Latest Updates
-
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ -
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು?
ಸೌಂದರ್ಯದ ರಕ್ಷಣಾ ಕವಚ ಲೋಳೆಸರ

ತ್ವಚೆ ಪೋಷಣೆ ಮಾಡುತ್ತಾ ಸೌಂದರ್ಯ ಹೆಚ್ಚಿಸುವಲ್ಲಿ ಲೋಳೆಸರ ಹೇಗೆ ಸಹಕಾರಿಯಾಗಿದೆ ಎಂದು ತಿಳಿಯೋಣ ಬನ್ನಿ.
ಸಲಹೆ: ಲೋಳೆಸರ ಬಳಸುವ ಮುನ್ನ ಮುಖದಲ್ಲಿರುವ ಕ್ರೀಮ್, ಅಲಂಕಾರಗಳನ್ನು ತಣ್ಣೀರಿನಿಂದ ತೊಳೆದು ಸ್ವಚ್ಛಗೊಳಿಸಬೇಕು.
1. ಸೂಕ್ತವಾದ ತ್ವಚೆ: ಲೋಳೆಸರ ಎಲ್ಲಾ ರೀತಿಯ ತ್ವಚೆಗೂ ಬಳಸಲು ಸೂಕ್ತವಾಗಿದೆ. ಲೋಳೆಸರ ಬಳಿಸಿದರೆ ಬೆವರಿನ ದುರ್ಗಂಧ ಮಾಯವಾಗಿ, ತ್ವಚೆಯನ್ನು ತಂಪಾಗಿ ಇಡುತ್ತದೆ. ಲೋಳೆಸರಕ್ಕೆ ಸ್ವಲ್ಪ ನಿಂಬೆ ರಸ ಹಾಕಿ ಮಿಶ್ರ ಮಾಡಿ ಮುಖಕ್ಕೆ ಹಚ್ಚಿ 10 ನಿಮಿಷದ ಬಳಿಕ ಮುಖ ತೊಳೆದರೆ ಸನ್ ಬರ್ನ್ ಕಡಿಮೆಯಾಗುತ್ತದೆ. ಬಿಸಿಲಿಗೆ ಹೋಗಿ ಬಂದಾಗ ಈ ರೀತಿ ಮಾಡಿದರೆ ಮುಖ ಕಪ್ಪಾಗುವುದಿಲ್ಲ.
2. ತ್ವಚೆ ಕೋಮಲತೆ : ಇದನ್ನು ಹಚ್ಚುವಾಗ ವೃತ್ತಾಕಾವಾಗಿ ಹಚ್ಚುವುದರಿಂದ ರಕ್ತಚಲನೆಗೂ ಸಹಕಾರಿಯಾಗುತ್ತದೆ. ಇದನ್ನು ಹಚ್ಚುತ್ತಿದ್ದರೆ ಬೇಗನೆ ಮುಪ್ಪಾಗುವುದನ್ನು ತಡೆಯುತ್ತದೆ. ಅಲ್ಲದೆ ಇದನ್ನು ಮುಖಕ್ಕೆ ಹಚ್ಚಿದರೆ ನಿರ್ಜೀವ ತ್ವಚೆಯನ್ನು ಹೋಗಲಾಡಿಸಿ ಮುಖದ ಕಾಂತಿ ಹೆಚ್ಚಿಸುತ್ತದೆ.
3. ಮೊಡವೆ: ಲೋಳೆಸರದ ಒಂದು ಕಡ್ಡಿಯನ್ನು ತೆಗೆದುಕೊಂಡು ನೀರಿನಲ್ಲಿ ಬೇಯಿಸಬೇಕು, ನಂತರ ಲೋಳೆಸರವನ್ನು ಪೇಸ್ಟ್ ರೀತಿ ಮಾಡಿ ಅದಕ್ಕೆ ಸ್ವಲ್ಪ ಜೇನು ಸೇರಿಸಿ ಮಿಶ್ರ ಮಾಡಿ ಮೊಡವೆಗೆ ಹಚ್ಚಿ 15 ನಿಮಿಷದ ಬಳಿಕ ಮುಖ ತೊಳೆದರೆ ಮೊಡವೆ ಮತ್ತು ಅದರ ಕಲೆಗಳು ಕಡಿಮೆಯಾಗುತ್ತದೆ.
4. ಮುಖದಲ್ಲಿ ಗುಳ್ಳೆಗಳಾದರೆ: ಲೋಳೆಸರ ಮತ್ತು ಸೌತೆಕಾಯಿಯನ್ನು ಪೇಸ್ಟ್ ರೀತಿ ಮಾಡಿ ಅದನ್ನು ಮೊಸರಿನ ಜೊತೆ ಮಿಶ್ರ ಮಾಡಿ ಹಚ್ಚಿದರೆ ಗುಳ್ಳೆಗಳು ಕಡಿಮೆಯಾಗುವುದು. ಅಲ್ಲದೆ ಕಲೆಗಳು ಬೀಳುವುದಿಲ್ಲ.
5. ಚರ್ಮದ ರಕ್ಷಣೆ: ಲೋಳೆಸರವನ್ನು ಹೊಟ್ಟೆಗೆ ಸೇವಿಸುವುದರಿಂದ ಮಲಬದ್ದತೆ ನಿವಾರಣೆ,ಜ್ವರದಿಂದ ಮುಕ್ತಿ, ಜಠರದ ಹುಣ್ಣುಗಳ ನಿವಾರಣೆ ಸಾಧ್ಯ. ಚರ್ಮ ರೋಗ, ಉರಿ, ತುರಿಕೆ, ಗಾಯದ ಕಲೆಗಳನ್ನು ಗುಣಪಡಿಸುತ್ತದೆ.
6. ಕೂದಲು: ಲೋಳೆಸರವನ್ನು ಕೂದಲಿನ ಬುಡಕ್ಕೆ ಹಚ್ಚುವುದರಿಂದ ಕೂದಲು ಉದುರುವುದು ನಿಲ್ಲುವುದು. ಅಲ್ಲದೆ ಕೂದಲು ಮೃದುವಾಗುವುದು.



Click it and Unblock the Notifications
