ತುಟಿ ಕಪ್ಪು ಬಣ್ಣಕ್ಕೆ ತಿರುಗಿದ್ದರೆ ಹೀಗೆ ಮಾಡಿ

Posted By:
Subscribe to Boldsky

ಕಪ್ಪಾದ ತುಟಿಗಳು ನಮ್ಮ ಸೌಂದರ್ಯವನ್ನು ಮಂಕಾಗಿಸುತ್ತದೆ, ಎಲ್ಲರಿಗೂ ಸ್ವಾಭಾವಿಕವಾಗಿ ಕೆಂದುಟಿಯ ಚೆಲುವು ಇರುವುದಿಲ್ಲ, ಹಾಗಂತ ನೈಸರ್ಗಿಕವಾದ ನಮ್ಮ ತುಟಿಯ ಬಣ್ಣ ತುಂಬಾ ಕಪ್ಪಾಗಿಯೂ ಇರುವುದಿಲ್ಲ. ಧೂಮಪಾನದ ಚಟ, ತುಟಿಯ ಬಗ್ಗೆ ಸರಿಯಾಗಿ ಆರೈಕೆ ತೆಗೆದುಕೊಳ್ಳದಿರುವುದು, ಅತೀಯಾದ ತುಟಿಯ ಮೇಕಪ್ ಈ ಎಲ್ಲಾ ಕಾರಣಗಳಿಂದ ತುಟಿ ಕಪ್ಪು ಬಣ್ಣಕ್ಕೆ ತಿರುಗುವುದು.

 ಕಪ್ಪಾದ  ತುಟಿಯನ್ನು ಮರೆಮಾಚಲು ಮೇಕಪ್ ಮಾಡಿದರೆ  ತುಟಿ ಮತ್ತಷ್ಟು  ಕಪ್ಪಾಗುವುದು, ಆದ್ದರಿಂದ  ತುಟಿಯ ಕಪ್ಪು ಬಣ್ಣವನ್ನು  ಹೋಗಲಾಡಿಸಲು  ನೈಸರ್ಗಿಕವಾದ  ವಿಧಾನಗಳನ್ನು ಅನುಸರಿಸುವುದು ಒಳ್ಳೆಯದು. ಇಲ್ಲಿ ನಾವು ಕೆಲ ಟಿಪ್ಸ್ ನೀಡಿದ್ದೇವೆ, ಅವಗಳನ್ನು ಪಾಲಿಸಿದರೆ ತುಟಿಯ ಕಪ್ಪು ಬಣ್ಣವನ್ನು ಹೋಗಲಾಡಿಸಿ, ನೈಸರ್ಗಿಕವಾದ ತುಟಿಯ ಚೆಲುವನ್ನು ನಿಮ್ಮದಾಗಿಸಿಕೊಳ್ಳಬಹುದು.

ಗ್ಲಿಸೆರಿನ್

ಗ್ಲಿಸೆರಿನ್

ತುಟಿಗೆ ಗ್ಲಿಸೆರಿನ್ ಹಚ್ಚಿ, ಗ್ಲಿಸೆರಿನ್ ಹಚ್ಚುವುದರಿಂದ ತುಟಿ ಒಡೆಯುವ ಸಮಸ್ಯೆ, ತುಟಿ ಡ್ರೈಯಾಗುವುದು ಈ ರೀತಿಯ ಸಮಸ್ಯೆಯಿಂದ ಹೊರ ಬರಬಹುದು. ಅಲ್ಲದೆ ಗ್ಲಿಸೆರಿನ್ ತುಟಿಯ ಹೊಳಪನ್ನೂ ಹೆಚ್ಚಿಸುತ್ತದೆ.

ಜೇನು

ಜೇನು

ತುಟಿಗೆ ಜೇನು ಹಚ್ಚುವುದರಿಂದಲೂ ನೈಸರ್ಗಿಕವಾದ ತುಟಿಯ ಅಂದವನ್ನು ಮರಳಿ ಪಡೆಯಬಹುದು.

ಕನ್ಸೀಲರ್

ಕನ್ಸೀಲರ್

ತುಟಿ ತುಂಬಾ ಕಪ್ಪಾಗಿದ್ದರೆ ಅದನ್ನು ತಡೆಯಲು ಸ್ವಲ್ಪ ಕನ್ಸೀಲರ್ ಹಚ್ಚಿ, ನಂತರ ಲಿಪ್ ಗ್ಲೋಸ್ ಹಚ್ಚಿದರೆ ತುಟಿ ಆಕರ್ಷಕವಾಗಿ ಕಾಣುವುದು.

ನಿಂಬೆ ರಸ

ನಿಂಬೆ ರಸ

ತುಟಿಯ ನಿರ್ಜೀವ ತ್ವಚೆಯನ್ನು ಹೋಗಲಾಡಿಸಿ, ತುಟಿಯ ಕಪ್ಪು ಬಣ್ಣವನ್ನು ಹೋಗಲಾಡಿಸುವ ಗುಣ ನಿಂಬೆ ಹಣ್ಣಿನಲ್ಲಿದೆ. ಪ್ರತೀದಿನ ಚಿಕ್ಕ ನಿಂಬೆ ಹಣ್ಣಿನ ತುಂಡು ತೆಗೆದು ಅದರಿಂದ ತುಟಿಯನ್ನು ತಿಕ್ಕಿದರೆ ತುಟಿಯಲ್ಲಿನ ಕಪ್ಪು ಬಣ್ಣವನ್ನು ಹೋಗಲಾಡಿಸಬಹುದು.

ಲಿಪ್ ಮಾಸ್ಕ್

ಲಿಪ್ ಮಾಸ್ಕ್

ಅರ್ಧ ಚಮಚ ಅರಿಶಿಣಕ್ಕೆ, ಅರ್ಧ ಚಮಚ ಕಡಲೆ ಹಿಟ್ಟು ಹಾಕು ಅದನ್ನು ಸ್ವಲ್ಪ ಹಾಲು ಹಾಕಿ ಪೇಸ್ಟ್ ರೀತಿ ಮಾಡಿ ತುಟಿಯ ಮೇಲೆ ಹಚ್ಚಿ, ಈ ರೀತಿ ಪ್ರತೀದಿನ 2 ವಾರಗಳವರೆಗೆ ಮಾಡುತ್ತಾ ಬಂದರೆ ನಿಮ್ಮ ತುಟಿಯಲ್ಲಿನ ಕಪ್ಪು ಬಣ್ಣ ಮಾಸುವುದು ನಿಮ್ಮ ಗಮನಕ್ಕೆ ಬರುವುದು.

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆ

ರಾತ್ರಿ ಮಲಗುವಾಗ ಬಾದಾಮಿ ಎಣ್ಣೆ ಹಚ್ಚಿ ಮಲಗಿ, ಬಾದಾಮಿ ಎಣ್ಣೆ ತುಟಿ ಡ್ರೈಯಾಗುವುದನ್ನು ತಪ್ಪಿಸಿ, ತುಟಿಯ ಹೊಳಪನ್ನು ಹೆಚ್ಚಿಸುವುದು.

English summary

Ways To Hide Darkness Around Lips

Some women are born with a dark patch around their lips and others acquire dark patches around their lips due to the lifestyle and constant exposure to the harsh sun. ere are some ways to hide the darkness around your lips.