Latest Updates
-
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: AQI ಏರಿಕೆ, ಹೊರಗೆ ಹೋಗುವ ಮುನ್ನ ಈ ಮಾಸ್ಕ್ ಧರಿಸುವುದು ಕಡ್ಡಾಯ!
Valentine's Day 2025 Wishes : ಪ್ರೇಮಿಗಳ ದಿನಕ್ಕೆ ಶುಭಕೋರಲು ಇಲ್ಲಿವೆ ಆಕರ್ಷಕ ಸಂದೇಶಗಳು; ನಿಮ್ಮ ಪ್ರೀತಿಪಾತ್ರರ ಜತೆ ಹಂಚಿಕೊ
ಆಹಾ... ಪ್ರೇಮಿಗಳ ದಿನ ಬಂದೇ ಬಿಡ್ತು. ಫೆ. 14 ಈ ದಿನಕ್ಕಾಗಿ ಎಷ್ಟೋ ಪ್ರೇಮ ಪಕ್ಷಿಗಳು ಕಾಯ್ತಾ ಇರ್ತವೆ. ಈ ದಿನ ನಮ್ಮ ದಿನ, ನಮ್ಮ ಪ್ರೇಮಿಯ ಮುಂದೆ ಮನಸ್ಸು ತೆರೆದಿಡುವ ದಿನ, ಆಕೆ/ಆತನನ್ನು ನಾನೆಷ್ಟು ಪ್ರೀತಿಸುತ್ತಿದ್ದೇನೆ ಎಂದು ಪ್ರೇಮ ನಿವೇದನೆ ಮಾಡುವ ದಿನ. ಕೆಲವರು ಎಷ್ಟೋ ಸಮಯದಿಂದ ಹೇಳದೆ ಮನಸ್ಸಿನಲ್ಲಿಯೇ ಹುದುಗಿಟ್ಟ ಪ್ರೇಮವನ್ನು ವ್ಯಕ್ತಪಡಿಸಿದರೆ, ಈಗಾಗಲೇ ಪ್ರೀತಿಯಲ್ಲಿ ಇರುವವರು ತನ್ನ ಪ್ರೇಮಿಗಾಗಿ ವಿಶೇಷ ಉಡುಗೊರೆ ನೀಡಿ ಸಂಭ್ರಮಿಸುವ ದಿನ.
ಪ್ರೇಮಿಗಳ ದಿನ ಎಂದ ತಕ್ಷಣ ಅದು ಕೇವಲ ಯೌವನದ ಪ್ರೇಮಕ್ಕೆ ಸೀಮಿತವಾಗುವುದಿಲ್ಲ. ಮದುವೆಯಾಗಿ ಹಣ್ಣು-ಹಣ್ಣು ಮುದುಕ-ಮುದುಕಿಯಾದರೂ ಒಬ್ಬರಿಗೆ ಒಬ್ಬರು ಆಸರೆಯಾಗಿ ನೋವು-ನಲಿವಿನಲ್ಲಿ ನಿಲ್ಲುತ್ತಾರಲ್ಲಾ ಅಲ್ಲಿ ಕಾಣುತ್ತೆ ನಿರ್ಮಲ ಪ್ರೇಮ. ಸಂಗಾತಿಗೆ ಹುಷಾರಿಲ್ಲದಿದ್ದಾಗ ಅವರ ಆರೈಕೆಯಲ್ಲಿ ತಮ್ಮ ಜೀವನ ಕಳೆಯುತ್ತಾರಲ್ಲಾ ಅಲ್ಲಿ ಕಾಣಬಹುದು ಒಂದು ನಿಸ್ವಾರ್ಥ ಪ್ರೇಮ. ಒಬ್ಬೊಬ್ಬರ ಪ್ರೇಮ ಒಂದೊಂದು ಸ್ವರೂಪ. ಪ್ರತಿಯೊಬ್ಬರಿಗೂ ಹೇಳಲು ತಮ್ಮದೇ ಆದ ಕತೆ ಇರುತ್ತದೆ.
ನೀವು ಈ ಪ್ರೇಮಿಗಳ ದಿನದಂದು ನಿಮ್ಮ ಪ್ರೇಮಿ ಅಥವಾ ಸಂಗಾತಿ ಅವರು ನಿಮ್ಮ ಜೀವನದಲ್ಲಿ ಎಷ್ಟು ಮಹತ್ವವಾದದ್ದು ಎಂದು ತಿಳಿಸಲು ಮೆಸೇಜ್ ಕಳುಹಿಸ ಬಯಸುವುದಾದರೆ ಇಲ್ಲಿದೆ ಕೆಲ ಸಂದೇಶ.
ಪ್ರೇಮಿಗಳ ದಿನದ ಶುಭಾಶಯಗಳು

ಪ್ರೇಮಿಗಳ ದಿನಕ್ಕೆ ನನ್ನ ಮುದ್ದಿನ ಪ್ರೇಮಿಗೆ ಕೋಟಿ ಶುಭಾಶಯಗಳು
1. ಹ್ಯಾಪಿ ವ್ಯಾಲೆಂಟೈನ್ಸ್ ಡೇ....
2. ಪ್ರೇಮಿಗಳ ದಿನದ ಶುಭಾಶಯಗಳು
ಈ ಜೀವನದ ಪ್ರತಿ ಹೆಜ್ಜೆಯಲ್ಲೂ ನಿನ್ನ ಕೈ ಹಿಡಿದು ನಡೆಯುವೆ, ಕಣ್ರೆಪ್ಪೆಯಾಗಿ ಜೋಪಾನ ಮಾಡುವೆ...
3. ಪ್ರೀತಿಯಲ್ಲಿದ್ದಾಗ ನಿನ್ನ ಮೇಲೆ ಹುಚ್ಚು ಪ್ರೀತಿ ನನಗೆ
ಮದುವೆ ಬಳಿಕ ನಿನ್ನ ಮೇಲೆ ಪ್ರೀತಿಯಷ್ಟೇ, ಗೌರವವೂ ಹೆಚ್ಚಾಗಿದೆ, ನನ್ನ ಬದುಕಿನ ಸ್ಪೂರ್ತಿಯೇ ನೀನು...
ಪ್ರೇಮಿಗಳ ದಿನದ ಶುಭಾಶಯಗಳು
4. ನನ್ನ ಬದುಕಿಗೆ ನೀ ಬಂದಾಗ ಇಷ್ಟೆಲ್ಲಾ ಮ್ಯಾಜಿಕ್ ಆಗುತ್ತೆ ಅಂದ್ಕೊಂಡೇ ಇರಲಿಲ್ಲ
ಪ್ರತಿ ಕ್ಷಣವೂ ನೀನೇ ಕಾಡುವೆ, ಅಷ್ಟೇ ಏಕೆ ನಾನಾಡುವ ಪ್ರತಿ ಉಸಿರು ನಿನ್ನ ಹೆಸರೇ ಹೇಳುತ್ತಿದೆ
ಈ ಜೀವ, ಈ ಬದುಕು ನಿನಗಾಗಿ ಮಾತ್ರ ಮೀಸಲು
ಪ್ರೇಮಿಗಳ ದಿನದ ಶುಭಾಶಯಗಳು
5. ಬಣ್ಣದ ಮಾತುಗಳನ್ನಾಡಲು ನನಗೆ ಬರಲ್ಲ
ರೋಮಿಯೋ ಆಗಿ ಪೋಸ್ ನೀಡಲೂ ಗೊತ್ತಿಲ್ಲ
ಆದರೆ ಒಂದು ಹೇಳಬಲ್ಲೆ ಈ ಮನಸ್ಸು ಪೂರ್ತಿ ನೀನು ಮಾತ್ರ ತುಂಬಿರುವೆ, ನಿನ್ನ ಕಣ್ಣಾಲಿಗಳು ತುಂಬದಂತೆ ನನ್ನ ಉಸಿರು ಇರುವವರೆಗೆ ಜೋಪಾನ ಮಾಡುವೆ
ಹ್ಯಾಪಿ ವ್ಯಾಲೆಂಟೈನ್ಸ್ ಡೇ....
6. ಪ್ರೀತಿಯಲ್ಲಿ ನಂಬಿಕೆ ಇಲ್ಲದ ನನಗೆ ನಿಜವಾದ ಪ್ರೀತಿ ಏನೆಂದು ತೋರಿಸಿರುವೆ
ನೀನು ನನ್ನ ಜೀವನದಲ್ಲಿ ಬಂದು ನನ್ನ ಕಷ್ಟಕ್ಕೆ ಹೆಗಲು ಕೊಟ್ಟಿರುವೆ, ಸುಖದಲ್ಲಿ ಭಾಗಿಯಾಗಿರುವೆ
ನನ್ನ ಉಸಿರು ಇರುವವರೆಗೂ, ಇಲ್ಲಾ.. ಉಸಿರು ನಿಂತ ಮೇಲೂ ನಿನ್ನ ಪ್ರೀತಿಸುತ್ತಲೇ ಇರುವೆ
ಪ್ರೇಮಿಗಳ ದಿನದ ಶುಭಾಶಯಗಳು
7. ನನ್ನ ಬದುಕಿನ ಕಾಮನ ಬಿಲ್ಲು ನೀನು
ನಿನ್ನಿಂದ ಬಲು ಸುಂದರವಾಗಿದೆ ನನ್ನ ಈ ಬದುಕು
ಅದಕ್ಕಾಗಿ ಬಿಗಿದಪ್ಪಿ ಕೆನ್ನೆಗೊಂದು ಮುತ್ತಿಕ್ಕಿ ಹೇಳುವೆ ಥ್ಯಾಂಕ್ಸ್
ಲವ್ ಯೂ ಫಾರ್ ಎವರ್ ವ್ಯಾಲೆಂಟೈನ್...
ನಿಮ್ಮ ಪ್ರೀತಿ ನಿಮಗೆ ದೊರೆಯುವಂತಾಗಲಿ, ಸಿಕ್ಕ ಪ್ರೀತಿ ಜೋಪಾನ ಮಾಡಿ...



Click it and Unblock the Notifications








