Latest Updates
-
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ
ಸುಲಭದಲ್ಲಿಯೆ ತಯಾರಿಸಬಹುದು ಮ್ಯಾಂಗೊ ಕೇಕ್
ಕೇಕ್ ತಯಾರಿಸುವ ವಿಧಾನ ಗೊತ್ತಿದ್ದರೆ ಮನೆಯಲ್ಲಿಯೆ ರುಚಿಕರವಾದ ಕೇಕ್ ತಯಾರಿಸಬಹುದು. ಈ ಹಿಂದೆ ನಾವು ಸುಲಭದಲ್ಲಿ ತಯಾರಿಸಬಹುದಾದ ಅನೇಕ ಬಗೆಯ ಕೇಕ್ ರೆಸಿಪಿ ನೀಡಿದ್ದೇವೆ. ಇವತ್ತು ರುಚಿಕರವಾದ ಮ್ಯಾಂಗೊ ಕೇಕ್ ರೆಸಿಪಿ ಇಲ್ಲಿ ನೀಡಲಾಗಿದೆ. ಇದನ್ನು ತಯಾರಿಸಿ ಈ ಕೇಕ್ ನಿಮಗೆ ಇಷ್ಟವಾಯಿತೇ ಎಂದು ನಮಗೆ ತಿಳಿಸಿ.

ಬೇಕಾಗುವ ಸಾಮಾಗ್ರಿಗಳು:
* ಸೂಜಿ ರವೆ
* 1 ಕಪ್ ಮಾವಿನ ಹಣ್ಣಿನ ರಸ ( ಮಾರ್ಕೆಟ್ ನಲ್ಲಿ ಸಿದ್ಧವಾಗಿ ದೊರೆಯುವ ಕೇಸರಿ ಮಾಂಗೊ ರಸ ಕೂಡ ಬಳಸಬಹುದು)
* 1/2 ಕಪ್ ಬೆಣ್ಣೆ
* 1/2 ಕಪ್ ಸಕ್ಕರೆ
* 1/2 ಚಮಚ ಅಡುಗೆ ಸೋಡಾ
* 1 ಚಮಚ ಏಲಕ್ಕಿ
* 1/4 ಕಪ್ ಪುಡಿ ಮಾಡಿದ ವಾಲ್ ನೆಟ್,ಗೋಡಂಬಿ, ಒಣದ್ರಾಕ್ಷಿ
ಗಮನಿಸಬೇಕಾದ ವಿಷಯ:
1. ಮ್ಯಾಂಗೊ ರಸ ಹಳದಿ ಬಣ್ಣ ಮತ್ತು ಗಟ್ಟಿಯಾದ ರಸ ಆಗಿರಬೇಕು. ಕೆಲವು ಬ್ರಾಂಡ್ ನ ಮ್ಯಾಂಗೊ ರಸ ಸ್ವಲ್ಪ ನೀರಾಗಿರುತ್ತದೆ. ಅಂತಹವನ್ನು ಕೊಂಡರೆ ಸೆಟ್ ಆಗಲು ತುಂಬಾ ಸಮಯ ಬೇಕಾಗುತ್ತದೆ.
2. ಕೇಕ್ ಮಾಡಲು ಕಲಿಸಿದ ಮಿಶ್ರಣ ಅಷ್ಟೇನು ಗಟ್ಟಿಯಾಗಿಲ್ಲವಾದರೆ ಸ್ವಲ್ಪ ಹೊತ್ತು ಇಡಿ ಆಗ ಮಿಶ್ರಣ ಗಟ್ಟಿಯಾಗುವುದು. ಏಕೆಂದರೆ ಗಟ್ಟಿಯಾಗಿರದ ಮಿಶ್ರಣವನ್ನು ಮೈಕ್ರೋವೇವ್ ನಲ್ಲಿ ಇಟ್ಟರೆ ಅದು ಗಟ್ಟಿಯಾಗಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದು, ಕೇಕ್ ಕಂದು ಬಣ್ಣಕ್ಕೆ ತಿರುಗುವುದು. ಇದು ಸ್ವಲ್ಪ ಹಳದಿ ಬಣ್ಣದಲ್ಲಿ ಇದ್ದರೆ ರುಚಿ ಮತ್ತು ನೋಡಲು ಆಕರ್ಷಕವಾಗಿರುತ್ತದೆ.
3. ಬೇಯಿಸುವಾಗ ಮಿಶ್ರಣವನ್ನು ಮಧ್ಯದ ಸ್ಟ್ಯಾಂಡ್ (middle rack) ನಲ್ಲಿಡಿ.
4. 'conventional oven' ಅನ್ನು 375 ಡಿಗ್ರಿ ಉಷ್ಣತೆಗೆ ಮುಂಚಿತವಾಗಿಯೆ ಬಿಸಿಮಾಡಿಡಬೇಕು.
5. ರವೆಯನ್ನು ಹುರಿಯಬೇಕಾಗಿಲ್ಲ.
ತಯಾರಿಸುವ ವಿಧಾನ:
1. ರವೆಯನ್ನು ಸಕ್ಕರೆ, ಗೋಡಂಬಿ, ದ್ರಾಕ್ಷಿ, ಏಲಕ್ಕಿ ಮತ್ತು ಅಡುಗೆ ಸೋಡಾ ಹಾಕಿ ಮಿಶ್ರ ಮಾಡಬೇಕು.
2. ನಂತರ ಕರಗಿಸಿದ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು. ನಂತರ ಮಾವಿನ ಹಣ್ಣಿನ ರಸವನ್ನು ಹಾಕಿ ಮತ್ತೆ ಬಿಸಿ ಮಾಡಬೇಕು. ನಂತರ ಸೆಟ್ ಆಗಲು 10 ನಿಮಿಷ ಇಡಬೇಕು.
3. ನಂತರ ಮಿಶ್ರಣವನ್ನು ಅವನ್‌ನಲ್ಲಿಟ್ಟು 30-35 ನಿಮಿಷ ಬೇಯಿಸಬೇಕು. ಆದರೆ 25 ನಿಮಿಷದ ನಂತರ ಬೆಂದಿದೆಯೆ ಎಂದು ಗಮನಿಸುತ್ತಾ ಇರಬೇಕು. ಚೂರಿಯಿಂದ ಚುಚ್ಚಿ ಅದು ಸರಿಯಾಗಿ ಬೆಂದಿದೆಯೆ ಎಂದು ಪರೀಕ್ಷಿಸಬೇಕು. ಆಗ ಚೂರಿಗೆ ಮಿಶ್ರಣ ಅಂಟಿ ಹಿಡಿಯದಿದ್ದರೆ ಬೆಂದಿದೆ ಎಂದು ಅರ್ಥ. ನಂತರ ಕೇಕ್ ಅನ್ನು ಹೊರ ತೆಗೆದು ತಣ್ಣಗಾಗಲು ಇಡಬೇಕು. ನಂತರ ಕತ್ತರಿಸಿದರೆ ರುಚಿಕರವಾದ ಮ್ಯಾಂಗೊ ಕೇಕ್ ರೆಡಿ.



Click it and Unblock the Notifications