Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ನ್ಯೂಡ್ ಲಿಪ್ ಸ್ಟಿಕ್ ಬಳಸುವವರಿಗೆ ಮೇಕಪ್ ಟಿಪ್ಸ್
ಲಿಪ್ ಸ್ಟಿಕ್ ಹಚ್ಚುವಾಗ ಕೆಲೆವೊಂದು ಮುಖ್ಯವಾದ ಅಂಶಗಳನ್ನು ಗಮನಿಸಬೇಕು. ಯಾವ ಬಣ್ಣದ ಲಿಪ್ ಸ್ಟಿಕ್ ನಮ್ಮ ಮೈ ಬಣ್ಣಕ್ಕೆ ಹೊಂದುತ್ತದೆ, ಈಗೀನ ಟ್ರೆಂಡ್ ಏನು ಇವೆನ್ನೆಲ್ಲಾ ತಿಳಿದು ಮೇಕಪ್ ಮಾಡಿದರೆ ಮಾತ್ರ ಮೇಕಪ್ ಸ್ಕಿಲ್ ಅನ್ನುವುದು. ಕಡು ಕೆಂಪು ಬಣ್ಣದ ಲಿಪ್ ಸ್ಟಿಕ್ ಈಗೀನ ಟ್ರೆಂಡ್ ಆಗಿದ್ದು ಹೆಚ್ಚಿನ ಸೆಲೆಬ್ರಿಟಿಗಳು ಫಂಕ್ಷನ್ ಗೆ ಬರುವಾಗ ಕಡು ಕೆಂಪು ಬಣ್ಣದ ಲಿಪ್ ಸ್ಟಿಕ್ ಹಾಕಿರುವುದರನ್ನು ನೀವು ಗಮನಿಸಿರಬಹುದು.
ಆದರೆ ಕಡು ಕೆಂಪು ಬಣ್ಣದ ಲಿಪ್ ಸ್ಟಿಕ್ ಹಚ್ಚಲು ಹೆಚ್ಚಿನವರು ಇಷ್ಟಪಡುವುದಿಲ್ಲ. ತುಟಿ ನೈಸರ್ಗಿಕ ಬಣ್ಣದಿಂದ ಆಕರ್ಷಕವಾಗಿರಬೇಕೆಂದು ಬಯಸುತ್ತಾರೆ. ಅಂತಹವರು ನ್ಯೂಡ್ ಕಲರ್ ಟ್ರೈ ಮಾಡಬಹುದು. ಅಲ್ಲದೆ ಈ ನೈಸರ್ಗಿಕ ಬಣ್ಣದ ಲಿಪ್ ಸ್ಟಿಕ್ ಅನ್ನು ಪ್ರತಿನಿತ್ಯ ಬಳಸಬಹುದು.
ಈ ನೈಸರ್ಗಿಕ ಬಣ್ಣದ ಲಿಪ್ ಸ್ಟಿಕ್ ಗಳು ಎಲ್ಲಾ ಬಣ್ಣದ ಬಟ್ಟೆಗೂ ಹೊಂದುವಂತೆ ಇದ್ದು, ಇದನ್ನು ಬಳಸಬಹುದಾದ 7 ವಿಧಾನಗಳಿವೆ.

ತೇವದ ಲಿಪ್ ಸ್ಟಿಕ್
ಕೆಲವೊಂದು ಲಿಪ್ ಸ್ಟಿಕ್ ಹಾಕಿದ ಸ್ವಲ್ಪ ಹೊತ್ತಿನಲ್ಲಿ ಒಣಗುತ್ತದೆ. ಆದರೆ ವೆಟ್ ಲುಕ್ ಲಿಪ್ ಸ್ಟಿಕ್ ಹಾಕಿದರೆ ತುಟಿ ತೇವವಾಗಿ, ನೈಸರ್ಗಿಕವಾದ ತುಟಿಯಂತೆ ಕಾಣುವುದು.

ನ್ಯೂಡ್ ವಿಥ್ ಶೈನಿ
ಐಶ್ವರ್ಯ ರೈ ಹಚ್ಚಿರುವ ಲಿಪ್ ಸ್ಟಿಕ್ ಬಣ್ಣ ನೋಡಿ. ಈ ರೀತಿಯ ಬಣ್ಣ ಸೀರೆಗೆ ಫರ್ಫೆಕ್ಟ್ ಔಟ್ ಫಿಟ್. ಇದು ಶೈಲಿಯಾಗಿರುವುದರಿಂದ ತುಟಿ ಆಕರ್ಷಕವಾಗಿ ಕಾಣುವುದು.

ಡಲ್ ಕಲರ್
ಡಲ್ ಕಲರ್ ಲಿಪ್ ಸ್ಟಿಕ್ ಧರಿಸಿದರೆ ಸರಳ ಬ್ಯೂಟಿಯಾಗಿ ಕಾಣುವಿರಿ. ಈ ಬಣ್ಣದ ಲಿಪ್ ಸ್ಟಿಕ್ ಬಿಳಿ ಬಣ್ಣದ ತ್ವಚೆಯವರಿಗೆ ಚೆನ್ನಾಗಿ ಕಾಣುತ್ತದೆ. ಇದನ್ನು ಹಾಕಿದರೆ ಲಿಪ್ ಸ್ಟಿಕ್ ಹಾಕಿದ್ದಾರೆ ಅಂತ ಗೊತ್ತಾಗುವುದೇ ಇಲ್ಲ, ಆದರೆ ಹೊಳಪಿನಿಂದ ಕೂಡಿರುತ್ತದೆ.

ಬ್ಲ್ಯಾಕ್ ವಿಥ್ ಬೋಲ್ಡ್ ಲುಕ್
ಬ್ಲ್ಯಾಕ್ ಕಲರ್ ಡ್ರೆಸ್ ಧರಿಸಿ ನ್ಯೂಡ್ ಬಣ್ಣದ ಲಿಪ್ ಸ್ಟಿಕ್ ಧರಿಸಿದರೆ ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿ ಕಾಣುವಿರಿ.

ಫಾರ್ಮಲ್ ಲುಕ್
ಫಾರ್ಮಲ್ ಡ್ರೆಸ್ ಧರಿಸಿದಾಗ ಅದಕ್ಕೆ ನೈಸರ್ಗಿಕ ಲುಕ್ ನೀಡುವ ಲಿಪ್ ಸ್ಟಿಕ್ ಧರಿಸುವುದೇ ಸೂಕ್ತ. ಗಾಢ ಬಣ್ಣದ ಲಿಪ್ ಸ್ಟಿಕ್ ಫಾರ್ಮಲ್ ಡ್ರೆಸ್ ಗೆ ಅಷ್ಟು ಹೊಂದಿ ಬರುವುದಿಲ್ಲ.

ಕಾಟನ್ ಸೀರೆ
ಕಾಟನ್ ಸೀರೆ ಧರಿಸಿದಾಗ ತೆಳು ಬಣ್ಣದ ಲಿಪ್ ಹಾಕಿದರೆ ತುಂಬಾ ನೈಸರ್ಗಿಕ ಚೆಲುವಿನಿಂದ ಮಿಂಚುವಿರಿ. ಮೇಕಪ್ ಸಿಂಪಲ್ ಆಗಿರಬೇಕು ಆದರೆ ಆಕರ್ಷಕವಾಗಿ ಕಾಣಬೇಕೆಂದು ಬಯಸುವವರು ಈ ರೀತಿ ಡ್ರೆಸ್ಸಿಂಗ್ ಮಾಡಬೇಕು.

ಜೀನ್ಸ್ ಶರ್ಟ್ ಲುಕ್
ಜೀನ್ಸ್ ಪ್ಯಾಂಟ್ ಮತ್ತು ಶರ್ಟ್ ಧರಿಸಿದಾಗ ನೈಸರ್ಗಿಕವಾದ ಬಣ್ಣದ ಲಿಪ್ ಸ್ಟಿಕ್ ಆಯ್ಕೆ ಮಾಡಿರಿ. ಇದರಿಂದ ಸ್ಟನ್ ಬ್ಯೂಟಿ ನಿಮ್ಮದಾಗುವುದು



Click it and Unblock the Notifications
