Latest Updates
-
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು!
ಚುಚ್ಚು ಮಾತನಾಡಿದರೆ ನುಚ್ಚುನೂರಾಗುತ್ತೆ ಜೀವನ
ಮನುಷ್ಯ ಅಂದ ಮೇಲೆ ಕೋಪ ಬಂದೇ ಬರುತ್ತದೆ. ಆದರೆ ಕೋಪ ಬಂದಾಗ ಬುದ್ಧಿ ತನ್ನ ಸ್ಥಿಮಿತ ಕಳೆದುಕೊಳ್ಳುತ್ತದೆ. ಕೋಪ ಬಂದಾಗ ನಮಗೆ ಬೇಕಾದವರನ್ನು ಎಷ್ಟು ನೋವು ಪಡಿಸುತ್ತಿದ್ದೇವೆ ಅನ್ನುವುದು ಕೂಡ ಗೊತ್ತಾಗುವುದಿಲ್ಲ. ಆದರೆ ಕೋಪ ತಣಿದ ಮೇಲೆ ಪಶ್ಚಾತಾಪ ಪಡುತ್ತೇವೆ. ಅದೇ ಗಂಡ-ಹೆಂಡತಿ ನಡುವೆ ಜಗಳ ವಿಪರೀತವಾದರೆ ವಿಚ್ಛೇದನವರೆಗೆ ಬಂದು ನಿಲ್ಲಬಹುದು. ಆದ್ದರಿಂದ ಸಣ್ಣ ಪುಟ್ಟ ಜಗಳಗಳು ದೊಡ್ಡದಾಗಲು ಅವಕಾಶ ಕೊಡದಿರುವುದು ಒಳ್ಳೆಯದು.

1. ಗಂಡ-ಹೆಂಡತಿ ನಡುವೆ ಅಥವಾ ಅಪ್ಪ ಮಕ್ಕಳ ನಡುವೆ ಸಣ್ಣ ವಿಷಯಕ್ಕೆ ಮಾತು ಬೆಳೆದು ಅದು ಸಂಬಂಧವನ್ನೆ ಹಾಳು ಮಾಡುವಷ್ಟು ಕೆಟ್ಟದಾಗಿ ಬೆಳೆದು ಬಿಡುತ್ತದೆ. ಆಗ ನಮ್ಮ ಅನಿಸಿಕೆಗಳೆ ಸರಿ ಅನಿಸುತ್ತಿರುತ್ತಿದೆ. ಆಗ ನಾವು ಯಾರ ಜೊತೆ ಜಗಳ ಆಡುತ್ತಿದ್ದೇವೆ ಎಂದು ಒಂದು ಕ್ಷಣ ಯೋಚಿಸಿದರೆ ಸಂಬಂಧ ಹಾಳಾಗುವುದಿಲ್ಲ.
2. ನಮಗೆ ಬೇಕಾದವರು ತಪ್ಪು ಮಾಡಿದಾಗ ಅದನ್ನು ತಿದ್ದಲು ಪ್ರಯತ್ನಿಸಬೇಕೆ ಹೊರತು ತಪ್ಪುಗಳನ್ನು ಎತ್ತಿ ತೋರಿಸಿ ಚುಚ್ಚು ಮಾತು ಆಡಬಾರದು. ಅಲ್ಲದೆ ಹಿಂದೆ ಮಾಡಿದ್ದ ತಪ್ಪುಗಳನ್ನು ನೆನಪಿಸುತ್ತಾ ಇರಬಾರದು. ಅನೇಕ ಗಂಡ -ಹೆಂಡತಿ ನಡುವೆ ಜಗಳ ಚುಚ್ಚು ಮಾತುಗಳಿಂದ ಬರುತ್ತದೆ.
3. ಬಾಳಾ ಸಂಗಾತಿ ಜೊತೆ ಜಗಳ ಆಡುವಾಗ ಅಲ್ಲಿ ಗೆಲುವು ಸೋಲಿಗಿಂತ ತಾನು ಹೇಳಿದ್ದೇ ಸರಿ ಎಂಬ ಮನೋಭಾವವಿದ್ದರೆ ಬದುಕು ಕಷ್ಟವಾಗುತ್ತದೆ. ಪರಸ್ಪರ ಹೊಂದಾಣಿಕೆಯೆಂಬುದು ಕಡಿಮೆಯಾಗುತ್ತದೆ.
4. ನಿಮ್ಮ ಜಗಳವನ್ನು ನೀವೆ ಪರಿಹರಿಸಲು ಪ್ರಯತ್ನಿಸಬೇಕು. 3ನೇ ವ್ಯಕ್ತಿಯ ಸಲಹೆ ಕೇಳಿದರೆ ಆ ವ್ಯಕ್ತಿ ಅವರಿಗೆ ಇಷ್ಟ ಬಂದ ವ್ಯಕ್ತಿ ಪರವಹಿಸಿ ಮಾತನಾಡಬಹುದು. ಆಗ ಜಗಳ ಮತ್ತಷ್ಟು ಜಾಸ್ತಿಯಾಗುವ ಸಾಧ್ಯತೆ ಹೆಚ್ಚು. ನಿಮ್ಮ ತಪ್ಪು-ಸರಿಗಳ ಕುರಿತು ನೀವೆ ಚರ್ಚಿಸುವುದು ಒಳ್ಳೆಯದು.
ಪ್ರೀತಿಯಿಂದ ಮಾಡುವ ಜಗಳ ಅಂದರೆ ಅಡುಗೆ ಚೆನ್ನಾಗಿಲ್ಲವೆಂದು ಸುಮ್ಮನೆ ರೇಗಿಸಿ ನಂತರ ಹೊಗಳುವುದು, ಹೀಗೆ ತಮಾಷೆಗೆ ಚುಡಾಯಿಸುವುದರಿಂದ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತದೆ. ಆದರೆ ಆ ಚುಡಾಯಿಸುವ ನೆಪದಲ್ಲಿ ಚುಚ್ಚು ಮಾತನಾಡಬಾರದು.



Click it and Unblock the Notifications