Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಸಂಬಂಧ ಗಟ್ಟಿಯಾಗಲು ಈ ಸವಾಲುಗಳನ್ನು ಎದುರಿಸಿ

ಸಂಬಂಧ ಗಟ್ಟಿಯಾಗಿರಲು ಜೀವನದಲ್ಲಿ ಕೆಲವೊಂದು ಅಂಶಗಳನ್ನುಅಳವಡಿಸಿಕೊಳ್ಳಬೇಕು. ಮೊದಲಿಗೆ ಅವುಗಳು ಸವಾಲುಗಳಂತೆ ಅನಿಸಿದರೂ ಅವುಗಳನ್ನು ಪಾಲಿಸಿದರೆ ಅವುಗಳು ಸಂಬಂಧಗಳನ್ನು ಗಟ್ಟಿಗೊಳಿಸುವ ಅಂಶಗಳೆನ್ನುವುದು ನಿಮಗೇ ಅರ್ಥವಾಗುತ್ತದೆ. ಆ ಅಂಶಗಳು ಯಾವುದೆಂದು ತಿಳಿಯಲು ಮುಂದೆ ಓದಿ:
1.ಗಮನಿಸುವುದು: ಒಬ್ಬ ವ್ಯಕ್ತಿಯನ್ನು ನಿಮ್ಮ ಬಾಳಸಂಗಾತಿ ಎಂದು ನಿರ್ಧರಿಸಿದ ಕ್ಷಣದಿಂದಲೆ ಅವರನ್ನು ಸರಿಯಾಗಿ ಗಮನಿಸಬೇಕು. ಗಮನಿಸುವುದರಿಂದ ಅವರ ಗುಣಗಳ ಬಗ್ಗೆ ಸಾಕಷ್ಟು ವಿಷಯಗಳನ್ನು ತಿಳಿದುಕೊಳ್ಳಬಹುದು. ಅವರು ಏನಾದರೂ ಮಾತನಾಡುವಾಗ ಅವರ ಭಾವನೆಗಳನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸಬೇಕು. ಆಗ ಅವರು ಏನು ಹೇಳುತ್ತಿದ್ದಾರೆ ಅನ್ನುವುದು ಸ್ಪಷ್ಟವಾಗಿ ಅರ್ಥವಾಗುತ್ತದೆ.
2. ಅಭಿಪ್ರಾಯ: ಪ್ರತಿಯೊಬ್ಬರಿಗೆ ಅವರದ್ದೆ ಆದ ಅಭಿಪ್ರಾಯವಿರುತ್ತದೆ. ಆದ್ದರಿಂದ ನಿಮ್ಮ ಬಾಳ ಸಂಗಾತಿಯ ಅಭಿಪ್ರಾಯಕ್ಕೆ ಕೂಡ ಮಾನ್ಯತೆ ಕೊಡಬೇಕು.
3. ಪ್ರಾಮಾಣಿಕತೆ: ದಾಂಪತ್ಯದಲ್ಲಿ ಪ್ರಾಮಾಣಿಕತೆ ಅನ್ನುವ ಅಂಶವಿರಲೇಬೇಕು. ಅಭಿಪ್ರಾಯ, ಆಸೆ, ಆಕಾಂಕ್ಷೆಗಳನ್ನು ಧೈರ್ಯವಾಗಿ ಹೇಳಬೇಕು. ತಪ್ಪು-ಸರಿಗಳನ್ನು ಪ್ರಾಮಾಣಿಕತೆಯಿಂದ ಒಪ್ಪಿಕೊಳ್ಳಬೇಕು. ಅಗ ಬಾಂಧವ್ಯ ಗಟ್ಟಿಯಾಗುವುದು.
4. ಕ್ಷಮೆ: ಮನುಷ್ಯ ಅಂದ ಮೇಲೆ ತಪ್ಪುಗಳು ಆಗುವುದು ಸಹಜ. ಬಾಳಸಂಗಾತಿಯಿಂದ ಸಣ್ಣಪುಟ್ಟ ತಪ್ಪುಗಳಾದರೆ ಕ್ಷಮಿಸಬೇಕು. ಚುಚ್ಚು ಮಾತುಗಳಿಂದ ಸಂಬಂಧ ನುಚ್ಚು ನೂರಾಗುವುದು. ತಪ್ಪುಗಳನ್ನು ಕ್ಷಮಿಸಿದರೆ ಮಾತ್ರ ಅರೆತುಕೊಂಡು ಬಾಳಲು ಸಾಧ್ಯ.
5. ಹೊಗಳುವುದು: ಒಳ್ಳೆಯ ಗುಣಗಳನ್ನು, ಒಳ್ಳೆಯ ಅಂಶಗಳನ್ನು ಕಂಡಾಗ ಹೊಗಳಬೇಕು. ಈ ರೀತಿ ಮಾಡಿದರೆ ಅವರನ್ನು ಪ್ರೋತ್ಸಾಯಿಸಿದಂತೆ ಅಗುವುದು. ಪರಸ್ಪರ ಒಬ್ಬರಿಗೊಬ್ಬರು ಪ್ರೋತ್ಸಾಯಿಸಿದರೆ ಜೀವನದಲ್ಲಿ ಬರುವ ಚಿಕ್ಕ ಸವಾಲುಗಳನ್ನು ಧೈರ್ಯವಾಗಿ ನಿಭಾಯಿಸುವಂತಾಗುವುದು.
6. ತೃಪ್ತಿ: ಅಹಂ ಅನ್ನುವುದು ಬಿಡಬೇಕು. ಇರುವ ಜೀವನವನ್ನು ತೃಪ್ತಿಯಿರಬೇಕು. ಪರಸ್ಪರ ಗೌರವಿಸಬೇಕು. ಈ ಎಲ್ಲಾ ಗುಣಗಳಿದ್ದರೆ ಜೀವನ ಸುಖಮಯವಾಗುವುದು.



Click it and Unblock the Notifications