For Quick Alerts
ALLOW NOTIFICATIONS  
For Daily Alerts

ಬೇಸಿಗೆಗೆ ಸೂಕ್ತ ಈ ಜೀರಾ ರಸಂ

|

ಜೀರಾ ರಸಂ, ಇದನ್ನು ಸೂಪ್ ಕುಡಿಯುವ ರೀತಿಯಲ್ಲಿ ಕುಡಿಯಲು ತುಂಬಾ ರುಚಿಯಾಗಿರುತ್ತದೆ. ಅಲ್ಲದೆ ಬೇಸಿಗೆ ಕಾಲದಲ್ಲಿ ಇದನ್ನು ತಯಾರಿಸಿ ಕುಡಿದರೆ ಜೀರಿಗೆ ದೇಹವನ್ನು ತಂಪಾಗಿಡುತ್ತದೆ, ಹೊಟ್ಟೆಯ ಆರೋಗ್ಯಕ್ಕೂ ಒಳ್ಳೆಯದು.

ಈ ಜೀರಾ ರಸಂ ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

Jeera Rasam Recipe, Best For Summer

ಬೇಕಾಗುವ ಸಾಮಾಗ್ರಿಗಳು:
ನಿಂಬೆ ಗಾತ್ರದ ಹುಣಸೇಹಣ್ಣು
ಟೊಮೆಟೋ
ಒಂದೂವರೆ ಚಮಮ ಜೀರಿಗೆ
ಕರಿಮೆಣಸಿನ ಪುಡಿ 1/2 ಚಮಚ
ಎಣ್ಣೆ
ಹಿಂಗು
ಉಪ್ಪು
ಸಾಸಿವೆ
ಕರಿಬೇವಿನ ಸೊಪ್ಪು
ಬೆಲ್ಲ (ಬೇಕಿದ್ದರೆ)
1 ಒಣ ಮೆಣಸು

ತಯಾರಿಸುವ ವಿಧಾನ

* ಹುಣಸೇ ಹಣ್ಣನ್ನು ಐದು ನಿಮಿಷ ಬಿಸಿ ನೀರಿನಲ್ಲಿ ನೆನೆಸಿಟ್ಟು ನಂತರ ಅದರ ರಸವನ್ನೆಲ್ಲಾ ತೆಗೆಯಿರಿ. ಈ ರಸವನ್ನು ಒಂದು ಪಾತ್ರೆಯಲ್ಲಿ ಹಾಕಿ ಇದಕ್ಕೆ ಒಂದು ಲೋಟ ನೀರು, ಸಣ್ಣಗೆ ಹೆಚ್ಚಿದ ಟೊಮೆಟೊ ಉಪ್ಪು ಮತ್ತು ಇಂಗು ಸೇರಿಸಿ ಸಣ್ಣ ಉರಿಯಲ್ಲಿಡಿ. ಬೆಲ್ಲ ಹಾಕುವುದಾದರೆ ಈ ನೀರಿನ ಜೊತೆಯಲ್ಲಿಯೇ ಹಾಕಿ ಕುದಿಸಿ.

* ಒಂದು ಪಾತ್ರೆಯಲ್ಲಿ ತುಪ್ಪ ಎಣ್ಣೆ ಮಾಡಿ ಇದಕ್ಕೆ ಸಾಸಿವೆ ಹಾಕಿ. ಅದು ಜೀರಿಗೆ ಹಾಕಿ. ಪುಡಿ ಮಾಡಿದ ಕರಿಮೆಣಸಿ ಪುಡಿ ಮತ್ತು ಕರಿಬೇವಿನ ಎಲೆ, ಒಣ ಮೆಣಸನ್ನು ಮುರಿದು ಹಾಕಿ. ನಂತರ ಈ ಪಾತ್ರೆಗೆ ಬೇಯಿಸಿದ ಹುಣಸೆ ಹಣ್ಣಿನ ರಸವನ್ನು ಸುರಿಯಿರಿ. ಬೇಕಿದ್ದರೆ ಒಂದು ಲೋಟ ನೀರು ಸೇರಿಸಿ, 5 ನಿಮಿಷವರೆಗೆ ಕುದಿಸಿದರೆ ಜೀರಾ ರಸಂ ರೆಡಿ.

English summary

Jeera Rasam Recipe, Best For Summer | ಜೀರಾ ರಸಂ ರೆಸಿಪಿ, ಬೇಸಿಗೆಗೆ ಸೂಕ್ತವಾದ ಸೂಪ್

Today we want to share a secret recipe that is best for summer, for stomach health and also during seasonal change, we are referring to Jeera Rasam recipe. Take a look.
 
X
Desktop Bottom Promotion