For Quick Alerts
ALLOW NOTIFICATIONS  
For Daily Alerts

ಮೊಸರು ಹಾಕಿ ತಯಾರಿಸುವ ಮೀನಿನ ಕರಿ

|

ಮೀನಿನ ಸಾರನ್ನು ಅನೇಕ ರುಚಿಯಲ್ಲಿ ತಯಾರಿಸಬಹುದು. ತೆಂಗಿನ ಕಾಯಿಯನ್ನು ಹಾಕಿ ತಯಾರಿಸಬಹುದು, ಸೊಪ್ಪು ಹಾಕಿ ಗ್ರೀನ್ ಫಿಶ್ ಕರಿ ತಯಾರಿಸಬಹುದು, ಬರೀ ಮಸಾಲೆ ಪದಾರ್ಥಗಳನ್ನು ಹಾಕಿ ತಯಾರಿಸಬಹುದು, ಹೀಗೆ ಅನೇಕ ರುಚಿಯಲ್ಲಿ ಮೀನಿನ ಕರಿಯನ್ನು ತಯಾರಿಸಬಹುದು.

ಮೊಸರು ಹಾಕಿ ತಯಾರಿಸಿದ ಮೀನಿನ ಕರಿಯಂತೂ ಸೂಪರ್ ಟೇಸ್ಟ್. ಇದನ್ನು ತಯಾರಿಸುವ ವಿಧಾನವನ್ನು ಈ ಕೆಳಗೆ ಹೇಳಲಾಗಿದೆ ನೋಡಿ:

Fish Yogurt Recipe

ಬೇಕಾಗುವ ಸಾಮಾಗ್ರಿಗಳು:
1 ಕೆಜಿ ಮೀನು (ದೊಡ್ಡ ಮೀನು)
2 ಕಪ್ ಮೊಸರು
ಅರ್ಧ ಕಪ್ ಮೈದಾ
2 ಚಮಚ ಈರುಳ್ಳಿ ಪೇಸ್ಟ್
1 ಚಮಚ ಬೆಳ್ಳುಳ್ಳಿ, ಶುಂಠಿ ಪೇಸ್ಟ್
1 ಟೊಮೆಟೊ (ಚಿಕ್ಕದಾಗಿ ಕತ್ತರಿಸಿದ್ದು)
ಖಾರದ ಪುಡಿ (ಖಾರಕ್ಕೆ ತಕ್ಕಷ್ಟು)
ಅರಿಶಿಣ ಪುಡಿ ಅರ್ಧ ಚಮಚ
ಜೀರಿಗೆ ಅರ್ಧ ಚಮಚ
ಕೊತ್ತಂಬರಿ ಪುಡಿ ಅರ್ಧ ಚಮಚ
ಹಸಿ ಮೆಣಸಿನ ಕಾಯಿ 1
ಉಪ್ಪು
1 ಚಕ್ಕೆ
1 ಏಲಕ್ಕಿ
1 ಚಮಚ ಎಣ್ಣೆ
ನೀರು

ತಯಾರಿಸುವ ವಿಧಾನ:

* ಮೀನಿನ ತುಂಡುಗಳನ್ನು ಶುಚಿ ಮಾಡಿ ಅದನ್ನು ಮೈದಾ ಹಿಟ್ಟಿನಲ್ಲಿ ಹೊರಳಾಡಿಸಿ,.

* ಈಗ ತವಾದಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದರಲ್ಲಿ ಮೀನನ್ನು ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.

* ಈಗ ಮತ್ತೊಂದು ಪಾತ್ರೆಯನ್ನು ತೆಗೆದುಕೊಂಡು ಬಿಸಿ ಮಾಡಿ ಅದರಲ್ಲಿ ಅರ್ಧ ಚಮಚ ಎಣ್ಣೆ ಹಾಕಿ ಅದಕ್ಕೆ ಏಲಕ್ಕಿ, ಚಕ್ಕೆ ಹಾಕಿ ಹುರಿಯಬೇಕು. ನಂತರ ಶುಂಠಿ, ಈರುಳ್ಳಿ, ಬೆಳ್ಳುಳ್ಳಿ, ಹಸಿ ಮೆಣಸಿನ ಕಾಯಿ, ಅರಿಶಿಣ ಪುಡಿ, ಖಾರದ ಪುಡಿ, ಕೊತ್ತಂಬರಿ, ಜೀರಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.

* ಈಗ ಕತ್ತರಿಸಿದ ಟೊಮೆಟೊ ಹಾಕಿ 2 ನಿಮಿಷ ಹುರಿಯಬೇಕು. ನಂತರ ಮೊಸರು ಹಾಕಿ, ಸಾರು ಸ್ವಲ್ಪ ತೆಳ್ಳಗೆ ಬೇಕೆಂದರೆ ಸ್ವಲ್ಪ ನೀರು ಹಾಕಿ ರುಚಿಗೆ ತಕ್ಕ ಉಪ್ಪು ಮತ್ತು ಮೀನಿನ ತುಂಡುಗಳನ್ನು ಹಾಕಿ ಕಡಿಮೆ ಉರಿಯಲ್ಲಿ 10-15 ನಿಮಿಷ ಬೇಯಿಸಿದರೆ ರುಚಿಕರವಾದ ಮೀನಿನ ಕರಿ ರೆಡಿ.

English summary

Fish Yogurt Recipe | Variety Of Fish RecFish Yogurt Recipe | Variety Of Fish Recipe | ಮೊಸರು ಹಾಕಿ ತಯಾರಿಸುವ ಮೀನಿನ ಕರಿ | ಅನೇಕ ಬಗೆಯ ಮೀನಿನ ಅಡುಗೆipe | ಮೊಸರು ಹಾಕಿ ತಯಾರಿಸುವ ಮೀನಿನ ಕರಿ | ಅನೇಕ ಬಗೆಯ ಮೀನಿನ ಅಡುಗೆ

Have you tried yoghurt fish. Check out an easy Indian recipe to make authentic fish with yogurt.
X
Desktop Bottom Promotion