Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಕ್ಳೆಲ್ಲ ಜಾಣ್ರೇ ಆಗಿರ್ತಾರೆ, ಆದರೆ ಕೆಲವರ ಸ್ಕ್ರೂ...

ಸರಿಯಾದ ಆಶೀರ್ವಾದ ಸಿಗದಿದ್ದರೆ ಕೆಲವರಿಗೆ ಆಕ್ಸಿಡೆಂಟಾಗತ್ತೆ, ಚೆನ್ನಾಗಿ ಕಲಿತು, ಒಳ್ಳೆ ಕೆಲಸದಲ್ಲಿದ್ದರೂ ಮುಂದೆ ಏನೇನೋ ಆಗಿ ಹೋಗ್ತಾರೆ. ಆದರೆ, ಆಶೀರ್ವಾದ ಇರುವಂಥ ದಡ್ಡ ಶಿಖಾಮಣಿ ಕೂಡ ಭವಿಷ್ಯದಲ್ಲಿ ಮುಂದೆ ಬರ್ತಾನೆ. ಎಷ್ಟೇ ಕಲಿತಿದ್ರೂ ಮುಂದೆ ಒಳ್ಳೆ ಕೆಲಸ ಗಿಟ್ಟಿಸಿಕೊಳ್ತಾನೆ. ಅರ್ಥ ಆಯ್ದಾ?
ಅದಕ್ಕೇ ನಾನು ಹೇಳೋದೂ, ಹಿರಿಯರ ಆಶೀರ್ವಾದ ಪಡೀಬೇಕು ಅಂತಾ. ಇನ್ನೊಂದು ಮಾತು ನೆನಪಿಟ್ಕೊಳ್ಳೀ. ಮಕ್ಕಳೆಲ್ಲ ಜಾಣರೇ ಆಗಿರ್ತಾರೆ. ಆದರೆ, ಕೆಲವರ ಸ್ಕ್ರೂ ಟೈಟ್ ಆಗಿರತ್ತೆ, ಕೆಲವರ ಸ್ಕ್ರೂ ಲೂಸ್ ಆಗಿರತ್ತೆ. ಲೂಸ್ ಆದ ಸ್ಕ್ರೂವನ್ನು ಟೈಟ್ ಮಾಡುವ ಜವಾಬ್ದಾರಿ ತಂದೆ ತಾಯಿಯರದ್ದು. ಟೈಟ್ ಮಾಡಿದ್ರೆ ಉದ್ಧಾರವಾಗ್ತಾರೆ ಇಲ್ಲದಿದ್ದರೆ ಹಾಳಾಗಿ ಹೋಗ್ತಾರೆ..."
ಹೀಗೆ ಚಾನಲ್ ಒಂದರಲ್ಲಿ ಆ ಜ್ಯೋತಿಷಿಯ ಮಾತುಗಳು ಬ್ರೇಕ್ ಇಲ್ಲದಂತೆ ಓತಪ್ರೋತವಾಗಿ ಸಾಗುತ್ತಲೇ ಇತ್ತು. ಸಮಯಾಭಾವವಿದ್ದರಿಂದ ಅಲ್ಲಿಗೇ ತುಂಡಾಯಿತು. ಹಿರಿಯರ ಆಶೀರ್ವಾದ ಪಡೆಯುವ, ಗೌರವದಿಂದ ನಡೆದುಕೊಳ್ಳುವ ಅಭ್ಯಾಸವನ್ನು ಮಕ್ಕಳಲ್ಲಿ ಬೆಳೆಸಬೇಕು ಎಂಬ ವಿಷಯವನ್ನು ಜನರಿಗೆ ತಿಳಿಪಡಿಸುವ ಪರಿ ಹೀಗಿತ್ತು.
ಲೂಸಾಗಿದ್ದ ಸ್ಕ್ರೂ ಟೈಟ್ ಮಾಡುವ ವ್ಯಾಖ್ಯಾನ ಮಾತ್ರ ಸಖತ್ತಾಗಿತ್ತು. ಯಾರ ಸ್ಕ್ರೂ ಲೂಸಾಗಿತ್ತು ಎಂಬುದನ್ನು ವಿವರಿಸಿ ಹೇಳಬೇಕಾಗಿಲ್ಲ. ಈ ಮಾತುಗಳನ್ನು ಯಾವ ಜ್ಯೋತಿಷಿ, ಯಾವ ಚಾನಲ್ಲಿನಲ್ಲಿ ಹೇಳಿದರು ಎಂಬುದನ್ನು ಓದುಗರೇ ಊಹಿಸಬೇಕಾಗಿ ಕಳಕಳಿಯ ಮನವಿ. ಹಾಗೆಯೆ, ಅವರು ಹೇಳಿದ ಮಾತುಗಳನ್ನು ಜಾಸ್ತಿ ಸೀರಿಯಸ್ಸಾಗಿ ತೆಗೆದುಕೊಳ್ಳಬಾರದಾಗಿ ವಿನಮ್ರ ಪ್ರಾರ್ಥನೆ.



Click it and Unblock the Notifications
