Latest Updates
-
ರಕ್ತದಾನದ ನಂತರ ಜಿಮ್ಗೆ ಹೋಗುವ ಮುನ್ನ ಎಚ್ಚರ! ಈ ತಪ್ಪುಗಳನ್ನು ಮಾಡಬೇಡಿ -
ವೀಕೆಂಡ್ ಪ್ಲಾನ್ ಮಾಡಿದ್ದೀರಾ? ಹವಾಮಾನ ವೈಪರೀತ್ಯದ ಎಚ್ಚರಿಕೆ: ನಿಮ್ಮ ಸುರಕ್ಷತೆಗಾಗಿ ಈ ಬದಲಾವಣೆ ಮಾಡಿಕೊಳ್ಳಿ! -
ಮುಂಬೈ ಬಿಸಿಲು ಮತ್ತು ಆರ್ದ್ರತೆ: 15 ನಿಮಿಷದಲ್ಲಿ ನಿಮ್ಮ ಮನೆಯನ್ನು ತಂಪಾಗಿರಿಸುವ ಸರಳ ಉಪಾಯಗಳು! -
ನಿಮ್ಮ ಆಹಾರದ ಪ್ಯಾಕೆಟ್ನಲ್ಲಿ ಸ್ಟೇಪ್ಲರ್ ಪಿನ್ ಇದೆಯೇ? ಎಚ್ಚರ, FSSAI ಕಠಿಣ ಆದೇಶ! -
ಧರ್ಮಶಾಲಾದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಮಳೆ ಆತಂಕದ ನಡುವೆ ಗೆಲ್ಲೋರು ಯಾರು? -
ದೆಹಲಿ-ಎನ್ಸಿಆರ್ ಬಿರುಗಾಳಿ: ಫಿಟ್ನೆಸ್ ಪ್ರಿಯರೇ ಎಚ್ಚರ, ಇಂದಿನ ವರ್ಕೌಟ್ ಮನೆಯಲ್ಲೇ ಮಾಡುವುದು ಏಕೆ ಸುರಕ್ಷಿತ? -
ದೆಹಲಿಯಲ್ಲಿ ಇಂದು ಮಳೆ ಎಚ್ಚರಿಕೆ: ನಿಮ್ಮ ಡಿನ್ನರ್ ಪ್ಲಾನ್ ಸುರಕ್ಷಿತವಾಗಿರಲು ಈ ಟಿಪ್ಸ್ ಫಾಲೋ ಮಾಡಿ -
ಬೆಂಗಳೂರಿನಲ್ಲಿ ಭರ್ಜರಿ ಮಳೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ಈ 5 ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಪತ್ರಿಕೆಯಲ್ಲಿ ಆಹಾರ ಸುತ್ತಿ ತಿನ್ನುತ್ತಿದ್ದೀರಾ? ಇದು ನಿಮ್ಮ ಆರೋಗ್ಯಕ್ಕೆ 'ನಿಧಾನಗತಿಯ ವಿಷ' ಎಚ್ಚರ! -
ಬೆಂಗಳೂರಿನಲ್ಲಿ ಮತ್ತೆ ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ಸೇರಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್!
ಟೊಮೆಟೊ ಸಾಸ್ ಜೊತೆ ಮ್ಯಾಗಿ ಕಟ್ಲೆಟ್ ವಾವ್!

ಬೇಕಾಗುವ ಸಾಮಾಗ್ರಿಗಳು:
* 1 ಪ್ಯಾಕೆಟ್ ಮ್ಯಾಗಿ ನೂಡಲ್ಸ್
* ಬೇಯಿಸಿದ ತರಕಾರಿ 1/2 ಕಪ್ ( ಕ್ಯಾರೆಟ್, ಬೀನ್ಸ್, ಹೂಕೋಸು, ಬಟಾಣಿ ಇತ್ಯಾದಿ)
* 1/4 ಕಪ್ ಬೇಯಿಸಿ ಹಿಸುಕಿದ ಆಲೂಗೆಡ್ಡೆ
* ಖಾರಕ್ಕೆ ತಕ್ಕ ಹಸಿಮೆಣಸಿನ ಕಾಯಿ (ಕತ್ತರಿಸಿದ್ದು)
* 1 ಚಮಚ ಜೀರಿಗೆ
* 1 ಚಮಚ ಗರಂ ಮಸಾಲ
* ಕತ್ತರಿಸಿದ ಈರುಳ್ಳಿ 1 ಅಥವಾ 2
* ಗರಂ ಮಸಾಲ 1 ಚಮಚ
* ಅಮೆಚ್ಯೂರ್ ಪುಡಿ (ಬೇಕಿದ್ದರೆ ಹಾಕಬಹುದು)
* ರುಚಿಗೆ ತಕ್ಕ ಉಪ್ಪು
* ಎಣ್ಣೆ
ತಯಾರಿಸುವ ವಿಧಾನ:
1. ಬರೀ ನೂಡಲ್ಸ್ ಅನ್ನು ಬೇಯಿಸಬೇಕು (ಅದಕ್ಕೆ ಮಸಾಲೆ ಸೇರಿಸಬಾರದು). ನಂತರ ನೀರನ್ನು ಸೋಸಿ ನೂಡಲ್ಸ್ ಅನ್ನು ಒಂದು ತಟ್ಟೆಯಲ್ಲಿ ಹಾಕಬೇಕು.
2. ನಂತರ ಇದಕ್ಕೆ ಎಲ್ಲಾ ಸಾಮಾಗ್ರಿಗಳನ್ನು ಹಾಕಿ ಮಿಶ್ರ ಮಾಡಬೇಕು. ರುಚಿಗೆ ತಕ್ಕ ಉಪ್ಪು ಇದೆಯೇ ಎಂದು ನೋಡಿಕೊಳ್ಳಬೇಕು. ನಂತರ ಆ ಮಿಶ್ರಣದಿಂದ ಸ್ವಲ್ಪ-ಸ್ವಲ್ಪ ಮಿಶ್ರಣ ತೆಗೆದು ಕಟ್ಲೆಟ್‌ಗೆ ತಟ್ಟುವ ರೀತಿ ತಟ್ಟಬೇಕು.
3. ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಅದರಲ್ಲಿ ಕಟ್ಲೇಟ್ ಹಾಕಿ ಕಂದು ಬಣ್ಣ ಬರುವಾಗ ತೆಗೆದರೆ ರುಚಿಯಾದ ಮ್ಯಾಗಿ ಕಟ್ಲೆಟ್ ರೆಡಿ. ಇದನ್ನು ಟೊಮೆಟೊ ಸಾಸ್ ಜೊತೆ ತಿನ್ನಲು ತುಂಬಾ ರುಚಿಯಾಗಿರುತ್ತದೆ.



Click it and Unblock the Notifications