For Quick Alerts
ALLOW NOTIFICATIONS  
For Daily Alerts

ವಾವ್! ಟ್ರೊಪಿಕಲ್ ಐಸ್ ಬರ್ಗ್ ಕೋಲ್ಡ್ ಕಾಫಿ

|
Tropical Iceberg Cold Coffee Recipe
ಜ್ಯೂಸ್ ಆದರೆ ಚಳಿಗಾಲದಲ್ಲಿ ಅಥವಾ ಮಳೆಗಾಲದಲ್ಲಿ ಕುಡಿಯಲು ಅಷ್ಟಾಗಿ ಇಷ್ಟವಾಗುವುದಿಲ್ಲ. ಆದರೆ ಕೋಲ್ಡ್ ಕಾಫಿಯನ್ನು ಎಲ್ಲಾ ಸಮಯದಲ್ಲಿ ಕುಡಿಯಲು ತುಂಬಾ ಮಜಾವಾಗಿರುತ್ತದೆ. ಅದರಲ್ಲೂ ಕೋಲ್ಡ್ ಕಾಫಿಯನ್ನು ಅನೇಕ ರುಚಿಯಲ್ಲಿ ತಯಾರಿಸಬಹುದಾಗಿದ್ದು ಇವತ್ತು ನಾವು ಸವಿರುಚಿಯ ಟ್ರೊಪಿಕಲ್ ಐಸ್ ಬರ್ಗ್ ಕೋಲ್ಡ್ ಕಾಫಿ ಮಾಡುವ ವಿಧಾನ ತಿಳಿಯೋಣ.

ಬೇಕಾಗುವ ಸಾಮಾಗ್ರಿಗಳು:

* ತಣ್ಣನೆಯ ಗಟ್ಟಿ ಹಾಲು ಅರ್ಧ ಲೀ.
* ಚಾಕಲೇಟ್ ಐಸ್ ಕ್ರೀಮ್ 3 ಸ್ಕೂಪ್
* ಕಾಫಿ ಪುಡಿ 2 ಚಮಚ
* ಸಕ್ಕರೆ 2 ಚಮಚ
* ವೆನಿಲ್ಲಾ ಎಸ್ಸೆನ್ಸ್ 2-3 ಹನಿ
* ಫ್ರೆಶ್ ಕ್ರೀಮ್ 1 ಕಪ್
* ಸ್ವಲ್ಪ ಐಸ್ ಕ್ಯೂಬ್
* ಚಾಕಲೇಟ್ ಸಾಸ್ (ಬೇಕಿದ್ದರೆ ಹಾಕಬಹುದು)

ಮಾಡುವ ವಿಧಾನ:

1. ಫ್ರಿಜ್ ನಲ್ಲಿ ಇಟ್ಟಿದ್ದ ತಣ್ಣನೆಯ ಹಾಲನ್ನು ತೆಗೆದುಕೊಂಡು ಅದರಲ್ಲಿ ಒಂದು ಸ್ಕೂಪ್ ಐಸ್ ಕ್ರೀಮ್ , ಕಾಫಿ ಪುಡಿ ಮತ್ತು ಸಕ್ಕರೆ ಹಾಕಿ ಅದನ್ನು ಮಿಕ್ಸಿಯಲ್ಲಿ ಆಡಿಸಬೇಕು.

2. ನಂತರ ವೆನಿಲ್ಲಾ ಎಸ್ಸೆನ್ಸ್ ಹಾಕಿ ನಂತರ ಸ್ಪೂನ್ ನಿಂದ ಈ ಹಾಲಿನ ಮಿಶ್ರಣವನ್ನು ಚೆನ್ನಾಗಿ ಕದಡಬೇಕು. ಈ ರೀತಿ ಕದಡಿದಾಗ ಈ ಮಿಶ್ರಣ ಸ್ವಲ್ಪ ಮಂದವಾಗಿ ಮೇಲೆ ನೊರೆ ಬರುತ್ತದೆ.

3. ನಂತರ ಎರಡು ಗ್ಲಾಸ್ ತೆಗೆದು ಆ ಗ್ಲಾಸ್ ಗಳ ತಳದಲ್ಲಿ ಫ್ರೆಶ್ ಕ್ರೀಮ್ ಸ್ವಲ್ಪ ಹಾಕಿ ನಂತರ ಈ ಹಾಲಿನ ಮಿಶ್ರಣವನ್ನು ಅರ್ಧ ಲೋಟಕ್ಕೆ ಸುರಿದು ನಂತರ ಎರಡೂ ಗ್ಲಾಸಿಗೂ ಒಂದೊಂದು ಐಸ್ ಕ್ರೀಮ್ ಸ್ಕೂಪ್ ಹಾಕಿ ನಂತರ ಅದರ ಮೇಲೆ ಫ್ರೆಶ್ ಕ್ರೀಮ್ ಸುರಿದು ನಂತರ ಉಳಿದ ಹಾಲಿನ ಮಿಶ್ರಣವನ್ನು ಲೋಟಗಳಿಗೆ ಸುರಿಯಬೇಕು. ಕೊನೆಗೆ ಸ್ವಲ್ಪ ಐಸ್ ಕ್ಯೂಬ್ ಗಳನ್ನು ಇದರಲ್ಲಿ ಹಾಕಿ ಚಾಕಲೇಟ್ ಸಾಸ್ ಇದ್ದರೆ ಸ್ವಲ್ಪ ಹಾಕಿದರೆ ರುಚಿಯಾದ ಟ್ರೊಪಿಕಲ್ ಐಸ್ ಬರ್ಗ್ ಕೋಲ್ಡ್ ಕಾಫಿ ಸವಿಯಲು ರೆಡಿ.

English summary

Tropical Iceberg Cold Coffee Recipe | Variety Of Cold Coffee Recipe | ಟ್ರೊಪಿಕಲ್ ಐಸ್ ಬರ್ಗ್ ಕೋಲ್ಡ್ ಕಾಫಿ ರೆಸಿಪಿ | ಅನೇಕ ಬಗೆಯ ಕೋಲ್ಡ್ ಕಾಫಿ ರೆಸಿಪಿ

It sounds like an easy cold coffee recipe to try, but you can never get the same texture of Tropical Iceberg at home. So you need to know these experts tip to make this interesting blend of coffee with ice cream.
X
Desktop Bottom Promotion