋಗಕ್ಕಾಗಿ ಈ ಲೇಖನದಲ್ಲಿ ನೀಡಲಾಗಿದೆ, ಮುಂದೆ ಓದಿ... ಪಾದದ ದುರ್ವಾಸನೆಯಿಂದ ಬೇಸತ್ತು ಹೋಗಿದ್ದೀರಾ?
ಕಿತ್ತಳೆ ಹಣ್ಣಿನ ಸಿಪ್ಪೆ ಮತ್ತು ಹಾಲಿನ ಪ್ಯಾಕ್
ಕಿತ್ತಳೆ ಹಣ್ಣಿನ ಸಿಪ್ಪೆಯಲ್ಲಿ ಕೆಲವು ವಿಶೇಷ ಗುಣಗಳಿದ್ದು, ನಿಮ್ಮ ಚರ್ಮದಲ್ಲಿನ ಧೂಳನ್ನು ಸ್ವಾಭಾವಿಕವಾಗಿ ಹೊರತೆಗೆದು, ಕಪ್ಪು ಕಲೆಗಳನ್ನು ಸಕಾಲದಲ್ಲಿ ನಿವಾರಿಸುತ್ತದೆ. ಹಾಲಿನಲ್ಲಿ ಲ್ಯಾಕ್ಟಿಕ್ ಆಸಿಡ್ ಸತ್ವವು ಹೇರಳವಾಗಿದ್ದು, ಚರ್ಮದ ಮೇಲ್ಮೈನಲ್ಲಿರುವ ಸತ್ತ ಜೀವಕೋಶಗಳನ್ನು ಹೊರಹಾಕುತ್ತದೆ. ಹಾಲಿನಲ್ಲಿರುವ ತೇವಾಂಶ ನೀಡುವ ಲಕ್ಷಣದಿಂದ ನಿಮ್ಮ ಒರಟಾದ ಪಾದವು ಮೃದುಗೊಂಡು ಹೆಚ್ಚು ನಾಜೂಕಾಗುತ್ತದೆ.

ಉಪಯೋಗಿಸುವ ವಿಧಾನ
*ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಬಿಸಿಲಲ್ಲಿ ಒಣಗಿಸಿ ಮೃದುವಾದ ಪುಡಿಯಾಗುವವರೆಗೆ ರುಬ್ಬಿಕೊಳ್ಳಿ.
*ಈಗ ಇದಕ್ಕೆ 4 ರಿಂದ 5 ಚಮಚ ಹಾಲನ್ನೆ ಬೆರೆಸಿ ದಪ್ಪನೆಯ ಪೇಸ್ಟ್ ತಯಾರಿಸಿ.
*ಈ ಪೇಸ್ಟ್ ಅನ್ನು ನಿಮ್ಮ ಪಾದದ ಮೇಲೆ ಹಚ್ಚಿ 20 ರಿಂದ 25 ನಿಮಿಷಗಳ ಕಾಲ ಹಾಗೆಯೇ ಬಿಡಿ.
*ನಂತರ ಬೆಚ್ಚನೆಯ ನೀರಿನಿಂದ ಸ್ವಚ್ಛಗೊಳಿಸಿ.
*ನಂತರ ಟವಲ್ ನಿಂದ ಪಾದವನ್ನು ಒರೆಸಿ ಮತ್ತು ಸೌಮ್ಯವಾದ ಮಾಯಿಶ್ಚರೈಸರ್ ಅನ್ನು ಲೇಪಿಸಿ.
*ಈ ಪ್ರಕ್ರಿಯೆಯನ್ನು ವಾರಕ್ಕೆ ಮೂರು ಬಾರಿ ಅನುಸರಿಸಿದರೆ ಉತ್ತಮ ಫಲಿತಾಂಶ ದೊರಕುತ್ತದೆ. ಇದರಿಂದ ನಿಮ್ಮ ಪಾದದಲ್ಲಿನ ಕಪ್ಪು ಕಲೆಗಳು ನಿವಾರಣೆಯಾಗಿರುವುದನ್ನು ಗಮನಿಸುತ್ತೀರಿ. ಪಾದದ ಸೌಂದರ್ಯಕ್ಕೆ ಕೇವಲ 5 ನಿಮಿಷ ನೀಡಿ ಸಾಕು
ಲಿಂಬೆ ಮತ್ತು ಜೇನಿನ ಪ್ಯಾಕ್
ಲಿಂಬೆಯಲ್ಲಿ ಆಮ್ಲಯುಕ್ತ ಗುಣಲಕ್ಷಣವಿದ್ದು, ಇದು ನೈಸರ್ಗಿಕವಾದ ಸ್ವಚ್ಛಗೊಳಿಸುವ ಸಾಧನವಾಗಿದೆ. ಜೇನುತುಪ್ಪವು ನಿಮ್ಮ ಚರ್ಮಕ್ಕೆ ಒಳಗಿನಿಂದಲೇ ತೇವಾಂಶ ನೀಡುವ ಸಾಧನವಾಗಿದೆ.
ಉಪಯೋಗಿಸುವ ಕ್ರಮಗಳು
*ಒಂದು ಚಮಚ ಲಿಂಬೆ ರಸಕ್ಕೆ ಮತ್ತು ಒಂದು ಚಮಚ ಜೇನನ್ನು ಬೆರೆಸಿ
*ಒಂದು ಚಮಚ ಹಾಲಿನ ಪುಡಿಯನ್ನು ಸಹ ಬೆರೆಸಿ
*ಈ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಕಲಸಿ ಪೇಸ್ಟ್ ರೂಪ ಬರುವವರೆಗೆ ಮಿಶ್ರಣ ಮಾಡಿ ನಿಮ್ಮ ಪಾದದ ಮೇಲೆ ಹಚ್ಚಿಕೊಳ್ಳಿ.
*ಇದನ್ನು 20 ನಿಮಿಷಗಳ ಕಾಲ ಹಾಗೆಯೇ ಬಿಡಿ ನಂತರ ಬೆಚ್ಚನೆಯ ನೀರಿನಿಂದ ಸ್ವಚ್ಛಗೊಳಿಸಿ.
*ನಂತರ ಸೂರ್ಯನ ಬೆಳಕಿಗೆ ಹೋಗುವ ಮುನ್ನ ಸನ್ ಸ್ಕ್ರೀನ್ ಅನ್ನು ನಿಮ್ಮ ಪಾದಗಳಿಗೆ ಲೇಪಿಸಿಕೊಳ್ಳುವುದನ್ನು ಮರೆಯದಿರಿ.



Click it and Unblock the Notifications
