For Quick Alerts
ALLOW NOTIFICATIONS  
For Daily Alerts

ಕೆಂದುಟಿಯ ಚೆಲುವು ಬೇಕೆಂದರೆ ಹೀಗೆ ಮಾಡಿ

By Super
|

ತುಟಿಗಳು ನಿಮ್ಮ ಮುಖದ ಪ್ರಮುಖವಾದ ಭಾಗವಾಗಿದ್ದು, ನಿಮ್ಮ ನಗುವನ್ನು ಇನ್ನಷ್ಟು ಪ್ರಕಾಶಮಾನ ಹಾಗೂ ಆಕರ್ಷಣೀಯವನ್ನಾಗಿಸುತ್ತವೆ. ಪ್ರತಿಯೊಬ್ಬ ವ್ಯಕ್ತಿಯೂ ಕೂಡ, ಅದರಲ್ಲೂ ವಿಶೇಷವಾಗಿ ಮಹಿಳೆಯರು, ಗುಲಾಬಿವರ್ಣದ ಅಂದವಾದ ತುಟಿಗಳುಳ್ಳವರಾಗಿರಲು ಬಯಸುತ್ತಾರೆಯೇ ಹೊರತು, ಶರೀರದ ಇತರ ಭಾಗಗಳಿಗೆ ನೀಡುವಷ್ಟು ಪ್ರಾಮುಖ್ಯತೆಯನ್ನು ತುಟಿಗಳಿಗೆ ನೀಡುವುದು ಅತಿ ವಿರಳ. ಈ ಕಾರಣದಿಂದಾಗಿಯೇ ಬಹಳಷ್ಟು ಜನರ ತುಟಿಗಳು ಬಿರುಕುಗೊಂಡಿದ್ದು, ಸಹಜವಾದ ವರ್ಣವನ್ನು ಕಳೆದುಕೊಂಡು ಪೇಲವವಾಗಿ ಕಾಣಿಸುತ್ತವೆ.

ತುಟಿಗಳ ಆರೈಕೆಗೆ ನೀವೇನೂ ಬಹಳಷ್ಟು ಪರಿಶ್ರಮ ಪಡಬೇಕಾಗಿಲ್ಲ. ಪ್ರತಿದಿನ ಕೇವಲ 3 ರಿಂದ 5 ನಿಮಿಷಗಳ ಕಾಲಾವಕಾಶವನ್ನು ಇದಕ್ಕಾಗಿ ಮಿಸಲಾಗಿಟ್ಟರೆ ಸಾಕು. ನಿಮ್ಮ ತುಟಿಗಳನ್ನು ಯೋಗ್ಯವಾದ ರೀತಿಯಲ್ಲಿ ಆರೈಕೆ ಮಾಡಿ, ಆರೋಗ್ಯಕರವಾದ, ಗುಲಾಬಿ ವರ್ಣದ ತುಟಿಗಳನ್ನು ಪಡೆಯಲು ಈ ಕೆಳಗೆ ಕೆಲವು ಸರಳವಾದ ಸೂತ್ರಗಳನ್ನು ನೀಡಲಾಗಿದೆ.

1. ಬ್ರಷ್ ನ ಚಮತ್ಕಾರ

1. ಬ್ರಷ್ ನ ಚಮತ್ಕಾರ

ಪ್ರತಿ ಬಾರಿ ನೀವು ಹಲ್ಲುಜ್ಜುವಾಗ, ನಿಮ್ಮ ಟೂಥ್ ಬ್ರಷ್ ನಿಂದ ನಿಮ್ಮ ತುಟಿಗಳನ್ನು ಉಜ್ಜಿರಿ. ಹೀಗೆ ಮಾಡುವುದರಿಂದ ನಿಮ್ಮ ತುಟಿಗಳ ಮೇಲಿನ ಎಲ್ಲಾ ಧೂಳು, ಒಣಗಿದ ಜೊಲ್ಲು, ಹಾಗೂ ಒಡೆದ ಚರ್ಮ ಇವು ನಿವಾರಣೆಯಾಗುತ್ತವೆ ಹಾಗೂ ನಿಮ್ಮ ತುಟಿಗಳನ್ನು ಸ್ವಚ್ಚವಾಗಿ ಹಾಗೂ ನಯವಾಗಿ ಇರಿಸುತ್ತದೆ.

2 . ತುಟಿಗಳ massage ಮಾಡಿರಿ

2 . ತುಟಿಗಳ massage ಮಾಡಿರಿ

Massaging - Massage ಎನ್ನುವುದು ದೇಹದ ಯಾವುದೇ ಭಾಗಕ್ಕೆ ಆರೈಕೆ ಮಾಡುವ ಅತಿ ಹಳೆಯದಾದ ಚಿಕಿತ್ಸಾ ಪಧ್ಧತಿಯಾಗಿದೆ. ಬಾದಾಮಿ ಎಣ್ಣೆ ಹಾಗೂ ಲಿಂಬೆ ರಸದ ಮಿಶ್ರಣದಿಂದ ತುಟಿಗಳನ್ನು ನಿಯಮಿತವಾಗಿ Massage ಮಾಡಿಕೊಳ್ಳಬಹುದು. ಈ ಮಿಶ್ರಣದಿಂದ ಪ್ರತೀ ರಾತ್ರಿ ಮಲಗುವ ಮೊದಲು ನಿಮ್ಮ ತುಟಿಗಳನ್ನು Massage ಮಾಡಿಕೊಳ್ಳಿರಿ.

5 . Navel ಪರಿಣಾಮ

5 . Navel ಪರಿಣಾಮ

ಉತ್ತಮ ತುಟಿಗಳನ್ನು ಪಡೆಯುವಲ್ಲಿ navel ಅತಿ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಸ್ವಲ್ಪ ಹಾಲಿನ ಕೆನೆಯನ್ನು ಅಥವಾ ಸೂರ್ಯಕಾಂತಿ ಎಣ್ಣೆ ಹಾಗೂ ನಿಂಬೆರಸದ ಮಿಶ್ರಣವನ್ನು ಲೇಪಿಸಿರಿ. ಈ ಉಪಾಯವು ತಲೆತಲಾಂತರದಿಂದ ಜಾರಿಯಲ್ಲಿದೆ ಹಾಗೂ ಕೇವಲ ಒಂದು ರಾತ್ರಿ ಹೀಗೆ ಮಾಡುವುದರಿಂದ ಉತ್ತಮ ಪರಿಣಾಮವನ್ನು ಕಾಣಬಹುದಾಗಿದೆ.

6 . ಗುಲಾಬಿ ಪಕಳೆಗಳು

6 . ಗುಲಾಬಿ ಪಕಳೆಗಳು

ಕೆಲವು ಗುಲಾಬಿ ಹೂವಿನ ಪಕಳೆಗಳನ್ನು ಹಾಲಿನಲ್ಲಿ ಅದ್ದಿರಿ ನಂತರ ಅವುಗಳನ್ನು ಜಜ್ಜಿ ಪೇಸ್ಟ್ ನಂತೆ ಮಾಡಿರಿ. ಇದಕ್ಕೆ ಬೇಕಾದರೆ ಜೇನು ತುಪ್ಪ ಹಾಗೂ ಗ್ಲಿಸಿರಿನ್ ಅನ್ನು ಸೇರಿಸಬಹುದು. ಈ ಪೇಸ್ಟನ್ನು ನಿಮ್ಮ ತುಟಿಗಳಿಗೆ ಹಚ್ಚಿರಿ, ನಂತರ ಹಾಲಿನಿಂದ ಇದನ್ನು ಉಜ್ಜಿ ತೆಗೆಯಿರಿ. ಕೆಲವು ದಿನಗಳ ಕಾಲ ಹೀಗೆ ಮಾಡುವುದರಿಂದ ನಿಮ್ಮ ತುಟಿಗಳು ಗುಲಾಬಿ ವರ್ಣವನ್ನು ಪಡೆದುಕೊಳ್ಳುತ್ತವೆ.

8 . ಬೀಟ್ ರೂಟ್ ನ ಸಹಾಯ

8 . ಬೀಟ್ ರೂಟ್ ನ ಸಹಾಯ

ಸಹಜವಾದ, ಗುಲಾಬಿ ವರ್ಣದ ತುಟಿಗಳನ್ನು ಪಡೆಯಲು, ಮಲಗುವ ಮುಂಚೆ ಬೀಟ್ ರೂಟ್ ರಸವನ್ನು ತುಟಿಗಳಿಗೆ ಲೇಪಿಸಿರಿ. ಗುಲಾಬಿ ವರ್ಣದ ತುಟಿಗಳನ್ನು ಪಡೆಯಲು ಇದು ಅತ್ಯುತ್ತಮವಾದ ಪ್ರಾಕೃತಿಕ ವಿಧಾನವಾಗಿದೆ.

10 . ವರ್ಜಿಸುವುದು

10 . ವರ್ಜಿಸುವುದು

ಧೂಮಪಾನವನ್ನು ವರ್ಜಿಸಿರಿ. ಧೂಮಪಾನವು ನಿಮ್ಮ ತುಟಿಗಳನ್ನು ಕಪ್ಪಾಗಿಸುತ್ತದೆ ಮಾತ್ರವಲ್ಲ ನಿಮ್ಮ ಶ್ವಾಸಕೋಶಗಳ ಕಪ್ಪಾಗುವಿಕೆಗೂ ಕಾರಣವಾಗುತ್ತದೆ. ಚಹಾ, ಕಾಫಿ, ಹಾಗೂ ಅಲ್ಕೋಹಾಲ್ ನಂತಹ ಪಾನೀಯಗಳನ್ನೂ ಸಹ ಮಿತವಾಗಿ ಸೇವಿಸಬೇಕು. ನಿರ್ಜಲೀಕರಣವೆಂಬುದು ತುಟಿಗಳ ಮೇಲೆ ಬೇಗನೆ ವ್ಯಕ್ತವಾಗುತ್ತದೆ. ಅದ್ದರಿಂದ, ನಿಮ್ಮ ಶರೀರದ ನೀರಿನ ಮಟ್ಟವನ್ನು ಕಾಪಿಟ್ಟುಕೊಳ್ಳಲು ನಿಯಮಿತವಾಗಿ ನೀರನ್ನು ಕುಡಿಯಿರಿ. ಅಲ್ಲದೆ, ನಿಮ್ಮ ತುಟಿಗಳನ್ನು ತೇವವಾಗಿರಿಸಲು lip balm ನ್ನು ಉಪಯೋಗಿಸಿರಿ.

English summary

Ways to have pink lips

Taking care of lips does not require so much of work to be done, but only 3-5 min of taking care every day. Here are some easy tips to take good care of your lips and make them pink and healthy.
X
Desktop Bottom Promotion