ಗರಿಗರಿಯಾದ ಪ್ರಾನ್ ಸ್ನಾಕ್ಸ್ ರುಚಿ ನೋಡಿದ್ದೀರಾ?

By:

ಪ್ರಾನ್ ರುಚಿಯಾದ ಸಮುದ್ರಾಹಾರವಾಗಿದ್ದು ಇದರಿಂದ ಬಗೆ-ಬಗೆಯ ಖಾದ್ಯಗಳನ್ನು ತಯಾರಿಸಬಹುದು. ಗರಿಗರಿಯಾದ ನಾನ್ ವೆಜ್ ಅಡುಗೆ ತಿನ್ನಬಯಸುವುದಾದರೆ ಪ್ರಾನ್ ಅಡುಗೆಗಳನ್ನು ತಯಾರಿಸಬಹುದು.

ಇಲ್ಲಿ ನಾವು ಕೊಟ್ಟಿರುವ ಪ್ರಾನ್ ಸ್ನಾಕ್ಸ್ ತಿನ್ನಲು ಗರಿಗರಿಯಾಗಿ ತುಂಬಾ ರುಚಿಕರವಾಗಿರುತ್ತದೆ. ಇದನ್ನು ಮಾಡುವುದು ಕೂಡ ಅಷ್ಟೇನು ಕಷ್ಟವಿಲ್ಲ ಬಿಡಿ. ಈ ಪ್ರಾನ್ ಸ್ನಾಕ್ಸ್ ತಯಾರಿಸಿದರೆ ಹೇಗೆ ಎಂದು ಯೋಚಿಸುವುದಾದರೆ ರೆಸಿಪಿ ನೋಡಿ ಇಲ್ಲಿದೆ.


ಬೇಕಾಗುವ ಸಾಮಾಗ್ರಿಗಳು:
* ಸೀಗಡಿ 15-20 ( ಸಿಪ್ಪೆ ಸುಲಿದು ಸ್ವಚ್ಛ ಮಾಡಿರಬೇಕು)
* ಹಾಲು ಅರ್ಧ ಕಪ್
* ಮೈದಾ 1 ಕಪ್
* ಮೊಟ್ಟೆ 2-3
* ಅರ್ಧ ಚಮಚ ಮೆಣಸಿನ ಪುಡಿ
* ಈರುಳ್ಳಿ 2 ( ಇದನ್ನು ಪೇಸ್ಟ್ ಮಾಡಿ)
* ಬೆಳ್ಳುಳ್ಳಿ ಪೇಸ್ಟ್ 1 ಚಮಚ
* ಕರಿ ಮೆಣಸಿನ ಪುಡಿ 1 ಚಮಚ
* ರುಚಿಗೆ ತಕ್ಕ ಉಪ್ಪು
* ಎಣ್ಣೆ
* ಬ್ರೆಡ್ ಚೂರು 1 ಕಪ್

ತಯಾರಿಸುವ ವಿಧಾನ:

1. ಸೀಗಡಿಗೆ ಉಪ್ಪು ಮತ್ತು ಕರಿ ಮೆಣಸಿನ ಪುಡಿ ಹಾಕಿ ಅರ್ಧ ಗಂಟೆ ಕಾಲ ಮಿಶ್ರಣ ಮಾಡಿಡಬೇಕು.

2. ಈಗ ಒಂದು ಬಟ್ಟಲಿನಲ್ಲಿ ಮೊಟ್ಟೆಯನ್ನು ಹಾಕಿ ಚೆನ್ನಾಗಿ ಕದಡಬೇಕು. ಅದಕ್ಕೆ ಮೈದಾ ಮತ್ತು ಹಾಲನ್ನು ಹಾಕಿ ಕಲೆಸಿ ಗಟ್ಟಿಯಾದ ಮಿಶ್ರಣ ಮಾಡಿ. ನಂತರ ಈ ಮಿಶ್ರಣಕ್ಕೆ ಅರ್ಧ ಚಮಚ ಮೆಣಸಿನ ಪುಡಿ ಮತ್ತು ರುಚಿಗೆ ತಕ್ಕ ಉಪ್ಪು ಸೇರಿಸಿ ಮತ್ತೊಮ್ಮೆ ಕಲೆಸಿ.

3. ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಕಾಯಿಸಿ.

4. ಈಗ ಸೀಗಡಿ ಮೀನನ್ನು ಈ ಮಿಶ್ರಣದಲ್ಲಿ ಅದ್ದಿ, ಬ್ರೆಡ್ ಚೂರುಗಳಲ್ಲಿ ಹೊರಲಾಡಿಸಿ ಅವುಗಳನ್ನು ಕಾದ ಎಣ್ಣೆಯಲ್ಲಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿದು ಒಂದು ಬಟ್ಟಲಿನಲ್ಲಿ ಹಾಕಿಡಿ. ಈಗ ಎಣ್ಣೆಯನ್ನು ಉರಿಯಿಂದ ತೆಗೆದು ಬದಿಯಲ್ಲಿಡಿ.

5. ಈಗ ತವಾನ್ನು ಬಿಸಿ ಮಾಡಿ ಅದರಲ್ಲಿ ಒಂದು ಚಮಚ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಅದರಲ್ಲಿ ಈರುಳ್ಳಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿದು ಅದರಲ್ಲಿ ಫ್ರೈ ಮಾಡಿದ ಸೀಗಡಿಯನ್ನು ಹಾಕಿ ಕಡಿಮೆ ಉರಿಯಲ್ಲಿ 5-6 ನಿಮಿಷ ಹುರಿಯಬೇಕು. ಈ ರೀತಿ ಮಾಡಿದರೆ ಗರಿಗರಿಯಾದ ಪ್ರಾನ್ ಸ್ನಾಕ್ಸ್ ರೆಡಿ.

Read more about: ಮೀನು, ಮಾಂಸಾಹಾರ, ಅಡುಗೆ, fish, non vegetarian, cookery
English summary

Crispy prawn snacks recipe | Variety of fish recipe | ಗರಿಗರಿಯಾದ ಪ್ರಾನ್ ಸ್ನಾಕ್ಸ್ ರೆಸಿಪಿ | ಅನೇಕ ಬಗೆಯ ಮೀನಿನ ರೆಸಿಪಿ

Shrimps are one seafood that has many health benefits. So, you can try this seafood ingredient to prepare some small and crisp snacks. Use small nugget sized shrimps. You can sue it as a snack or as an appetizer.
Story first published: Saturday, December 22, 2012, 14:48 [IST]
Please Wait while comments are loading...
Subscribe Newsletter