Latest Updates
-
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು?
ಡ್ರೈ ಲಿಪ್ಸ್ ಸಮಸ್ಯೆ ಹೋಗಲಾಡಿಸಲು ಬ್ಯೂಟಿ ಟಿಪ್ಸ್
ಒಣ ತುಟಿ ಹೆಚ್ಚಿನವರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ದೇಹದಲ್ಲಿ ನೀರಿನಂಶ ಕಡಿಮೆಯಾದರೆ , ಪ್ರತಿದಿನ ಲಿಪ್ ಸ್ಟಿಕ್ ಹಚ್ಚಿ ಅದನ್ನು ತೊಳೆದ ನಂತರ ತುಟಿಗೆ ಯಾವುದೇ ಮಾಯಿಶ್ಚರೈಸರ್ ಹಚ್ಚದಿದ್ದರೆ ತುಟಿ ಡ್ರೈಯಾಗುವುದು.
ಒಣ ತುಟಿಗಳ ಮೇಲೆ ಹಚ್ಚಿದ ಲಿಪ್ ಸ್ಟಿಕ್ ನೋಡಲು ಅಸಹ್ಯವಾಗಿ ಕಾಣುವುದು. ಮೇಕಪ್ ಮಾಡುವ ಮುನ್ನ ತುಟಿ ಕೊಂಚ ತೇವಾಂಶ ಹೊಂದಿರಬೇಕು.
ತುಟಿಯಲ್ಲಿ ತೇವಾಂಶವನ್ನು ಹೆಚ್ಚಿಸಲು ಈ ಕೆಳಗಿನ ನೈಸರ್ಗಿಕ ವಿಧಾನಗಳನ್ನು ಅನುಸರಿಸಿದರೆ ಸಾಕು, ಆಕರ್ಷಕವಾದ ಹೊಳಪಿನ ತುಟಿ ನಿಮ್ಮದಾಗುವುದು.

ಜೇನು
ತುಟಿ ತುಂಬಾ ಒಣಗುವುದನ್ನು ತಡೆಯಲು ಜೇನು ಹಚ್ಚಿ. ಜೇನು ತುಟಿಯ ಹೊಳಪನ್ನು ಹೆಚ್ಚಿಸುತ್ತದೆ.

ತೆಂಗಿನ ಹಾಲು
ತೆಂಗಿನ ಹಾಲನ್ನು ತುಟಿಗೆ ಹಚ್ಚಿ ಅರ್ಧ ಗಂಟೆಯ ಬಳಿಕ ಮುಖ ತೊಳೆಯಿರಿ. ಈ ರೀತಿ ಮಾಡಿದರೆ ತುಟಿಯಲ್ಲಿರುವ ನಿರ್ಜೀವ ತ್ವಚೆ ಮಾಯವಾಗುತ್ತದೆ.

ಸೌತೆಕಾಯಿ
ಸೌತೆಕಾಯಿ ಮುಖಕ್ಕೆ ಮಾತ್ರವಲ್ಲ, ತುಟಿಗೂ ತುಂಬಾ ಒಳ್ಳೆಯದು. ತುಟಿಗೆ ಸೌತೆಕಾಯಿ ರಸ ಹಚ್ಚುತ್ತಾ ಬಂದರೆ ತುಟಿ ಡ್ರೈಯಾಗುವುದಿಲ್ಲ.

ಲೋಳೆಸರ
ಲೋಳೆಸರ ಸ್ವಲ್ಪ ಕಹಿ ಅನಿಸಿದರೂ ತುಂಬಾ ತುಟಿ ಒಣಗುವ ಸಮಸ್ಯೆ ಇರುವವರಿಗೆ ಇದು ಉತ್ತಮ ಮನೆಮದ್ದಾಗಿದೆ.

ಲಿಪ್ ಸ್ಟಿಕ್ ಹಚ್ಚಬೇಡಿ
ತುಟಿ ಹೊಳಪನ್ನು ಪಡೆಯುವವರೆಗೆ ಲಿಪ್ ಸ್ಟಿಕ್ ಹಚ್ಚಬೇಡಿ. ಲಿಪ್ ಸ್ಟಿಕ್ ಹಚ್ಚಿದರೆ ತುಟಿ ಮತ್ತಷ್ಟು ಒಣಗುತ್ತದೆ.

ಸಾಕಷ್ಟು ನೀರು ಕುಡಿಯಿರಿ
ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಿ. ನೀರು ಕಡಿಮೆ ಕುಡಿದರೆ ತ್ವಚೆಯ ಕಾಂತಿ ಕಮ್ಮಿಯಾಗುವುದು.

ಟೊಮೆಟೊ
ಟೊಮೆಟೊ ತ್ವಚೆಗೆ ಮಾತ್ರವಲ್ಲ, ತುಟಿಯ ಸೌಂದರ್ಯ ವೃದ್ಧಿಸುವಲ್ಲೂ ತುಂಬಾ ಸಹಕಾರಿ. ಟೊಮೆಟೊ ರಸವನ್ನು ತುಟಿಗೆ ಹಚ್ಚುವುದರಿಂದ ತುಟಿ ಡ್ರೈಯಾಗುವುದನ್ನು ತಡೆಯಬಹುದು.

ಜೇನು, ನಿಂಬೆ ರಸ
ಜೇನು ಮತ್ತು ನಿಂಬೆ ರಸವನ್ನು ಮಿಶ್ರಣ ಮಾಡಿ ಪೇಸ್ಟ್ ರಿತಿಯಲ್ಲಿ ಮಾಡಿ ತುಟಿಗೆ ಹಚ್ಚುವುದರಿಂದ ಕಪ್ಪು ತುಟಿಯನ್ನು ಹೋಗಲಾಡಿಸುತ್ತದೆ ಹಾಗೂ ತುಟಿ ಒಣಗದಂತೆ ತುಟಿಯ ರಕ್ಷಣೆ ಮಾಡುತ್ತದೆ.
ಸಲಹೆ: ಲಿಪ್ ಸ್ಟಿಕ್ ಹಚ್ಚುವವರು ಲಿಪ್ ಸ್ಟಿಕ್ ತೆಗೆದ ಬಳಿಕ ಸ್ವಲ್ಪ ಜೇನು ತುಟಿಗೆ ಹಚ್ಚಿದರೆ ತುಟಿ ತನ್ನ ಮಾಯಿಶ್ಚರೈಸರ್ ಅನ್ನು ಕಳೆದುಕೊಳ್ಳುವುದಿಲ್ಲ.



Click it and Unblock the Notifications
