Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಕೃಷ್ಣಗೆ ಕ್ಲೀನ್ ಚಿಟ್ - ಶಿಡ್ಲಘಟ್ಟ ಮುನಿಯಪ್ಪ ಚಿತ್, ಏಕೆ?

ಅಲ್ಲ ಸ್ವಾಮಿ, ಯಾರ ಕಿವಿ ಮೇಲೆ ಲಾಲ್ ಬಾಗ್ ಇಡ್ಲಿಕ್ಕೆ ಹೊರಟಿದ್ದೀರಿ. ಮುನಿಯಪ್ಪ ಅಕ್ರಮ ಎಸೆಗುತ್ತಿದ್ದಾಗ ಕಣ್ಣಿಗೆ ಗಣಿ ಧೂಳು ಬಿದ್ದು, ಸನ್ಮಾನ್ಯ ಮುಖ್ಯಮಂತ್ರಿ ಕೃಷ್ಣ ಕಣ್ಮುಚ್ಚಿಕೊಂಡಿದ್ದರೆ !? ಅವರನ್ನೇಕೆ ದೋಷಿಯಾಗಿಸಿಲ್ಲ ನೀವು?
ಇನ್ನು, ಮತ್ತೊಬ್ಬ ಮುಖ್ಯಮಂತ್ರಿ ಕುಮಾರ ಸ್ವಾಮಿ ಬಗ್ಗೆ ಪಾಸಿಂಗ್ ಕಾಮೆಂಟ್ ಮಾಡಿದ್ದೀರಂತೆ. ನಿಖರವಾಗಿ ಅವರ ಬಗ್ಗೆ ಯಾವುದೇ ಆರೋಪಗಳು ಇಲ್ವಂತೆ. ಅವರೇ ಹೇಳಿಕೊಂಡು ತಿರುಗ್ತಿದ್ದಾರೆ. ಇದನ್ನು ನಾವು ನಂಬಬೇಕಾ? ಗೌಡರ ಕುಟುಂಬದ ಬಗ್ಗೆ ಯಾಕೆ ನಿಮಗೆ ಈ ವಿಶೇಷ ಪ್ರೀತಿ?
ಮತ್ತೆ, ವಸತಿ ಸಚಿವ ಸೋಮಣ್ಣ ಹೆಸರನ್ನು ಕೈಬಿಟ್ಟಿದ್ದೀರಂತೆ. ಅವರಂತೂ ಆನಂದತುಂದಿಲರಾಗಿದ್ದಾರೆ. ಆದರೆ ನಾವು ಇದನ್ನೂ ನಂಬಬೇಕಾ? ಇಷ್ಟಕ್ಕೂ ನಿಮ್ಮ ವರದಿ ಇನ್ನೂ ಯಾರೆಂದರೆ ಯಾರಿಗೂ ಸಿಕ್ಕಿಲ್ಲ. ಆದರೂ ಸನ್ಮಾನ್ಯ ಆಯನೂರು ಮುಂಜುನಾಥ್ ಹೇಳ್ತಿದ್ದಾರೆ - ನಿಮ್ಮ ವರದಿಯನ್ನು ಕೂಲಂಕಷವಾಗಿ ಪರಿಶೀಲಿಸಿದ್ದಾರಂತೆ. ಸೋಮಣ್ಣ ಹೆಸರು ಎಲ್ಲೂ ಪ್ರಸ್ತಾಪವಾಗಿಲ್ಲ ಎಂದು ಖಂಡತುಂಡವಾಗಿ ಅವರೇ ಹೇಳಿದ್ದು. ವರದಿ ಮತ್ತೆ ಸೆಲೆಕ್ಟೀವ್ ಲೀಕೇಜ್ ಆಗಿದೆಯೇ?
ಎಲ್ಲಕ್ಕಿಂತ ಮುಖ್ಯವಾದ ವಿಷಯ ಮರೆತಿದ್ದೆ, ಸ್ವಲ್ಪ ಹಳೆ ವಿಷಯ. ಟೆಲಿಫೋನ್ ಟ್ಯಾಪಿಂಗ್ ನಿಂದ ವರದಿ ಸೋರಿಕೆ ಎಂದ್ದೀರಲ್ಲಾ, ಅಲ್ಲಾ ಸ್ವಾಮಿ. ಅದ್ಯಾವ ನಿಮ್ಮ ಪರಮವೈರಿ ಹೀಗೆಲ್ಲ ಪುಟಗಳಗಟ್ಟಲೆ ವರದಿಯನ್ನು ಟೆಲಿಫೋನ್ ನಲ್ಲಿ ಕದ್ದಾಲಿಸಿಕೊಂಡು ಖರಾರುವಕ್ಕಾಗಿ ವರದಿ ಮಾಡಿಕೊಂಡ? ಎಲ್ಲೋ ಹಾರ್ಡ್ ಕಾಪಿನೇ ಲೀಕ್ ಆಗಿರಬೇಕು. ಸ್ವಲ್ಪ ಚೆಕ್ ಮಾಡಿಸಿಕೊಳ್ಳಿ.
ಏನೋ ಸ್ವಾಮಿ ದೊಡ್ಡೋರ ವಿಷ್ಯಾ ನನಗ್ಯಾಕೆ, ಎಲ್ಲಾದರೂ ಹಾಳುಬಿದ್ದು ಹೋಗ್ಲಿ ಬಿಡಿ.



Click it and Unblock the Notifications
