For Quick Alerts
ALLOW NOTIFICATIONS  
For Daily Alerts

ಮಿಶ್ರ ಆಹಾರ ಪದ್ಧತಿ ಅನುಸರಿಸಿ, ಆರೋಗ್ಯ ವೃದ್ಧಿಸಿ

By Jayasubramanya
|

ಆಹಾರವು ನಮ್ಮ ದೇಹಕ್ಕೆ ಅತ್ಯಗತ್ಯವಾಗಿರುವ ಇಂಧನದಂತೆ ಕಾರ್ಯನಿರ್ವಹಿಸುತ್ತಿದ್ದು ಈ ಇಂಧನವು ನಿಖರವಾದ ಪ್ರೋಟೀನ್ ಮತ್ತು ವಿಟಮಿನ್‌‎ಗಳನ್ನು ಒಳಗೊಂಡಿದ್ದರೆ ಮಾತ್ರವೇ ಅದೊಂದು ಸಂಪೂರ್ಣ ಶಕ್ತಿ ಎಂದೆನಿಸುತ್ತದೆ. ಕೆಲವೊಮ್ಮೆ ಎರಡು ಆಹಾರಗಳನ್ನು ಸೇರಿಸಿದಾಗ ಇನ್ನಷ್ಟು ಸಂಪೂರ್ಣ ಶಕ್ತಿ ನಮಗೆ ದೊರಕುತ್ತದೆ. ಕೆಲವೊಂದು ಆಹಾರ ಪದಾರ್ಥಗಳು ಇಂತಹ ಮಿಶ್ರ ಅಂಶಗಳನ್ನು ಹೊಂದಿ ನಮಗೆ ಸಾಕಷ್ಟು ರೋಗನಿರೋಧಕ ಶಕ್ತಿಯನ್ನು ನೀಡುವಲ್ಲಿ ಕಾರಣವಾಗಿರುತ್ತವೆ.

ಆಹಾರಗಳಲ್ಲಿ ಮಿಳಿತಗೊಂಡಿರುವ ನ್ಯೂಟ್ರೀನ್‌‎ಗಳನ್ನು ನಮ್ಮ ದೇಹವು ಹೀರಿಕೊಂಡಾಗ ದೇಹಕ್ಕೆ ಬೇಕಾದ ಶಕ್ತಿ ಪೂರೈಕೆಯಾಗುವುದರ ಜೊತೆಗೆ ಆಹಾರಗಳಲ್ಲಿರುವ ವಿಟಮಿನ್ ಸಿ ಇತರ ಆಹಾರಗಳಲ್ಲಿರುವ ಪ್ರೊಟೀನ್‎‌ಗಳನ್ನು ಹೀರಿಕೊಳ್ಳುವಲ್ಲಿ ಸಹಕಾರವನ್ನು ನೀಡುತ್ತವೆ, ಅಲ್ಲದೆ ಆಹಾರಗಳನ್ನು ಮಿಶ್ರ ಮಾಡಿ ಸೇವಿಸುವುದೂ ಕೂಡ ಆರೋಗ್ಯವನ್ನು ವೃದ್ಧಿಸುವ ನ್ಯೂಟ್ರೀನ್‌‎‌ಗಳ ಪೂರೈಕೆಗೆ ಕಾರಣವಾಗುತ್ತದೆ. ಇಂದಿನ ಲೇಖನದಲ್ಲಿ ಆಹಾರದಲ್ಲಿರುವ ಪೋಷಕಾಂಶಗಳನ್ನು ವೃದ್ಧಿಸುವ ಕೆಲವೊಂದು ಮಿಶ್ರ ಆಹಾರ ಪದ್ಧತಿಗಳ ವಿವರಗಳನ್ನು ನೀಡುತ್ತಿದ್ದು ದೇಹದ ಆರೋಗ್ಯವನ್ನು ಇವುಗಳು ಹೇಗೆ ಸುಧಾರಿಸುತ್ತದೆ ಎಂಬುದನ್ನು ನಿಮಗೆ ನೋಡಬಹುದಾಗಿದೆ. ಒಂದೇ ಮಾದರಿಯ ಆಹಾರ ಸೇವನೆ ಮಾಡುವುದಕ್ಕಿಂತಲೂ ಅದನ್ನು ಇನ್ನೊಂದು ಆಹಾರದೊಂದಿಗೆ ಸೇರಿಸಿ ಸೇವಿಸುವುದರಿಂದ ನಿಮಗೆ ಅದ್ಭುತ ಪ್ರಯೋಜನಗಳನ್ನು ಕಂಡು ಕೊಳ್ಳಬಹುದಾಗಿದೆ.

ಕಾಳು ಮೆಣಸು ಮತ್ತು ಗ್ರೀನ್ ಟೀ

ಕಾಳು ಮೆಣಸು ಮತ್ತು ಗ್ರೀನ್ ಟೀ

ದೇಹದ ತೂಕವನ್ನು ಇಳಿಸುವ ಮತ್ತು ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣವನ್ನು ಹೊಂದಿರುವ ಗ್ರೀನ್ ಟೀಯನ್ನು ಕಾಳುಮೆಣಸಿನೊಂದಿಗೆ ಸೇರಿಸಿಕೊಂಡಾಗ ಅದ್ಭುತ ಪ್ರಯೋಜನಗಳನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ. ಕಾಳುಮೆಣಸು ಒಂದು ಅನನ್ಯ ರುಚಿ ಮತ್ತು ಪರಿಮಳವನ್ನು ನೀಡುವುದರಿಂದ ಗ್ರೀನ್ ಟೀಯೊಂದಿಗೆ ಇದನ್ನು ಬೆರೆಸಿ ಸೇವಿಸಬಹುದಾಗಿದೆ. ಎಪಿಗ್ಯಾಲೊಕ್ಟೇಶನ್ -3 ಗ್ಯಾಲೇಟ್ (ಇಜಿಸಿಜಿ) ನಂತಹ ಉತ್ಕರ್ಷಣ ನಿರೋಧಕ ಹೀರುವಿಕೆಯನ್ನು ಈ ಮಿಶ್ರಣವು ಹೊಂದಿರುವುದರಿಂದ ದೇಹಕ್ಕೆ ಇದು ಅತ್ಯುತ್ತಮ ಎಂದೆನಿಸಿದೆ.

ಟೊಮೇಟೊ ಮತ್ತು ಆಲೀವ್ ಎಣ್ಣೆ

ಟೊಮೇಟೊ ಮತ್ತು ಆಲೀವ್ ಎಣ್ಣೆ

ಟೊಮೇಟೊ ಲಿಕೊಪಿನ್ ಎಂಬ ಉತ್ಕರ್ಷಣ ನಿರೋಧಿ ಅಂಶವನ್ನು ಹೊಂದಿದೆ. ಈ ಖನಿಜವು ಕೊಬ್ಬನ್ನು ಕರಗಿಸುವಂತಿದ್ದು ಕೊಬ್ಬಿನ ಸರಿಯಾದ ಹೀರುವಿಕೆಗೆ ಸಹಾಯ ಮಾಡುತ್ತದೆ. ಟೊಮೇಟೊಗಳನ್ನು ನೀವು ಆಲೀವ್ ಎಣ್ಣೆಯೊಂದಿಗೆ ಸೇವಿಸಿದಾಗ ಆಲೀವ್ ಎಣ್ಣೆಯಲ್ಲಿರುವ ಅಗತ್ಯ ಕೊಬ್ಬಿನ ಏಸಿಡ್‎ಗಳಾ ಒಮೇಗಾ - 3 ಮತ್ತು ಒಮೇಗಾ - 6 ಕೊಬ್ಬಿನ ಆಸಿಡ್‎‌ಗಳನ್ನು ದೇಹವು ಉತ್ತಮವಾಗಿ ಹೀರಿಕೊಳ್ಳುತ್ತದೆ.

ಕೋಸುಗಡ್ಡೆಯೊಂದಿಗೆ ಟೊಮೇಟೊ

ಕೋಸುಗಡ್ಡೆಯೊಂದಿಗೆ ಟೊಮೇಟೊ

ಲೈಕೊಪೇನ್‎ಗಳನ್ನು ಯಥೇಚ್ಛವಾಗಿ ಹೊಂದಿರುವುದಲ್ಲದೆ, ಟೊಮೇಟೊಗಳು ವಿಟಮಿನ್ ಸಿ, ಎ, ಇ ಮತ್ತು ಬಿ ಹಾಗೆಯೇ ಲ್ಯೂಟೀನ್ ಮತ್ತು ಜಿಯಾಕ್ಸಾಂಥಿನ್‌‎ಗಳನ್ನು ಒಳಗೊಂಡಿದೆ. ಕೋಸುಗಡ್ಡೆ ವಿಟಮಿನ್ ಕೆ ಯನ್ನು ಹೊಂದಿದೆ ಅಂತೆಯೇ ಫೊಲೇಟ್ ಮತ್ತು ಕ್ಯಾನ್ಸರ್ ವಿರೋಧಿ ಅಂಶಗಳನ್ನು ಒಳಗೊಂಡಿದೆ. ಈ ಎರಡೂ ತರಕಾರಿಗಳನ್ನು ನೀವು ಒಟ್ಟಿಗೆ ಸೇವಿಸಿದಾಗ ಕ್ಯಾನ್ಸರ್ ವಿರುದ್ಧ ಹೋರಾಡುವ ಸಾಮರ್ಥ್ಯವು ಈ ಎರಡೂ ತರಕಾರಿಗಳಿಂದ ಹೆಚ್ಚು ಕಡಿಮೆ 50 ಶೇಕಡಾದಷ್ಟು ಅಧಿಕವಾಗುತ್ತದೆ.

ಬಾದಾಮಿಯೊಂದಿಗೆ ಕೇಲ್

ಬಾದಾಮಿಯೊಂದಿಗೆ ಕೇಲ್

ಕೇಲ್ ಮ್ಯಾಂಗನೀಸ್, ತಾಮ್ರ, ಫೈಬರ್, ಕ್ಯಾಲ್ಶಿಯಮ್ ಮತ್ತು ಪೊಟಾಶಿಯಮ್, ಬಿ ವಿಟಮಿನ್‌‎ಗಳು ಮತ್ತು ವಿಟಮಿನ್ ಸಿ, ಇ, ಎ ಮತ್ತು ಕೆ ಯಿಂದ ಯಥೇಚ್ಛವಾಗಿದೆ. ಬಾದಾಮಿಯನ್ನು ಕೇಲ್‌‌‎ನೊಂದಿಗೆ ನೀವು ಸೇವಿಸಿದಾಗ, ಬಾದಾಮಿಗಳಲ್ಲಿರುವ ಉತ್ಕರ್ಷಣ ನಿರೋಧಕ ಅಂಶಗಳು ಕೇಲ್‌‎ನಲ್ಲಿರುವ ನ್ಯೂಟ್ರೀನ್‌‎ಗಳ ಹೀರುವಿಕೆಗೆ ಸಹಾಯ ಮಾಡುತ್ತದೆ. ಮಿಶ್ರ ಮಾಡಿ ಸೇವಿಸುವ ಉತ್ತಮ ಆಹಾರ ಎಂಬುದಾಗಿ ಇವುಗಳನ್ನು ಕರೆಯಬಹುದಾಗಿದೆ.

ಡಾರ್ಕ್ ಚಾಕಲೇಟ್‌‎ನೊಂದಿಗೆ ಸೇಬು

ಡಾರ್ಕ್ ಚಾಕಲೇಟ್‌‎ನೊಂದಿಗೆ ಸೇಬು

ಸೇಬಿನಲ್ಲಿರುವ ಹೃದಯದ ಆರೋಗ್ಯ ಅಂಶಗಳನ್ನು ಡಾರ್ಕ್ ಚಾಕಲೇಟ್ಸ್ ಹೆಚ್ಚಿಸುತ್ತವೆ. ಡಾರ್ಕ್ ಚಾಕಲೇಟ್‎‌‌ನೊಂದಿಗೆ ಸೇಬನ್ನು ನೀವು ಸೇವಿಸಿದಾಗ ಹೃದಯಾಘಾತದಂತಹ ಮರಣ ಅಪಾಯಗಳು ಕಡಿಮೆಯಾಗುತ್ತದೆ. ಡಾರ್ಕ್ ಚಾಕಲೇಟ್‌‎ನಲ್ಲಿ ಕ್ಯಾಟಶೀನ್ಸ್ ಎಂಬ ಉತ್ಕರ್ಷಣ ನಿರೋಧಿ ಅಂಶವು ಯಥೇಚ್ಛವಾಗಿರುವುದರಿಂದ ಆರೋಗ್ಯಪೂರ್ಣ ಹೃದಯವನ್ನು ಇದು ದಯಪಾಲಿಸುತ್ತದೆ.

ಕಪ್ಪು ಬೀನ್ಸ್‎ನೊಂದಿಗೆ ಕೆಂಪು ಬೆಲ್ ಪೆಪ್ಪರ್

ಕಪ್ಪು ಬೀನ್ಸ್‎ನೊಂದಿಗೆ ಕೆಂಪು ಬೆಲ್ ಪೆಪ್ಪರ್

ಕಪ್ಪು ಬೀನ್ಸ್‌‎ನಲ್ಲಿ ಕಬ್ಬಿಣದ ಅಂಶ ಹೇರಳವಾಗಿದ್ದು ದೇಹಕ್ಕೆ ಇದನ್ನು ಹೀರಿಕೊಳ್ಳುವಲ್ಲಿ ಕಷ್ಟಸಾಧ್ಯವಾಗುತ್ತದೆ. ಅದಾಗ್ಯೂ, ಕೆಂಪು ಬೆಲ್ ಪೆಪ್ಪರ್ ಅನ್ನು ಕಪ್ಪು ಬೀನ್ಸ್‪‎‌ನೊಂದಿಗೆ ನೀವು ಸೇವಿಸಿದಾಗ ವಿಟಮಿನ್ ಸಿ ಅಂಶವು ಹೆಚ್ಚು ಕಡಿಮೆ 6 ಬಾರಿ ಕಬ್ಬಿಣವನ್ನು ದೇಹಕ್ಕೆ ಪೂರೈಸುವಲ್ಲಿ ನೆರವಾಗುತ್ತದೆ.

English summary

Food Combinations For More Health Benefits

Do you know that health benefits of certain foods can be increased by combing them with some other specific foods? The nutrients present in foods can be best absorbed by your body in the presence of some other foods. For instance, vitamin C present in foods helps in the absorption of iron present in other foods.
X
Desktop Bottom Promotion