Latest Updates
-
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ!
ಆಲೂ ಮೆಂತೆ ಸೊಪ್ಪಿನ ಪಲ್ಯದ ರೆಸಿಪಿ
ಮೆಂತೆ ಆರೋಗ್ಯಕ್ಕೆ ತುಂಬಾ ಒಳ್ಳೆಯ ಆಹಾರ. ಮೆಂತೆ ಸೊಪ್ಪಿನಿಂದ ಸಾರು ಮತ್ತು ಪಲ್ಯ ಮಾಡಲಾಗುವುದು. ಬರೀ ಮೆಂತೆ ಸೊಪ್ಪಿನಿಂದ ಪಲ್ಯ ಮಾಡುವುದಕ್ಕಿಂತ ಆಲೂಗೆಡ್ಡೆ ಮ್ತು ಟೊಮೆಟೊ ಹಾಕಿ ಮಾಡಿದರೆ ಪಲ್ಯದ ರುಚಿ ಹೆಚ್ಚುವುದು. ರುಚಿಕರವಾದ ಆಲೂ ಮೆಂತೆ ಸೊಪ್ಪಿನ ಪಲ್ಯ ಮಾಡುವ ರೆಸಿಪಿ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:
* ಒಂದೂವರೆ ಕಪ್ ಮೆಂತೆ ಸೊಪ್ಪು (ಚೆನ್ನಾಗಿ ತೊಳೆದು ಕತ್ತರಿಸಿದ್ದು)
* ಸಿಪ್ಪೆ ಸುಲಿದು ಚಿಕ್ಕ ತುಂಡುಗಳಾಗಿ ಕತ್ತರಿಸಿದ ಆಲೂಗೆಡ್ಡೆ 2
* ಟೊಮೆಟೊ 1 (ಕತ್ತರಿಸಿದ್ದು)
* 1-2 ಬೆಳ್ಳುಳಿಯ ಎಸಳು
* ರುಚಿಗೆ ತಕ್ಕ ಉಪ್ಪು
* 1/4 ಚಮಚ ಅರಿಶಿಣ ಪುಡಿ
* ಕೆಂಪು ಮೆಣಸಿನ ಪುಡಿ 1/2 ಚಮಚ
* 2-3 ಒಣ ಮೆಣಸಿನಕಾಯಿ
* 2-3 ಚಮಚ ವನಸ್ಪತಿ
ತಯಾರಿಸುವ ವಿಧಾನ:
1. ವನಸ್ಪತಿಯನ್ನು ಪಾತ್ರೆಗೆ ಹಾಕಿ ಬಿಸಿ ಮಾಡಿ ಅದಕ್ಕೆ ಜಜ್ಜಿದ ಬೆಳ್ಳುಳ್ಳಿ ಹಾಕಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಬಿಸಿಮಾಡಬೇಕು. ನಂತರ ಜೀರಿಗೆ ಮತ್ತು ಚಿಕ್ಕ ತುಂಡುಗಳಾಗಿ ಮಾಡಿ ಒಣಮೆಣಸಿನ ಕಾಯಿ ಹಾಕಬೇಕು.
2. ನಂತರ ಅರಿಶಿಣ, ಕೆಂಪು ಮೆಣಸಿನ ಪುಡಿ, ಟೊಮೆಟೊ ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಶ್ರ ಮಾಡಿ ಟೊಮೆಟೊ ಮೆತ್ತಾಗುವವರೆಗೆ ಹುರಿಯಬೇಕು.
3. ಈಗ ಆಲೂಗೆಡ್ಡೆಯನ್ನು ಹಾಕಿ , ಆಲೂಗೆಡ್ಡೆ ಅರ್ಧ ಬೇಯುವವರೆಗೆ ಬೇಯಿಸಬೇಕು, ನಂತರ ಇದಕ್ಕೆ ಮೆಂತೆ ಸೊಪ್ಪು ಹಾಕಿ ಮಿಶ್ರ ಮಾಡಿ ಬೇಯಿಸಬೇಕು. ಪಲ್ಯದಲ್ಲಿರುವ ನೀರೆಲ್ಲಾ ಆವಿಯಾಗುವವರೆಗೆ ಬೇಯಿಸಬೇಕು( ಸೊಪ್ಪು ಹಾಕಿದರೆ ಪ್ರತ್ಯೇಕವಾಗಿ ನೀರು ಹಾಕುವ ಅವಶ್ಯಕತೆಯಿಲ್ಲ, ಸೊಪ್ಪಿನಲ್ಲಿರುವ ನೀರಿನಂಶವೆ ಸಾಕಾಗುವುದು). ನಂತರ ಉರಿಯಿಂದ ಇಳಿಸಿದರೆ ರುಚಿಕರವಾದ ಆಲೂ ಮೆಂತೆ ಸೊಪ್ಪಿನ ಪಲ್ಯ ರೆಡಿ.
ಚಪಾತಿ ಅಥವಾ ಪರೋಟವನ್ನು ಈ ಪಲ್ಯದ ಜೊತೆ ತಿನ್ನಲು ತುಂಬಾ ರುಚಿಯಾಗಿರುತ್ತದೆ.



Click it and Unblock the Notifications